Job News : ರಾಜ್ಯ ಸರ್ಕಾರದಿಂದ ಸ್ಟಾಫ್ ನರ್ಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ – ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

kea staff nurse recruitment

ಎಲ್ಲರಿಗೂ ನಮಸ್ಕಾರ. ಇಂದಿನ ವರದಿಯಲ್ಲಿ, KEA ಕರ್ನಾಟಕ ಸ್ಟಾಫ್ ನರ್ಸ್ ನೇಮಕಾತಿ 2023ರ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಸ್ಟಾಫ್ ನರ್ಸ್ ನೇಮಕಾತಿ 2023:

KEA ಕರ್ನಾಟಕ ಸ್ಟಾಫ್ ನರ್ಸ್ ನೇಮಕಾತಿ (KEA karnataka Staff Nurse Requirements) ಅಡಿಯಲ್ಲಿ ನರ್ಸ್ ಆಫೀಸರ್ (Nurse officer) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ(Notification Out). ಈ ನೇಮಕಾತಿಯಲ್ಲಿ 100 ಹುದ್ದೆಗಳು ಖಾಲಿ ಇವೆ. ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಂದು ಅಂದರೆ 02.11.2023 ಆಗಿದೆ. ಆಸಕ್ತಿ ಹೊಂದಿದ ಅಭ್ಯರ್ಥಿಗಳು ತಡ ಮಾಡದೆ ಇಂದೆ ಅರ್ಜಿ ಸಲ್ಲಿಸಿರಿ. ಮತ್ತು ಅರ್ಹತೆ, ಅರ್ಜಿ ಶುಲ್ಕಗಳು ಮತ್ತು ಸಂಬಳದ ವಿವರಗಳ ಕುರಿತು ಪ್ರಮುಖ ಮಾಹಿತಿಯನ್ನುತಿಳಿದುಕೊಳ್ಳಲು ಸಂಪೂರ್ಣ ಲೇಖನದಲ್ಲಿ ಓದಿ ತಿಳಿಯಿರಿ.
ಇದು ಒಂದು ಉತ್ತಮ ನೇಮಕಾತಿ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕರ್ನಾಟಕ ಸ್ಟಾಫ್ ನರ್ಸ್ ನೇಮಕಾತಿ 2023ರ ಅವಲೋಕನ:

ಸಂಸ್ಥೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Exam Authority)(KEA)
ಹುದ್ದೆ : ಸ್ಟಾಫ್ ನರ್ಸ್​(Staff Nurse)
ಒಟ್ಟು ಹುದ್ದೆಗಳು : 100ಹುದ್ದೆಗಳು
ವಿದ್ಯಾರ್ಹತೆ : ನರ್ಸಿಂಗ್ ಸರ್ಟಿಫಿಕೇಟ್ ಹೊಂದಿರಬೇಕು (Nursing certificate)
ಮಾಸಿಕ ವೇತನ : ₹ 33,450-62,600 ರೂ
ಉದ್ಯೋಗದ ಸ್ಥಳ : ಬೆಂಗಳೂರು (Banglore)
ಅರ್ಜಿ ಸಲ್ಲಿಸಲು ಕೊನೆಯ ದಿನ : ನವೆಂಬರ್ 2, 2023.

ಇದನ್ನೂ ಓದಿ –ರಾಜ್ಯ ಸರ್ಕಾರದಿಂದ ಪುನೀತ್ ಹೃದಯ ಜ್ಯೋತಿ ಯೋಜನೆ ಜಾರಿ – ಇಲ್ಲಿದೆ ಕಂಪ್ಲೀಟ್ ಮಾಹಿತಿ | Puneeth Rajkumar Scheme

ಕರ್ನಾಟಕ ಸ್ಟಾಫ್ ನರ್ಸ್ ನೇಮಕಾತಿ 2023ಕೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ(KEA requirements) ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವವರು ರಾಜ್ಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ನರ್ಸಿಂಗ್ ಪ್ರಮಾಣ ಪತ್ರ (Nursing certificate) ಪಡೆದಿರಬೇಕು. ಇದರೊಂದಿಗೆ ರಿಜಿಸ್ಟರ್​ ನರ್ಸ್​(Register Nurse) ಕೂಡಾ ಆಗಿರಬೇಕು ಎಂದು ತಿಳಿಸಿದ್ದಾರೆ.

ವಯಸ್ಸಿನ ಮಾಹಿತಿ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನವೆಂಬರ್ 2 ಕ್ಕ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ಪರಿಶಿಷ್ಟ ಜಾತಿ ಮತ್ತು ಪಂಗಡ/ಪ್ರವರ್ಗ- I (SC ST/Category 1) ಅಭ್ಯರ್ಥಿಗಳಿಗೆ 5ವರ್ಷ ವಯೋಮಿತಯಲ್ಲಿ ಸಡಿಲಿಕೆ ಇರುತ್ತದೆ.

ಪ್ರವರ್ಗ-2A/2B/3A & 3B ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ (KEA requirements) ಅಧಿಸೂಚನೆ ತಿಳಿಸಿದೆ.

ಅರ್ಜಿ ಶುಲ್ಕದ ಮಾಹಿತಿ :

ಪರಿಶಿಷ್ಟ ಜಾತಿ/ಪ್ರವರ್ಗ-I ( SC ST/Category 1)ಅಭ್ಯರ್ಥಿಗಳಿಗೆ 500 ರೂಪಾಯಿ, ಸಾಮಾನ್ಯ/ಒಬಿಸಿ (General/OBC) ಅಭ್ಯರ್ಥಿಗಳಿಗೆ 750 ರೂಪಾಯಿ ನಿಗದಿ ಮಾಡಲಾಗಿದೆ.
ಈ ಶುಲ್ಕದ ಮೊತ್ತವನ್ನು ಇ-ಅಂಚೆ ಕಚೇರಿ (Post Office)ಮೂಲಕ ಪಾವತಿಸಬೇಕು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ತಿಳಿಸಿದೆ.

ಇದನ್ನೂ ಓದಿ – Jio Recharge Plan – ಬರೋಬ್ಬರಿ 336 ದಿನದ ಹೊಸ ಜಿಯೋ ರಿಚಾರ್ಜ್ ಪ್ಲಾನ್, ಅನಿಯಮಿತ ಕರೆ, ಡೇಟಾ & SMS ಸೇವಗಳು

ಆಯ್ಕೆ ಪ್ರಕ್ರಿಯೆ:

ಅರ್ಹ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾಗುತ್ತದೆ. ಆ ಮೂಲಕ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ತಿಳಿಸಿದೆ.

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಇಂದೆ ನವೆಂಬರ್ 2, 2023 ರಂದು ತಡ ಮಾಡದೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಿ ಮತ್ತು ನವೆಂಬರ್ 4 ಪೋಸ್ಟ್ ಆಫೀಸ್ ಅಲ್ಲಿ ಅರ್ಜಿ ಸಲ್ಲಿಸಿದ ಶುಲ್ಕ ಪಾವತಿಸಲು ಕೊನೆಯ ದಿನವಾಗಿರುತ್ತದೆ. ಆದರಿಂದ ನೀವು ಕೊನೆಯ ದಿನಾಂಕದ ವರೆಗೂ ಕಾಯದೇ ಅರ್ಜಿ ಶುಲ್ಕವನ್ನು ಪಾವತಿಸಿಕೊಳ್ಳಿ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-23460460 ಗೆ ಕರೆ ಮಾಡಿ ಪರಿಶೀಲಿಸಿ ಕೊಳ್ಳಬಹುದು.
ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ –  Loan Scheme – SC/ST ವರ್ಗದವರಿಗೆ ಸಾಲ & ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!