ಇದೀಗ SSLC ವಿದ್ಯಾರ್ಥಿಗಳಿಗೆ ಹೊಸ ಸುದ್ದಿ ತಿಳಿದು ಬಂದಿದೆ. SSLC ಅಂಕಪಟ್ಟಿ(Marks card ) ತಿದ್ದುಪಡಿಯನ್ನು ಆನ್ಲೈನ್(online) ಮೂಲಕವೇ ಸರಿಪಡಿಸಿಕೊಳ್ಳಬಹುದು ಎಂದು SSLC ಬೋರ್ಡ್ ನಿರ್ಧರಿಸಿದೆ. ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಇನ್ನು ಮುಂದೆ SSLC ಮಾಕ್ಸ್ ಕಾರ್ಡ್ ಆನ್ಲೈನ್ ನಲ್ಲೆ ತಿದ್ದುಪಡಿ :
SSLC ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಆನ್ಲೈನ್ ಮೂಲಕ ತಿದ್ದುಪಡಿ ಮಾಡಬಹುದು ಅದಕ್ಕಾಗಿ ಇದೀಗ ಅರ್ಜಿಯನ್ನು ಸಹ ಬಿಡಲಾಗಿದೆ. ಆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಅಂತ ತಿಳಿಯೋಣ.
ಇಷ್ಟು ದಿನಗಳ ಕಾಲ SSLC ಅಂಕ ಪಟ್ಟಿಯಲ್ಲಿ ವಿದ್ಯಾರ್ಥಿಯ ತಂದೆ ತಾಯಿಯ ಹೆಸರು, ಜನ್ಮ ದಿನಾಂಕ ಅಥವಾ ಇನ್ನಿತರ ಯಾವುದೇ ಮಾಹಿತಿಯ ತಿದ್ದುಪಡಿಗೆ ಶಾಲಾ ಮುಖ್ಯ ಶಿಕ್ಷಕರ ಮುಖಾಂತರವೇ ತಿದ್ದುಪಡಿಯನ್ನು ಮಾಡಬೇಕಾಗಿತ್ತು. ಆದರೆ ಇದೀಗ ವಿದ್ಯಾರ್ಥಿಗಳಿಗೆ ಅಷ್ಟೆಲ್ಲ ಕಷ್ಟ ಕೆಲಸಗಳು ಇರುವುದಿಲ್ಲ ಅವರಿಗೆ ಸುಲಭವಾಗುವಂತೆ ಆನ್ಲೈನ್ ಮೂಲಕವೇ ಈ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು.
ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ?
ಪ್ರಥಮವಾಗಿ SSLC ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮೊದಲು ಅವರ ಅಂಕಪಟ್ಟಿಯಲ್ಲಿ ಏನೆಲ್ಲ ತೊಂದರೆಗಳಿವೆ ಎಂದು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಕೆಲವೊಂದು ಸಲ ಅಂಕಪಟ್ಟಿಯಲ್ಲಿ ತಂದೆ ತಾಯಿಯ ಹೆಸರು , ಜನ್ಮ ದಿನಾಂಕ , ಊರು ಇವೆಲ್ಲ ತಪ್ಪಾಗಿ ಮುದ್ರಿತವಾಗಿರುತ್ತವೆ.
ಮೊದಲು ಇವೆಲ್ಲ ಮಾಹಿತಿಗಳನ್ನ ಶಾಲೆಯ ಮುಖ್ಯ ಅಧ್ಯಾಪಕರಿಗೆ ತಿಳಿಸಬೇಕು. ಮುಖ್ಯ ಅಧ್ಯಾಪಕರು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಗೆ ಆನ್ಲೈನ್ ಮೂಲಕ ಈ ಮಾಹಿತಿ ಎಲ್ಲವನ್ನು ರವಾನಿಸುತ್ತಾರೆ. ಬ್ಯಾಂಕಿನ ಡೆಬಿಟ್ ಕಾರ್ಡ್(debit card )ಮತ್ತು ಕ್ರೆಡಿಟ್ ಕಾರ್ಡ್(credit card ) ಮೂಲಕ ಪರೀಕ್ಷಾ ಶುಲ್ಕವನ್ನು ಕೂಡ ಅವರು ಆನ್ಲೈನ್ ಮೂಲಕವೇ ಸಂದಾಯ ಮಾಡಬಹುದಾಗಿದೆ. ಇನ್ನು ಈ ಸೌಲಭ್ಯ ಇಲ್ಲದವರು ಅಥವಾ ಈ ಸೌಲಭ್ಯದ ಬಗ್ಗೆ ಗೊತ್ತಿಲ್ಲದವರು ಆಫ್ ಲೈನ್ ನಲ್ಲಿ ಕೂಡ ಪಾವತಿಸಬಹುದು. ಇದಕ್ಕೆ ಸಂಬಂಧಿಸಿದ ಚಲನ್(chalan) ಡೌನ್ಲೋಡ್ ಮಾಡಿಕೊಂಡು ಯೂನಿಯನ್ ಬ್ಯಾಂಕಿನ (union bank )ಯಾವುದೇ ಶಾಖೆಗಳಲ್ಲಿ(branch) ಪಾವತಿಸಬಹುದು. ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯು ಈ ರೀತಿಯಾಗಿ ವಿದ್ಯಾರ್ಥಿಗಳಿಗೆ ಸುಲಭವಾದ ಮಾರ್ಗವನ್ನು ನೀಡಿದೆ.
ನಂತರ ಶಾಲಾ ಮುಖ್ಯೋಪಾಧ್ಯಾಯರು ಕಳುಹಿಸಿದ ದಾಖಲೆಗಳನ್ನು ಮಂಡಳಿ ಕಚೇರಿಗೆ ಪರಿಶೀಲನೆ ನಡೆಸಿ, ಮುಖ್ಯ ತಿದ್ದುಪಡಿಗಾಗಿ ವಿದ್ಯಾರ್ಥಿಯ ಮೂಲ ಅಂಕಪಟ್ಟಿಯನ್ನು ವಿಭಾಗದ ಕಚೇರಿಗೆ ಕಳುಹಿಸುವಂತೆ ಎಸ್ಎಮ್ಎಸ್ (SMS)ಮೂಲಕ ಮಾಹಿತಿಯನ್ನು ಕಳುಹಿಸಿಕೊಡಬಹುದು.
ವಿದ್ಯಾರ್ಥಿಗಳು ಮೂಲ ಅಂಕಪಟ್ಟಿಯನ್ನು ಹಿಂತಿರುಗಿಸುವುದು ಕಡ್ಡಾಯ. ವಿದ್ಯಾರ್ಥಿಗಳು ತಿದ್ದುಪಡಿಯಾದ ಅಂಕಪಟ್ಟಿ ಪಡೆಯುವ ಮೊದಲು, ಹಿಂದೆ ವಿತರಿಸಿದ್ದ ಮೂಲ ಅಂಕಪಟ್ಟಿಯನ್ನು ಅವರು ಕಲಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕರಿಗೆ ಸಲ್ಲಿಸಬೇಕು.
ಇನ್ನು ಆನ್ಲೈನ್ ಮೂಲಕ ಕಳುಹಿಸುವ ಸಂದರ್ಭದಲ್ಲಿ ಆ ಶಾಲೆಯ ಮುಖ್ಯ ಅಧ್ಯಾಪಕರು ಅಪ್ಲೋಡ್ ಮಾಡಿದ ದಾಖಲೆಗಳನ್ನು ನಕಲು ಮಾಡಿದಲ್ಲಿ ಆ ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು. ಹಾಗಾಗಿ ರಾಜ್ಯದ ಎಲ್ಲಾ ಪ್ರೌಢ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಅರ್ಜಿಯನ್ನು ಸಲ್ಲಿಸುವಾಗ ಎಚ್ಚರ ವಹಿಸಬೇಕು.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ