ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಬಿಗ್ ಬಾಸ್(BigBoss) ಮನೆಯಲ್ಲಿ ನಾಮಿನೇಷನ್ ಟಾಸ್ಕ್(nomination task) ನ ಜಿದ್ದಾಜಿದ್ದಿಯ ಕುರಿತಾದ ಮಾಹಿತಿಯನ್ನು ನೀಡಲಾಗುತ್ತದೆ. ಬಿಗ್ ಬಾಸ್ ಮನೆಯಲ್ಲಿ ನಾಲ್ಕನೇ ವಾರದ ನಾಮಿನೇಷನ್ ಟಾಸ್ಕ್ ಶುರುವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ನಾಮಿನೇಷನ್ ಟಾಸ್ಕ್ ನಲ್ಲಿ ಪ್ರತಾಪ್ ಮೇಲೆ ಮುಗಿಬಿದ್ದ ವಿನಯ್, ಕಾರ್ತಿಕ್:
ಬಿಗ್ ಬಾಸ್ ಮನೆಯಲ್ಲಿ ಬೆಳಗ್ಗೆ ವೇಕ್ಅಪ್ ಸಾಂಗ್ ಬರುತ್ತಿದ್ದಂತೆ ಎಲ್ಲರಿಗೂ ಆಚಾರ್ಯ ಒಂದು ಕಾದಿತ್ತು, ಮನೆಯ ತುಂಬೆಲ್ಲ ಬಲೂನ್ ಗಳು ತುಂಬಿಕೊಂಡಿದ್ದವು. ಎಲ್ಲರೂ ಕುತೂಹಲದಿಂದ ಅವುಗಳನ್ನು ಜೊತೆಯಲ್ಲಿ ಆಟವಾಡುತ್ತಾ ಮುಂಜಾನೆಯನ್ನು ಶುರು ಮಾಡಿದರು. ಟಾಸ್ಕ್ ಏನೆಂದರೆ ಬಲೂನ್ಗಳನ್ನು ಹೊಡೆದು ಅದರಲ್ಲಿರುವ ನಾಮಿನೇಷನ್ ಪಾಸ್‌ಗಳನ್ನು ಕಲೆಕ್ಟ್ ಮಾಡಿಕೊಳ್ಳಬೇಕು.
ಆಶ್ಚರ್ಯವೇನೆಂದರೆ ಮನೆಯಲ್ಲಿ ಪ್ರತಾಪ್ ಹೊರೆತುಪಡಿಸಿ ಯಾರಿಗೂ ನೋಮಿನೇಷನ್ ಪಾಸ್ ದೊರೆಯಲೇ ಇಲ್ಲ. ಅದನ್ನು ಗಮನಿಸಿದ ಕಾರ್ತಿಕ್, ವಿನಯ್ ಹಾಗೂ ಮೈಕಲ್ ನಾಮಿನೇಷನ್ ಪಾಸುಗಳನ್ನು ಪ್ರತಾಪ ಹತ್ತಿರ ತೋರಿಸು ಎಂದು ಕೇಳಿದರು. ಪ್ರತಾಪ್ ಎಷ್ಟೇ ಕೇಳಿದರೂ ಪಾಸನ್ನು ತೋರಿಸಲಿಲ್ಲ, ಕಾರ್ತಿಕ್ ಹಾಗೂ ಮೈಕಲ್ ಪ್ರತಾಪ್ ಮೇಲೆ ಹಾರಿ ಒಂದು ಪಾಸನ್ನು ಕಾರ್ತಿಕ್ ಅವರು ಕಸಿದುಕೊಂಡರು. ವಿನಯವರು ಪ್ರತಾಪ್ ಅವರನ್ನು ತುಂಬಾ ಮಾತಿನಿಂದ ರೇಗಿಸುತ್ತಿದ್ದರು, ಆದರೂ ಕೂಡ ಪ್ರತಾಪ್ ಆ ಮಾತುಗಳನ್ನು ತಲೆಗೆ ಹಾಕಿಕೊಳ್ಳದೆ ಮುನ್ನಡೆದರು.
ಇದನ್ನೂ ಓದಿ – Bigg Boss Kannada – ಇಡೀ ಮನೆನ ಎದುರಾಕ್ಕೊಂಡ್ರ ವಿನಯ್, ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೆ ಟಾಂಗ್
ಬಿಗ್ ಬಾಸ್ ಮನೆಗೆ ಮರಳಿದ ವರ್ತೂರ್ ಸಂತೋಷ್ :
ಹುಲಿಯ ಉಗುರಿನ ಪೆಂಡೆಂಟ್ ಅನ್ನು ಧರಿಸಿದ ಕಾರಣಕ್ಕಾಗಿ ಬಿಗ್ ಬಾಸ್ ಮನೆಯಿಂದ ಹೊರ ನಡೆದ ಸ್ಪರ್ದಿ, ವರ್ತೂರ್ ಸಂತೋಷ್ ಮತ್ತೆ ಬಿಗ್ ಬಾಸ್ ಮನೆಗೆ ದಾವಿಸಿದ್ದಾರೆ. ಎಲ್ಲಾ ಮನೆಯ ಸ್ಪರ್ಧಿಗಳಿಗೆ ಇದು ಆಶ್ಚರ್ಯ ಹಾಗೂ ಸಂತೋಷವನ್ನುಂಟು ಮಾಡಿದೆ.
ಬೇಲನ್ನು ಪಡೆದು ಸಂಜೆ 7:30 ಸುಮಾರಿಗೆ ವರ್ತುರ್ ಸಂತೋಷ್ ಅವರು ಹೊರಬಂದಿದ್ದಾರೆ.
ಹಳ್ಳಿಕಾರ್ ತಳಿಗಳ ಸಂರಕ್ಷಕನಾಗಿ, ಪ್ರಗತಿಪರ ರೈತನಾಗಿ ಗಮನ ಸೆಳೆದು ಹಳ್ಳಿಕಾರ್ ಒಡೆಯ ಶ್ರೀಮಂತ ರೈತರ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಸೀಸನ್ 10ನಲ್ಲಿ ಮತ್ತೆ ಹೇಗೆ ತನ್ನ ಆಟವನ್ನು ಆಡುತ್ತಾರೆ?, ಹಾಗೂ ಮತ್ತೆ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಾರ ಎಂದು ನೋಡಿ ಕಾಯಬೇಕಾಗಿದೆ.
ಇದನ್ನೂ ಓದಿ – ಕರ್ನಾಟಕ ರಾಜ್ಯಕ್ಕೆ 50 ವರ್ಷಗಳ ಸಂಭ್ರಮ: ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ