ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ರಾಜ್ಯ ಸರ್ಕಾರದ ಗೃಹ ಆರೋಗ್ಯ ಯೋಜನೆ (Gruha Arogya Yojana scheme)ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಹೊಸ ಯೋಜನೆ ಯಾವುದು?, ಇದರಿಂದ ಉಪಯೋಗಗಳೇನು?, ಯಾರಿಗೆಲ್ಲ ಈ ಯೋಜನೆಯ ಪದಾ ದೊರೆಯುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಗೃಹ ಆರೋಗ್ಯ ಯೋಜನೆ(Gruha Arogya Yojana):
ರಾಜ್ಯ ಸರ್ಕಾರ(state government)ವು ಎಲ್ಲರಿಗೂ ಸಮಗ್ರ ಆರೋಗ್ಯ ರಕ್ಷಣೆ ಯೋಜನೆಯಾದ ಗೃಹ ಆರೋಗ್ಯ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ರೋಗವನ್ನು ತಡೆಗಟ್ಟ ಬೇಕು ಎನ್ನುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲಾ ಅರ್ಹ ಫಲಾನುಭವಿಗಳನ್ನು ಉಚಿತ ಆರೋಗ್ಯ ರಕ್ಷಣೆ ಯೋಜನೆಗಳ ಅಡಿಯಲ್ಲಿ ಒಳಗೊಳ್ಳಲಾಗುತ್ತದೆ. ಮತ್ತು ಇಲಾಖೆಯು ರೋಗಿಗಳಿಗೆ ಔಷಧವನ್ನು ವಿತರಿಸುತ್ತದೆ ಮತ್ತು ಶಸ್ತ್ರಚಿಕಿತ್ಸೆಗಳು ಮತ್ತು ಇತರೆ ಕಾರ್ಯವಿಧಾನಗಳನ್ನು ಉಚಿತ(Free)ವಾಗಿ ಮಾಡಿ ಕೊಡುತ್ತದೆ.
ಆಶಾ ಕಾರ್ಯಕರ್ತರ ಮೂಲಕ, ಗ್ರಾಮಸ್ಥರ ಮನೆ ಬಾಗಿಲಿಗೆ ಆರೋಗ್ಯ ತಪಾಸಣೆ ನೀಡುವ ಕಾರ್ಯಕ್ರಮವನ್ನು ಕೈ ಗೊಳ್ಳಲಾಗುತ್ತದೆ ಮತ್ತು ಅಗತ್ಯವಿರುವವರಿಗೆ ಅವರ ಮನೆ ಬಾಗಿಲಿಗೆ ಔಷಧಿಗಳನ್ನು ವಿತರಿಸಲಾಗುತ್ತದೆ.
ಮತ್ತು ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಈ ವರ್ಷ 800 ಲ್ಯಾಬ್ ತಂತ್ರಜ್ಞರು(Lab Technicians )ಮತ್ತು ಇತರೆ ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ , ಹಂತ ಹಂತವಾಗಿ ಹೆಚ್ಚಿನ ವೈದ್ಯಕೀಯ ಸಿಬ್ಬಂದಿಯನ್ನು ಕೂಡಾ ನೇಮಿಸಿಕೊಳ್ಳಲಾಗುವುದು ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದರು.
ಮೊದಲನೆಯ ಹಂತದಲ್ಲಿ ಎಂಟು ಜಿಲ್ಲೆಗಳ ಆಯ್ಕೆ :
ಈ ಯೋಜನೆಯು ಮೊದಲ ಹಂತದಲ್ಲಿ 8 ಜಿಲ್ಲೆಗಳಾದ ರಾಮನಗರ, ತುಮಕೂರು, ಬೆಳಗಾವಿ, ಗದಗ, ಮೈಸೂರು, ಚಿಕ್ಕಮಗಳೂರು, ಬಳ್ಳಾರಿ ಮತ್ತು ಯಾದಗಿರಿ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಈ ಸಮೀಕ್ಷೆಯು ವೈಯಕ್ತಿಕವಾಗಿ ರೋಗಿಗಳನ್ನು ಗುರುತಿಸುವುದಲ್ಲದೆ, ರೋಗದ ಹರಡುವಿಕೆಯ ಪ್ರಮಾಣವನ್ನು ಕೂಡಾ ಪತ್ತೆಹಚ್ಚುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, ಕಿಡ್ನಿ ವೈಫಲ್ಯ, ಕ್ಯಾನ್ಸರ್ ರೋಗಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ.
ಮೊದಲ ಹಂತದಲ್ಲಿ 8 ಜಿಲ್ಲೆಗಳನ್ನೂ ಆಯ್ದುಕೊಂಡು ಮನೆ ಮನೆ ಆರೋಗ್ಯ ತಪಾಸಣೆ ಮಾಡಿ ಆ ವೇಳೆ ಏನಾದರೂ ಸಮಸ್ಯೆ ದೃಢಪಟ್ಟಲ್ಲಿ ಅಥವಾ ಈಗಾಗಲೇ ಸಮಸ್ಯೆ ಎದುರಿಸುತ್ತಿರುವವರಿಗೆ ತಲಾ 90 ಮಾತ್ರೆಗಳನ್ನು ಹೊಂದಿರುವ ಮಾದರಿ ಔಷಧ ಪೆಟ್ಟಿಗೆಗಳನ್ನು ಸಿದ್ಧಪಡಿಸಲಾಗಿದೆ, ಈ ಪೆಟ್ಟಿಗೆಗಳನ್ನು ಉಚಿತವಾಗಿ ಅವರಿಗೆ ವಿತರಿಸಲಾಗುತ್ತದೆ.
ಮನೆ ಮನೆಗೆ ಬಂದು ತಪಾಸಣೆ ಮಾಡಿ ಮೂರು ತಿಂಗಳ ಔಷಧಿ ನೀಡುತ್ತಾರಂತೆ :
ಮೊದಲ ಬಾರಿಗೆ ನೀಡಿದ ಮಾತ್ರೆಗಳು ಏನಾದರೂ ಖಾಲಿ ಆದರೆ ಆದರ ನಂತರ ಮತ್ತೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಮನೆಗಳಿಗೆ ತಲುಪಿಸಲಾಗುತ್ತದೆ. 30 ವರ್ಷ ಮೇಲ್ಪಟ್ಟವರು ಈ ಮಾತ್ರೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಕ್ಕೆ ತಲಾ ಮೂರು ಮಾದರಿಯ ಮಾತ್ರೆಗಳನ್ನು ಸರ್ಕಾರ ಗುರುತಿರುಸುತ್ತದೆ.ಆ ಮಾತ್ರೆಗಳನ್ನು ಮಾತ್ರ ಕೊಡಲಾಗುತ್ತದೆ ಎಂದು ತಿಳಿದು ಬಂದಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಮತ್ತು ತಪಾಸಣಾ ತಂಡವು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ತಲಾ 20 ಮನೆಗಳಿಗೆ ಭೇಟಿ ನೀಡಲಿದ್ದಾರೆ. ಮನೆ ಮನೆಗೆ ಭೇಟಿ ಮಾಡಿದ ವೇಳೆ ಬಾಯಿ, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಪತ್ತೆಗೂ ತಪಾಸಣೆ ನಡೆಸುತ್ತಾರೆ. ಏನಾದರೂ ಆ ಸಂದರ್ಭದಲ್ಲಿ ಕ್ಯಾನ್ಸರ್ (Cancer) ದೃಢಪಟ್ಟಲ್ಲಿ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಶಿಫಾರಸು ಮಾಡತ್ತಾರೆ. ಮತ್ತು ತಪಾಸಣಾ ತಂಡವು ನಿಮ್ಮ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೀವು ಏನಾದರೂ ಮನೆಯಲ್ಲಿ ಇರದ್ದಿದರೆ ಒಂದು ವೇಳೆ ತಂಡವು ಮರುದಿನ ಮತ್ತೆ ಭೇಟಿ ನೀಡಲಿದೆ ಎಂದು ತಿಳಿದಿದೆ.
ನೀವು ಕೂಡಾ ಏನಾದರೂ ಈ ಮೇಲೆ ಹೇಳಿರುವಂತೆ ರೋಗಗಳಿಗೆ ಒಳಪಟ್ಟಿದ್ದರೆ ಈ ಯೋಜನೆ ಅಡಿಯಲ್ಲಿ ಉಪಯೋಗವನ್ನು ಪಡೆದುಕೊಳ್ಳಿ ಮತ್ತು ಆರೋಗ್ಯವನ್ನು ಅಭಿವೃದ್ಧಿಗೊಳಿಸಿಕೊಳ್ಳಿ ಎಂದು ನಮ್ಮ ಲೇಖನದ ಮೂಲಕ ನಿಮಗೆ ಹೇಳಿಕೊಳ್ಳತೇವೆ.
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ