Oneplus Fold – ಸ್ಯಾಮ್ಸಂಗ್ ಗೆ ಟಕ್ಕರ್ ನೀಡಲು ಬರುತ್ತಿದೆ ಒನ್ ಪ್ಲಸ್ ಬೆಂಕಿ ಮೊಬೈಲ್

one plus foldable new phone

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಓನ್ ಪ್ಲಸ್ ನ ಮೊದಲ ಫೋಲ್ಡಬಲ್ ಫೋನ್(Foldable phone) ಓಪನ್(One plus open) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ನಮಗೆ ಎಲ್ಲಾ ಗೊತ್ತಿರುವ ಹಾಗೆ ಇತ್ತೀಚೆಗಷ್ಟೆ ಸ್ಯಾಮ್​ಸಂಗ್ ಗ್ಯಾಲಕ್ಸಿ Z Fold 5 ಬಿಡುಗಡೆ ಕಂಡಿದೆ.ಈಗ ಸದ್ಯ ಬಿಡುಗಡೆ ಆದ ಸ್ಯಾಮ್​ಸಂಗ್ ಗ್ಯಾಲಕ್ಸಿ Z Fold 5 ಗೆ ಪೈಪೋಟಿ ಕೊಡಲೆಂದೆ ಫೋಲ್ಡಬಲ್ ಸ್ಮಾರ್ಟ್‌ಫೋನ್ (Foldable smartphone) ಒನ್​ಪ್ಲಸ್​ ಓಪನ್(One plus open) ಬಿಡುಗಡೆ ಆಗಲಿದೆ ಎಂದೇ ಹೇಳಬಹುದಾಗಿದೆ.

ಓನ್ ಪ್ಲಸ್ ಓಪನ್ ಸ್ಮಾರ್ಟ್ ಫೋನ್(One plus open smart phone) 2023:

ಹೌದು ಒನ್​ಪ್ಲಸ್ ಕಂಪನಿಯ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ (Foldable smartphone) ಒನ್​ಪ್ಲಸ್​ ಓಪನ್ (One plus open)ಇದಾಗಿದೆ. ಈ ಸ್ಮಾರ್ಟ್​ಫೋನ್ ಅಕ್ಟೋಬರ್ 19 ರಂದು ಮುಂಬೈನಲ್ಲಿ 7.30PM IST ಕ್ಕೆ ಬಿಡುಗಡೆಯಾಗಲಿದೆ ಎಂದು ಕಂಪನಿ ಪ್ರಕಟಿಸಿದೆ.
ಈ ಮೂಲಕ, ಒನ್​ಪ್ಲಸ್ ಕಂಪನಿ ತನ್ನ ಫೋಲ್ಡಬಲ್ ಸ್ಮಾರ್ಟ್‌ಫೋನ್‌ (Foldable smartphone)ಅನ್ನು ಜಗತ್ತಿಗೆ ಚೊಚ್ಚಲ ಪ್ರವೇಶವನ್ನು ಮಾಡಿಸುತ್ತದೆ ಎಂದೇ ಹೇಳಬಹುದು.

whatss

ಈ ಫೋನಿನ ವೈಶಿಷ್ಟಗಳು :

ಒನ್​ಪ್ಲಸ್​ ಓಪನ್ ಫೀಚರ್ಸ್ ಬಗ್ಗೆ ಕಂಪನಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೂ
ಮೂಲಗಳ ಪ್ರಕಾರ ನೋಡಿ ತಿಳಿಯುವುದಾದರೆ,
ಈ ಸ್ಮಾರ್ಟ್ ಫೋನ್ ಸ್ನಾಪ್​ಡ್ರಾಗನ್ 8+ Gen 2 SoC ಯಿಂದ ಚಾಲಿತ ಕಾಣಬಹುದಾಗಿದೆ.
120Hz AMOLED (LTPO) ಡಿಸ್ ಪ್ಲೇ ಮತ್ತು 100W SuperVOOC ಚಾರ್ಜಿಂಗ್​ನೊಂದಿಗೆ 4800mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಬಹುದು.
ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ಕೂಡ ಇರುವ ಸಾಧ್ಯತೆ ಇರಬಹುದಾಗಿದೆ.

ಒನ್​ಪ್ಲಸ್​ ಓಪನ್ ಸ್ಮಾರ್ಟ್ ಫೋನ್ ಡಿಸ್ಪ್ಲೇ :

ಒನ್​ಪ್ಲಸ್ ಓಪನ್‌ನ ಒಳಗಿನ ಡಿಸ್ ಪ್ಲೇ (inner display) 7.82-ಇಂಚಿನ OLED display ಆಗಿರಬಹುದು ಎಂದು ತಿಳಿದಿದೆ.
ಇದು 120Hz ರಿಫ್ರೆಶ್ ದರ ಮತ್ತು 2,268 x 2,440px ರೆಸಲ್ಯೂಶನ್‌ನೊಂದಿಗೆ ಕೂಡಿದೆ.
ಆದರೆ ಹೊರಗಿನ ಡಿಸ್ ಪ್ಲೇ (Outer display)6.31 ಇಂಚಿನ ಡಿಸ್ಪ್ಲೇ ಅನ್ನು ಹೊಂದಿರುತ್ತದೆ ಎಂದು ತಿಳಿದಿದೆ. ಮತ್ತು ಇದು 120Hz ರಿಫ್ರೆಶ್ ದರ ಮತ್ತು 1,116 x 2,484 px ರೆಸಲ್ಯೂಶನ್​ನಿಂದ ಕೂಡಿರಬಹುದು ಎಂದು ತಿಳಿಯಬಹುದಾಗಿದೆ.

ಒನ್​ಪ್ಲಸ್​ ಓಪನ್ ಸ್ಮಾರ್ಟ್ ಫೋನ್ ಕ್ಯಾಮೆರಾ(Camera):

ಈ ಫೋನಿನ ಹಿಂಭಾಗವು ಹ್ಯಾಸೆಲ್‌ಬ್ಲಾಡ್‌ನಿಂದ ಟ್ಯೂನ್ ಮಾಡಲಾದ ಟ್ರಿಪಲ್ ಕ್ಯಾಮೆರಾ ಸೆಟ್ಅಪ್(Triple camera setup) ಅನ್ನು ಒಳಗೊಂಡಿರುತ್ತದೆ.
ಇದರಲ್ಲಿ ಮುಖ್ಯ ಕ್ಯಾಮೆರಾ 50-MP ಇರಲಿದೆ. ಜೊತೆಗೆ ಅಲ್ಟ್ರಾ-ವೈಡ್ ಕ್ಯಾಮೆರಾ (ultra wide camera)ಮತ್ತು ಪೆರಿಸ್ಕೋಪ್ ಲೆನ್ಸ್ (periscope lens)ಅನ್ನು ಒಳಗೊಂಡಿರಬಹುದು.
ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 32mp ಸಂವೇದಕವನ್ನು ಒಳಗೊಂಡಿರುವ ಸೆಲ್ಫಿಗಳಿಗಾಗಿ ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಎಂದು ತಿಳಿಯಬಹುದು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಒನ್​ಪ್ಲಸ್​ ಕಂಪನಿ ಓನ್ ಪ್ಲಸ್ ಓಪನ್ ಸ್ಮಾರ್ಟ್ ಫೋನ್ (One plus open smart phone)ರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡದಿರುವದರಿಂದ ಓನ್ ಪ್ಲಸ್ ಓಪನ್ ಬೆಲೆ ಬಗ್ಗೆ ನಿಖರವಾಗಿ ಮಾಹಿತಿ ನೀಡಲಾಗುತ್ತಿಲ್ಲ. ಆದರೂ
ಟಿಪ್‌ಸ್ಟರ್ ಪ್ರಕಾರ, ಒನ್​ಪ್ಲಸ್​ ಓಪನ್ ಬೆಲೆ(price) ನೋಡುವುದಾದರೆ, 1.2 ಲಕ್ಷ ಆಸುಪಾಸಿನಲ್ಲಿ ಇರಬಹುದು ಎಂದು ತಿಳಿದಿದೆ.

ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: Vande Bharat Express: ಮತ್ತೇ 9 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ- ಇಲ್ಲಿದೆ ಕಂಪ್ಲೀಟ್ ಮಾಹಿತಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!