‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್​ ಬಿ; ರಿಲೀಸ್​ ಡೇಟ್​ನಲ್ಲಿ ಮತ್ತೊಮ್ಮೆ ಮುಂದೂಡಿಕೆ..!!

saptha saagaradaale ello

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಸಪ್ತ ಸಾಗರದಾಚೆ ಎಲ್ಲೋ (ಸೈಡ್ B) (Saptha Sagaradache yello) Side B ಮೂವೀ ರಿಲೀಸ್ ಡೇಟ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಸಪ್ತ ಸಾಗರದಾಚೆ ಎಲ್ಲೋ ಸೈಡ್ B:

ಸ್ಯಾಂಡಲ ವುಡ್ ಇಂಡಸ್ಟ್ರಿ(Sandalwood industry) ಅಲ್ಲಿ ಹೇಮಂತ್ ಎಂ ರಾವ್ ನಿರ್ದೇಶನದ, ಹೆಸರಾಂತ ನಟ ರಕ್ಷಿತ್ ಶೆಟ್ಟಿ(Rakshit Shetty) ಹಾಗೂ ರುಕ್ಮಿಣಿ ವಸಂತ್(Rukmini Vasanth) ಅಭಿನಯಿಸಿರುವ ಬ್ಲಾಕ್ಬಸ್ಟರ್ ಮೂವೀ(Blockbuster Movie) ಸಪ್ತ ಸಾಗರದಾಚೆ ಎಲ್ಲೋ ಸೈಡ್ A ಯಶಸ್ಸನ್ನೂ ಕಂಡಿರುವುದು ನಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಈ ಚಲನಚಿತ್ರ ಬಿಡುಗಡೆ ಆಗುವ ಮೊದಲೇ ಚಿತ್ರ ತಂಡವು ಅಭಿಮಾನಿಗಳಿಗೆ ತಿಳಿಸಿರುವ ಹಾಗೆ ಸಪ್ತ ಸಾಗರದಾಚೆ ಎಲ್ಲೋ ಸೈಡ್ A ಮತ್ತು ಸೈಡ್ B ಆಗಿ ಭಾಗ ಇವೆ ಎಂದು ತಿಳಿಸಿದ್ದರು.

ಆದರೆ ಈಗಾಗಲೇ ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ ಚಿತ್ರ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸಿನಿಪ್ರೇಕ್ಷಕರಿಂದ ಪಾಸಿಟಿವ್​ ರೆಸ್ಪಾನ್ಸ್​ ಪಡೆದುಕೊಂಡಿತು. ಸೈಡ್​ ಎ ಬೆನ್ನಲ್ಲೇ ಇದೀಗ ಸೈಡ್​ ಬಿ ರಿಲೀಸ್​ಗೆ ಸಜ್ಜಾಗಿರುವ ಚಿತ್ರ ತಂಡ. ಈ ಹಿಂದೆ ಘೋಷಿಸಿದ್ದ ಬಿಡುಗಡೆ ದಿನಾಂಕದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ.

ಚಲನಚಿತ್ರದ ಬಿಡುಗಡೆಯ ದಿನಾಂಕ ಮತ್ತೆ ಮುಂದೂಡಿಕೆ :

ಸೈಡ್​ ಎ ಬಿಡುಗಡೆಯ ನಂತರ ಸೈಡ್​ ಬಿ ಅಕ್ಟೋಬರ್​ 20 ರಂದು ತೆರೆ ಕಾಣಲಿದೆ ಎಂದು ಹೇಳಿದ್ದ ಚಿತ್ರತಂಡ ರಿಲೀಸ್ ದಿನಾಂಕವನ್ನು ಅಕ್ಟೋಬರ್​ 27ಕ್ಕೆ ಮುಂದೂಡಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ಬದಲಾಗಿದ್ದ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್​ ಬಿ ಡೇಟ್​ ಅನ್ನು ಈಗ ಮತ್ತೊಮ್ಮೆ ಮುಂದಕ್ಕೆ ಹಾಕಲಾಗಿದೆ ಎಂದು ವದಂತಿಗಳು ಕೇಳಿ ಬರುತ್ತಿವೆ.
ಸಿನಿಮಾ ಅಕ್ಟೋಬರ್ 27, 2023 ರಂದೇ ಬಿಡುಗಡೆ ಕಾಣ ಬೇಕಿದ್ದ ಚಿತ್ರವು, ಮುಂದೂಡಿರುವ ಕಾರಣ
ರಿಲೀಸ್​ ದಿನಾಂಕವು ಸದ್ಯ ನವೆಂಬರ್ 10ಕ್ಕೆ ಮುಂದಾಗುವ ಸಾದ್ಯತೆ ಇದೆ ಎಂದು ತಿಳಿದಿದೆ.

ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಮೂಡಿಬರಲಿದೆ ಮತ್ತು ರಕ್ಷಿತ್ ಅಭಿಮಾನಿಗಳು ಮತ್ತು ಪ್ರೇಕ್ಷಕರು ಈ ನಿರೀಕ್ಷಿತ ಚಿತ್ರಕ್ಕೆ ನಿರೀಕ್ಷಿಸುತ್ತಿದ್ದಾರೆ ಎಂದೇ ಹೇಳಬಹುದಾಗಿದೆ.
ಮುಂದಿನ ಸೈಡ್ B ಭಾಗದಲ್ಲಿ ರಕ್ಷಿತ್ ಶೆಟ್ಟಿ, ಚೈತ್ರ ಜೆ ಆಚಾರ್, ರುಕ್ಮಿಣಿ ವಸಂತ್ ಮತ್ತು ಇತರರು ಮಹತ್ವದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪರಂವಾ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರವು ಚರಣ್ ರಾಜ್ ಅವರ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸುತ್ತದೆ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

whatss

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!