ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಜಿಯೋ ಏರ್ ಫೈಬರ್(Jio Air Fiber) ನ ಹೊಸ ಸೇವೆಯ ಸೌಲಭ್ಯದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
ಹೌದು, ಇದೀಗ ಜಿಯೋ ಭಾರತೀಯರಿಗೆ ಗುಡ್‌ನ್ಯೂಸ್ ಒಂದನ್ನು ನೀಡಿದೆ. ಇದು ಭಾರತೀಯರು ಸಂತಸ ಪಡುವ ಶುಭ ಸುದ್ದಿ ಎಂದೇ ಹೇಳಬಹುದಾಗಿದೆ. ಅದು ಏನೆಂದು ಯೋಚನೆ ಮಾಡುತ್ತಿರುವಿರೆ, ಅದುವೇ ಜಿಯೋ ಏರ್ ಫೈಬರ್(Jio Air Fiber ) ತನ್ನ ಸೇವೆಗಳನ್ನು ಈಗ ಭಾರತದ ಎಂಟು ನಗರಗಳಲ್ಲಿ ಈ ಸೇವೆ ಲಭ್ಯ ಮಾಡುತ್ತಿದೆ. ಅಷ್ಟೇ ಅಲ್ಲದೆ ಗ್ರಾಹಕರು 1Gbps ವೇಗದಲ್ಲಿ ಈ ಸೌಲಭ್ಯ ಪಡೆದುಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಇಲ್ಲಿ ಕ್ಲಿಕ್ ಮಾಡಿ ಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಜಿಯೋ ಏರ್‌ಫೈಬರ್(Jio Air Fiber)
ಜಿಯೋ ಏರ್‌ಫೈಬರ್(Jio Air Fiber ) ಅಂದರೆ ಯಾವುದೇ ತಂತಿಗಳಿಲ್ಲದೆ ಫೈಬರ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ವೇಗವನ್ನು ಗಾಳಿಯಲ್ಲಿ ಒದಗಿಸುವ ಗುರಿಯನ್ನು ಹೊಂದಿದೆ. ಇದು ವೈರ್‌ಲೆಸ್ ಇಂಟರ್ನೆಟ್ (Wireless Internet) ಸೇವೆಯಾಗಿದ್ದು ಅದು ಕಂಪನಿಯ 5G ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಕಷ್ಟವಾದ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತದೆ.
ನೀವು ಹಳೆಯ ನೆಟ್‌ಸೆಟರ್ ಅಥವಾ ಇಂಟರ್ನೆಟ್ ಡಾಂಗಲ್ ಅನ್ನು ಬಳಸಿರಬಹುದು, ಆದರೆ ಇದು ಅದರ pro max ಆವೃತ್ತಿಯಾಗಿದೆ. ಇದು FTTH ವೈರ್ಡ್ ಸಂಪರ್ಕದ ಬದಲಿಗೆ ಮನೆಗಳಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ತರಲು Jio ನ 5G ನೆಟ್ವರ್ಕ್ ಅನ್ನು ಬಳಸಲಾಗುತ್ತದೆ .
JioAirFiber, JioFiber ನಂತಹ ಫೈಬರ್-ಆಪ್ಟಿಕ್ ಸಂಪರ್ಕಗಳಂತೆಯೇ ಹೆಚ್ಚಿನ ವೇಗದ ಸಂಪರ್ಕವನ್ನು ನೀಡುತ್ತದೆ. ಆದರೆ, ಈ ಹೊಸ ಏರ್‌ಫೈಬರ್ ಯಾವುದೇ ವೈರಿಂಗ್ ಅಗತ್ಯವಿಲ್ಲದೇ ವೈಯಕ್ತಿಕ wifi ನೆಟ್‌ವರ್ಕ್‌ಗಳನ್ನು ಸ್ಥಾಪಿಸಲು ಟ್ರೂ 5g ತಂತ್ರಜ್ಞಾನವನ್ನು ಬಲಿಸಿಕೊಳ್ಳುತದೆ. ಮತ್ತು ಬಳಕೆದಾರರು ಇದರ ಸೆಟಪ್ ಸರಳವಾದ ಪ್ಲಗ್ ಮತ್ತು ಪ್ಲೇ ಕಾರ್ಯವನ್ನು ಒಳಗೊಂಡಿರುತ್ತದೆ, ಬಳಕೆದಾರರು ತಮ್ಮ ವೈ-ಫೈ ಹಾಟ್‌ಸ್ಪಾಟ್(Wifi,Hotspot) ಗಳನ್ನು ಸಲೀಸಾಗಿ ರಚಿಸಲು ಅನುಕೂಲ ಮಾಡಿಕೊಡುತ್ತದೆ.
ಜಿಯೋ ಏರ್ ಫೈಬರ್ ಈ ನಗರಗಳಲ್ಲಿ ಲಭ್ಯ :
ಇನ್ನೂ ಜಿಯೋ ಏರ್ ಫೈಬರ್ ಸೇವೆಗಳು ಯಾವೆಲ್ಲಾ ನಗರಗಳಲ್ಲಿ ಲಭ್ಯವಿದೆ ಎಂದು ತಿಳಿಯುವುದಾದರೆ, ಜಿಯೋ ದೇಶಾದ್ಯಂತ ಏರ್‌ಫೈಬರ್ ಸೇವೆಯನ್ನು ಪರಿಚಯಿಸುತ್ತಿದೆಯಾದರೂ ಆರಂಭದಲ್ಲಿ ಕೆಲವು ನಗರಗಳಲ್ಲಿ ಮಾತ್ರ ಸೇವೆಯನ್ನು ನೀಡುತ್ತಿದೆ. ಅಂದರೆ, ಈ ಸೇವೆ ಇದೀಗ 8 ನಗರಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿದಿದೆ. ಆ ಲಭ್ಯವಿರುವ ನಗರಗಳು ಈ ಕೆಳಗಿನಂತೆ ಇರುತ್ತದೆ.
ಅಹಮದಾಬಾದ್
ಬೆಂಗಳೂರು
ಚೆನ್ನೈ
ದೆಹಲಿ
ಹೈದರಾಬಾದ್
ಕೋಲ್ಕತ್ತಾ
ಮುಂಬೈ
ಪುಣೆ
ಜಿಯೋ ಏರ್‌ಫೈಬರ್ ಅನ್ನು ಬುಕ್ ಮಾಡಬೇಕು ಎಂದು ಬಯಸಿದರೆ, ಮೊದಲನೆಯದಾಗಿ ನಿಮ್ಮ ಪ್ರದೇಶದಲ್ಲಿ ಜಿಯೋ ಫೈಬರ್ ಲಭ್ಯವಿದೆಯೇ ಎಂದು ಪರಿಶೀಲಿಸಲು ಜಿಯೋ ವೆಬ್‌ಸೈಟ್ (Jio website), ಮೈ ಜಿಯೋ ಆಪ್‌ನಲ್ಲಿ(My Jio App) ತಿಳಿದುಕೊಳ್ಳಿ.ಅಥವಾ ನಿಮ್ಮ ಹತ್ತಿರದ ಜಿಯೋ ಸ್ಟೋರ್‌ಗೆ(Jio store) ಭೇಟಿ ನೀಡುವ ಮೂಲಕ ನೀವು ಹೊಸ ಸಂಪರ್ಕವನ್ನು ಬುಕ್ ಮಾಡಬಹುದು.
ಜಿಯೋ ಏರ್ ಫೈಬರ್ ಪ್ಲಾನ್ ಗಳ ದರ ಹೀಗಿದೆ :
ಜಿಯೋ ಏರ್‌ಫೈಬರ್ ಪ್ಲ್ಯಾನ್ ನೋಡುವುದಾದರೆ, ಜಿಯೋ ಕ್ರಮವಾಗಿ 599ರೂ, 899ರೂ, ಮತ್ತು 1199 ರೂ. ಬೆಲೆಗಳೊಂದಿಗೆ ಮೂರು ಯೋಜನೆಗಳನ್ನು ಪರಿಚಯಿಸಿದೆ. JioFiber HD ಯಲ್ಲಿ 550 ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್‌ಗಳನ್ನು ಸಹ ನೀಡುತ್ತದೆ, ಬಳಕೆದಾರರು Netflix, Disney+ Hotstar, Sony Liv, Zee5, JioCinema, SunNXT ನಂತಹ 16 ಕ್ಕೂ ಹೆಚ್ಚು OTT ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು. ಕಂಪನಿಯು Wi-Fi ರೂಟರ್, 4k ಸ್ಮಾರ್ಟ್ ಸೆಟ್ ಟಾಪ್ ಬಾಕ್ಸ್ ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಧ್ವನಿ ರಿಮೋಟ್ ಅನ್ನು ಸಹ ನೀಡುತ್ತಿದೆ.
ಹಾಗೆಯೇ 100 Mbps ವರೆಗಿನ ಇಂಟರ್ನೆಟ್ ವೇಗವನ್ನು ಸಹ ಇದು ಒದಗಿಸುತ್ತವೆ. 1199ರೂ. ಯೋಜನೆಯು ನೆಟ್‌ಫ್ಲಿಕ್ಸ್ (Netflix ), ಅಮೆಜಾನ್ ಪ್ರೈಮ್ (Amazon Prime) ಮತ್ತು ಜಿಯೋಸಿನಿಮಾ ಪ್ರೀಮಿಯಂಗೆ /Jio cienema priemium)ಪೂರಕ ಚಂದಾದಾರಿಕೆಗಳನ್ನು ನೀಡುತ್ತದೆ.
Jio AirFiber Max ಯೋಜನೆಯು ತಿಂಗಳಿಗೆ 1,499 ರೂಗಳಿಗೆ 300Mbps ನಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತದೆ, ಆದರೆ ರೂ 2,499 ಮತ್ತು ರೂ 3,999 ಯೋಜನೆಗಳು ಕ್ರಮವಾಗಿ 500 Mbps ಮತ್ತು 1000 Mbps ಗರಿಷ್ಠ ವೇಗವನ್ನು ಹೊಂದಿದೆ. ಮತ್ತು ಈ ಯೋಜನೆಗಳು ಆಯ್ದ ಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ.
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ