ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ, Money Transaction app ಗಳಾದ ಗೂಗಲ್ ಪೇ, ಫೋನ್ ಪೇ ಮತ್ತು ಪೆಟಿಎಂ(paytm) ನಲ್ಲಿ UPI lite ವೈಶಿಷ್ಟವನ್ನು ಹೇಗೆ ಬಳಸಬೇಕು ಎಂದು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಆನ್ಲೈನ್(online) ಮುಖಾಂತರ ದುಡ್ಡಿನ ವಹಿವಾಟು ಮಾಡುವುದು ಸಾಮಾನ್ಯವಾಗಿದೆ. ಆನ್‌ಲೈನ್ ಪಾವತಿಗಳು, ಅವುಗಳ ಅನುಕೂಲತೆ, ವೇಗ ಮತ್ತು ಸುರಕ್ಷತೆಯ ಕಾರಣದಿಂದಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ. ದೊಡ್ಡ ಟ್ರಾನ್ಸಾಕ್ಷನ್ ಆಗ್ಲಿ ಅಥವಾ ಚಿಕ್ಕ ಟ್ರಾನ್ಸಾಕ್ಷನ್ ಸರಳವಾಗಿ ಯಾವದೇ ಚಿಂತೆ ಇಲ್ಲದೆ ನಡೆಸಬಹುದು. ಭಾರತದ ಆರ್ಥಿಕ ಪರಿಸರ ವ್ಯವಸ್ಥೆಯ ಪಾಲುದಾರ – ಪ್ರತಿದಿನ ಲಕ್ಷಾಂತರ ಬಳಕೆದಾರರಿಗೆ ಸುರಕ್ಷಿತವಾಗಿ ಮತ್ತು ಅನುಕೂಲಕರವಾಗಿ ಡಿಜಿಟಲ್ ಪಾವತಿಗಳನ್ನು ಮಾಡುತ್ತಾರೆ.
Google pay, ಪೆಟಿಎಂ, Phone pe ಇವೆಲ್ಲವೂ ಅತ್ಯಂತ ಜನಪ್ರಿಯ ಹಾಗೂ ಆನ್ಲೈನ್ ವಹಿವಾಟುಗಳನ್ನು ಸುರಕ್ಷಿತವಾಗಿ ಹಾಗೂ ಸರಳವಾಗಿ ನಡಿಸುವ ಅಪ್ಲಿಕೇಶನ್ ಗಳಾಗಿವೆ. ಈ ಎಲ್ಲಾ ಅಪ್ಲಿಕೇಶನ್ ಗಳು ನಿಮ್ಮ ಡಿಜಿಟಲ್ ವಾಹಿವಾಟುಗಳನ್ನು ಸರಳವನ್ನಾಗಿಸಲು ಅನೇಕ ವಿಶಿಷ್ಟತೆಗಳನ್ನು ಹೊರ ಹಾಕುತ್ತಿವೆ. ಅಂತಹ ವೈಶಿಷ್ಟತೆಗಳಲ್ಲಿ ಯುಪಿಐ ಲೈಟ್ ಕೂಡ ಒಂದು ಅತ್ಯಂತ ಲಾಭಕಾರಿ ಫೀಚರ್ ಆಗಿದೆ.
ಯುಪಿಐ ಲೈಟ್ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ನ ವೈಶಿಷ್ಟ್ಯವಾಗಿದ್ದು, ಯುಪಿಐ ಪಿನ್ ಅಗತ್ಯವಿಲ್ಲದೇ ಕಡಿಮೆ ಮೌಲ್ಯದ ವಹಿವಾಟುಗಳನ್ನು ಮಾಡಲು ಬಳಕೆದಾರರನ್ನು ಅನುಮತಿಸುತ್ತದೆ.
ಬಳಕೆದಾರರು ತಮ್ಮ LITE ಖಾತೆಯಲ್ಲಿ ದಿನಕ್ಕೆ ಎರಡು ಬಾರಿ 2,000 ರೂಪಾಯಿಗಳವರೆಗೆ ಸೇರಿಸಬಹುದು, ಒಟ್ಟು ದೈನಂದಿನ ಮಿತಿ 4,000 ರೂ ವರೆಗೂ ಲೋಡ್ ಮಾಡಬಹುದು. ಮತ್ತು ಅವರ ಪಿನ್ ಅನ್ನು ಹಾಕದೆ ಒಂದೇ ಬಾರಿಗೆ ರೂ 200 ವರೆಗಿನ ವಹಿವಾಟುಗಳನ್ನು ಮಾಡಬಹುದು. ದಿನಸಿ, ಸಾರಿಗೆ ಮತ್ತು ಇತರಕ್ಕಾಗಿ ಮಾಡಿದ ವಹಿವಾಟುಗಳಲ್ಲಿ ಇದು ಸಹಾಯಕವಾಗಿದೆ.
ಗೂಗಲ್ ಪೆ ನಲ್ಲಿ UPI lite ಬಳಸುವ ವಿಧಾನ :
ಮೊದಲಿಗೆ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
ಪ್ರೊಫೈಲನ್ನು ತಯಾರಿಸಿಕೊಳ್ಳಿ ಮತ್ತು ಅಂತಿಮವಾಗಿ, ಸಲ್ಲಿಸು ಆಯ್ಕೆಯನ್ನು ಕ್ಲಿಕ್ ಮಾಡಬೇಕು .
ಪ್ರೊಫೈಲ್ ರಚಿಸಿದ ನಂತರ ಡ್ಯಾಶ್‌ಬೋರ್ಡ್‌ಗೆ ಬರಬೇಕು.
ಪ್ರೊಫೈಲ್ ಚಿತ್ರ ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ ಅಲ್ಲಿ ನೀವು UPI Lite ಆಯ್ಕೆಯನ್ನು ಪಡೆಯುತ್ತೀರಿ.
ಈಗ ಇಲ್ಲಿ ನೀವು ನಿಮ್ಮ UPI ಲೈಟ್‌ಗೆ ಹಣವನ್ನು ಸೇರಿಸಲು ನಿಮ್ಮ ಬ್ಯಾಂಕ್ ಅನ್ನು ಆಯ್ಕೆ ಮಾಡಬೇಕು.
UPI ಲೈಟ್‌ಗೆ ಸೇರಿಸಲು ಬಯಸುವ ಮೊತ್ತವನ್ನು ನಮೂದಿಸಬೇಕು, ನಂತರ ನೀವು ನಿಮ್ಮ UPI pin ಅನ್ನು ನಮೂದಿಸಬೇಕು ಮತ್ತು ಮುಂದುವರೆಯಿರಿ ಆಯ್ಕೆಯನ್ನು ಆಯ್ಕೆ ಮಾಡಬೇಕು. ಇಲ್ಲಿ ನೀವು Setting Up UPI Lite ನ ಪ್ರಕ್ರಿಯೆಯನ್ನು ನೋಡುತ್ತೀರಿ.
ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ Google Pay UPI Lite ಫೀಚರ್ ಬಳಸಲು ಸಿದ್ಧವಾಗುತ್ತದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಫೋನ್ ಪೇ ನಲ್ಲಿ UPI lite ಬಳಸುವ ವಿಧಾನ :
PhonePe ನಲ್ಲಿ UPI ಲೈಟ್ ಅನ್ನು ಹೇಗೆ ಬಳಸುವುದು ಎಂಬುದರ ಕುರಿತು ಹಂತಗಳು ಇಲ್ಲಿವೆ:
PhonePe ಅಪ್ಲಿಕೇಶನ್ ತೆರೆಯಿರಿ.
ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.
“UPI ಲೈಟ್” ಮೇಲೆ ಟ್ಯಾಪ್ ಮಾಡಿ.
ನಿಮ್ಮ UPI ಲೈಟ್ ಬ್ಯಾಲೆನ್ಸ್‌ಗೆ ಹಣವನ್ನು ಸೇರಿಸಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ. ನೀವು 2,000 ರೂ.ವರೆಗೆ ಸೇರಿಸಬಹುದು.
ಒಮ್ಮೆ ನೀವು ನಿಮ್ಮ UPI ಲೈಟ್ ಬ್ಯಾಲೆನ್ಸ್‌ಗೆ ಹಣವನ್ನು ಸೇರಿಸಿದ ನಂತರ, ನೀವು PIN ಇಲ್ಲದೆಯೇ ಪಾವತಿಗಳನ್ನು ಮಾಡಬಹುದು. ಇದನ್ನು ಮಾಡಲು, ವ್ಯಾಪಾರಿಯ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಅಥವಾ ಅವರ UPI ID ಅನ್ನು ನಮೂದಿಸಿ. ನೀವು ಪಾವತಿಸಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು “ಪಾವತಿಸಿ” ಟ್ಯಾಪ್ ಮಾಡಿ.
Paytm ನಲ್ಲಿ UPI lite ಬಳಸುವ ವಿಧಾನ :
Paytm ಅಪ್ಲಿಕೇಶನ್ ತೆರೆಯಿರಿ.
ಮುಖಪುಟದಲ್ಲಿ ‘UPI ಲೈಟ್ ಪರಿಚಯಿಸಲಾಗುತ್ತಿದೆ’ ಮೇಲೆ ಕ್ಲಿಕ್ ಮಾಡಿ.
Paytm UPI ಲೈಟ್‌ನಿಂದ ಬೆಂಬಲಿತವಾದ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.
UPI ಲೈಟ್‌ಗೆ ಹಣವನ್ನು ಸೇರಿಸಿ.
ಒಮ್ಮೆ ಹಣವನ್ನು ಸೇರಿಸಿದ ನಂತರ ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಥವಾ UPI ID ಯೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಸ್ವೀಕರಿಸುವವರಿಗೆ ಪಾವತಿಸಬಹುದು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ