Gruhalakshmi – ಮೊಬೈಲ್ ನಲ್ಲಿ ಈ ಕೆಲಸ ಮಾಡಿ, ಇನ್ನೇನು ಎರಡು ದಿನದಲ್ಲಿ ಬರುತ್ತೆ ಗೃಹಲಕ್ಷ್ಮಿಯ 4 ಸಾವಿರ ಹಣ

WhatsApp Image 2023 09 28 at 10.59.52 PM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಅನ್ನು(Gruha Laxmi Scheme Application status) ಹೇಗೆ ಚೆಕ್ ಮಾಡುವದು ಎನ್ನುವದರ ಬಗ್ಗೆ ತಿಳಿಸಿ ಕೊಡುತ್ತೇವೆ.ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇತ್ತೀಚೆಗೆ ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಗೃಹ ಲಕ್ಷ್ಮಿ ಯೋಜನೆ ಪ್ರಾರಂಭಿಸುವುದಾಗಿ ಘೋಷಿಸಿತು.

ಅದರಂತೆಯೇ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತವು ಬಂದ ಮೇಲೆ ತನ್ನ ಗ್ಯಾರೆಂಟಿ ಯೋಜನೆಯನ್ನು ಆಡಳಿತಕ್ಕೆ  ತಂದಿದೆ. ಅದರಲ್ಲಿ ಗೃಹ ಲಕ್ಷ್ಮಿ ಯೋಜನೆಯು ಒಂದು ಆಗಿದೆ. ಈ ಯೋಜನೆ ಅಡಿಯಲ್ಲಿ ಕುಟುಂಬದ ಮಹಿಳೆಗೆ ತಿಂಗಳಿಗೆ 2,000 ರೂಪಾಯಿಗಳನ್ನು ನೀಡುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಈಗಾಗಲೇ ನಿಮಗೆ ಎಲ್ಲಾ ತಿಳಿದೇ ಇದೆ.

ಗೃಹಲಕ್ಷ್ಮಿಯ ಹಣ ಇನ್ನೂ ಬಂದಿಲ್ಲ :

ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯ ಮೊದಲು ಕಂತಿನ ಹಣವನ್ನು ಆಗಸ್ಟ್ 30 ರಿಂದ ಪ್ರತಿ ಗ್ರಹಣೀಯರಿಗೆ ಕೊಡಲು ಸರ್ಕಾರ ಆರಂಭಿಸಿದೆ. ಆದರೆ ಕೆಲವು ಗೃಹಣಿಯರಿಗೆ, ಮತ್ತೆ ಪುನಃ ಇನ್ನೊಂದು ತಿಂಗಳು ಬಂದರು ಅವರ ಬ್ಯಾಂಕ್ ಖಾತೆಗೆ 2,000 ಗೃಹ ಲಕ್ಷ್ಮಿ ಯೋಜನೆ ಹಣ ಬಂದಿಲ್ಲಾ.

ಸರ್ಕಾರ ಈಗಾಗಲೇ ತಿಳಿಸಿರುವಂತೆ ಸೆಪ್ಟೆಂಬರ್ ತಿಂಗಳ ಕೊನೆಯವರೆಗೆ ಪ್ರತಿಯೊಬ್ಬ ಫಲಾನುಭವಿ ಗೃಹಣಿಯ ಖಾತೆಗೆ 2,000 ಜಮಾ ಆಗುತ್ತದೆ ಎಂದು ಹೇಳಿದ್ದರು, ಏನಾದರೂ ಒಂದು ವೇಳೆ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಕಂತಿನ ಹಣ ಜಾಮ ಆಗದಿದ್ದರೆ ಅಂತವರಿಗೆ ಎರಡು ಕಂತಿನ ಹಣ, ಅಂದರೆ ಆಗಸ್ಟ ಮತ್ತು ಸೆಪ್ಟೆಂಬರ್ ತಿಂಗಳಿನ ಹಣ 4000 ರೂ ಒಟ್ಟಿಗೆ ಅಕ್ಟೋಬರ್ 30 ಒಳಗೆ ಜಮಾ ಮಾಡಲಾಗುತ್ತದೆ ಎಂದು ಸರ್ಕಾರ ಸೂಚನೆ ನೀಡಿದೆ.

ಆದರೆ ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಇನ್ನೂ ಹಣ ನಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ ಎಂದು ಮಹಿಳೆಯರು ತಮ್ಮ ಆಕ್ರೋಶವನ್ನು  ವ್ಯಕ್ತಪಡಿಸಿಕೊಳ್ಳುತ್ತಿದ್ದಾರೆ. ಇದು ಹಲವರಲ್ಲಿ ಬಂದಿರುವ ಗೊಂದಲವಾಗಿದೆ. ಇದರ ಬಗ್ಗೆ ಹೆಚ್ಚಿನ ಯೋಚನೆ ಮಾಡಿಕೊಳ್ಳುವುದು ಬೇಡ. ಏಕೆಂದರೆ ಸರ್ಕಾರ ಇದಕ್ಕಂತಲೆ ಒಂದು ಉತ್ತಮ ಪರಿಹಾರವನ್ನು ಸೂಚಿಸಿದೆ.

ಹೌದು, ಅದೇನಂದರೆ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್(status) ಸ್ಥಿತಿಯನ್ನು ಪರಿಶೀಲನೆ ಮಾಡುವುದು, ನೀವು ಎಲ್ಲಿ ನಿಮ್ಮ ಗ್ರಹಲಕ್ಷ್ಮಿ ಅರ್ಜಿ ಸಲ್ಲಿಸಿದ್ದಿರೋ ಅಲ್ಲೇ ಹೋಗಿ ನೀವು ಅರ್ಜಿಯ ಸ್ಟೇಟಸ್, (Gruha laxmi application status) ತಿಳಿದುಕೊಳ್ಳಬಹುದಾಗಿದೆ.

(Karnataka Gruha Laxmi Application Status) ಕರ್ನಾಟಕ ಗೃಹ ಲಕ್ಷ್ಮಿ ಯೋಜನೆ DBT ಸ್ಥಿತಿಯನ್ನು ಚೆಕ್ ಮಾಡುವುದು ಹೇಗೆ ಎಂದು ತಿಳಿಯಲು ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ:

ಹಂತ 1: ಮೊದಲನೆಯದಾಗಿ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ ಜಾಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ  

https://ahara.kar.nic.in/lpg/

ಹಂತ 2: ನಂತರ ನಿಮ್ಮ ಜಿಲ್ಲೆಯ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ.

h2

ಹಂತ 3 : ನಂತರ ಕೆಳಗಿನ ಭಾಗದಲ್ಲಿರುವ  ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ. h3

‘ಗೃಹ ಲಕ್ಷ್ಮಿ ಸ್ಕೀಮ್ DBT ಪಾವತಿ ಸ್ಥಿತಿ’  ಆಯ್ಕೆ ಮಾಡಿ ಕ್ಲಿಕ್ ಮಾಡಿ ನಂತರ ಮುಂದಿನ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.

 ಕೊನೆಯಲ್ಲಿ, ನೀವು ನಿಮ್ಮ ಪಡಿತರ ಕಾರ್ಡ್ (RC) ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ, ಪಾವತಿ ತಿಂಗಳನ್ನು ಆಗಸ್ಟ್ 2023 ಎಂದು ಆಯ್ಕೆಮಾಡಿ ಮತ್ತು ನಂತರ ನೀವು ₹2000 ಹಣಕಾಸು ಸಹಾಯಕವನ್ನು ಸ್ವೀಕರಿಸಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಟ್ರ್ಯಾಕ್ ಮಾಡಲು ಸಲ್ಲಿಸು ಬಟನ್ ಒತ್ತಿರಿ.

ಹಂತ 4: ನಂತರ ನಿಮ್ಮ ಅರ್ಜಿಯನ್ನು ಇನ್ನೂ ಅನುಮೋದಿಸಲಾಗಿಲ್ಲ ಎಂದು ನಿಮಗೆ ತಿಳಿದಿದ್ದರೆ, ಅದರಲ್ಲಿ ಸಮಸ್ಯೆ ಏನಿದೆ ಎಂದು ತಿಳಿಯಲು ನೀವು ಹತ್ತಿರದ ಅದಕ್ಕೆ ಸಂಬಂಧಿತ ಕಚೇರಿಗೆ ಭೇಟಿ ನೀಡಬೇಕು.

ಹಂತ 5: ನಂತರ ಅವರು ನೀವು ದಾಖಲೆಗಳನ್ನು ಮರು-ಸಲ್ಲಿಸಲು ಮತ್ತು eKYC ಮಾಡಲು ಕೇಳಬಹುದು ನೋಂದಣಿ ಪ್ರಕ್ರಿಯೆ ಮರು ಸಲ್ಲಿಸಿ ಮತ್ತು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಿರಿ.

ಈ ಯೋಜನೆಯು ಮಹಿಳೆಯರಿಗೆ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ ಮತ್ತು ಅವರಿಗೆ ಹೆಮ್ಮೆ ಮತ್ತು ಸ್ವಾತಂತ್ರ್ಯದ ಅರ್ಥವನ್ನು ನೀಡುತ್ತದೆ, ಅದು ಅವರ ಜೀವನವನ್ನು ಮತ್ತು ಇತರ ಕುಟುಂಬದ ಸದಸ್ಯರ ಜೀವನವನ್ನು ಪರಿವರ್ತಿಸುತ್ತದೆ.

ಇಂತಹ ಉತ್ತಮವಾದ  ಮಾಹಿತಿ ಪ್ರತಿಯೊಬ್ಬ ಜನ ಸಾಮಾನ್ಯರಿಗೆ ಉಪಯೋಗ ಆಗುವಂತಹ ಸರ್ಕಾರದ ಸೌಲಭ್ಯ ಪಡೆದುಕೊಳ್ಳುವಂತಹ  ಮಾಹಿತಿಯನ್ನು  ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

tel share transformed

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!