Sukanya Samruddi Yojane 2022: ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು? ಮತ್ತು 2022 ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಗೆ ಕೆಲವು ನಿಯಮಗಳಿಗೆ ತಿದ್ದುಪಡಿಯನ್ನು ತರಲಾಗಿದೆ. ಅವುಗಳು ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ದೇಶದ ಹೆಣ್ಣು ಮಕ್ಕಳ ಭವಿಷ್ಯವನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಗೊಳಿಸಿತು. ಇದನ್ನು ನರೇಂದ್ರ ಮೋದಿಯವರು ಪ್ರಾರಂಭಗೊಳಿಸಿದರು. ಈ ಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಸಣ್ಣ ಉಳಿತಾಯದ ಖಾತೆಯನ್ನು ತೆರೆಯಲಾಗುತ್ತದೆ. ಹೆಣ್ಣು ಮಗುವಿನ ಶಿಕ್ಷಣ ಮತ್ತು ಮದುವೆ ವೆಚ್ಚವನ್ನು ಪೂರೈಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸುಕನ್ಯ ಸಮೃದ್ಧಿ ಯೋಜನೆಯ ಖಾತೆಯನ್ನು ಮಗು ಹುಟ್ಟಿದ ದಿನದಿಂದ ಹಿಡಿದು ಹತ್ತು ವರ್ಷ ತುಂಬುವ ಮೊದಲು ಯಾವುದೇ ಸಮಯದಲ್ಲಾದರೂ ಈ ಖಾತೆಯನ್ನು ತೆರೆಯಬಹುದಾಗಿದೆ. ಖಾತೆಯನ್ನು ತೆರೆದ ನಂತರ 21 ವರ್ಷಗಳವರೆಗೆ ಈ ಯೋಜನೆ ಚಾಲನೆಯಲ್ಲಿರುತ್ತದೆ.
ಇದನ್ನೂ ಓದಿ: ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ
ಯೋಜನೆಗೆ ಅರ್ಹತೆ ಏನು?
ಒಬ್ಬ ಪೋಷಕನು ಗರಿಷ್ಠವಾಗಿ ಎರಡು ಸುಕನ್ಯ ಸಮೃದ್ಧಿ ಯೋಜನೆಗಳನ್ನು ತೆರೆಯಬಹುದು ಆದರೆ ಒಂದು ಮಗುವಿಗೆ ಒಂದೇ ಸಮೃದ್ಧಿ ಯೋಜನೆಯನ್ನು ತೆರೆಯಬಹುದು. ಮೊದಲನೆಯ ಮಗು ಹೆಣ್ಣಾಗಿದ್ದು ಎರಡನೆಯ ಹೆರಿಗೆಯಲ್ಲಿ ಅವಳಿ ಜವಳಿ ಮಕ್ಕಳು ಹುಟ್ಟಿದರೆ ಆಗ ಮೂರು ಮಕ್ಕಳಿಗೂ ಕೂಡ ಸುಖನ್ಯ ಸಮೃದ್ಧಿ ಯೋಜನೆ ಖಾತೆಯನ್ನು ತರೆಯಬಹುದಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ವಾರ್ಷಿಕ ಬಡ್ಡಿದರ 7.6%. ಈ ಖಾತೆಯಿಂದ ಸೆಕ್ಷನ್ 80 ಸಿ ಕಡೆಯಿಂದ ಒಂದು ಉತ್ತಮವಾದ ಅನುಕೂಲವಿದೆ ಅದು ಏನೆಂದರೆ ನಾವು ಹೂಡಿಕೆ ಮಾಡಿದ ಹಣದಲ್ಲಿ 1. 5 ಲಕ್ಷದಷ್ಟು ಕಂದಾಯದ ಅನುಕೂಲಗಳು ನಮಗೆ ದೊರೆಯುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಗೆ ಕನಿಷ್ಠ ಮತ್ತು ಗರಿಷ್ಠ ಠೇವಣಿ ಎಷ್ಟು?
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಗೆ ನಾವು ಕನಿಷ್ಠವಾಗಿ 250ಗಳನ್ನು ವರ್ಷಕ್ಕೆ ಕಟ್ಟಬಹುದು ಹಾಗೂ ಗರಿಷ್ಠ 1.5 ಲಕ್ಷದವರೆಗೆ ನಾವು ಖಾತೆಗೆ ಠೇವಣಿಯನ್ನು ಮಾಡಬಹುದು. ಗರಿಷ್ಠ 1.5 ಐದು ಲಕ್ಷದವರೆಗೆ ನಾವು ಠೇವಣಿ ಮಾಡಿದರೆ ಯೋಜನೆಯ ಮುಕ್ತಾಯದ ಸಮಯದಲ್ಲಿ ಸುಮಾರು 64 ಲಕ್ಷ ರೂಪಾಯಿಗಳ ವರೆಗೂ ನಮಗೆ ಬರುತ್ತದೆ
ಪೋಸ್ಟ್ ಆಫೀಸ್ ನ ಈ ಸ್ಕೀಮ್ ತುಂಬಾ ಜನರಿಗೆ ಗೊತ್ತಿಲ್ಲ : ಕೇವಲ 399 ಕಟ್ಟಿ 10 ಲಕ್ಷ ಸಿಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯಲು ಬೇಕಾಗಿರುವ ದಾಖಲೆಗಳು :
- ಸುಕನ್ಯಾ ಸಮೃದ್ಧಿ ಯೋಜನೆಯ ಫಾರ್ಮ್ – ಫಾರ್ಮ್ ನಲ್ಲಿ ಎಲ್ಲಾ ವಿವರಗಳನ್ನು ಭರ್ತಿಮಾಡಬೇಕು.
- ಹೆಣ್ಣು ಮಗು ಹಾಗೂ ಪೋಷಕರು ಒಟ್ಟಿಗೆ ಇರುವ ಛಾಯಾಚಿತ್ರಗಳು
- ವಿಳಾಸದ ಪುರಾವೆ
- ಗುರುತಿನ ಪುರಾವೆ
- ಆಧಾರ್ ಕಾರ್ಡ್ ಹಾಗೂ
- ಮಗುವಿನ ಜನನ ಪ್ರಮಾಣ ಪತ್ರ
ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮಗಳಲ್ಲಿ ಇತ್ತೀಚಿಗೆ ಆದ ತಿದ್ದುಪಡಿಗಳು :
- ಹೊಸ ನಿಯಮದ ಪ್ರಕಾರ ಡೀಫಾಲ್ಟ್ ಖಾತೆಯಲ್ಲಿ ಬಡ್ಡಿದರ ಬದಲಾಗುವುದಿಲ್ಲ ಅಂದರೆ ಮೊದಲು ವಾರ್ಷಿಕವಾಗಿ ಕನಿಷ್ಠ 250 ರೂಪಾಯಿ ಡಿಪಾಸಿಟ್ ಇಡಬೇಕು ಅಂತ ಹೇಳಲಾಗಿತ್ತು ಆದರೆ ಈ ಠೇವಣಿ ಮೊತ್ತವನ್ನು ಪ್ರತಿವರ್ಷ ನಾವು ಡಿಪಾಸಿಟ್ ಮಾಡದೆ ಒಂದು ಅಥವಾ ಎರಡು ವರ್ಷಗಳವರೆಗೆ ಮಾಡಿ ಅದನ್ನ ಬಿಟ್ಟರೆ ಆ ಖಾತೆಯನ್ನು ಡಿಫಾಲ್ಟ್ ಎಂದು ಪರಿಗಣಿಸಲಾಗುತ್ತಿತ್ತು ಆದರೆ ಹೊಸ ನಿಯಮಗಳ ಪ್ರಕಾರ ಖಾತೆಯನ್ನು ಮತ್ತೆ ಸಕ್ರಿಯಗೊಳಿಸದಿದ್ದರೆ ಮುಕ್ತಾಯದವರೆಗೆ ಖಾತೆಯಲ್ಲಿರುವ ಡಿಪೋಸಿಟ್ ಮಾಡಿದ ಮೊತ್ತದ ಮೇಲೆ ಆ ಸಮಯದಲ್ಲಿ ಅನ್ವಯವಾಗುವ ದರದಲ್ಲಿ ಬಡ್ಡಿ ಮುಂದುವರಿಯುತ್ತದೆ. ಈ ಹಿಂದೆ ಡೀಫಾಲ್ಟ್ ಖಾತೆಗಳು ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಅನ್ವಯವಾಗುವ ದರದಲ್ಲಿ ಬಡ್ಡಿಯನ್ನ ಗಳಿಸುತ್ತಿದ್ದವು. ಆದರೆ ಈಗ ಹೊಸ ನೇಮದ ಪ್ರಕಾರ ಡಿಫಾಲ್ಟ್ ಕಾತಿಯ ಹಣಕ್ಕೂ ಸಹಿತ ಯೋಜನೆಯ ಬಡ್ಡಿ ದರವನ್ನು ಕೊಡಲಾಗುತ್ತದೆ.
- ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಖಾತೆಯನ್ನು ತೆರೆಯಬಹುದು. ಒಂದು ವೇಳೆ ಮೊದಲನೆಯ ಹೆಣ್ಣು ಮಗುವಿನ ನಂತರ ಎರಡನೆಯ ಬಾರಿ ಅವಳಿ ಹೆಣ್ಣು ಮಕ್ಕಳು ಜನಿಸಿದ್ದಲ್ಲಿ ಆ ಮೂರನೆಯ ಹೆಣ್ಣು ಮಗುವಿಗೂ ಕೂಡ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಮೊದಲನೆಯ ನಿಯಮದ ಪ್ರಕಾರ ಮೂರನೇ ಹೆಣ್ಣು ಮಗುವಿಗೆ ಕಂದಾಯದ ಲಾಭಗಳು ದೊರೆಯುತ್ತಿರಲಿಲ್ಲ ಆದರೆ ಇತ್ತೀಚೆಗೆ ಬಂದ ತಿದ್ದುಪಡಿಯ ಪ್ರಕಾರ ಆ ಮೂರನೇ ಹೆಣ್ಣು ಮಗುವಿಗೂ ಕೂಡ ಕಂದಾಯದ ಲಾಭಗಳು ಅನ್ವಯವಾಗುತ್ತದೆ.
- ಮೊದಲನೆಯ ನಿಯಮದ ಪ್ರಕಾರ ಸುಕನ್ಯ ಸಮೃದ್ಧಿ ಯೋಜನೆಯನ್ನು ಎರಡು ಸಮಯಗಳಲ್ಲಿ ನಾವು ರದ್ದುಗೊಳಿಸಬಹುದಿತ್ತು. ಮೊದಲನೆಯದು ಹೆಣ್ಣು ಮಗು ಅಮೃತಪಟ್ಟರೆ ಹಾಗೂ ಎರಡನೆಯದು ಎನ್ ಆರ್ ಐ ಸಮಯದಲ್ಲಿ ಈ ಸುಕನ್ಯ ಸಮೃದ್ಧಿ ಯೋಜನೆಯ ಖಾತೆಯನ್ನು ರದ್ದುಗೊಳಿಸಬಹುದು ಆದರೆ ಇತ್ತೀಚಿನ ಸಿದ್ದು ಪಡೆಯ ಪ್ರಕಾರ, ಇನ್ನು ಹಲವಾರು ರೀತಿಯಲ್ಲಿ ತೊಂದರೆಗಳಾದಾಗ ಈ ಖಾತೆಯನ್ನು ರದ್ದುಗೊಳಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ, ಅವುಗಳು ಏನೆಂದರೆ ಆ ಹೆಣ್ಣು ಮಗುವಿಗೆ ಜೀವಕ್ಕೆ ಅಪಾಯ ಉಂಟು ಮಾಡುವಂತಹ ಕಾಯಿಲೆ ಬಂದ ಸಮಯದಲ್ಲಿ ಈ ಖಾತೆಯನ್ನು ನಾವು ರದ್ದುಗೊಳಿಸಬಹುದಾಗಿದೆ. ನಂತರ ಹೆಣ್ಣು ಮಗುವಿನ ಪೋಷಕರು ಮೃತಪಟ್ಟಲ್ಲಿ, ಈ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ನಾವು ರದ್ದುಗೊಳಿಸಬಹುದಾಗಿದೆ.
- ಮೊದಲಿದ ನಿಯಮದ ಪ್ರಕಾರ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ಆ ಹೆಣ್ಣು ಮಗು 10 ವರ್ಷ ಕಳೆದ ನಂತರ ಕಾರ್ಯನಿರ್ವಹಿಸಬಹುದಿತ್ತು ಆದರೆ ಇತ್ತೀಚಿನ ತಿದ್ದುಪಡಿಯ ನಿಯಮದ ಪ್ರಕಾರ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ನಿರ್ವಹಿಸಬಹುದಾಗಿದೆ ಅಲ್ಲಿಯವರೆಗೂ ಹೆಣ್ಣು ಮಗುವಿನ ಪೋಷಕರು ಆ ಖಾತೆಯ ಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯುವ ಪ್ರಕ್ರಿಯೆ
ಹೂಡಿಕೆದಾರರು ಸುಕನ್ಯಾ ಸಮೃದ್ಧಿ ಯೋಜನೆಗೆ ಅಂಚೆ ಕಚೇರಿಗಳ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳ ಮೂಲಕ ಅರ್ಜಿ ಸಲ್ಲಿಸಬಹುದು.
- ಇಂಡಿಯನ್ ಪೋಸ್ಟ್ ವೆಬ್ಸೈಟ್ , ಆರ್ಬಿಐ ವೆಬ್ಸೈಟ್, ಸಾರ್ವಜನಿಕ ವಲಯ ಮತ್ತು ಖಾಸಗಿ ಬ್ಯಾಂಕ್ನ ಅಧಿಕೃತ ವೆಬ್ಸೈಟ್ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ
- ಹೆಣ್ಣು ಮಗು ಮತ್ತು ಪೋಷಕರು ಅಥವಾ ಪಾಲಕರು ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿಈ ಕೆಳಗಿನ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು.
- ಪ್ರಾಥಮಿಕ ಖಾತೆದಾರ- ಹೆಣ್ಣು ಮಗುವಿನ ಹೆಸರು
- ಜಾಯಿಂಟ್ ಹೋಲ್ಡರ್- ಪೋಷಕರ ಹೆಸರು ಅಥವಾ ಪಾಲಕರ ಹೆಸರು
- ಆರಂಭಿಕ ಠೇವಣಿ ಮೊತ್ತ – ಚೆಕ್/ಡಿಡಿ ಸಂಖ್ಯೆ ಮತ್ತು ಆರಂಭಿಕ ಠೇವಣಿಯ ದಿನಾಂಕ
- ಜನನ ಪ್ರಮಾಣಪತ್ರದ ವಿವರಗಳೊಂದಿಗೆ ಹೆಣ್ಣು ಮಗುವಿನ ಜನ್ಮ ದಿನಾಂಕ.
- ಡ್ರೈವಿಂಗ್ ಲೈಸೆನ್ಸ್, ಆಧಾರ್ ಇತ್ಯಾದಿಗಳಂತಹ ಪೋಷಕ ಅಥವಾ ಪಾಲಕರ ಗುರುತು.
- ಪ್ರಸ್ತುತ ಮತ್ತು ಶಾಶ್ವತ ವಿಳಾಸ (ಪೋಷಕರ ಅಥವಾ ಕಾನೂನು ಪಾಲಕರ ID ದಾಖಲೆಯ ಪ್ರಕಾರ).
- ಇತರ KYC ಪುರಾವೆಗಳಾದ PAN, ಮತದಾರರ ಗುರುತಿನ ಚೀಟಿ ಇತ್ಯಾದಿಗಳ ವಿವರಗಳು
25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?
ಯಾವ ಬ್ಯಾಂಕುಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಬಹುದು
ಕೆನರಾ ಬ್ಯಾಂಕ್,
ಆಕ್ಸಿಸ್ ಬ್ಯಾಂಕ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ
UCO ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್
ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್
ಇಂಡಿಯನ್ ಬ್ಯಾಂಕ್,
ಐಸಿಐಸಿಐ ಬ್ಯಾಂಕ್
ಕಾರ್ಪೊರೇಷನ್ ಬ್ಯಾಂಕ್
ಅಲಹಾಬಾದ್ ಬ್ಯಾಂಕ್
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
IDBI ಬ್ಯಾಂಕ್
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಬ್ಯಾಂಕ್ ಆಫ್ ಮಹಾರಾಷ್ಟ್ರ
ಬ್ಯಾಂಕ್ ಆಫ್ ಬರೋಡಾ
ಪಂಜಾಬ್ & ಸಿಂಧ್ ಬ್ಯಾಂಕ್
ಇಂಡಿಯನ್ ಓವರ್ಸೀಸ್ ಬ್ಯಾಂಕ್
ಸುಕನ್ಯಾ ಸಮೃದ್ಧಿ ಯೋಜನೆಯು ನಿಮಗೆಲ್ಲ ತಿಳಿದಿರುವಂತೆ ಭಾರತದ ಜನಪ್ರಿಯ ಹಾಗೂ ಒಂದು ಯಶಸ್ವಿಯ ಯೋಜನೆಯಾಗಿದೆ. ನರೇಂದ್ರ ಮೋದಿಯವರು ಭೇಟಿ ಬಚಾವೋ ಭೇಟಿ ಪಡಾವೋ ಎಂದು ಘೋಷಣೆ ಮಾಡಿದ ತಕ್ಷಣವೇ ಎಲ್ಲಾ ಜನರು ಇದರ ಅನುಕೂಲವನ್ನು ಅರಿತುಕೊಂಡರು. ಹಾಗಾಗಿ ಇಂತಹ ಅನುಕೂಲಗಳನ್ನು ಹೊಂದಿರುವ ಈ ಯೋಜನೆಯ ಮುಖ್ಯ ತಿದ್ದುಪಡಿಗಳನ್ನು ಅರಿತುಕೊಳ್ಳಲು ಈ ಲೇಖನವನ್ನು ಈ ಕೂಡಲೇ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಪೋಷಕರಿಗೆ ಈ ಕೂಡಲೇ ಶೇರ್ ಮಾಡಿ, ಧನ್ಯವಾದಗಳು.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಯಶಸ್ವಿನಿ ಯೋಜನೆ ಮರು ಜಾರಿ- ಅರ್ಜಿ ಸಲ್ಲಿಸಲು ನವೆಂಬರ್ 14 ಕೊನೆಯ ದಿನಾಂಕ
ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ರೈತರು ಹಾಗೂ ಬಡವರಿಗಾಗಿ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ನವೆಂಬರ್ 2ರಿಂದ ಈ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ.
ರಾಜ್ಯದಲ್ಲಿಡೆ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022 23ನೇ ಸಾಲಿನ ಆಯವ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಮರು ಜಾರಿಗೊಳಿಸಲು ತೀರ್ಮಾನಿಸಿ ಇದಕ್ಕಾಗಿ 2022-23ನೇ ಬಜೆಟ್ ನಲ್ಲಿ 300 ಕೋಟಿ ಘೋಷಣೆ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/yasashwing-scheme-karnataka-kannada/
ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ
ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/
ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ
ವಿವಿಧ ಯೋಜನೆಗಳಡಿಯಲ್ಲಿ ದ್ವಿಚಕ್ರ ವಾಹನ, ಸರಕು ಸಾಗಾಣಿಕೆ ವಾಹನ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಯಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಡಾ ಅಂಬೇಡ್ಕರ್ ನಿಗಮ ದಲ್ಲಿ ಹೊಸ ಬೈಕ್ ಪಡೆಯಲು ಸಹಾಯಧನ ಅರ್ಜಿ ಆಹ್ವಾನಿಸಲಾಗಿದೆ. ಅಮೇಜಾನ್, ಝೋಮೊಟೋ, ಸ್ವಿಗ್ಗಿ, ಊಬರ್ ಸೇರಿದಂತೆ ಇತರ ಸಂಸ್ಥೆಗಳಲ್ಲಿ ಕೆಲಸ ಪಡೆದು ಪಾರ್ಸೆಲ್ ಗಳನ್ನು ಮನೆಬಾಗಿಲಿಗೆ ತಲುಪಿಸಲು ನಿಮ್ಮ ಹತ್ತಿರ ಬೈಕ್ ಇಲ್ಲವೆ. ಚಿಂತೆ ಮಾಡಬೇಡಿ, ಇನ್ನೇಕೆ ತಡ ಕೂಡಲೇ ಅರ್ಜಿ ಸಲ್ಲಿಸಿ ಬೈಕ್ ಖರೀದಿಸಿ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/two-wheeler-scheme-karnataka/
ನವೆಂಬರ್ 2022 – ವಿವಿಧ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅವಕಾಶ: 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳು
ಉದ್ಯೋಗದ ಆಕಾಂಕ್ಷೆಗಳಿಗೆ ನವೆಂಬರ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೊರಡಿಸಿಲಾದ ಅಧಿ ಸೂಚನೆಯ ಪ್ರಕಾರ 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ ಎಂದು ತಿಳಿದು ಬಂದಿದೆ. ಯಾವ ಯಾವ ಅಭ್ಯರ್ಥಿಗಳಿಗೆ ಈ ಸರ್ಕಾರಿ ಹುದ್ದೆಯಲ್ಲಿ ಆಸಕ್ತಿ ಹೊಂದಿದೆಯೋ ಅವರು ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಆನ್ಲೈನ್ ಫಾರ್ಮ್ ಇಂದ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.
ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/kannada-job-news-november-2022/
ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ
ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/
ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ
ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/
ಇದನ್ನೂ ಓದಿ:
IAF Agniveervayu Recruitment 2022: ಭಾರತೀಯ ವಾಯುಪಡೆಯಿಂದ ಅಗ್ನೀ ವೀರ್ ವಾಯು ಅರ್ಜಿ ಆಹ್ವಾನ; ಇಲ್ಲಿದೆ ಮಾಹಿತಿ
Amazon Recruitment 2022 : ಮನೆಯಲ್ಲೇ ಕೆಲಸ ₹45 ಸಾವಿರ ಸಂಬಳ. ಅರ್ಜಿ ಸಲ್ಲಿಸುವ ವಿಧಾನ, ಸಂಪೂರ್ಣ ಮಾಹಿತಿ ಇಲ್ಲಿದೆ
SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ 2022-23 : ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ, ಅರ್ಜಿ ಸಲ್ಲಿಸುವ ವಿಧಾನ