UPI Payments – ಮೊಬೈಲ್ ನಲ್ಲಿ ಹಣ ಕಳಿಸುವ 90% ಜನರಿಗೆ ಈ ಮಾಹಿತಿ ಗೊತ್ತಿಲ್ಲ, ತಪ್ಪದೇ ತಿಳಿದುಕೊಳ್ಳಿ

WhatsApp Image 2023 10 04 at 13.21.08

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಇಂಟರ್ನೆಟ್(internet) ಇಲ್ಲದೆ UPI ಪೇಮೆಂಟ್ ಮಾಡಬಹುದಾದಂತಹ ‘UPI Lite X’ ಫೀಚರ್ ನ ಕುರಿತು ತಿಳಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆವರೆಗೂ ಓದಿರಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

UPI lite X ನಿಂದ ಇಂಟರ್ನೆಟ್ ಇಲ್ಲದೆ ಪಾವತಿ ಮಾಡಿ :

ಇತ್ತೀಚಿನ ದಿನಗಳಲ್ಲಿ UPI ಪೇಮೆಂಟ್ ಸಮಾನ್ಯವಾಗಿದೆ. ಸಣ್ಣ ವಸ್ತುವಿನಿಂದ ದೊಡ್ಡ ವಸ್ತುಗಳನ್ನು ಖರೀದಿಸಲು ನಾವು UPI ಪೇಮೆಂಟ್ ಮಾಡುತ್ತೇವೆ. ಈಗ ನೀವು PhonePe, BHIM, Paytm ನಂತಹ ಯಾವುದೇ UPI ಅಪ್ಲಿಕೇಶನ್ ಮೂಲಕ ಮನೆಯಲ್ಲಿ ಕುಳಿತು ದುಡ್ಡಿನ ವಹಿವಾಟುಗಳನ್ನು ಮಾಡಬಹುದು.   ಹೀಗಿರುವಾಗ UPI ಪೇಮೆಂಟ್ಸ್ ನಲ್ಲಿ ಹಲವಾರು ಅಪ್ಡೇಟ್ಸ್ ಗಳು ಬರುತ್ತೀವೆ. UPI lite ನಿಮಗೆಲ್ಲರಿಗೂ ಈಗಾಗಲೇ ತಿಳಿದಿರಬಹುದು, UPI pin code ಹಾಕದೆ ಪೇಮೆಂಟ್ ಮಾಡಲು ಇದು ಅನುಮತಿ ನೀಡುತ್ತದೆ. ಹಾಗೆಯೇ UPI lite X, ಇದು ಇಂಟರ್ನೆಟ್ ಇಲ್ಲದೆ ಪೇಮೆಂಟ್(Payment) ಮಾಡಲು ಅವಕಾಶ ಮಾಡಿಕೊಡುತ್ತದೆ. ಈ ಅಪ್ಡೇಟ್ ಅನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCI) ನವೀಕರಿಸಿದ್ದು,  ಜನ ಸಾಮನ್ಯರಿಗೆ ಉಪಯುಕ್ತವಾಗುತ್ತದೆ ಎನ್ನಬಹುದು. ಹೀಗಿರುವಾಗ ಹೇಗೆ ಈ UPI lite X ಅನ್ನು ಉಪಯೋಗಿಸಿಕೊಳ್ಳಬೇಕು ಎಂಬುದು ಇಲ್ಲಿದೆ.

chanel

ಈ ಅದ್ಭುತ ವೈಶಿಷ್ಟ್ಯವನ್ನು ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ ಸಮಯದಲ್ಲಿ ಅನಾವರಣಗೊಳಿಸಲಾಯಿತು ಮತ್ತು ನಿಯರ್ ಫೀಲ್ಡ್ ಕಮ್ಯುನಿಕೇಷನ್ (NFC) ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಆಫ್‌ಲೈನ್ UPI ವಹಿವಾಟುಗಳನ್ನು ಸುಲಭವಾಗಿ ನಡೆಸಲು ಅನುವು ಮಾಡಿಕೊಡುತ್ತದೆ. UPI ಲೈಟ್ X ವೈಶಿಷ್ಟತೆಯ ಬಳಕೆಯನ್ನು ಪ್ರಾರಂಭಿಸಲು, ಕಳುಹಿಸುವವರು ಮತ್ತು ಸ್ವೀಕರಿಸುವವರು ಇಬ್ಬರೂ NFC ಬೆಂಬಲದೊಂದಿಗೆ ತಮ್ಮ Android ಸಾಧನಗಳಲ್ಲಿ BHIM ಅಪ್ಲಿಕೇಶನ್‌ನ ಇತ್ತೀಚಿನ  ಅಪ್ಡೇಟೆಡ್ ವರ್ಷನ್ ಅನ್ನು ಹೊಂದಿಬೇಕು. UPI Lite X ನ ವೈಶಿಷ್ಟ್ಯವು ಭೀಮ್ ಅಪ್ಲಿಕೇಶನ್‌ನಲ್ಲಿ ಲೈವ್ ಆಗಿದೆ.

ಪೇಮೆಂಟ್ ಅನ್ನು ಮಾಡಲು UPI Lite X ಅನ್ನು ಬಳಸುವ ವಿಧಾನ :

BHIM ಅಪ್ಲಿಕೇಶನ್ ತೆರೆಯಿರಿ ಮತ್ತು ‘UPI ಲೈಟ್ X ಬ್ಯಾಲೆನ್ಸ್’ ಮೆನುಗೆ ಹೋಗಿ.
‘ಸಕ್ರಿಯಗೊಳಿಸಿ’ ಬಟನ್ ಮೇಲೆ ಟ್ಯಾಪ್ ಮಾಡಿ.
ಆಫ್‌ಲೈನ್ ವಹಿವಾಟುಗಳನ್ನು ಅನುಮತಿಸಲು ಟಿಕ್‌ಬಾಕ್ಸ್ ಅನ್ನು ಟಾಗಲ್ ಮಾಡಿ ಮತ್ತು ನಂತರ ‘ಈಗ ಸಕ್ರಿಯಗೊಳಿಸಿ’ ಟ್ಯಾಪ್ ಮಾಡಿ.
ನಿಮ್ಮ UPI ಲೈಟ್ ವ್ಯಾಲೆಟ್‌ಗೆ ಹಣವನ್ನು ಸೇರಿಸಲು ಅಪ್ಲಿಕೇಶನ್ ನಿಮ್ಮನ್ನು ಪ್ರೇರೇಪಿಸುತ್ತದೆ. ಬಯಸಿದ ಮೊತ್ತವನ್ನು ನಮೂದಿಸಿ.
‘UPI ಲೈಟ್ X ಸಕ್ರಿಯಗೊಳಿಸಿ’ ಬಟನ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ UPI ಪಿನ್ ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ
ನಿಮ್ಮ ವ್ಯಾಲೆಟ್‌ಗೆ ಹಣವನ್ನು ಸೇರಿಸಿದ ನಂತರ, ನೀವು UPI ಲೈಟ್ X ಅನ್ನು ಬಳಸಲು ಪ್ರಾರಂಭಿಸಬಹುದು.

ಸದ್ಯಕ್ಕೆ, BHIM ಅಪ್ಲಿಕೇಶನ್ UPI Lite X ಗಾಗಿ ಟ್ಯಾಪ್ ಮತ್ತು ಪೇ ಮತ್ತು ಆಫ್‌ಲೈನ್ ವಹಿವಾಟುಗಳನ್ನು ನೀಡುತ್ತದೆ. PhonePe ಮತ್ತು Paytm ನಂತಹ ಇತರೆ ಪಾವತಿ ಅಪ್ಲಿಕೇಶನ್‌ಗಳಲ್ಲಿ ಮುಂಬರುವ ವಾರಗಳಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸುವ ನಿರೀಕ್ಷೆಯಿದೆ.  UPI Lite X ಅನ್ನು NFC ಬೆಂಬಲದೊಂದಿಗೆ Android ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಬಳಸಬಹುದಾಗಿದೆ, ಐಫೋನ್‌ಗಳು UPI Lite X ಗೆ ಹೊಂದಿಕೆಯಾಗುವುದಿಲ್ಲ ಏಕೆಂದರೆ Apple ತಮ್ಮ ಸಾಧನಗಳಲ್ಲಿ NFC ಪಾವತಿಗಳಿಗಾಗಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಅನುಮತಿಸುವುದಿಲ್ಲ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!