ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಸರ್ಕಾರದ ವತಿಯಿಂದ ಗೃಹಲಕ್ಷ್ಮಿ ಯೋಜನೆಯ ಹಣದ ಸ್ಟೇಟಸ್ ಚೆಕ್ ಮಾಡುವ ಲಿಂಕನ್ನು ಬಿಡುಗಡೆ ಮಾಡಲಾಗಿದೆ, ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಸರ್ಕಾರವು ಹೊಸದಾಗಿ ಬಿಡುಗಡೆ ಮಾಡಿರುವ ಈ ಒಂದು ಸ್ಟೇಟಸ್ ಚೆಕ್ ಮಾಡುವ ಲಿಂಕ್ ಮೂಲಕ ನೀವು, ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದ್ದೆಯೇ ಅಥವಾ ಇಲ್ಲವೇ ಎಂಬುದನ್ನು ಚೆಕ್ ಮಾಡಬಹುದು. ಅಷ್ಟೇ ಅಲ್ಲದೆ ಹಣ ಯಾವ ಬ್ಯಾಂಕಿಗೆ ಜಮಾ ಆಗಿದೆ ಎಂದು ಕೂಡ ತಿಳಿಯಬಹುದಾಗಿದೆ. ಒಂದು ವೇಳೆ ನಿಮಗೆ ಹಣ ಜಮಾ ಆಗಿಲ್ಲ ಅಂದರೆ ಯಾಕೆ ಇನ್ನೂ ಹಣ ಜಮಾ ಆಗಿಲ್ಲ ಏನು ತೊಂದರೆ ಇದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಸ್ಟೇಟಸ್ ಚೆಕ್ ಮಾಡುವ ಈ ಲಿಂಕ್ ಯಾವುದು?, ಹೇಗೆ ಚೆಕ್ ಮಾಡುವುದು? ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕೊನೆಗೂ ಬಂದೇಬಿಡ್ತು ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡುವ ಲಿಂಕ್ :
ಸರ್ಕಾರದ ವತಿಯಿಂದ ಗೃಹಲಕ್ಷ್ಮಿ ಯೋಜನೆ(gruhalakshmi scheme)ಯ ಅಪ್ಲಿಕೇಶನ್ ಸ್ಟೇಟಸ್ ಅನ್ನು ಚೆಕ್ ಮಾಡುವ ಲಿಂಕನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ನಿಮ್ಮ ಪಡಿತರ ಚೀಟಿ(Ration card)ಯ ನಂಬರ್ ಅನ್ನು ನಮೂದಿಸುವ ಮೂಲಕ ನೀವು ಸ್ಟೇಟಸ್ ಅನ್ನು ಚೆಕ್ ಮಾಡಬಹುದು. ಹಲವಾರು ಜನರಿಗೆ ಇನ್ನೂ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬಂದು ಸೇರಿಲ್ಲ. ಇದಕ್ಕೆ ಏನು ಕಾರಣ ಎಂದು ಕೂಡ ಸ್ವಲ್ಪ ಜನರಿಗೆ ತಿಳಿಯುತ್ತಿಲ್ಲ. ಇಂತಹ ಸಮಸ್ಯೆಯ ನಡುವೆ ಸರ್ಕಾರವು ಒಂದು ಅಧಿಕೃತ ಲಿಂಕನ್ನು ಬಿಡುಗಡೆ ಮಾಡಿದೆ. ಇದು ಎಲ್ಲಾ ಸಮಸ್ಯೆಗಳಿಗೆ ಒಂದು ಪರಿಹಾರ ಅಂತಾನೆ ಹೇಳಬಹುದು.
ಗೃಹಲಕ್ಷ್ಮಿ ಪೇಮೆಂಟ್(payment status) ಚೆಕ್ ಮಾಡುವ ಹೊಸ ಲಿಂಕ್ ಇದೆ ನೋಡಿ :
https://sevasindhu.karnataka.
ಗೃಹಲಕ್ಷ್ಮಿ ಯೋಜನೆಯ ಹಣದ ಸ್ಟೇಟಸ್ ಚೆಕ್ ಮಾಡುವ ವಿಧಾನ :
ಹಂತ 1: ಮೊದಲಿಗೆ ಮೇಲೆ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಂತ 2: ನಂತರ ನಿಮಗೆ Application Tracker ಮತ್ತು login ಎಂಬ ಆಯ್ಕೆಗಳು ದೊರೆಯುತ್ತದೆ, ಅದರಲ್ಲಿ Application Tracker ಮೇಲೆ ಕ್ಲಿಕ್ ಮಾಡಿ.
ಹಂತ 3: ನಂತರ ಅಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ.
ಹಂತ 4: ನಮೂನೆ ಮಾಡಿದ ನಂತರ ನೀವು ಅರ್ಜಿಯ ಸ್ಥಿತಿಯನ್ನು ಕಾಣಬಹುದು, ಅಲ್ಲಿ ನಿಮ್ಮ Serial No, Ration Card Number, Applicant Name, Payment Date and Payment Status ಇರುತ್ತದೆ. ಪೇಮೆಂಟ್ ಸ್ಟೇಟಸ್(Payment status) ನಲ್ಲಿ ಸಕ್ಸಸ್ ಎಂದು ಬಂದರೆ ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಎಂದರ್ಥ.
ಒಂದು ವೇಳೆ ನಿಮ್ಮ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ, ಮುಂದೆ ಆಗಲಿದೆ ಎಂದರೆ push to DBT ಎಂದು ಪೇಮೆಂಟ್ ಸ್ಟೇಟಸ್ನಲ್ಲಿ ತೋರಿಸುತ್ತದೆ. ಹಾಗೆಯೇ ಬ್ಯಾಂಕ್ ಅಕೌಂಟ್ ನಾಟ್ ಲಿಂಕೆಡ್, ಇಂದು ತೋರಿಸಿದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಎಂದರ್ಥಲಿಂಕ್ ಆಗಿಲ್ಲ, ಹೇಗಿದ್ದಲ್ಲಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುವುದಿಲ್ಲ. ಹಾಗಾಗಿ ನಿಮ್ಮ ಬ್ಯಾಂಕ್ ಗೆ ತೆರಳಿ ಅದನ್ನು ಸರಿ ಮಾಡಿಸಿಕೊಳ್ಳಬೇಕಾಗುತ್ತದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಸೂಚನೆ : ಹಲವಾರು ಜನರು ಸ್ಟೇಟಸ್ ಅನ್ನು ಚೆಕ್ ಮಾಡುತ್ತಿರುವುದರಿಂದ ಕೆಲವೊಮ್ಮೆ ಸರ್ವರ್ ಸಮಸ್ಯೆಯಾಗುತ್ತದೆ. ಹಾಗಾಗಿ ನಿಮಗೆ ಏನಾದರೂ ಸರ್ವರ್ ಸಮಸ್ಯೆ ಉಂಟಾದರೆ, ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ.
ಮೀನಿನ ವಿಧಾನದ ಪ್ರಕಾರ ನೀವು ಗೃಹಲಕ್ಷ್ಮಿ ಹಣದ ಸ್ಟೇಟಸ್ ಅನ್ನು ಎರಡು ನಿಮಿಷಗಳಲ್ಲಿ ಕುಳಿತಲೇ ಚೆಕ್ ಮಾಡಬಹುದಾಗಿದೆ. ಹಾಗಾಗಿ ಮನೆಯಲ್ಲಿಯೇ ಕುಳಿತುಕೊಂಡು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದ್ದೇಯೇ, ಇಲ್ಲವೇ ಎಂದು ತಿಳಿದುಕೊಳ್ಳಬಹುದು. ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Bandhila