ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಡೈನಮೋ ಎಲೆಕ್ಟ್ರಿಕ್ ಸ್ಕೂಟರ್(Dynamo Electric scooter) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಿಭಿನ್ನ ರೀತಿಯ ಸ್ಕೂಟರ್ ಗಳನ್ನು ಬಿಡಲಾಗಿದೆ. ಅದರಲ್ಲೂ eletric scooter ಗಳದ್ದೇ ಹವಾ. Eletric scooter company ಈಗ ಗ್ರಾಹಕರಿಗೆ ಹೊಸ ಸುದ್ದಿಯನ್ನು ತಂದಿದೆ. ಈ ಸ್ಕೂಟರಿನ ವಿಶೇಷತೆ ಏನು?, ಇದರ ಬೆಲೆ ಎಷ್ಟು?, ಎಷ್ಟು ಮೈಲೇಜ್ ನೀಡುತ್ತದೆ?, ಚಾರ್ಜಿಂಗ್ ಹಾಗೂ ಕಾರ್ಯಕ್ಷಮತೆ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ
Dynamo Electric ಸ್ಕೂಟರ್ 2023:
ಈ ದೈನಮೋ ಸ್ಕೂಟರ್ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಸದ್ದು ಮಾಡುತ್ತಿದೆ. ವಿಭಿನ್ನ ಮಾದರಿಯ Bike, Scooter ಗಳು ಎಂಟ್ರಿ ಕೊಡುತ್ತಿವೆ. ಮಾರುಕಟ್ಟೆಯಲ್ಲಿ Scooter ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ದೇಶದ ಪ್ರಸ್ತಿತ ಕಂಪನಿಗಳ ಜೊತೆಗೆ ಒಂದಿಷ್ಟು ಬೆಸ್ಟ್ ಸ್ಮಾರ್ಟ್ ಅಪ್ ಕಂಪನಿಗಳು ಕೂಡ ನೂತನ ಮಾದರಿಯ ಸ್ಕೂಟರ್ ಗಳನ್ನೂ ಪರಿಚಯಿಸುತ್ತ ಮಾರುಕಟ್ಟೆಯಲ್ಲಿ ನೆಲೆಯೂರುತ್ತಿವೆ. ಮತ್ತು ಒಂದು ಹೊಸ ಸಂಚಲವನ್ನು ಸೃಷ್ಟಿ ಮಾಡುತ್ತಿವೆ.
ಇತ್ತೀಚೆಗೆ Greater ನೋಯಿಡಾದಲ್ಲಿ EV ಇಂಡಿಯಾ ಎಕ್ಸ್ಪೋ 2023 ನಡೆದಿದ್ದು, ಭಾರತದ ಇವಿ ದ್ವಿಚಕ್ರ ವಾಹನಗಳ(EV 2 Wheelers) ಸಾಲಿನಲ್ಲಿ ಕೇಳಿ ಬರುವ ಪ್ರಮುಖ ಕಂಪನಿಗಳಲ್ಲೊಂದಾದ Dynamo, ತನ್ನ ಹೊಸ ಆರು ಶ್ರೇಣಿಯ EV Scooter ಗಳನ್ನು ಪರಿಚಯಿಸಿದೆ. ಸದ್ಯದಲ್ಲೇ ಈ Dynamo Electric Scooter ಗಳು ಮಾರುಕಟ್ಟೆಯನ್ನು ಪ್ರವೇಶಿಸಲಿದೆ. Dynamo Electric Scooter ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಗಳಲ್ಲಿ ಲಭ್ಯವಾಗಲಿದೆ.
ಸದ್ಯ Dynamo ಮಾರುಕಟ್ಟೆಯಲ್ಲಿ Infinity, Alpha, Smiley, Rx1, Rx4 and Vx1 ಎಂಬ ಸ್ಕೂಟರ್ ಗಳು ಇವಾಗಿದ್ದು, ಇನ್ಫಿನಿಟಿ, ಆಲ್ಫಾ, ಸ್ಮೈಲಿ ಮತ್ತು Vx1 Mid Range ಆಯ್ಕೆಯಲ್ಲಿದ್ದರೆ, Rx1 ಮತ್ತು Rx4 ಗಳು Long range ಆಯ್ಕೆಯ ಸ್ಕೂಟರ್ ಗಳಾಗಿವೆ. Dynamo ಉತ್ಪಾದಕ ಘಟಕವು ಗಾಜಿಯಾಬಾದ್ ಮತ್ತು ಮುಂಬೈಯಲ್ಲಿ ಇರುವುದು ಮತ್ತೊಂದು ವಿಶೇಷ.
https://www.youtube.com/watch?v=KRfGCwcjBj8
ಡೈನಮೋ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯತೆಗಳು(Dynamo Electric Scooter Feature):
ಈ ಹೊಸ ಶ್ರೇಣಿಯ ಸ್ಕೂಟರ್ ಗಳಲ್ಲಿ Bluetooth speakers, anti-theft alarm, IOT technology ಸೇರಿದಂತೆ ಇನ್ನಿತರ ಹತ್ತು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. RX1 ಮತ್ತು RX4 ಇವೆರಡೂ RTO- ನೋಂದಾಯಿತ ಮಾದರಿಗಳಾಗಿವೆ. ಈ ಇ- ಸ್ಕೂಟರ್‌ಗಳು ಗರಿಷ್ಠ 65 ಕಿಮೀ/ ಗಂ ವೇಗವನ್ನು ಸಾಧಿಸಬಲ್ಲವು ಮತ್ತು ವೇಗದ ಚಾರ್ಜಿಂಗ್ ಲಿಥಿಯಂ ಬ್ಯಾಟರಿಗಳೊಂದಿಗೆ ಅಳವಡಿಸಲಾಗಿದ್ದು, 2-3 kWh ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ. ಅವು ಕ್ರಮವಾಗಿ ರೂ 82,000 ಮತ್ತು ರೂ 99,000 ಬೆಲೆಯಲ್ಲಿ ಲಭ್ಯವಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಚಾರ್ಜಿಂಗ್ ವಿವರ :
ಸಿಂಗಲ್ ಚಾರ್ಜ್ ನಲ್ಲಿ 200 ಕಿಲೋಮೀಟರ್ ಮೈಲೇಜ್
ಆಲ್ಫಾ, ಸ್ಮೈಲಿ, ಇನ್ಫಿನಿಟಿ ಮತ್ತು VXI ಒಂದೇ ಚಾರ್ಜ್‌ನಲ್ಲಿ 200 ಕಿಲೋಮೀಟರ್‌ಗಳವರೆಗೆ ಪ್ರಭಾವಶಾಲಿ ವ್ಯಾಪ್ತಿಯನ್ನು ಒದಗಿಸುತ್ತವೆ. ಈ ಮಾದರಿಗಳು ಮೂರರಿಂದ ನಾಲ್ಕು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತವೆ. ಹಾಗೆಯೆ ಈ ಕಡಿಮೆ ವೇಗದ ಮಾದರಿ 2-3 kWh ಲಿಥಿಯಂ- ಐಯಾನ್ ಬ್ಯಾಟರಿಯಿಂದ ಚಾಲಿತವಾಗಿವೆ. ಸುಲಭ ನಿರ್ವಹಣೆಗಾಗಿ ಈ ಇ- ಸ್ಕೂಟರ್‌ಗಳಿಗೆ 10 ರಿಂದ 12 ಇಂಚಿನ ಟೈರ್‌ಗಳನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಈ ಎಲ್ಲ ಮಾದರಿಗಳು ಸುಮಾರು 55,000 ಎಕ್ಸ್ ಶೋರೂಂ ಬೆಲೆ(price)ಯಲ್ಲಿ ಲಭ್ಯವಾಗಲಿದೆ.ಎಂಬ ಹೊಸ ಸುದ್ದಿಯನ್ನು ನೀಡಿದೆ.
ಇಂತಹ ಉತ್ತಮ ಸ್ಕೂಟರಿನ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ