ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್ ಬಗ್ಗೆ ತಿಳಿದುಕೊಳ್ಳೋಣ, ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿ ತಿಂಗಳಗಳು ಕಳೆದಿವೆ. ಈಗಾಗಲೇ ಬಹುತೇಕ ಮಂದಿಗೆ ಎರಡನೇ ಕಂತಿನ ಹಣ ಕೂಡಾ ಸಂದಾಯವಾಗುತ್ತಿದೆ. ಆದರೆ, ಕೆಲವರಿಗೆ ಮೊದಲ ತಿಂಗಳ (ಆಗಸ್ಟ್) ಹಣವೇ ಸಂದಾಯವಾಗಿಲ್ಲ. ಇದರಿಂದ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದು, ಯೋಜನೆಗೆ ಚಾಲನೆ ಕೊಟ್ಟು ಎರಡು ತಿಂಗಳಾಗುತ್ತಾ ಬಂತು. ನಮ್ಮ ಪಕ್ಕದ ಮನೆಯವರಿಗೆ ಬಂದಿದೆ, ನಮಗಿನ್ನೂ ಹಣ ಬಂದಿಲ್ಲ ಯೋಚನೆ ಮಾಡ್ತಿದ್ದೀರಾ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೆಳಗೆ ಕೊಟ್ಟಿದ್ದೇವೆ, ವರದಿಯನ್ನು ಪೂರ್ತಿಯಾಗಿ ಓದಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದುವರೆಗೂ ಎಷ್ಟು ಅರ್ಹ ಫಲಾನುಭವಿಗಳಿಗೆ ಹಣ ಸಂದಾಯ ಮಾಡಿದೆ. ಅರ್ಜಿ ಹಾಕಿದ ಎಲ್ಲರಿಗೂ ಹಣ ಬಂದಿದೆಯಾ? ಮೊದಲ ಕಂತು ಹಣ ಬಂದಿದ್ದು ಎರಡನೇ ಕಂತಿನ ಹಣ ಯಾವಾಗ ಬರುತ್ತೆ. ಮೊದಲ ಕಂತಿನ ಹಣವೇ ಬಂದಿಲ್ಲ, ಎರಡನೇ ಕಂತಿನ ಹಣದೊಂದಿಗೆ ಒಟ್ಟಿಗೆ ಬರುತ್ತಾ ಎಂಬ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.
80 ಲಕ್ಷಕ್ಕೂ ಅಧಿಕ ಜನರಿಗೆ ಹಣ ಜಮೆ
ಗೃಹಲಕ್ಷ್ಮಿ ಯೋಜನೆಯ ಒಟ್ಟು 1.28 ಕೋಟಿ ಫಲಾನುಭವಿಗಳ ಪೈಕಿ 1.12 ಕೋಟಿ ಫಲಾನುಭವಿಗಳು ಇದುವರೆಗೂ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು, ಈ ಪೈಕಿ 80 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಇದುವರೆಗೂ ಹಣ ಸಂದಾಯವಾಗಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಬ್ಯಾಂಕ್‌ಗಳಲ್ಲಿ ಹಣ ಸಂದಾಯವಾಗುವುದು ತಡವಾಗಿದೆ. ಉಳಿದಂತೆ ಎರಡನೇ ಕಂತಿನ ಹಣ ಯಾವಾಗ ಅಂತ ಹಲವು ಮಂದಿ ಕಾಯುತ್ತಿದ್ದಾರೆ. ನೀವು ಯಾವಾಗ ಅರ್ಜಿ ಸಲ್ಲಿಕೆ ಮಾಡುತ್ತೀರಿ ಆ ತಿಂಗಳಿನಿಂದ ಮಾತ್ರ ಹಣ ಸಂದಾಯ ಆಗುತ್ತೆ. ಆಗಸ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡದೆ ಸೆಪ್ಟೆಂಬರ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರೆ ಆ ತಿಂಗಳಿನಿಂದ ಮಾತ್ರ ಹಣ ಬರುತ್ತದೆ. ಆಗಸ್ಟ್ ತಿಂಗಳಿನಲ್ಲಿ ಅರ್ಜಿ ಸಲ್ಲಿಕೆ ಮಾಡಿ ಯಾರಿಗೆಲ್ಲಾ ಹಣ ಬಂದಿಲ್ಲವೋ ಅವರಿಗೆ ಮೊದಲ ಕಂತಿನ ಹಣವೂ ಸೇರಿ ಒಟ್ಟು 4 ಸಾವಿರ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಆಗಸ್ಟ್ 30 ವೇಳೆಗೆ ಅರ್ಜಿ ಸಲ್ಲಿಕೆ ಮಾಡಿದ್ದ ಒಂದು ಕೋಟಿ 10 ಲಕ್ಷ ಜನರಿಗೆ ಹಣ ಸಂದಾಯ ಮಾಡಲು ಸರ್ಕಾರ ನಿರ್ಧಾರ ಮಾಡಿತ್ತು. ಇದರಂತೆ ಇಲ್ಲಿವರೆಗೂ 92 ಲಕ್ಷ ಅರ್ಹ ಫಲಾನುಭವಿಗಳಿಗೆ ಯೋಜನೆ ಮೂಲಕ ಹಣ ತಲುಪಿದೆ. ಇನ್ನೂ 18 ಲಕ್ಷದಷ್ಟು ಮನೆಯೊಡತಿಯರಿಗೆ ಇನ್ನೂ ಹಣ ಬಂದಿಲ್ಲ.
18 ಲಕ್ಷ ಅರ್ಜಿಗಳಲ್ಲಿ ಆಗಸ್ಟ್ ತಿಂಗಳಿನಲ್ಲಿ ಅರ್ಜಿ ಸಲ್ಲಿಕೆ ಮಾಡಿದವರು 8-9 ಲಕ್ಷ ಮಂದಿಗೆ ಅಗಸ್ಟ್ ತಿಂಗಳ ಹಣ ಸಂದಾಯ ಆಗಿಲ್ಲ. ಈ ಹಣ ಈ ತಿಂಗಳು ಕೂಡ ಹಾಗದೆ ಇರಬಹುದು. ಇದಕ್ಕೆ ಪ್ರಮುಖ ಕಾರಣ, ನೀವು ಅರ್ಜಿ ಸಲ್ಲಿಕೆ ಮಾಡುವುದಾಗ ನೀಡಿರುವ ಮಾಹಿತಿ, ಬ್ಯಾಂಕ್ ಖಾತೆ ಮಾಹಿತಿ ಹಾಗೂ ಆಧಾರ್ ಕಾರ್ಡ್ನಲ್ಲಿರುವ ಮಾಹಿತಿ. ಈ ಮೂರು ಕೂಡ ಒಂದೇ ಆಗಿರಬೇಕು. ಅಂದರೇ ನಿಮ್ಮ ಹೆಸರು, ಮನೆ ವಿಳಾಸ, ನಿಮ್ಮ ಹೆಸರಿಗೆ ಇನ್ಶಲ್ ಇದ್ದರೆ ಅದು ಕೂಡ ಸರಿಯಾಗಿ ಇರಬೇಕು. ಈ ಸಮಸ್ಯೆ ಇರುವ ಕಾರಣದಿಂದಲೇ ಇನ್ನೂ 8-9 ಲಕ್ಷ ಮಂದಿಗೆ ಹಣ ವರ್ಗಾವಣೆ ಆಗಿಲ್ಲ ಅಂತ ಇಲಾಖೆ ಮಾಹಿತಿ ನೀಡಿದೆ.
ಎಲ್ಲಾ ದಾಖಲೆಗಳಲ್ಲೂ ಮಾಹಿತಿ ಒಂದೇ ಇರಬೇಕು
ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿರುವ ಬ್ಯಾಂಕ್ ಖಾತೆಯಲ್ಲಿಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಅರ್ಜಿಯೊಂದಿಗೆ ಸಲ್ಲಿಸಿರುವ ಎಲ್ಲಾ ದಾಖಲೆಗಳಲ್ಲಿ ಮಾಹಿತಿ ಒಂದೇ ಇರಬೇಕು. ಒಂದು ವೇಳೆ ವ್ಯತ್ಯಾಸ ಉಂಟಾಗಿದ್ದರೆ ಕೂಡಲೇ ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ, ಕೆವೈಸಿ ಆಗಿರದ ಕಾರಣ 60 ಸಾವಿರ ಮಂದಿಗೆ ಹಣ ಹಾಕಲು ಸರ್ಕಾರ ಸಿದ್ಧವಾಗಿದ್ದರೂ ಹಣ ಹಾಕಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನೀವು ಅಂಗನವಾಡಿ ಕಾರ್ಯಕರ್ತರ ಸಂಪರ್ಕ ಮಾಡಿ ಅವರ ನೆರವು ಪಡೆದುಕೊಳ್ಳಬೇಕು. ಇದರಿಂದ ಸುಮಾರು ಮಂದಿಗೆ ಹಣ ವರ್ಗಾವಣೆ ಆಗಿಲ್ಲ. ಈ ಮೇಲಿನ ಕಾರಣಗಳಿಂದ ಒಟ್ಟಾರೆ ಸುಮಾರು 9 ಲಕ್ಷ ಮಂದಿಗೆ ಹಣ ವರ್ಗಾವಣೆ ಆಗಿಲ್ಲ. ಸಿಡಿಪಿಓ ಅಧಿಕಾರಿಯನ್ನು ಭೇಟಿ ಮಾಡಿದ ವೇಳೆ ಅವರು ನಿಮ್ಮ ಖಾತೆಗೆ ಹಣ ಯಾಕೆ ಬಂದಿಲ್ಲ ಎಂದು ಚೆಕ್ ಮಾಡಿ ತಿಳಿಸುತ್ತಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆ ಸಲ್ಲಿಕೆ ಮಾಡಿದರೆ ಸಮಸ್ಯೆ ದೂರವಾಗುತ್ತದೆ.
ನೇರವಾಗಿ ತೆರಳಿ ವಿಚಾರಿಸಿ
ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಖಾತೆಗೆ 2,000 ರೂಪಾಯಿ ಜಮಾ ಆಗದಿದ್ದರೆ, ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಉಪನಿರ್ದೇಶಕಿ ಮಾಹಿತಿ ನೀಡಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Sir Anna Bagya Amount Bandide aadre Gruha Lakshmi Amount Bandilla….heg madodu