ಎಲ್ಲರಿಗೂ ನಮಸ್ಕಾರ, ಈ ವರದಿಯಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ವೀಕ್ಷಿಸುವುದು ಹೇಗೆ? ಮತ್ತು ಯಾರಿಗೆ ಎಷ್ಟು ಹಣ ಬಂದಿದೆ ? ಬ್ಯಾಂಕ್ ಖಾತೆಗೆ ಯಾವಾಗ ಹಣ ಜಮಾ ಆಗುತ್ತದೆ ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಾಗಿ ಹಣ ಹಾಕಲಾಗುತ್ತಿದ್ದು, ನಿಮ್ಮ ಖಾತೆಗೆ ಹಣ ಬಂದಿದೆಯೇ? ಎಷ್ಟು ಹಣ ಜಮೆಯಾಗಿದೆ? ಯಾರ ಖಾತೆಗೆ ಜಮೆಯಾಗಿದೆ? ಎಂಬ ಇತ್ಯಾದಿ ಮಾಹಿತಿ ತಿಳಿಸಿಕೊಡುವ ನಿಟ್ಟಿನಲ್ಲಿ ಆಹಾರ ಇಲಾಖೆಯು ವೆಬ್‌ಸೈಟ್ ಲಿಂಕ್ ಬಿಡುಗಡೆ ಮಾಡಿದೆ.
ಅನ್ನಭಾಗ್ಯ ಯೋಜನೆ : DBT ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವ ವಿಧಾನ, ಯಾರಿಗೆ ಎಷ್ಟು ಹಣ ಬರುತ್ತೆ?
ಅನ್ನ ಭಾಗ್ಯದ ಈ ಪಟ್ಟಿಯಲ್ಲಿ ಇರುವವರಿಗೆ ಸಿಗಲಿದೆ ಕಾಂಚಾಣ ಭಾಗ್ಯ.
ಅಕ್ಕಿ ದಾಸ್ತಾನು ಕೊರತೆಯಿಂದ ಅನ್ನಭಾಗ್ಯ ಅಕ್ಕಿಯ ಬದಲು ಹಣ ಜಮೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ರಮಕ್ಕೆ ಚಾಲನೆ ನೀಡಿ ಫಲನುಭವಿಗಳ ಖಾತೆ ಹಣ ವರ್ಗಾವಣೆ ಮಾಡಿದರು. ಸದ್ಯ ಎರಡು ಜಿಲ್ಲೆಗಳ ಜನರಿಗೆ ಹಣ ವರ್ಗಾವಣೆಯಾಗುತ್ತಿದ್ದು, ಹಂತ ಹಂತವಾಗಿ ವಿವಿಧ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ.
ಪ್ರತಿ ಕೆಜಿಗೆ ₹34/- ರೂ. ನೀಡಲು ನಿರ್ಧರಿಸಿದೆ
ಪ್ರತಿ ಕೆಜಿಗೆ ₹34/- ರೂ ಗಳಂತೆ 5kg ಗೆ ( ಒಬ್ಬರಿಗೆ ) | ₹170/- |
ಇಬ್ಬರಿಗೆ | ₹340/- |
ಮೂವರಿಗೆ | ₹510/- |
ನಾಲ್ವರಿಗೆ | ₹680/- |
ಐದು ಮಂದಿಗೆ | ₹850/- |
ಹಂತ 1: ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಫಲಾನುಭವಿಗಳ ಪಟ್ಚಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
https://ahara.kar.nic.in/Home/EServices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ, ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ. ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ
ಹಂತ 2: ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಗ್ರಾಮದಲ್ಲಿರುವ ರೇಷನ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ನಂಬರ್, ಹೆಸರು,ವಿಳಾಸ,ಕಾರ್ಡ್ ನ ವಿಧ ಹಾಗೂ ಕುಟುಂಬದ ಸದಸ್ಯರ ಸಂಖ್ಯೆ ತೋರಿಸುತ್ತದೆ,ಅದರಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
ಅನ್ನಭಾಗ್ಯ ಯೋಜನೆಯ ಹಣ ಪಡೆಯಲು 3 ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು?
- ಪಡಿತರ ಚೀಟಿಯಲ್ಲಿ ಇರುವ ಮುಕ್ಯಸ್ತನ ಹೆಸರಲ್ಲಿ ಒಂದು ಅಕೌಂಟ್ ಇರಬೇಕು
- ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ನ್ನೂ ಲಿಂಕ್ ಮಾಡಿರಬೇಕು
- ನಿಮ್ಮ ಅಕೌಂಟ್ ಗೆ ಆಧಾರ್ ಕಾರ್ಡ್ ನ್ನೂ ಲಿಂಕ್ ಮಾಡಿರಬೇಕು ( NPCI map ಆಗಿರಬೇಕು)
ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದಿಯ ಎಂದು ತಿಳಿಯುವ ಲಿಂಕ್
ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ