ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಬ್ಲಾಕ್(block) ಮಾಡಿದ ನಂಬರಿಗೆ ಹೇಗೆ ಕರೆ ಮಾಡುವುದು ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಿಮ್ಮ ಐಫೋನ್ ಅಥವಾ ಆಂಡ್ರಾಯ್ಡ್ನಿಂದ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರು ಪರವಾಗಿಲ್ಲ, ಸಮಸ್ಯೆಯನ್ನು ಪರಿಹರಿಸಲು ಮತ್ತು ವ್ಯಕ್ತಿಗಳಿಗೆ ತ್ವರಿತವಾಗಿ ಕರೆ ಮಾಡಲು ನೀವು ಸುಲಭವಾದ ವಿಧಾನಗಳನ್ನು ಇಲ್ಲಿ ತಿಳಿಸಿಕೊಡುತ್ತೇವೆ. ಇಲ್ಲಿ ನಿಮಗೆ ಎರಡು ಅಪ್ಲಿಕೇಶನ್(Application)ಗಳ ಮಾಹಿತಿಯನ್ನು ನೀಡಲಾಗುತ್ತದೆ, ಈ ಅಪ್ ನಿಮ್ಮನ್ನು ಬ್ಲಾಕ್ ಮಾಡಿದವರನ್ನು ಕರೆಮಾಡಲು ಅನುವು ಮಾಡಿಕೊಡುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಈಗ ಬ್ಲಾಕ್ ಮಾಡಿದ ನಂಬರ್ ಗಳಿಗೂ ಕೂಡ ಕರೆ ಮಾಡಬಹುದು :
Doosra app :
ಹೈದರಾಬಾದ್-ನಿರ್ಮಿತ ಅಪ್ಲಿಕೇಶನ್ ದೂಸ್ರಾ ಬಳಕೆದಾರರಿಗೆ ಅವರ ಗೌಪ್ಯತೆಯನ್ನು ರಕ್ಷಿಸಲು ಮತ್ತು ಅವರ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ವರ್ಚುವಲ್ ಫೋನ್ ಸಂಖ್ಯೆಯನ್ನು ಒದಗಿಸುತ್ತದೆ. ಈ ಆಪ್ ಉಪಯೋಗಿಸಿಕೊಂಡು ನೀವು, ನಿಮ್ಮನ್ನು ಬ್ಲಾಕ್ ಮಾಡಿದ ನಂಬರ್ ಗೆ ಕಾಲ್ ಮಾಡಬಹುದು ಮತ್ತು ಈ ಅಪ್ಲಿಕೇಶನ್ನಿಮ್ಮ ನಂಬರ್ ಅನ್ನು ತೋರಿಸದೆ ಕರೆ ಮಾಡುವದಕ್ಕೆ ಅನುವು ಮಾಡಿಕೊಡುತ್ತದೆ.
Doosra app ಮೂಲಕ ಕರೆ ಮಾಡುವ ವಿಧಾನ :
ಮೊದಲಿಗೆ Doosra app ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಇಂದ ಡೌನ್ಲೋಡ್ ಮಾಡಿಕೊಳ್ಳಿ.
ಅಪ್ಲಿಕೇಶನ್ ಡೌನ್ಲೋಡ್ ಅದ ನಂತರ ಅದನ್ನು Open ಮಾಡಿ ಕೇಳಿರುವ ಅತ್ಯಗತ್ಯ ಪರ್ಮಿಷನ್ ಗಳನ್ನು ನೀಡಿ.
ನಂತರ ‘ ದೂಸ್ರಾ ಸಂಖ್ಯೆಯನ್ನು ಪಡೆಯಿರಿ ‘ ಎಂದು ಕ್ಲಿಕ್ ಮಾಡಿ.
ಇದರಲ್ಲಿ ನಿಮಗೆ ಸೆಕೆಂಡರೀ 10 – digits ನಂಬರ್ ನೀಡಲಾಗುತ್ತದೆ.
ಈ ನಂಬರ್ ಅನ್ನು ಸ್ವಲ್ಪ ಮೊತ್ತವನ್ನು ನೀಡಿ ಖರೀದಿಸಬೇಕಾಗುತ್ತದೆ. ಈ ನಂಬರ್ ಅನ್ನು ತಿಂಗಳಿಗೆ 83 ರೂ. ಗಳನ್ನು ನೀಡಿ ಖರೀದಿಸಬೇಕು.
ಯೋಜನೆಯನ್ನು ಖರೀದಿಸಿದ ಮೇಲೆ ಸರ್ಕಾರದ ಧಾಖಲೆಯೊಂದಿಗೆ KYC ಡೀಟೇಲ್ಸ್ ನಮೂದಿಸಿ ಪೂರ್ಣಗೊಳಿಸಿ.
ಈ ಎಲ್ಲಾ ಡೀಟೇಲ್ ನೀಡಿ ಪ್ರಕ್ರಿಯೆ ಮುಗಿದ ನಂತರ ನಿಮಗೆ virtual number ಒದಗಿಸಲಾಗುತ್ತದೆ.
ನಂತರ ನೀವು ಈ number ಉಪಯೋಗಿಸಿ ನಿಮ್ಮನ್ನು ಬ್ಲಾಕ್ ಮಾಡಿರುವ ನಂಬರ್ ಗೆ ಕಾಲ್ ಮಾಡಬಹುದು.
Indycall app( ಇಂಡಿಕಾಲ್ ಆಪ್ ):
ಈ ಆಪ್ ಕೂಡ ಬ್ಲಾಕ್ ನಂಬರ್ ಅನ್ನು ಕಾಲ್ ಮಾಡಲು ಒಂದು ಅತ್ಯುತ್ತಮ ಅಪ್ಲಿಕೇಶನ್ ಎನ್ನಬಹುದು. ಈ ಆಪ್ ಅಲ್ಲಿ advertisement ನೋಡುವದರ ಮೂಲಕ ಅಪ್ಲಿಕೇಶನ್ ಉಪಯೋಗಿಸಿಬಹುದು. ಅದು ಹೇಗೆ ಎಂಬುದು ಇಲ್ಲಿದೆ.
ಮೊದಲಿಗೆ ಗೂಗಲ್ ಪ್ಲೇ ಸ್ಟೋರ್(play store) ಇಂದ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಮತ್ತು ಕೇಳಿರುವ ಅತ್ಯಗತ್ಯ ಪರ್ಮಿಷನ್ ಗಳನ್ನು ನೀಡಿ.
ನಂತರ ನಿಮ್ಮ ಗೂಗಲ್ ಅಕೌಂಟ್ ಇಂದ ಈ ಆಪ್ ನಲ್ಲಿ ಲಾಗಿನ್ ಆಗಿ.
ಲಾಗಿನ್ ಆದ ನಂತರ ನೀವು ಕರೆಮಾಡಾಲು ಇಲ್ಲಿ credits ಗಳನ್ನು ಗಳಿಸಬೇಕು. ಈ ಅಪ್ಲಿಕೇಶನ್ ನಲ್ಲಿ credits ಗಳಿಸಲು ನೀವು advertisement( ಜಾಹೀರಾತು) ಗಳನ್ನು ನೋಡಬೇಕು. ನಿಮ್ಮ ಕಡೆ ಎಷ್ಟು ಕ್ರೆಡಿಟ್ಸ್ ಇರುತ್ತವೋ ಅಷ್ಟು ಹೊತ್ತು ನೀವು ಮಾತನಾಡಬಹುದು.
ಈ credits ಅನ್ನು ಗಳಿಸಲು right corner ನಲ್ಲಿ ಇರುವ ‘ Get minutes ‘ ಎಂಬ ಆಪ್ಷನ್ click ಮಾಡಿ, ನಂತರ “ಹೆಚ್ಚು ಉಚಿತ ನಿಮಿಷಗಳು ” ಎಂಬ ಆಪ್ಷನ್ ಮೇಲೆ click madi.
ಗಮನಿಸಿಬೇಕಾದದ್ದು, ನೀವು ನಿಮ್ಮನ್ನು ಬ್ಲಾಕ್ ಮಾಡಿದ ವ್ಯಕ್ತಿಗೆ ಕಾಲ್ ಮಾಡಿ ಮಾತನಾಡತ್ತಿರುವಾಗ ನಿಮ್ಮ credits ಗಳು ಕಡಿಮೆ ಆಗುತ್ತವೆ, ಹೀಗಿರುವಾಗ ನೀವು ಮಾತನಾಡುತ್ತಾಲೆ Ads ಗಳನ್ನು ನೋಡಿ ಮತ್ತೆ ನಿಮ್ಮ credits ಗಳನ್ನು ಗಳಿಸಬಹುದು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Indycall app ಬಳಸುವ ಇನ್ನೊಂದು ಮಹತ್ವದ ಉಪಯೋಗವೇನೆಂದರೆ ನಿಮ್ಮ ಫೋನ್ ನಂಬರ್ ಬದಲಿಗೆ ಮತ್ತೊಂದು ಕಾಲ್ I’d ಯನ್ನು ಉಪಯೋಗಿಸಬಹುದು. ಮತ್ತು ಪ್ರತಿ ಸಲ ನಿಮಗೆ ಬೇರೆ ಬೇರೆ ನಂಬರ್ ಮೂಲಕ ಕಾಲ್ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.
ಸ್ನೇಹಿತರೆ, ಈ ಮೇಲಿನ ಅಪ್ಲಿಕೇಶನ್ ಗಳನ್ನು ಉಪಯೋಗಿಸಿಕೊಂಡು ನೀವು ನಿಮ್ಮನ್ನು ಬ್ಲಾಕ್ ಮಾಡಿದವರೋಡನೇ ಕಾಲ್ ಮಾಡಿ ಅವರೊಂದಿಗೆ ಮಾತಾಡಬಹುದು. ಇನ್ನು ಇಂತಹ ಉತ್ತಮ technical ಮಾಹಿತಿಯನ್ನು ಹೊಂದಿರುವ ಈ ಲೇಖನವನು ನಿಮ್ಮ ಸ್ನೇಹಿತರಲ್ಲಿ ಮತ್ತು ಬಂಧು- ಭಾಂದವರಲ್ಲಿ ಶೇರ್ ಮಾಡಿಲು ಮರಿಯಬೇಡಿ , ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ