ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಸ್ಮಾರ್ಟ್ ಟಿವಿಯಾದ Oneplus TV 65 Q2 pro ಮೇಲಿ ರಿಯಾಯಿತಿ(Discount) ಇರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು ಈ ಟೀವಿಯ ಮೇಲೆ ಬರೋಬ್ಬರಿ 40% ರಿಯಾಯಿತಿ ಇದೆ. ನೀವೇನಾದರೂ ಒಂದು ಒಳ್ಳೆಯ ಸ್ಮಾರ್ಟ್ TV ಯನ್ನು ಉತ್ತಮ price ನೊಂದಿಗೆ ಹುಡುಕುತ್ತಿದ್ದರೆ, ಈ TV ಯ ಫೀಚರ್ಸ್, ಬೆಲೆಯನ್ನು ಒಮ್ಮೆ ನೋಡಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಸ್ನೇಹಿತರೆ, ನೀವು ಕೂಡ ನಿಮ್ಮ ಮನೆಯಲ್ಲಿ ಒಂದು ದೊಡ್ಡ ಪರದೆಯ ಟಿವಿ , ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು, ಹಾಗೂ ಸಿನಿಮಾ ಹಾಲ್ ತರಹದ ಅನುಭವವನ್ನು ನೀಡುವ ಒಂದು ಒಳ್ಳೆಯ ಸ್ಮಾರ್ಟ್ TV ಯನ್ನು ಖರೀದಿಸಲು ಯೋಚಿಸುತ್ತಿದೀರಾ ? ಹಾಗಾದ್ರೆ, ನೀವು Oneplus TV 65 Q2 pro – ಸ್ಮಾರ್ಟ್ ಟಿವಿಯ ಬಗ್ಗೆ ತಿಳಿದುಕೊಳ್ಳಲೇಬೇಕು. ಏಕೆಂದರೆ, ಈ ಸ್ಮಾರ್ಟ್ ಟಿವಿಯು ತನ್ನ ಮಾರಾಟದಲ್ಲಿ 40 % discount ನೀಡುತ್ತಿದೆ. Oneplus TV 65 ನ ಮೂಲ ದರವು 1,59,999 ರೂ. ಅಗಿದೆ , ಆದರೆ 40% ರಿಯಾಯಿತಿಯ ನಂತರ ಇದು ನಿಮಗೆ ಕೇವಲ 94,999 ರೂಪಾಯಿ ಗೆ ಸಿಗುತ್ತಿದೆ. ಇದಲ್ಲದೆ, ಕಂಪನಿಯು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು, EMI ಗಳು ಮತ್ತು ನೆಟ್ ಬ್ಯಾಂಕಿಂಗ್‌ನಲ್ಲಿ 5,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ.
ಈ OnePlus TV 65 Q2 Pro ನ ಪ್ರಮುಖ ಆಕರ್ಷಣೆಯೆಂದರೆ, ಇದು ಅದ್ಭುತವಾದ 4K QLED ಚಾಲಿತ ದೃಶ್ಯಗಳು, ಸಿನಿಮಾ-ಗುಣಮಟ್ಟದ ಧ್ವನಿ ಮತ್ತು 65-ಇಂಚಿನ ಪರದೆಯನ್ನು ಒಳಗೊಂಡಿದೆ.
Oneplus TV 65 Q2 pro :
65ಇಂಚಿನ ಈ ಟಿವಿ ನಿಮಗೆ ಕೇವಲ 94,999/- ರೂಗಳಿಗೆ ಅಮೆಜಾನ್ ನಲ್ಲಿ ದೊರೆಯಲಿದೆ.
ಈ ಟಿವಿ ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
OnePlus TV 62 Q2 Pro 65-ಇಂಚಿನ 3840×2160 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. OLED ಡಿಸ್ಪ್ಲೇ 120Hz ವರೆಗೆ ರಿಫ್ರೆಶ್ ದರವನ್ನು ಮತ್ತು 1200 nits ವರೆಗಿನ ಬ್ರೈಟ್ ನೆಸ್ ನೀಡುತ್ತದೆ. ಇದು ಬ್ಲೂಟೂತ್ 5.0, ಡ್ಯುಯಲ್-ಬ್ಯಾಂಡ್ ವೈ-ಫೈ (2.4GHz + 5GHz), ಮೂರು HDMI 2.1 (ಒಂದು eARC), ಎರಡು USB 2.0 ಪೋರ್ಟ್‌ಗಳು, ಒಂದು RF ಪೋರ್ಟ್ ಮತ್ತು ಒಂದು RJ45 ethernet ಪೋರ್ಟ್ ಅನ್ನು ಬೆಂಬಲಿಸುತ್ತದೆ. ಇದು 3GB RAM, 32GB ಸಂಗ್ರಹಣೆ, 70W 2.1 CH ಸೌಂಡ್ ಸಿಸ್ಟಂನೊಂದಿಗೆ ಶಕ್ತಿಯುತ ಆಡಿಯೊವನ್ನು ಬೆಂಬಲಿಸುತ್ತದೆ. Dolby Vision ಬೆಂಬಲವೂ ಟಿವಿಯ ಚಿತ್ರದ ಕ್ವಾಲಿಟಿಯನ್ನು ಇನ್ನು ಹೆಚ್ಚು ಸುಧಾರಿಸುತ್ತದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Oneplus ಸ್ಮಾರ್ಟ್ ಟಿವಿಯು Netflix, Hotstar, Amazon Prime ಮತ್ತು ಹೆಚ್ಚಿನ OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶದ ಜೊತೆಗೆ, OxygenPlay 2.0 ನೊಂದಿಗೆ ಮತ್ತು 270+ ಲೈವ್ ಚಾನಲ್‌ಗಳಿಗೆ ಪ್ರವೇಶವನ್ನು ನೀಡುತ್ತದೆ ಮತ್ತು ಇವೆಲ್ಲವೂ Google TV ಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಾಹಿಸುತ್ತವೆ.
Oneplus TV ಯ ರಿಮೋಟ್ ಕೂಡ ಸ್ಟ್ಯಾಂಡರ್ಡ್ ಮತ್ತು ಕಾಂಪ್ಯಾಕ್ಟ್ ಆಗಿದೆ. ಇದು 4 – way navigation ಬಟನ್, ಸೆಂಟರ್ ಸೆಲೆಕ್ಟ್ ಬಟನ್ ಮತ್ತು ಪವರ್, ಬ್ಯಾಕ್, ಹೋಮ್, ಸೆಟ್ಟಿಂಗ್‌ಗಳು, Volume ಬಟನ್ ಮತ್ತು Google ಅಸಿಸ್ಟೆಂಟ್‌ಗಾಗಿ ಕೀಗಳನ್ನು ಒಳಗೊಂಡಿದೆ. ರಿಮೋಟ್ ಯೂಟ್ಯೂಬ್, ಡಿಸ್ನಿ+ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೊಗಾಗಿ ಮೀಸಲಾದ ಶಾರ್ಟ್‌ಕಟ್ ಕೀಗಳನ್ನು ಸಹ ಒಳಗೊಂಡಿದೆ, ಇದು ಕೇವಲ ಒಂದು ಕ್ಲಿಕ್‌ನಲ್ಲಿ ಒಂದು ಅಪ್ಲಿಕೇಶನ್‌ನಿಂದ ಇನ್ನೊಂದಕ್ಕೆ ಬದಲಾಯಿಸುವುದನ್ನು ಸುಲಭಗೊಳಿಸುತ್ತದೆ.
ಒಟ್ಟಾರೆಯಾಗಿ, OnePlus TV Q2 Pro 65-ಇಂಚಿನ ಸ್ಮಾರ್ಟ್ ಟಿವಿಯು ಒಂದು ಒಳ್ಳೆಯ ಸ್ಮಾರ್ಟ್ ಟಿವಿಯಿಂದ ಅಪೇಕ್ಷಿತ ಎಲ್ಲಾ ಫೀಚರ್ಸ್ ನೀಡುತ್ತದೆ, ಅದು ಉತ್ತಮ ಪ್ರೀಮಿಯಂ ಬೆಲೆಯಲ್ಲಿ.
ನೀವೇನಾದರೂ ಈ ಟಿವಿಯನ್ನು ಖರೀದಿ ಮಾಡಬೇಕೆಂದಿದ್ದರೆ ಇದು ಒಳ್ಳೆಯ ಸಮಯ ಎನ್ನಬಹುದು ಏಕೆಂದರೆ, ಇದರ ಮೇಲೆ ಹಿಂದೆಂದೂ ಇಲ್ಲದ ರಿಯಾಯಿತಿಯನ್ನು ನೀಡುತ್ತಿದ್ದಾರೆ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ