ಎಲ್ಲರಿಗೂ ನಮಸ್ಕಾರ, ದೇಶಾದ್ಯಂತ ಓಡಾಡುತ್ತಿರುವ ಹೈ -ಸ್ಪೀಡ್ ರೈಲ್ವೆಗಳಾದ ವಂದೇ ಭಾರತ್ ಕರ್ನಾಟಕದಲ್ಲಿ ಮತ್ತೆ 10 ಬೇರೆ ಬೇರೆ ಮಾರ್ಗಗಳಲ್ಲಿ ರೈಲು ಓಡಿಸಬೇಕೆಂಬ ಬೇಡಿಕೆ ಇದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
10 ಹೊಸ ಮಾರ್ಗಗಳಲ್ಲಿ ವಂದೇ ಭಾರತ್:
ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರತಿಷ್ಠಿತ ಮತ್ತು ಆಧುನಿಕ ರೈಲುಗಳಲ್ಲಿ ಒಂದಾಗಿದೆ ಮತ್ತು ಭಾರತೀಯ ರೈಲ್ವೇಸ್(Indian Railways) ನಿರ್ವಹಿಸುತ್ತದೆ. ಇದನ್ನು ಸೆಮಿ-ಹೈ ಸ್ಪೀಡ್ ರೈಲು ಎಂದು ಪರಿಗಣಿಸಲಾಗಿದೆ. ದೇಶಾದ್ಯಂತ ಹಲವಾರು ರಾಜ್ಯ ಗಳಿಂದ ರಾಜ್ಯಗಳನ್ನು ಜೋಡಿಸು ಅನೇಕ ವಂದೇ ಭಾರತ್ ರೈಲ್ವೆಗಳು ವಿವಿಧ ಮಾರ್ಗಗಳಲ್ಲಿ ಓಡಾಡುತ್ತಿವೆ. ಕರ್ನಾಟಕದಲ್ಲಿ ಇತ್ತೀಚಿಗೆ 2 ವಂದೇ ಭಾರತ್ ರೈಲ್ವೆಗಳು ಓಡಾಡುತ್ತಿವೆ. ಮೈಸೂರ – ಬೆಂಗಳೂರು ಮಾರ್ಗದಲ್ಲಿ ಓಡಾಡುವ ಒಂದನೇ ವಂದೇ ಭಾರತ ರೈಲ್ವೆ ಮತ್ತು ಧಾರವಾಡ – ಬೆಂಗಳೂರು ವಯಾ ಹುಬ್ಬಳ್ಳಿ, ಇದು ಎರೆಡನೇಯ ವಂದೇ ಭಾರತ ರೈಲ್ವೆ ಆಗಿದೆ.
ನೈಋತ್ಯ ರೈಲ್ವೆಯಾದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಲು ಬೇಕಾದ ಮೂಲ ಸೌಕರ್ಯವನ್ನು ಒದಗಿಸಿಲಾದ ಸುತ್ತೋಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮುಂದಿನ 10 ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ಹೈ – ಸ್ಪೀಡ್ ರೈಲ್ವೆಗಳನ್ನು ಓಡಿಸಬೇಕೆಂಬ ಬೇಡಿಕೆಯನ್ನು ಸುತ್ತೋಲೆ ಮೂಲಕ ತಿಳಿಸಲಾಗಿದೆ.
10 ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ಹೈ – ಸ್ಪೀಡ್ ರೈಲ್ವೆಗಳನ್ನು ಓಡಿಸಬೇಕೆಂಬ ರೈಲು ಮಾರ್ಗಗಳು
ಬೆಂಗಳೂರು-ಬೆಳಗಾವಿ
ಬೆಂಗಳೂರು-ಹೊಸಪೇಟೆ
ಬೆಂಗಳೂರು-ಕಾಚಿಗುಡ
ಬೆಂಗಳೂರು-ಕೊಯಮತ್ತೂರು
ಬೆಂಗಳೂರು-ತಿರುಪತಿ
ಬೆಂಗಳೂರು-ಮುಧುರೈ
ಬೆಂಗಳೂರು-ಪುದುಚೇರಿ
ಬೆಂಗಳೂರು-ಕಲಬುರಗಿ
ಬೆಂಗಳೂರು-ಶಿವಮೊಗ್ಗ
ಬೀದರ್-ಹುಬ್ಬಳ್ಳಿ
ಈ ಮೇಲಿನ 10 ಮಾರ್ಗಗಳಲ್ಲಿನ ಕೆಲವು ಮಾರ್ಗಗಳಲ್ಲಿ ನೈಋತ್ಯ ರೈಲ್ವೆಯಾದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಲಾಗುತ್ತದೆ. ಮತ್ತು ಇನ್ನುಳಿದ ಮಾರ್ಗದಲ್ಲಿ ದಕ್ಷಿಣ ಮಧ್ಯ ರೈಲ್ವೆ ರೈಲುಗಳನ್ನು ಓಡಿಸಲಿದೆ. ಕೆಲವು ಮಾರ್ಗಗಳಲ್ಲಿ ಮೂಲ ಸೌಕರ್ಯವನ್ನು ನೀಡಲಾಗಿದೆ ಮತ್ತು ಇನ್ನು ಕೆಲವುಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ವಂದೇ ಭಾರತ್ ರೈಲುಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರು ಮಾಡಿಸಲಗುತ್ತಿದೆ. ಸಧ್ಯ ವಂದೇ ಭಾರತ್ ರೈಲುಗಳನ್ನು ಕೇವಲ 16 ಮತ್ತು 8 ಬೋಗಿಯ ರೈಲುಗಳನ್ನು ಓಡಿಸಲಗುತ್ತಿದೆ. ಹಾಗೆಯೇ ರೈಲ್ವೆ ಅಧಿಕಾರಿಗಳು, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೊಸ ರೈಲುಗಳಿಗೆ ಕೇಸರಿ ಬಣ್ಣ ಬಳಿಯಲಾಗುವುದು ಎಂದು ಘೋಷಿಣೆ ನೀಡಿದ್ದಾರೆ. ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಭೇಟಿಯನ್ನು ನೀಡಿ ಹೊಸ ಕೇಸರಿ ಬಣ್ಣ ಬಳಿಯುತ್ತಿರುವ ರೈಲುಗಳನ್ನು ಪರಿಶೀಲಿಸಿದ್ದಾರೆ.
ಆಗಸ್ಟ್ 19 ರಂದು ರೈಲನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ಚೊಚ್ಚಲ ಪ್ರವೇಶ ಮಾಡಲಿವೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಸದ್ಯ ಈಗಾಗಲೇ ಓಡಾಡುತ್ತಿರುವ ಮೈಸೂರು-ಬೆಂಗಳೂರು-ಚೆನ್ನೈ ಮತ್ತು ಧಾರವಾಡ-ಬೆಂಗಳೂರು ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ರೈಲಿನ ಶೇ 80ರಷ್ಟು ಸೀಟುಗಳು ನಿರಂತರವಾಗಿ ಭರ್ತಿಯಾಗುತ್ತಿಲಿವೇ, ಜನರು ವಂದೇ ಭಾರತ್ ರೈಲು ಸವಾರಿಯನ್ನು ಆನಂದಿಸುತ್ತಿದ್ದಾರೆ. ಬೆಂಗಳೂರು ನಗರದಿಂದ ರಾಜ್ಯದ ಬೇರೆ ಬೇರೆ ನಗರಗಳಿಗೆ ವಂದೇ ಭಾರತ್ ಓಡಿಸಬೇಕು ಎಂಬ ಬೇಡಿಕೆ ಇದೆ.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಬೆಂಗಳೂರು-ಹೊಸಪೇಟೆ ರೈಲನ್ನು ವಿಜಯಪುರ ದಿಂದ ಆರಂಭಿಸಿ