ಕರ್ನಾಟಕ ಉಪ್ಪಾರ ಅಬ್ಧಿವೃದ್ಧಿನಿಗಮ ನಿಯಮ(Uppara Development Corporation)ದಿಂದ 2023- 2024 ನೇ ಸಾಲಿನಲ್ಲಿ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದಾರೆ. ಇದರಲ್ಲಿ ಸಹಾಯಧನ ಮತ್ತು ಸಾಲ(Loan schemes) ಸೌಲಭ್ಯಗಳ ಯೋಜನೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆಗಳು :
ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರಬೇಕು.
ವಯೋಮಿತಿ 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಾಗೂ ಬ್ಯಾಂಕ್ ಖಾತೆಯನ್ನು ತಮ್ಮ ಆಧಾರ್ ಸಂಖ್ಯೆಗೆ ಜೋಡಣೆ ಮಾಡಿರಬೇಕು.
ಆಯ್ಕೆ ಮಾಡುವಾಗ ಮಹಿಳೆಯರಿಗೆ 33%, ವಿಕಲಚೇತನರಿಗೆ 5% ಹಾಗೂ ತೃತೀಯ ಲಿಂಗಿಗಳಿಗೆ ಶೇ 1% ಮೀಸಲಾತಿ ಇರಿಸಿದೆ.
ಈ ಕೆಳಗಿನ ಯೋಜನೆಗಳಿಗೆ ಅರ್ಜಿಗಳನ್ನು ಉಪ್ಪಾರ ನಿಗಮದ ವತಿಯಿಂದ ಸಲ್ಲಿಸಬಹುದಾಗಿದೆ :
ಸ್ವಯಂ ಉದ್ಯೋಗ ನೇರಸಾಲ ಯೋಜನೆ(swayam udyoga Loan Scheme) :
ಉಪ್ಪಾರ, ವರ್ಗದ ಯುವಕ/ ಯುವತಿಯರಿಗೆ ತರಕಾರಿ, ಹಣ್ಣು-ಹಂಪಲು, ಮೀನು ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ ಮುಂತಾದ ಸ್ವಯಂ ಉದ್ಯೋಗಕ್ಕೆ ಸಹಾಯಧನ ಹಾಗೂ ಇನ್ನಿತರ ಸಾಲ ಸೌಲಭ್ಯಗಳನ್ನು ನೀಡಲಾಗುವುದು.
ಗಂಗಾಕಲ್ಯಾಣ ನೀರಾವರಿ ಯೋಜನೆ:
ಕನಿಷ್ಟ 1.00 ಎಕರೆ ಕೃಷಿ ಜಮೀನಿರುವ ಪರಿಶೀಷ್ಟ ಅಲೆಮಾರಿ, ಅರೆ ಅಲೆಮಾರಿ ವರ್ಗದವರಿಗೆ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನಿನಲ್ಲಿ ತೆರೆದ ಬಾವಿ/ಕೊಳವೆ ಬಾವಿ ಕೊರೆಸಿ ಪಂಪ್‌ಸೆಟ್ ಅಳವಡಿಸಿ ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯಕ್ಕೆ ಸಹಾಯಧನ ಮತ್ತು ಸಾಲ ನೀಡಲಾಗುತ್ತದೆ.
ಅರಿವು ಶಿಕ್ಷಣ ಸಾಲ ಯೋಜನೆ(Education loan scheme) :
ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈಗಾಗಲೇ ಅರ್ಜಿ ಸ್ವೀಕಾರ ಆರಂಭವಾಗಿದೆ. ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆಗಳಿಗೆ ಕೊನೆಯ ದಿನಾಂಕ ಇರುವುದಿಲ್ಲ.
ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ / ನೀಟ್ ಮುಖಾಂತರ ಎಂಬಿಬಿಎಸ್ / ಬಿಡಿಎಸ್ / ಆಯುಷ್ / ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ / ಬ್ಯಾಚುಲರ್ ಆಫ್ ಇಂಜಿನಿಯರಿಂಗ್(BE) / ಬ್ಯಾಚುಲರ್ ಆಫ್ ಟೆಕ್ನಾಲಜಿ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಾಲವನ್ನು ನೀಡಲಾಗುತ್ತದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಸ್ವಾವಲಂಬಿ ಸಾರಥಿ ಯೋಜನೆಗಳ ಸಾಲ ಸೌಲಭ್ಯ :
ಕರ್ನಾಟಕ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆಯಡಿ ಅರ್ಹ ಫಲಾನುಭವಿಗಳು ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು :-
ಯಾವುದೇ ಒಂದು ಪ್ರಯಾಣಿಕ ಆಟೋರಿಕ್ಷಾ, ಟ್ಯಾಕ್ಸಿ, ಸರಕು ವಾಹನವನ್ನು ಖರೀದಿಸಲು ಸಹಾಯಧನವನ್ನು ಒದಗಿಸಲಾಗುವುದು
75% ಸಬ್ಸಿಡಿ ಅಥವಾ ರೂ. 4,00,000/- ವಾಹನ ವೆಚ್ಚವನ್ನು SC ಮತ್ತು ST ಫಲಾನುಭವಿಗಳಿಗೆ ಒದಗಿಸಲಾಗುವುದು.
50% ಸಬ್ಸಿಡಿ ಅಥವಾ ರೂ. 3,00,000/- ವಾಹನ ವೆಚ್ಚವನ್ನು OBC ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಒದಗಿಸಲಾಗುವುದು.
ಸಹಾಯಧನ ರೂ. 75,000/- ಪ್ಯಾಸೆಂಜರ್ ಆಟೋರಿಕ್ಷಾವನ್ನು ಖರೀದಿಸಲು ನೀಡಲಾಗುತ್ತದೆ.
ಖರೀದಿಸಿದ ವಾಹನದ ಉಳಿದ ಮೌಲ್ಯ/ವೆಚ್ಚಕ್ಕೆ ಸಾಲದ ಸೌಲಭ್ಯವೂ ಲಭ್ಯವಿದೆ.
ಅರ್ಜಿಯನ್ನು ಎಲ್ಲಿ ಹಾಕಬೇಕು ಹಾಗೂ ಕೊನೆಯ ದಿನಾಂಕ ಯಾವುದು?:
ಮೇಲ್ಕಂಡ ಈ ಎಲ್ಲಾ ಯೋಜನೆಗಳಿಗೆ ಮತ್ತು ಅರ್ಹ ಆಸಕ್ತರು ಆನ್ಲೈನ್ ನಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನವೆಂಬರ್ 3 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಉತ್ತರ ಜಿಲ್ಲೆ, ಸರ್ವಶೀಲಾ ಕಾಂಪ್ಲೆಕ್ಸ್, ಬಳ್ಳಾರಿ ಮೈನ್ ರೋಡ್, ಗಂಗಾನಗರ , ಬೆಂಗಳೂರು-32 ಅಥವಾ ನಿಗಮದ ವೈಬ್ ಸೈಟ್ http://upparadevelopment.karnataka.gov.in ರಲ್ಲಿ ಅಥವಾ ನಿಗಮದ ಕೇಂದ್ರ ಕಛೇರಿಯ ದೂರವಾಣಿ ಸಂಖ್ಯೆ: 080-22252555 ಕರೆ ಮಾಡಬಹುದು
ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
7760503154