ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಓನ್ ಪ್ಲಸ್ ನ ಮೊದಲ ಫೋಲ್ಡಬಲ್ ಫೋನ್(one plus Foldable phone) ಆದ ಓನ್ ಪ್ಲಸ್ ಓಪನ್(One plus open) ಮೊಬೈಲ್ ಫೋನ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಹೊಸ ಮೊಬೈಲಿನ ವೈಶಿಷ್ಟಗಳನ್ನು?, ಇದರ ಬೆಲೆ ಎಷ್ಟು?, ಕ್ಯಾಮೆರಾ ಹೇಗಿದೆ ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಒನ್‌ಪ್ಲಸ್ ಓಪನ್ ಫೋನ್(OnePlus Open phone) :
ನಮಗೆ ಎಲ್ಲಾ ಗೊತ್ತಿರುವ ಹಾಗೆ ಇತ್ತೀಚೆಗಷ್ಟೆ ಸ್ಯಾಮ್ಸಂಗ್ ಗ್ಯಾಲಕ್ಸಿ Z Fold 5 ಬಿಡುಗಡೆ ಕಂಡಿದೆ. ಈಗ ಸದ್ಯ ಬಿಡುಗಡೆ ಆದ ಸ್ಯಾಮ್ಸಂಗ್ ಗ್ಯಾಲಕ್ಸಿ Z Fold 5 ಗೆ ಪೈಪೋಟಿ ಕೊಡಲೆಂದೆ ಫೋಲ್ಡಬಲ್ ಸ್ಮಾರ್ಟ್‌ಫೋನ್(Foldable smartphone) ಒನ್‌ಪ್ಲಸ್ ಓಪನ್(One plus open) ಬಿಡುಗಡೆ ಆಗಿದೆ .
ಇದು ಓನ್ ಪ್ಲಸ್ ಸ್ಮಾರ್ಟ್ ಫೋನ್ ಪ್ರಿಯರಿಗೆ ಸಿಹಿ ಸುದ್ದಿ ಆಗಿದೆ. ಅಕ್ಟೋಬರ್ 19 ರಂದು ಭಾರತ ಮತ್ತು ವಿಶ್ವಾದ್ಯಂತ ಮಾರುಕಟ್ಟೆಗಳಲ್ಲಿ ಲಾಂಚ್ ಆಗಿ ಗ್ರಾಹಕರನ್ನು ಬರಿ ತನ್ನ ನೋಟದಿಂದ ಸೆಳೆದುಕೊಂಡಿತ್ತು. ಈ ಫೋಲ್ಡಬಲ್ ಸ್ಮಾರ್ಟ್‌ಫೋನ್ ಇದೀಗ ಕುತೂಹಲ ಮೀರಿ ಅಕ್ಟೋಬರ್ 27 ರಂದು ಭಾರತದಲ್ಲಿ ತನ್ನ ಮೊದಲ ಮಾರಾಟವನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಫೋಲ್ಡಬಲ್ ಫೋನ್‌ಗಳ ಸಾಲಿನಲ್ಲಿ ವಿಶೇಷ ಎನಿಸಿಕೊಂಡಿದೆ.
ಹೌದು ಒನ್‌ಪ್ಲಸ್ (Oneplus) ಕಂಪನಿಯ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಒನ್‌ಪ್ಲಸ್ ಓಪನ್(One plus open) ಇದಾಗಿದೆ. ಹಾಗಾದ್ರೆ ಬನ್ನಿ ಒನ್‌ಪ್ಲಸ್ ಓಪನ್ ಫೀಚರ್ಸ್ ಬಗ್ಗೆ ತಿಳಿದುಕೊಳ್ಳೋಣ.
ಈ ಹೊಸ ಫೋನಿನ ವೈಶಿಷ್ಟ್ಯಗಳು :
ಒನ್‌ಪ್ಲಸ್ ಓಪನ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ರ ಡಿಸ್ಪ್ಲೇ ಬಗ್ಗೆ ತಿಳಿಯುವುದಾದರೆ , ಈ ಸ್ಮಾರ್ಟ್‌ಫೋನ್ 7.82 ಇಂಚಿನ ಫ್ಲೆಕ್ಸಿ ಫ್ಲೂಯಿಡ್ ಅಮೋಲೆಡ್ (Flexy Flouied) Amoled)ಮುಖ್ಯ ಡಿಸ್‌ಪ್ಲೇಯನ್ನು (Main Display) ಹೊಂದಿದೆ. 2800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ (Maximum brightness) ಆಯ್ಕೆ ಪಡೆದುಕೊಂಡಿದೆ.
ಇದರೊಂದಿಗೆ 6.31 ಇಂಚಿನ ಕವರ್ ಡಿಸ್‌ಪ್ಲೇ (Cover display) ಹೊಂದಿದ್ದು, ಇದರಲ್ಲಿ ಗ್ರಾಹಕರು 2K ರೆಸಲ್ಯೂಶನ್ ಮತ್ತು 431 ppi ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಎರಡೂ ಡಿಸ್‌ಪ್ಲೇಗಳು 120Hz ರಿಫ್ರೆಶ್ ರೇಟ್ (Refresh rate) ಆಯ್ಕೆ ಪಡೆದುಕೊಂಡಿವೆ.
ಈ ಫೋನ್ ಆಂಡ್ರಾಯ್ಡ್ 13 (Android 13 ) ಆಧಾರಿತ ಎಲ್ಲಾ ಹೊಸ ಆಕ್ಸಿಜನ್ ಓಎಸ್ (Oxygen OS)13.2 ನಲ್ಲಿ ರನ್ ಆಗುತ್ತಿದೆ.
ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್(Snapdragon 8+ Gen 2 SoC )ನಿಂದ ಕಾರ್ಯನಿರ್ವಹಿಸಲಿದೆ.
ಒನ್‌ಪ್ಲಸ್ ಓಪನ್ ಸ್ಮಾರ್ಟ್ ಫೋನ್ ಕ್ಯಾಮೆರಾ
ಈ ಫೋನಿನ ಹಿಂಭಾಗವು ಹ್ಯಾಸೆಲ್‌ಬ್ಲಾಡ್‌ನಿಂದ ಟ್ಯೂನ್ ಮಾಡಲಾದ ಟ್ರಿಪಲ್ ಕ್ಯಾಮೆರಾ ಸೆಟ್ಅಪ್(Triple camera setup) ಅನ್ನು ಒಳಗೊಂಡಿರುತ್ತದೆ.
ಇದರಲ್ಲಿ 48MP ಪ್ರಾಥಮಿಕ ಕ್ಯಾಮೆರಾವನ್ನು(Primary camera), 64MP ಟೆಲಿಫೋಟೋ ಕ್ಯಾಮೆರಾ(Teliphoto camera) ಮತ್ತು 48MP ಅಲ್ಟ್ರಾ-ವೈಡ್ ಕ್ಯಾಮೆರಾ(Ultra wide camera) ದಿಂದ ಕಾಣಿಸಿಕೊಂಡಿದೆ.
ಇದರೊಂದಿಗೆ 20 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಕೆಂಡರಿ ಸೆಲ್ಫಿ ಕ್ಯಾಮೆರಾ(Secondary selfie camera) ಆಯ್ಕೆ ನೀಡಲಾಗಿದೆ.
ಈ ಫೋನ್ 60 FPS ನಲ್ಲಿ 4K ಗುಣಮಟ್ಟದಲ್ಲಿ ವಿಡಿಯೋಗಳನ್ನು ರೆಕಾರ್ಡ್( For Video recording) ಮಾಡಬಹುದಾಗಿದೆ.
ಒನ್‌ಪ್ಲಸ್ ಓಪನ್ ಬ್ಯಾಟರಿ ಹಾಗೂ ಇತರೆ ಫೀಚರ್ ಗಳು:
ಈ ಫೋನ್ 4,805 mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ (Battary pack)ಮಾಡುತ್ತದೆ.
67W ವೇಗದ ಚಾರ್ಜಿಂಗ್ (Fast charging) ಅನ್ನು ಬೆಂಬಲಿಸುತ್ತದೆ.
ಅಂದರೆ ಸರಿಸುಮಾರು 42 ನಿಮಿಷಗಳಲ್ಲಿ ಬ್ಯಾಟರಿಯು 1% ರಿಂದ 100% ವರೆಗೆ ಚಾರ್ಜಿಂಗ್ ಆಗಲಿದೆ.
ಅಷ್ಟೇ ಅಲ್ಲದೆ ಒಂದೇ ಚಾರ್ಜ್‌ನಲ್ಲಿ ಒಂದು ದಿನದ ಬ್ಯಾಕಪ್ ನೀಡಲಿದೆ.
ಒನ್‌ಪ್ಲಸ್ ಓಪನ್ ಫೋನ್ ಬೆಲೆ(price) ಹಾಗೂ ಲಭ್ಯತೆ :
ಭಾರತದಲ್ಲಿ ಈ ಫೋನ್‌ನ 16GB + 512GB ವೇರಿಯಂಟ್‌ಗೆ 1,39,999ರೂ.ಗಳನ್ನು ನಿಗದಿ ಮಾಡಲಾಗಿದೆ.
ಈ ಸ್ಮಾರ್ಟ್ ಫೋನ್ ಎಮರಾಲ್ಡ್ ಡಸ್ಕ್ ಮತ್ತು ವಾಯೇಜರ್ ಕಪ್ಪು ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.
ಈ ವಿಶೇಷ ಫೋನ್ ಅನ್ನು ನೀವು ಒನ್‌ಪ್ಲಸ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ.
ಅದರ ಜೊತೆಗೆ ಅಮೆಜಾನ್ (Amazon)ಮತ್ತು ರಿಟೆಲರ್ ಸ್ಟೋರ್ (Retailor Store)ಮೂಲಕವೂ ಖರೀದಿ ಮಾಡಬಹುದು.
ಇದರೊಂದಿಗೆ ಮುಂಗಡ-ಆರ್ಡರ್‌ಗಳು(Pre booking) ಇಂದಿನಿಂದ ಆರಂಭ ಆಗಿದ್ದು, ಗ್ರಾಹಕರು ಆಯ್ದ ಡಿವೈಸ್‌ಗಳಲ್ಲಿ 8,000ರೂ.ಗಳ ಟ್ರೇಡ್-ಇನ್ ಬೋನಸ್(Trade in bonous) ಮತ್ತು ಹೆಚ್ಚುವರಿಯಾಗಿ ಐಸಿಐಸಿಐ ಬ್ಯಾಂಕ್(ICICI bank) ಮತ್ತು ಒನ್‌ಕಾರ್ಡ್(onecard) ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5,000ರೂ.ಗಳ ರಿಯಾಯಿತಿಯನ್ನೂ ಸಹ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಹೊಸ ಫೋನ್ ಖರೀದಿ ವೇಳೆ ಹಣವನ್ನೂ ಉಳಿತಾಯ ಮಾಡಬಹುದಾಗಿದೆ.
ಓನ್ ಪ್ಲಸ್ ನ ಮೊದಲ ಫೋಲ್ಡಬಲ್ ಫೋನ್(Foldable phone) ಓನ್ ಪ್ಲಸ್ ಓಪನ್ (One plus open) ಮೊಬೈಲ್ ಫೋನ್ ಖರೀದಿ ಮಾಡಿ ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ