Lingayath Loan Scheme- ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲ & ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

lingayath loan scheme

ಎಲ್ಲರಿಗೂ ನಮಸ್ಕಾರ ಇವತ್ತಿನ ವರದಿಯಲ್ಲಿ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಬಗ್ಗೆ ಮತ್ತು ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನೀವೇನಾದರೂ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಸೌಲಭ್ಯ ಹಾಗೂ ಸಬ್ಸಿಡಿ ಯೋಜನೆಗಳ ಕರ್ನಾಟಕ ಸರ್ಕಾರದಿಂದ ಪಡೆಯಬಹುದು. ಈ ಕುರಿತು ಸಂಪೂರ್ಣವಾದ ವರದಿಯನ್ನು ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ 5 ಯೋಜನೆಗಳಿಗೆ ಸಾಲ, ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ, ಅರ್ಹರು 30/10/2023 ರೊಳಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು.

ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ 2022-23ನೇ ಸಾಲಿಗೆ ಅನುಮೋದಿಸಿದ ಕ್ರಿಯಾ ಯೋಜನೆಯಂತೆ 5 ಯೋಜನೆಗಳಿಗೆ ಸಾಲ ಹಾಗೂ ಸಹಾಯಧನ ಸೌಲಭ್ಯ ನೀಡಲಾಗುತ್ತಿದೆ. ಇದಕ್ಕಾಗಿ ವೀರಶೈವ ಲಿಂಗಾಯತ ಸಮುದಾಯದ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ಪ್ರವರ್ಗ-III ಬಿ ವರ್ಗಕ್ಕೆ ಸೇರಿದವರಾಗಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ ಹೊಂದಿರಬೇಕು. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು ಎಂದು ಪ್ರಕಟಣೆ ತಿಳಿಸಿದೆ.

ವೀರಶೈವ ಲಿಂಗಾಯತ ಮತ್ತು ಸಮುದಾಯದ ಜನರಿಗೆ ವಿವಿಧ ಯೋಜನೆಗಳ ಸಾಲ ಸೌಲಭ್ಯಗಳ ಪಟ್ಟಿಯು ಈ ಕೆಳಗಿನಂತೆ ಇವೆ :

lingayath imag

ಬಸವ ಬೆಳಗು ಯೋಜನೆ :

ಈ ಯೋಜನೆಯು ಶೈಕ್ಷಣಿಕ ಸಾಲವನ್ನು ಒದಗಿಸುತ್ತದೆ. ಮತ್ತು ಲಿಂಗಾಯತ ಸಮುದಾಯದ ಜನರಿಗೆ ಸೇರುತ್ತದೆ, ವೃತ್ತಿಪರ ಕೋರ್ಸ್ ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ಸಾಲದ ಯೋಜನೆ ಉಪಯೋಗವಾಗುತ್ತದೆ. ಅರ್ಹ ಅಭ್ಯರ್ಥಿಗಳು ಕುಟುಂಬದ ಆದಾಯವು 3.5 ಲಕ್ಷದ ಮಿತಿಯಲ್ಲಿ ಇರಬೇಕು .
ವಿದ್ಯಾರ್ಥಿಗಳು ವಿವಿಧ 28 ವೃತ್ತಿಪರ ಕೋರ್ಸ್ ಗಳಲ್ಲಿ ಏನಾದರೂ ವ್ಯಾಸಂಗ ಮಾಡುತ್ತಿರುವವರು ಇದ್ದರೆ ಅಂತವರಿಗೆ 2% ರಷ್ಟು ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ

ಬಸವ ಬೆಳಕು ಯೋಜನೆ 2023 23ನೇ ಸಾಲಿನಲ್ಲಿ ಸಾಲ ಪಡೆದಿದ್ದರೆ ವಿದ್ಯಾರ್ಥಿಗಳು ಎರಡನೇ ಕಂತಿನ ಹೊಸ ಸಾಲವನ್ನು ಪಡೆಯಲು ವ್ಯಾಸಂಗ ದೃಢೀಕರಣ ಪತ್ರ ಮತ್ತು ಹಿಂದಿನ ವರ್ಷದ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಜೀವ ಜಲ ಯೋಜನೆ :

ಈ ಯೋಜನೆಯು ನೀರಾವರಿ ಸೌಲಭ್ಯ ಒದಗಿಸುತ್ತದೆ. ಮತ್ತು ಲಿಂಗಾಯತ ಸಮುದಾಯದ ಜನರಿಗೆ ಸೇರುತ್ತದೆ. ಮತ್ತು ಈ ಯೋಜೆಯಡಿಯಲ್ಲಿ
ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸುವ ಮುಖಾಂತರ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಈ ಯೋಜನೆಯನ್ನೂ ಪಡೆಯುವ ಅರ್ಹರು ಏನಾದರೂ ಗ್ರಾಮಾಂತ ಪ್ರದೇಶದವರಾಗಿದ್ದರೆ ವಾರ್ಷಿಕ ಆದಾಯ 98,000 ಮತ್ತು ಪಟ್ಟಣ  ಪ್ರದೇಶದವರಾಗಿದ್ದರೆ ವಾರ್ಷಿಕ ಆದಾಯ 1,20,000 ಮಿತಿಯ ಒಳಗೆ ಇರಬೇಕು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

ಕಾಯಕ ಕಿರಣ ಯೋಜನೆ :

ಕಾಯಕಕಿರಣ ಯೋಜನೆಯಡಿ ವೀರಶೈವ-ಲಿಂಗಾಯತ ಸಮುದಾಯದ ನಿರುದ್ಯೋಗಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳ ಅನುಸಾರ ಈ ಕೆಳಕಂಡಂತೆ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲಾಗುತ್ತದೆ. ಘಟಕ ವೆಚ್ಚ ರೂ.1,00,000/- ಗಳಿಗೆ ಶೇ.20ರಷ್ಟು ಗರಿಷ್ಠ ರೂ.20,000/-ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.80ರಷ್ಟು ಗರಿಷ್ಠ ರೂ.80,000/-ಗಳನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ.

ಘಟಕ ವೆಚ್ಚ ರೂ.2,00,000/- ಗಳಿಗೆ ಶೇ.15ರಷ್ಟು ಗರಿಷ್ಠ ರೂ.10,000/-ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.15ರಷ್ಟು ಗರಿಷ್ಠ ರೂ.1,70,000/-ಗಳನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ .

ಇದನ್ನೂ ಓದಿ – ಕರ್ನಾಟಕ ರಾಜ್ಯಕ್ಕೆ 50 ವರ್ಷಗಳ ಸಂಭ್ರಮ: ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!

ಸ್ವಯಂ ಉದ್ಯೋಗ ಸಾಲ ಯೋಜನೆ :

ಈ ಯೋಜನೆಯ ಅಡಿಯಲ್ಲಿ ಕೃಷಿ ಅವಲಂಬಿತ ಚಟುವಟಿಕೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಮತ್ತು ಲಿಂಗಾಯತ ಸಮುದಾಯದ ಜನರಿಗೆ ಸೇರುತ್ತದೆ. ಈ ಯೋಜೆಯಡಿಯಲ್ಲಿ ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ ನಿರುದ್ಯೋಗ ಇರುವವರಿಗೆ ಸ್ವಯಂ ಉದ್ಯೋಗವನ್ನು ಕಲ್ಪಿಸಿಕೊಳ್ಳಲು ಅವರು ಕೈಗೊಳ್ಳುವ ಕೃಷಿ ಅಥವಾ ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಯಂತ್ರೋಪಕರಣಗಳನ್ನು ಕೊಳ್ಳುವ ಅರ್ಥಿಕ ಚಟುವಟಿಕೆಗಳು/ ಉದ್ಯಮಗಳಿಗೆ ಸಾಲವನ್ನು ನೀಡಲಾಗುತ್ತದೆ.

ನೀವೇನಾದರೂ ವಾಣಿಜ್ಯ ಬ್ಯಾಂಕ್ಗಳ ಮೂಲಕ ಸಾಲ ಪಡೆದಿದ್ದಲ್ಲಿ ನಿಗಮದಿಂದ 20 %ರಷ್ಟು ಅಥವಾ ಗರಿಷ್ಟ ರೂ. 100 ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುತ್ತದೆ.

ಸ್ವಾವಲಂಭಿ ಸಾರಥಿ ಯೋಜನೆ :

ಈ ಯೋಜನೆಯಡಿಯಲ್ಲಿ ಹಳದಿ ಬೋರ್ಡ್‌ ಕಾರು ಖರೀದಿಗೆ  ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
ಮತ್ತು ಲಿಂಗಾಯತ ಸಮುದಾಯದ ಜನರಿಗೆ ಸೇರುತ್ತದೆ. ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ ನಿರುದ್ಯೋಗಿ ಚಾಲಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಭಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರ ವಾಹನ (ಹಳದಿ ಬೊರ್ಡ್) ಖರೀದಿಗೆ’
ಅನುಕೂಲ ಮಾಡಿಕೊಡುತ್ತದೆ.

ನೀವು ಈ ಯೋಜೆಯಡಿಯಲ್ಲಿ ಪಡೆಯುವ ಸಾಲಕ್ಕೆ ಶೇ.50ರಷ್ಟು ಅಥವಾ ಗರಿಷ್ಠ 300 ಲಕ್ಷಗಳ ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುತ್ತದೆ. ಉಳಿದ ಮೊತ್ತವನ್ನು ಬ್ಯಾಂಕ್/ ಹಣಕಾಸು ಸಂಸ್ಥೆಗಳ ಮೂಲಕ ಅವರು ವಿಧಿಸುವ ಚಾಲ್ತಿ ಬಡ್ಡಿದರದಲ್ಲಿ ಸಾಲ ಪಡೆಯಬಹುದಾಗಿದೆ.

ಇದನ್ನೂ ಓದಿ – ಬ್ಯಾಂಕ್ ನಲ್ಲಿ ಲೋನ್ ಮಾಡುವ ತುಂಬಾ ಜನರಿಗೆ ಸೀಕ್ರೆಟ್ ಮಾಹಿತಿ ಗೊತ್ತಿಲ್ಲ..! ತಪ್ಪದೇ ತಿಳಿದುಕೊಳ್ಳಿ

ವಿಭೂತಿ ಘಟಕ, ಖಾನಾವಳಿ ತೆರೆಯಲು ಸಾಲ ಸೌಲಭ್ಯ:

ವೀರಶೈವ-ಲಿಂಗಾಯತ ಸಮುದಾಯದವರು ವಿಭೂತಿಯನ್ನು ತಯಾರಿಸುವವರಿಗೆ ಸಾಲ ಮತ್ತು ಸಹಾಯಧನ ನೀಡುವ ಯೋಜನೆ ಇದಾಗಿದೆ.
ವಿಭೂತಿ ನಿರ್ಮಾಣ ಘಟಕ ನಿರ್ಮಿಸಲು ಘಟಕ ವೆಚ್ಚ ರೂ. 4.00 ಲಕ್ಷ ಇದರಲ್ಲಿ ರೂ.3,60,000/- “ನಾಟ ಮತ್ತು ರೂ. 40,000/- ಸಹಾಯಧನ ವಾರ್ಷಿಕ ಬಡ್ಡಿದರ ಶೇರ್ತ ದರದಲ್ಲಿ ನೆರವು ನೀಡಲಾಗುತ್ತದೆ.

ಭೋಜನಾಲಯ ಕೇಂದ್ರ ಸ್ಥಾಪನೆಗೆ ಸಮುದಾಯದ ಜನರು ಖಾನಾವಳಿ ಉದ್ಯಮ ವನ್ನು ಮಾಡಲು ಬಯಸಿದರೆ, ಹಂತವರಿಗೆ  ಈ ಯೋಜನೆಯಲ್ಲಿ ಸಾಲ ಮತ್ತು ಸಹಾಯಧನ ನೀಡಲಾಗುತ್ತದೆ. ಹೋಟೆಲ್ ಉದ್ದಿಮೆ ಕೈಗೊಳ್ಳಲು ಘಟಕ ವೆಚ್ಚ ರೂ. 5.00 ಲಕ್ಷ ಇದರಲ್ಲಿ ರೂ.4,60,000/- ಸಾಲ ಮತ್ತು ರೂ.10,000/- ಸಹಾಯಧನ ನೆರವು ನೀಡಲಾಗುತ್ತದೆ ಮತ್ತು ಫಲಾನುಭವಿಗಳು ತಮ್ಮ ಸ್ವಂತ ಹೆಸರಿನಲ್ಲಿ ಕನಿಷ್ಠ 20+30 ಅಳತೆಯುಳ್ಳ ನಿವೇಶನ ಹೊಂದಿರಬೇಕು.

ಈ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವ ವೀರಶೈವ ಲಿಂಗಾಯತ ಸಮುದಾಯದ ಅಭ್ಯರ್ಥಿಗಳು ಅಕ್ಟೋಬರ್ 30 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಮತ್ತು ಹೆಚ್ಚಿನ ಮಾಹಿತಿಗಾಗಿ https://kvldcl.karnataka.gov.in ವೆಬ್ ಸೈಟ್ ಅನ್ನು ಪರಿಶೀಲಿಸಿ .

ನೀವೇನಾದರೂ ಮೇಲೆ ತಿಳಿಸಿರುವಂತೆ ವೀರಶೈವ ಲಿಂಗಾಯತ ಹಾಗೂ 3B category ಗೆ ಸೇರಿದವರಾಗಿದ್ದರೆ ತಪ್ಪದೆ ಸಂಪೂರ್ಣ ಲೇಖನವನ್ನೂ ಓದಿ ಯೋಜನೆಗಳ ಉಪಯೋಗವನ್ನು  ನಿಮ್ಮದಾಗಿಸಿಕೊಳ್ಳಿ.

ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ – ಗೃಹಲಕ್ಷ್ಮಿ ಅರ್ಜಿ ಜೊತೆ ದಾಖಲೆ ಕೊಟ್ರು 10 ಲಕ್ಷ ಮಂದಿಗೆ ಸಿಕ್ಕಿಲ್ಲ ಹಣ, ನಿಮಗೂ ಹಣ ಬಂದಿಲ್ವಾ?? ಇಲ್ಲಿದೆ ವಿವರ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!