ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ರೇಷನ್ ಕಾರ್ಡ್(Ration card) ತಿದ್ದುಪಡಿಗೆ ಹೊಸ ದಿನಾಂಕವನ್ನು ನಿಗದಿಪಡಿಸಿರುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿಯರ ಹೆಸರು ತಪ್ಪಾಗಿದ್ದಲ್ಲಿ ಅಥವಾ ಏನಾದರೂ ದೋಷಗಳು ಇದ್ದಲ್ಲಿ ಅವುಗಳನ್ನು ಸರಿ ಮಾಡಿಕೊಳ್ಳಲು ಅವಕಾಶ ಒದಗಿಸಿಕೊಡಲಾಗಿದೆ. ಹೌದು, ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಯನ್ನು ಮಾಡಿಸಲು ದಿನಾಂಕ ಮುಗಿಯುತ್ತಿದೆ, ಸರ್ವ ಸಮಸ್ಯೆಯಿಂದ ತಿದ್ದುಪಡಿಯನ್ನು ಮಾಡಿಸಲು ಆಗುತ್ತಿಲ್ಲ ಎನ್ನುವವರಿಗೆ ಒಂದು ಸಿಹಿ ಸುದ್ದಿ ಎನ್ನಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ರೇಷನ್ ಕಾರ್ಡ್ ತಿದ್ದುಪಡಿಗೆ ಜಿಲ್ಲೆವಾರು ದಿನಾಂಕವನ್ನು ನಿಗದಿಪಡಿಸಲಾಗಿದೆ :
ಯಾವುದೇ ಯೋಜನೆಯ ಹಣವನ್ನು ಪಡೆದುಕೊಳ್ಳಬೇಕಾದರೆ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಪ್ರಯೋಜನಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ನಲ್ಲಿ ತಪ್ಪಾಗಿರುವ ಮಾಹಿತಿಗಳನ್ನು ತಿದ್ದುಪಡಿ ಮಾಡಿಸಿಕೊಳ್ಳುವುದು ಅವಶ್ಯಕವಾಗಿದೆ. ಹಿಂದಿನ ಮಾಹಿತಿಯಲ್ಲಿ ನಿಮಗೆಲ್ಲಾ ಸೆಪ್ಟೆಂಬರ್ ಹತ್ತನೇ ತಾರೀಖಿನವರೆಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿರುವುದರ ಬಗ್ಗೆ ತಿಳಿಸಿಕೊಡಲಾಗಿತ್ತು. ಆದರೆ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿಗೆ ಜಿಲ್ಲೆ ವಾರು ಮತ್ತೊಂದು ದಿನಾಂಕವನ್ನು ನಿಗದಿಪಡಿಸಿದೆ. ಅನೇಕ ಜನರು, ತಿದ್ದುಪಡಿಗೆಂದು ತೆರಳಿದಾಗ ಸರ್ವರ್(server) ಬಾರದೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುವ ಸಮಸ್ಯೆಯನ್ನು ಮನದಟ್ಟು ಮಾಡಿಕೊಂಡ ಸರ್ಕಾರ, ಕರ್ನಾಟಕ ಆಹಾರ ಇಲಾಖೆಯ ಪ್ರಕಾರ ಮೂರು ವಿಭಾಗಗಳಿಗೆ ಬೇರೆ ಬೇರೆ ದಿನಾಂಕಗಳನ್ನು ಗೊತ್ತು ಮಾಡಿದೆ.
ಯಾವ ದಿನಾಂಕಕ್ಕೆ ಯಾವ ಜಿಲ್ಲೆಗಳಲ್ಲಿ ಸರ್ವರ್ ಬರಲಿದೆ :
ಬೆಂಗಳೂರು ಸರ್ವರ್: 9/9/2023 ರಿಂದ 11/9/2023 ನೇ ತಾರೀಕಿನವರೆಗೆ, ಸಮಯ ಬೆಳಗ್ಗೆ 10 ಗಂಟೆಯಿಂದ 6:00 ಗಂಟೆಗಳವರೆಗೆ ತಿದ್ದುಪಡಿಯನ್ನು ಮಾಡಿಸಬಹುದಾಗಿದೆ.
ಬೆಂಗಳೂರು ಸರ್ವರ್ ಅಡಿಯಲ್ಲಿ ಬರುವ ಜಿಲ್ಲೆಗಳು : ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಹಾಗೂ ಬೆಂಗಳೂರು ಸಿಟಿ
ಬೆಳಗಾವಿ/ಮೈಸೂರು ಸರ್ವರ್ : 12/9/2023 ರಿಂದ 14/9/2023 ನೇ ತಾರೀಕಿನವರೆಗೆ ಸಮಯ ಬೆಳಗ್ಗೆ 10 ಗಂಟೆಯಿಂದ 6:00 ಗಂಟೆಗಳವರೆಗೆ ತಿದ್ದುಪಡಿಯನ್ನು ಮಾಡಿಸಬಹುದಾಗಿದೆ.
ಬೆಳಗಾವಿ/ಮೈಸೂರು ಸರ್ವರ್ ಅಡಿಯಲ್ಲಿ ಬರುವ ಜಿಲ್ಲೆಗಳು : ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಂಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉತ್ತರ ಕನ್ನಡ, ಉಡುಪಿ ಹಾಗೂ ವಿಜಯಪುರ.
ಕಲ್ಬುರ್ಗಿ ಸರ್ವರ್ : 6/9/2023 ರಿಂದ 8/9/2023 ನೇ ತಾರೀಕಿನವರೆಗೆ ಸಮಯ ಬೆಳಗ್ಗೆ 10 ಗಂಟೆಯಿಂದ 6:00 ಗಂಟೆಗಳವರೆಗೆ ತಿದ್ದುಪಡಿಯನ್ನು ಮಾಡಿಸಬಹುದಾಗಿದೆ.
ಕಲ್ಬುರ್ಗಿ ಸರ್ವರ್ ಅಡಿಯಲ್ಲಿ ಬರುವ ಜಿಲ್ಲೆಗಳು : ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲ್ಬುರ್ಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ ಹಾಗೂ ವಿಜಯನಗರ.
ಬೇಕಾದ ದಾಖಲೆಗಳು:
ಕುಟುಂಬ ಸದಸ್ಯರ ಆಧಾರ್ ಕಾರ್ಡ್.
ಐದು ವರ್ಷದ ಒಳಗಿನ ಮಕ್ಕಳನ್ನು ಸೇರ್ಪಡೆ ಮಾಡಬೇಕಾಗಿದ್ದಲ್ಲಿ ಅವರ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ರೇಷನ್ ಕಾರ್ಡ್ ತಿದ್ದುಪಡಿಯ ಡೈರೆಕ್ಟ್ ಲಿಂಕ್:
https://ahara.kar.nic.in/
ಪಡಿತರ ಚೀಟಿಯ ತಿದ್ದುಪಡಿಯನ್ನು ಎಲ್ಲಿ ಮಾಡಲಾಗುತ್ತದೆ :
ಆನ್‌ಲೈನ್ ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಸೇವೆ ಪಡೆಯಬಹುದು. ಆನ್ಲೈನ್ ನಲ್ಲಿ ಕೂಡ ನೀವು ತಿದ್ದುಪಡಿಯನ್ನು ಮಾಡಿಕೊಳ್ಳಬಹುದು ಅದಕ್ಕಾಗಿ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ : https://ahara.kar.nic.in ಆದರೆ ಆನ್ಲೈನ್ನಲ್ಲಿ ನೀವು ಅರ್ಜಿಯನ್ನು ಸಲ್ಲಿಸುವಾಗ ಬಯೋಮೆಟ್ರಿಕ್ ಕೇಳಲಾಗುತ್ತದೆ ಆದ್ದರಿಂದ ನೀವು ಗ್ರಾಮ ಪಂಚಾಯಿತಿ ಕಚೇರಿ ಅಥವಾ ಬಯೋಮೆಟ್ರಿಕ್ ಕೇಂದ್ರಕ್ಕೆ ಭೇಟಿ ನೀಡುವುದು ಸೂಕ್ತವಾಗಿದೆ.
ಮೇಲೆ ತಿಳಿಸಲಾದ ಕೇಂದ್ರಗಳಿಗೆ ತೆರಳಿ ನಿಮ್ಮ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಸಿಕೊಂಡ ನಂತರ ನಿಮಗೆ ಒಂದು ಸ್ವೀಕೃತಿಯನ್ನು ನೀಡುತ್ತಾರೆ, ಅದನ್ನು ನೀವು ತೆಗೆದುಕೊಂಡು ಆಹಾರ ಇಲಾಖೆಯ ಕಚೇರಿಗೆ ನೀಡಬೇಕು. ಆಹಾರ ಇಲಾಖೆಯಲ್ಲಿ ಕೆಲವೊಮ್ಮೆ ದಾಖಲೆಯನ್ನು ಕೇಳುವ ಅವಕಾಶ ಇರುತ್ತದೆ. ಹಾಗಾಗಿ ನೀವು ಆಹಾರ ಇಲಾಖೆಗೆ ತೆರಳುವಾಗ ಆಧಾರ್ ಕಾರ್ಡಿನ ಪ್ರತಿ ಹಾಗೂ ಪಡಿತರ ಚೀಟಿಯ ಪ್ರತಿಯನ್ನು ಕೊಂಡೊಯ್ಯುವುದು ಒಳ್ಳೆಯದು.
ಪಡಿತರ ಚೀಟಿಯ ತಿದ್ದುಪಡಿಗೆ ದಿನಾಂಕವನ್ನು ವಿಸ್ತರಣೆ ಮಾಡಿರುವ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತರಿಗೂ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ