ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ರಕ್ಷಾ ಕ್ಯೂಆರ್ ಕೋಡ್(Raksha QR code) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಬೆಂಗಳೂರು ಮಹಾನಗರದಲ್ಲಿ ವಾಹನಗಳಲ್ಲಿ ‘ರಕ್ಷಾ QR ಕೋಡ್ ‘ ಅಭಿವೃದ್ಧಿ ಪಡಿಸಲಾಗಿದೆ. ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡುವ ಸಲುವಾಗಿ ಈ ರಕ್ಷಾ ಕ್ಯೂಆರ್ ಕೋಡ್ (Raksha QR Code) ಸಾಫ್ಟ್‌ವೇರ್ ಅನ್ನು ಹೈವೇ ಡಿಲೈಟ್ ಸಂಸ್ಥೆ ಲಾಂಚ್ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಸ್ನೇಹಿತರೆ QR ಕೋಡ್ ಅಂದರೆ ನಮಗೆ ನೆನಪಾಗುವುದು ಪೇಮೆಂಟ್ ಆಪ್‌ಗಳು. ಆದರೆ ಈ QR ಕೋಡ್ ಜೀವ ಉಳಿಸುದಕ್ಕೆ ಉಪಯುಕ್ತವಾಗಿತ್ತದೆ.
ಈ QR ಕೋಡ್ ಜೀವ ಉಳಿಸುತ್ತೆ :
ಕನ್ನಡಿಗರು Technical ಫೀಲ್ಡ್ ನಲ್ಲಿ ಮಾಡುತ್ತಿರುವ ಸಾಧನೆಗಳು ಸದಾ ಮೆಚ್ಚುವಂತಹುದು. ಬೆಂಗಳೂರಗಳಂತಹ ಮಹಾನಗರಗಳಲ್ಲಿ ಜನರಿಗಿಂತ ವಾಹನಗಳೇ ಹೆಚ್ಚಾಗಿದ್ದು, ಎಷ್ಟೇ ಎಚ್ಚರ ವಹಿಸಿದರು ರಸ್ತೆ ಅಪಘಾತವು ಆಕಸ್ಮಿಕವಾಗಿ ಸಂಭಾವಿಸುತ್ತವೇ. ಇದನ್ನೇ ಆಧಾರವಾಗಿ ಇಟ್ಟುಕೊಂಡು ಹೈವೇ ಡೇಲೈಟ್ ಸಂಸ್ಥೆ ವಾಹನಗಳಿಗೆ ಕ್ಯೂಆರ್ ಕೋಡ್ ನೀಡುವ ವಿಶೇಷ ಕಾರ್ಯಕ್ಕೆ ಹೆಜ್ಜೆ ಇಟ್ಟಿದೆ.
ಯುವ ಮತ್ತು ಭರವಸೆಯ ಸ್ಟಾರ್ಟ್ಅಪ್ ಹೈವೇ ಡಿಲೈಟ್ ಈ ವಿನೂತನ ಪರಿಹಾರದೊಂದಿಗೆ ಬಂದಿದೆ ಮತ್ತು ತುರ್ತು ಪ್ರತಿಕ್ರಿಯೆ ಸಹಾಯ ಉತ್ಪನ್ನವಾದ ರಕ್ಷಾಕ್ಯೂಆರ್ ಅನ್ನು ಪ್ರಾರಂಭಿಸಿದೆ, ರಸ್ತೆಗಳಲ್ಲಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡುವ ಸಲುವಾಗಿ ರಕ್ಷಾ QR ಕೋಡ್ ಸಾಫ್ಟ್‌ವೇರ್‌ನ್ನು ಹೈವೇ ಡಿಲೈಟ್ ಸಂಸ್ಥೆ ಲಾಂಚ್ ಮಾಡಿದೆ.
” ಅಪಘಾತಕ್ಕೆ ಬಲಿಪಶು ಆಗಿರುವ ಕುಟುಂಬದ ಸದಸ್ಯರಿಗೆ ಕರೆ ಮಾಡುವ ಮೂಲಕ ವರದಿ ಮಾಡಬಹುದು, ಅದು ವರ್ಚುವಲ್ ಸಂಖ್ಯೆಯ ಮೂಲಕ ಸಂಪರ್ಕಗೊಳ್ಳುತ್ತದೆ, ಮಾಹಿತಿದಾರ ಮತ್ತು ಸಂತ್ರಸ್ತರ(Victium) ಕುಟುಂಬದ ಸದಸ್ಯರ ಗೌಪ್ಯತೆಯನ್ನು ಕಾಪಾಡುತ್ತದೆ. ಅಪಘಾತ ವರದಿಯಾದ ನಂತರ, ಹೈವೇ ಡಿಲೈಟ್ ಸ್ಥಳದ ಇನ್‌ಪುಟ್ ಅನ್ನು ತೆಗೆದುಕೊಳ್ಳುತ್ತದೆ ಮತ್ತು ಅವರ ಬ್ಯಾಕೆಂಡ್ ಕಾಲ್ ಸೆಂಟರ್ ತಂಡವು ಹತ್ತಿರದ ಆಸ್ಪತ್ರೆಗಳು ಮತ್ತು ಪೊಲೀಸ್ ಠಾಣೆಗೆ ತಿಳಿಸುತ್ತದೆ, ಸಂತ್ರಸ್ತರ ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿಡುತ್ತದೆ,” ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೈವೇ ಡಿಲೈಟ್ ಸಂಸ್ಥಾಪಕ ರಾಜೇಶ ಘಟನಟ್ಟಿ ಮಾತನಾದಿದ್ದಾರೆ.
“ಯಾವುದೇ ರಸ್ತೆ ಅಪಘಾತದಲ್ಲಿ, ಅಪಘಾತದ ನಂತರದ ಸಮಯೋಚಿತ ಪಾರುಗಾಣಿಕಾ ಕಡಿಮೆ ಸಾವು ಮತ್ತು ಆಸ್ತಿ ನಷ್ಟವನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕವಾಗಿದೆ. ಭಾರತದ ವಿಷಯದಲ್ಲಿ, ನಮ್ಮ ಪ್ರಸ್ತುತ ಸಾವಿನ ಸಂಖ್ಯೆಯಲ್ಲಿ ಪ್ರತಿ ವರ್ಷ 1.5 ಲಕ್ಷ, ಅಪಘಾತಕ್ಕೊಳಗಾದವರಿಗೆ ಗೋಲ್ಡನ್ ಅವರ್‌ಗಳಲ್ಲಿ ಸಮಯೋಚಿತ ಸಹಾಯ ದೊರೆತರೆ ಸುಮಾರು 50% ಜೀವಗಳನ್ನು ಉಳಿಸಬಹುದು” ಎಂದು ಹೇಳಿದ್ದಾರೆ.
ರಕ್ಷಾ ಕ್ಯೂಆರ್ ಕೋಡ್ ಪಡೆಯಲು, ವಾಹನ ಮಾಲೀಕರು ಹೈವೇ ಡಿಲೈಟ್‌ನಲ್ಲಿ ₹365 ವಾರ್ಷಿಕ ರೂಗಳನ್ನು ಪಾವತಿಸಿ ನೋಂದಾಯಿಸಿಕೊಳ್ಳಬೇಕು. ಈ ನೋಂದಣಿ ಪ್ರಕ್ರಿಯೆಯು ಬಳಕೆದಾರರಿಗೆ ರಕ್ತದ ಪ್ರಕಾರ, ವಾಹನ ವಿಮೆ, ಆರೋಗ್ಯ ವಿಮೆ ಮತ್ತು ತುರ್ತು ಕುಟುಂಬದ ಮಾಹಿತಿಯಂತಹ ನಿರ್ಣಾಯಕ ವಿವರಗಳನ್ನು ನಮೂದಿಸಲು ಅನುಮತಿಸುತ್ತದೆ.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ