ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಪಡಿತರ ಚೀಟಿ ಹಾಗೂ ಆಧಾರ್‌ಕಾರ್ಡ್ (Ration Card, Aadhaar Card) ಮೌಲ್ಯ ಇನ್ನಷ್ಟು ಹೆಚ್ಚಿಗೆ ಆಗಿದೆ. ಇದಕ್ಕೆ ಕಾರಣ ಸರ್ಕಾರದ ಗ್ಯಾರಂಟಿ ಯೋಜನೆಗಳು (Government Guarantee Scheme). ಈ ನಡುವೆ ಗೃಹ ಲಕ್ಷ್ಮಿ ಯೋಜನೆಗೆ (Gruhlaxmi scheme) ಪಡಿತರ ಚೀಟಿ ಕಡ್ಡಾಯವಾಗಿದ್ದು, ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳುವದರಲ್ಲಿ ನಿರತರಾಗಿರುವ ನಮ್ಮ ಜನ ಸಾಮಾನ್ಯರಿಗೆ ಒಂದು ಶಾಕಿಂಗ್ ಸುದ್ದಿ!!! ಅದೇನೆಂದರೆ, ತುಂಬಾ ಜನರ ರೇಷನ್ ಕಾರ್ಡ್ ರದ್ದಾಗಿವೆ ಹಾಗೂ ಇನ್ನೂ ರದ್ದಾಗುವ ಸಾದ್ಯತೆ ಇವೆ. ಯಾವೆಲ್ಲ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿ ಕೊಡುತ್ತೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಶಾಕ್ ಸರ್ಕಾರ ಕೊಟ್ಟ
ರಾಜ್ಯದಲ್ಲಿ 1.27 ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು, 4.36 ಕೋಟಿ ಜನರಿಗೆ ಅನುಕೂಲವಾಗಿದೆ. ಆದರೆ, ಬಿಪಿಎಲ್ ಗೆ ಅರ್ಹರಲ್ಲದ ಫಲಾನುಭವಿಗಳು ಉಚಿತ ಆಹಾರ ಧಾನ್ಯ ಪಡೆಯುತ್ತಿದ್ದಾರೆ ಎಂಬ ದೂರಿನ ಅನ್ವಯ ಬಿಪಿಎಲ್ ಕಾರ್ಡಿಗೆ ಅರ್ಹರಲ್ಲದ ಫಲಾನುಭವಿಗಳ ಸೂಕ್ತ ದಾಖಲೆಗಳನ್ನು ಪಡೆದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬರೋಬರಿ 4.59 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದೆ
ಕಳೆದ ವರ್ಷ 2022 ರಲ್ಲಿ ರಾಜ್ಯದಲ್ಲಿ ಬರೋಬ್ಬರಿ 4 ಲಕ್ಷ ರೇಷನ್ ಕಾರ್ಡ್ಗಳನ್ನು ರದ್ದು ಮಾಡಿ ಸುಮಾರು 13 ಕೋಟಿ ರೂಪಾಯಿ ಬಂಡವನ್ನು ವಸೂಲಿ ಮಾಡಿದ್ದಾರೆ. ಅದೇ ಪ್ರಕಾರ ಈ ವರ್ಷವೂ ಸಹಿತ ಚುರುಕಿನ ಕಾರ್ಯಾಚರಣೆ ಮೂಲಕ ಬಿಪಿಎಲ್ ಕಾರ್ಡಿಗೆ ಅರ್ಹರಲ್ಲದ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಮೂಲಕ ಅರ್ಹ ಫಲಾನುಭಗಳಿಗೆ ಹೆಚ್ಚಿನ ಸೌಲಭ್ಯಗಳ ಲಾಭ ಆಗುವಂತೆ ನೋಡಿಕೊಳ್ಳುವ ಭರವಸೆಯನ್ನು ಇಲಾಖೆ ಹೊಂದಿದೆ.
ಈ ತಿಂಗಳು ರದ್ದು ಮಾಡಲಾದ ರೇಷನ್ ಕಾರ್ಡ್ ಗಳ ಪಟ್ಟಿ ಕೆಳಗಿದೆ ನಿಮ್ಮ ಕಾರ್ಡ್ ಸ್ಥಿತಿ ಚೆಕ್ ಮಾಡಿಕೊಳ್ಳಿ
ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ನೋಡುವ ವಿಧಾನ :
ಹಂತ 1: ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ತೆರಳಬೇಕು ಅದಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :
https://ahara.kar.nic.in/Home/EServices
ಹಂತ 2: ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
ನಂತರ ಈ ಪಡಿತರ ಚೀಟಿ ಎಂಬ ಆಯ್ಕೆಯಲ್ಲಿ ರದ್ದು ಮಾಡಲಾದ/ತಡೆಹಿಡಿಯಲಾದ ಪಡಿತರ ಚೀಟಿಯ ಪಟ್ಟಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 3: ನಂತರ ನಿಮಗೆ ಲಿಸ್ಟ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಿಂಗಳು ಹಾಗೂ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ ನಂತರ ನೀವು ರದ್ದಾದ ಪಡಿತರ ಚೀಟಿಯ ಪಟ್ಟಿಯನ್ನು ನೋಡಬಹುದು, ಅದರಲ್ಲಿ ರದ್ದು ಆಗಿರುವುದಕ್ಕೆ ಕೆಲವೊಮ್ಮೆ ಕಾರಣವನ್ನು ಕೂಡ ನೀಡಲಾಗಿರುತ್ತದೆ.
Ration card ಸ್ಥಿತಿಯನ್ನು ಚೆಕ್ ಮಾಡಲು ಕೆಳಗಿನ ಸಲಹೆಗಳನ್ನು ಅನುಸರಿಸಿ:
ಹಂತ 1: ಮೊದಲಿಗೆ,ಕರ್ನಾಟಕ ಸರ್ಕಾರದ “ಮಾಹಿತಿ ಕಣಜ” website ಗೆ ಹೋಗಿ.
https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010
ಹಂತ 2: My Ration card details ವಿವರಗಳ ಪುಟ ತೆರೆದುಕೊಳ್ಳುತ್ತದೆ.
ಹಂತ 3: ನಂತರ ನಿಮ್ಮ ಜಿಲ್ಲೆ ಮತ್ತು ನಿಮ್ಮ ration card ಅಲ್ಲಿ ಇರುವ 12 ಸಂಖ್ಯೆಯ ನಂಬರ್ ಅನ್ನು ನಮೂದಿಸಿ. ನಂತರ ಸಲ್ಲಿಸು/submit ಇದಲ್ಲಿ ಕ್ಲಿಕ್ ಮಾಡಿ. ಅದು ಆದ ಬಳಿಕ my Ration shop details/ನನ್ನ ಪಡಿತರ ಅಂಗಡಿ ವಿವರದ ಪುಟ ತೆರೆಯುತ್ತದೆ. ನಂತರ card status/ಕಾರ್ಡ್ ಸ್ಥಿತಿ ಸಕ್ರಿಯ/active ಎಂದು ತೋರಿಸಿದರೆ ನಮ್ಮ Ration card ಚಾಲ್ತಿ ಇದೆ ಎಂದು ತಿಳಿಯಬಹುದಾಗಿದೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ