ಖಗೋಳ(astronomy) ಘಟನೆಗಳು ವಿಜ್ಞಾನಕ್ಕೆ ಮಾತ್ರವಲ್ಲದೆ ಜ್ಯೋತಿಷ್ಯಕ್ಕೂ ಮುಖ್ಯವಾಗಿದೆ. ಗ್ರಹಗಳ ಚಲನೆಗಳು ವಿವಿಧ ರಾಶಿಯವರ ವರ್ತನೆಯ ಮೇಲೆ ಪ್ರಭಾವ ಬೀರುತ್ತವೆ. ಹಾಗೂ ಈ ವರ್ಷ ಸಂಭವಿಸಲಿರುವ ಸೂರ್ಯ ಗ್ರಹಣವು ಕೊನೆಯ ಸೂರ್ಯ ಗ್ರಹಣ(solar eclipse)ವಾಗಿದೆ. ನಾಳೆ ಸಂಭವಿಸಲಿರುವ ಸೂರ್ಯ ಗ್ರಹಣವು ಯಾವ ಸಮಯಕ್ಕೆ ಗ್ರಹಣ ಸಂಭವಿಸುತ್ತದೆ? ಮತ್ತು ಸೂತಕ ಅವಧಿ ಯಾವುದು..? ಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂದು ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಇಂದು ವರ್ಷದ ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದೆ :
ಈ ಅಕ್ಟೋಬರ್ ತಿಂಗಳು ತುಂಬಾ ವಿಶೇಷ ಮಹತ್ವವನ್ನು ಹೊಂದಿದ್ದು ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ಎರಡೂ ಸಂಭವಿಸಲಿವೆ ಎಂದು ತಿಳಿದು ಬಂದಿದೆ. ವರ್ಷದ ಕೊನೆಯ ಸೂರ್ಯಗ್ರಹಣ ಅಕ್ಟೋಬರ್ 14 ರಂದು ಸಂಭವಿಸಲಿದೆ. ಈ ಸೂರ್ಯಗ್ರಹಣದ ವಿಶೇಷತೆ ಏನೆಂದರೆ ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗಿದೆ. ಕೆಲ ರಾಶಿಯವರಿಗೆ ಅದರ ಉತ್ತಮ ಫಲಿತಾಂಶಗಳು ದೊರೆತ್ತವೆ ಎಂದು ಹೇಳಲಾಗುತ್ತದೆ.
ಅಕ್ಟೋಬರ್ ಬಹಳ ವಿಶೇಷವಾದ ತಿಂಗಳು ಎಂದು ಹೇಳುತ್ತಾರೆ ಏಕೆಂದರೆ ಈ ತಿಂಗಳಲ್ಲಿ ಸೂರ್ಯಗ್ರಹಣ, ಮಹಾಲಯ ಅಮಾವಾಸ್ಯೆ, ನವರಾತ್ರಿ, ಚಂದ್ರಗ್ರಹಣ ಸಂಭವಿಸುತ್ತವೆ.
ಇಂದು ರಾತ್ರಿ ಸಂಭವಿಸಲಿರುವ ಸೂರ್ಯಗ್ರಹಣವು ಉಂಗುರಾಕಾರದಲ್ಲಿರುತ್ತದೆ. ಆದ್ದರಿಂದ ಇದನ್ನು ರಿಂಗ್ ಆಫ್ ಫೈರ್( ring of fire ) ಎಂದು ಕರೆಯಲಾಗುತ್ತದೆ. 2023 ರ ಈ ಸೂರ್ಯ ಗ್ರಹಣದ ಸಮಯ ಮತ್ತು ಸೂತಕ ಕಾಲದ ಬಗ್ಗೆ ಮಾಹಿತಿ ಹೀಗಿದೆ.
ಇದು ಕೊನೆಯ 2023 ರ ಕೊನೆಯ ಸೂರ್ಯ ಗ್ರಹಣ ವಾಗಿದ್ದು ಸೂತಕ ಕಾಲ, ಪೂಜೆ ವಿಧಾನ, ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ..? ಎಂದು ನೋಡೋಣ :
ಅಕ್ಟೋಬರ್ 14 ರಂದು ಸಂಭವಿಸುವ ಗ್ರಹಣ ಈ ವರ್ಷದ ಎರಡನೇ ಮತ್ತು ಕೊನೆಯ ಸೂರ್ಯ ಗ್ರಹಣವಾಗಿದೆ. ಜ್ಯೋತಿಷ್ಯ ಮತ್ತು ಖಗೋಳಶಾಸ್ತ್ರದ ಪ್ರಕಾರ ಗ್ರಹಣದ ಘಟನೆಯನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ನಂತರ, ದೇಶ ಮತ್ತು ಪ್ರಪಂಚದಲ್ಲಿ ನೈಸರ್ಗಿಕ ವಿಕೋಪದ ಸಾಧ್ಯತೆ ಇದೆ ಎನ್ನಲಾಗುತ್ತದೆ.
ಈ ಕೊನೆಯ ಸೂರ್ಯ ಗ್ರಹಣದಲ್ಲಿ ಯಾವೆಲ್ಲ ಕ್ರಮ ಪಾಲಿಸಬೇಕು…? ಮತ್ತು ಪಾಲಿಸಬಾರದು…?
ಈ ಸೂರ್ಯ ಗ್ರಹಣದ ದಿನದಂದೇ ಸರ್ವಪಿತೃ ಅಮಾವಾಸ್ಯೆಯೂ ಬಂದಿದೆ. ಸರ್ವ ಪಿತೃ ಅಮಾವಾಸ್ಯೆಯೊಂದಿಗೆ 16 ದಿನಗಳ ಶ್ರಾದ್ಧ ಪಕ್ಷವು ಕೊನೆಗೊಳ್ಳುತ್ತದೆ ಎಂದು ತಿಳಿದಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಇದರಿಂದಾಗಿ ಶ್ರಾದ್ಧ ಆಚರಣೆಗಳು ಮತ್ತು ಅಮಾವಾಸ್ಯೆಗೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೆ ಯಾವುದೇ ನಿಷೇಧವಿರುವುದಿಲ್ಲ.
ಪಂಚಾಂಗದ ಪ್ರಕಾರ ಅಕ್ಟೋಬರ್ 14 ರ ಸೂರ್ಯಗ್ರಹಣವು ಕನ್ಯಾರಾಶಿ ಮತ್ತು ಚಿತ್ರ ನಕ್ಷತ್ರದಲ್ಲಿ ಅಶ್ವಿನ ಮಾಸದ ಅಮಾವಾಸ್ಯೆಯಂದು ಸಂಭವಿಸುತ್ತದೆ. ಅಕ್ಟೋಬರ್ 14 ರಂದು ರಾತ್ರಿ 8:34 ಕ್ಕೆ ಸೂರ್ಯಗ್ರಹಣ ಪ್ರಾರಂಭವಾಗಲಿದ್ದು, ಅಕ್ಟೋಬರ್ 15 ರಂದು ಮಧ್ಯಾಹ್ನ 2:25 ಕ್ಕೆ ಕೊನೆಗೊಳ್ಳಲಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಸೂರ್ಯಗ್ರಹಣದ ನಂತರ ಯಾವ ಸಮಯಕ್ಕೆ ಸ್ನಾನ ಮಾಡಬೇಕು..?
ಈ ಸೂರ್ಯಗ್ರಹಣವು ಮುಗಿದ ತಕ್ಷಣ ಸ್ನಾನ ಮಾಡಬೇಕು. ಮತ್ತು ಸ್ನಾನ ಮಾಡುವಾಗ ಗಂಗಾಜಲವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಗ್ರಹಣದ ದುಷ್ಪರಿಣಾಮಗಳು ದೂರವಾಗುತ್ತವೆ ಎಂಬ ಮಾತಿದೆ. ಗಂಗಾಜಲ ಸಿಗದಿದ್ದರೆ ಸ್ನಾನ ಮಾಡುವ ನೀರಿಗೆ ಗರಿಕೆ ಅಥವಾ ತುಳಸಿ ದಳವನ್ನು ಸೇರಿಸಿ ಸ್ನಾನ ಮಾಡಬೇಕು. ಸ್ನಾನದ ನಂತರ ಸ್ವಚ್ಛವಾದ ಬಟ್ಟೆಯನ್ನು ಧರಿಸಿ ಸೂರ್ಯಗ್ರಹಣ ಮುಗಿದ ನಂತರ ಗಂಗಾ ಚಿಮುಕಿಸುವ ಮೂಲಕ ಮನೆಯನ್ನು ಶುದ್ಧಗೊಳಿಸಬೇಕು.
ಸೂರ್ಯಗ್ರಹಣದ ನಂತರ ದೇವರ ಪೂಜೆ ಮಾಡಬಹುದೇ..?
ಸೂತಕದ ಅವಧಿ ಮುಗಿದ ತಕ್ಷಣ, ನೀವು ದೇವರ ಕೋಣೆಯಲ್ಲಿ ಗಂಗಾಜಲವನ್ನು ಸಿಂಪಡಿಸುವುದಲ್ಲದೆ, ದೇವರ ಕೋಣೆಯನ್ನು ಪ್ರವೇಶಿಸುವ ಮೊದಲು ಅಥವಾ ದೇವರ ವಿಗ್ರಹವನ್ನು ಮುಟ್ಟುವ ಮೊದಲು ಗಂಗಾಜಲವನ್ನು ನಿಮ್ಮ ಮೈಮೇಲೂ ಚಿಮುಕಿಸಿಕೊಳ್ಳಬೇಕು. ಗಂಗಾಜಲವು ಅತ್ಯಂತ ಪರಿಶುದ್ಧವಾಗಿದೆ ಮತ್ತು ಯಾವುದೇ ಗ್ರಹಣವು ಅದರ ಶುದ್ಧತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ