ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗಗನಕ್ಕೆರಿದ ಈರುಳ್ಳಿ(Onion) ಬೆಲೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಪೇಚಾಡುತ್ತಿರುವ ಗ್ರಾಹಕರಿಗೆ ಪರಿಹಾರವಾಗಿ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್‌ಗಳ ಮೂಲಕ ಪ್ರತಿ ಕೆಜಿಗೆ 25 ರೂ.ಗೆ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡುವುದಾಗಿ ಕೇಂದ್ರ ಸರಕಾರ(Central government) ಘೋಷಿಸಿದೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಏರಿದ ಈರುಳ್ಳಿ ಬೆಲೆ(onion price)ಗೆ ಕೇಂದ್ರ ಸರ್ಕಾರದ ಕಡಿವಾಣ
ಕಳೆದ ವಾರಗಳಲ್ಲಿ ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿಯ ಬೆಲೆ ದುಬಾರಿಯಾಗಿದೆ, ಕೆಜಿಗೆ ₹.30-35 ಇದ್ದ ಈರುಳ್ಳಿಯ ದರ ಈಗ ಕೆಜಿಗೆ ₹.60-90 ಗೆ ಬಂದು ನಿಂತಿದೆ. ಈ ಕಾರಣದಿಂದಾಗಿ ಸಾಮಾನ್ಯ ಜನರು ಈರುಳ್ಳಿ ಕೊಂಡುಕೊಳ್ಳಲಾಗದೆ ನಿರಾಶರಾಗಿದ್ದಾರೆ. ಆದರೆ ಈಗ ಚಿಂತಿಸಬೇಕಾಗಿಲ್ಲ, ಗ್ರಾಹಕರಿಗೆ ಪರಿಹಾರವಾಗಿ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್‌ಗಳ ಮೂಲಕ ಪ್ರತಿ ಕೆಜಿಗೆ 25 ರೂ.ಗೆ ಸಬ್ಸಿಡಿ(subsidy) ದರದಲ್ಲಿ ಈರುಳ್ಳಿ ಮಾರಾಟ ಮಾಡುವುದಾಗಿ ಕೇಂದ್ರ ಸರಕಾರ ಘೋಷಿಸಿದೆ.
Image Credit: Original Source
NCCF ಮತ್ತು NAFED ಮೂಲಕ ರಿಯಾಯಿತಿ ದರದಲ್ಲಿ ರಿಟೇಲ್ ಮಾರುಕಟ್ಟೆ(Retail market)ಯಲ್ಲಿ ಮಾರಾಟ ಮಾಡಲಾಗುವುದು ಎಂದು ಗ್ರಾಹಕರ ವ್ಯವಹಾರಗಳು ಮತ್ತು ಆಹಾರ ಸಚಿವ ಪಿಯೂಷ್ ಗೋಯಲ ತಿಳಿಸಿದ್ದಾರೆ. ಇದಕ್ಕಾಗಿ ಸರ್ಕಾರ 170ಕ್ಕೂ ಹೆಚ್ಚಿನ ನಗರಗಳಲ್ಲಿ ಮತ್ತು 685 ಕೇಂದ್ರಗಳಲ್ಲಿ ಈರುಳ್ಳಿ ಮಾರಾಟ ರಿಟೇಲ್ ಗಳನ್ನು ಸ್ಥಾಪಿಸಿದೆ.
ಇದನ್ನೂ ಓದಿ – Loan Scheme – SC/ST ವರ್ಗದವರಿಗೆ ಸಾಲ & ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ
ಸರಕಾರವು ಈರುಳ್ಳಿ ಬೆಲೆಯು ಭಾರಿ ಏರಿಕೆ ಕಾಣುವ ಸುಳಿವಿನ ಬೆನ್ನೆಲೆಯಲ್ಲಿ ಈರುಳ್ಳಿಯ ಬುಫರ್ ಸ್ಟಾಕ್ ಮಾಡಿತ್ತು, 3 ಲಕ್ಷ ಟನ್ ಆರಂಭಿಕ ಖರೀದಿ ಗುರಿಯನ್ನು ಸಾಧಿಸಲಾಗಿತ್ತು. ಇದೀಗ ಸಂಗ್ರಹ ಪ್ರಮಾಣವನ್ನು 5 ಲಕ್ಷ ಟನ್‌ಗೆ ಏರಿಕೆ ಮಾಡಲಾಗಿದೆ. ಈಗ ಕೇಂದ್ರ ಸರ್ಕಾರವು ತನ್ನ ಬಫರ್ ಸ್ಟಾಕ್‌ನಿಂದ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡವುದು, ಆಮದು(Import) ಹೆಚ್ಚಿಸುವುದು ಹಾಗೂ ಇನ್ನಿತರೆ ಕ್ರಮಗಳನ್ನು ಕೈಗೊಂಡಿದೆ.
ದೆಹಲಿ-NCR, ಜೈಪುರ, ಲುಧಿಯಾನ, ವಾರಣಾಸಿ, ರೋಹ್ಟಕ್, ಮತ್ತು ಶ್ರೀನಗರ ಸೇರಿದಂತೆ ಸುಮಾರು 71 ಸ್ಥಳಗಳಲ್ಲಿ ಮೊಬೈಲ್ ವ್ಯಾನ್‌ಗಳ ಮೂಲಕ ರಿಯಾಯಿತಿ ದರದಲ್ಲಿ ಈರುಳ್ಳಿ ಲಭ್ಯವಿದೆ. ಭೋಪಾಲ್, ಇಂದೋರ್, ಭುವನೇಶ್ವರ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಂತಹ ಪ್ರದೇಶಗಳಲ್ಲಿಯೂ ಸಹ ಮೊಬೈಲ್ ವ್ಯಾನ್‌ಗಳ ಮುಖಾಂತರ ರಿಯಾಯಿತಿ ದರದ ಈರುಳ್ಳಿಯನ್ನು ಮಾರಲಾಗಿದೆ.
ಎಲ್ಲೆಲ್ಲಿ ಎಷ್ಟು ಬೆಲೆ ಇದೆ :
Image Credit: Original Source
ಮಹಾರಾಷ್ಟ್ರ ಸಾಗಾಣಿಕೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದು, ಆದರೆ ರಫ್ತು ನಿರ್ಬಂಧಗಳು (export restrictions), ಹೂಲ್ ಸೇಲ್ ಬೆಲೆಗಳು ಕಡಿಮೆಯಾಗಲು ಶುರುವಾದರು ಸಹ ಬೆಲೆಯು ರೂ.78 ರಷ್ಟು ಇತ್ತು. ಹಾಗೆಯೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಹ ಈರುಳ್ಳಿ ದುಬಾರಿಯಾಗುತ್ತಲೇ ಇತ್ತು. ಅಧಿಕೃತ ಅಂಕಿಅಂಶಗಳ(official data) ಪ್ರಕಾರ ಅಖಿಲ ಭಾರತದಲ್ಲಿ ಚಿಲ್ಲರೆ ಈರುಳ್ಳಿ ಬೆಲೆ ಕೆಜಿಗೆ 53.75 ರೂ.ಗೆ ಏರಿತ್ತು.
ದೆಹಲಿಯಲ್ಲಿ ಅಕ್ಟೋಬರ್ 25 ರಂದು ಕೆಜಿಗೆ 40 ರೂ. ಇತ್ತು. ಆದರೆ ಅಕ್ಟೋಬರ್ 29ರಂದು ಕೆಜಿಗೆ 80 ರೂ.ಗೆ, ಮೊದಲಿನ ಬೆಲೆಗಿಂತ ದುಪಟ್ಟು ಬೆಲೆ ಯಾಗಿತ್ತು. ಇನ್ನು ಅಕ್ಟೋಬರ್ 30ರಂದು ಪ್ರತಿ ಕೆಜಿಗೆ 78 ರೂ. ಕುಸಿದಿದೆ ಮತ್ತು ಮಂಗಳವಾರವೂ ಅದೇ ಮಟ್ಟದಲ್ಲಿತ್ತು. ಸದ್ಯ , ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಸರಾಸರಿ ಚಿಲ್ಲರೆ ಈರುಳ್ಳಿ ಬೆಲೆಗಳು ಅತ್ಯಧಿಕ ಮಟ್ಟದಲ್ಲಿವೆ.
ಇದನ್ನೂ ಓದಿ – Gruhalakshmi – ಈ ಬ್ಯಾಂಕ್ ನಲ್ಲಿ ಹೊಸ ಖಾತೆ ತೆರೆದು ಮೇಲೆ ಬಂತು ಗೃಹಲಕ್ಷ್ಮೀ 2000/- ಹಣ – ಇಲ್ಲಿದೆ ವಿವರ
ಅಧಿಕೃತ ಮೂಲಗಳ ಪ್ರಕಾರ, ಮಹಾರಾಷ್ಟ್ರದಲ್ಲಿ 15-20 ಲಕ್ಷ ಟನ್‌ಗಳಷ್ಟು ರಾಬಿ ಬೆಳೆಯ ದಾಸ್ತಾನು(Rabi crop inventory) ಲಭ್ಯವಿತ್ತು. ಆದರೆ ಊಹಾಪೋಹಗಳಿಂದಾಗಿ ದೇಶದಾದ್ಯಂತ ಸಗಟು ಮತ್ತು ಚಿಲ್ಲರೆ ಎರಡೂ ಮಾರುಕಟ್ಟೆಗಳಲ್ಲಿ ಬೆಲೆಗಳು ಏರಿಕೆಯಾಗಿವೆ. ತಾಜಾ ಖಾರಿಫ್ ಉತ್ಪಾದನೆಯಲ್ಲಿನ ಈರುಳ್ಳಿ ಬಿತ್ತನೆ ವಿಳಂಬವಾಗಿದ್ದು, ಕಡಿಮೆ ವ್ಯಾಪ್ತಿಯಲ್ಲಿ ಬೆಳೆಯಿತ್ತು ಮತ್ತು ಈರುಳ್ಳಿಯ ಆಗಮನದಲ್ಲಿ ಎರಡು ವಾರಗಳ ವಿಳಂಬ ಬೆಲೆಯಲ್ಲಿ ಏರಿಕೆಗೆ ಕಾರಣವಾಯಿತು. ಪ್ರಸಕ್ತ ವರ್ಷ ಸರಕಾರವು ಈರುಳ್ಳಿ ಕಾಪು ದಾಸ್ತಾನನ್ನು ದ್ವಿಗುಣಗೊಳಿಸಿದೆ. ಇದು ಈರುಳ್ಳಿಯ ದೇಶೀಯ ಲಭ್ಯತೆಯನ್ನು ಸುಧಾರಿಸಬಹುದು ಎಂದು ನಿರೀಕ್ಷಿಸಲಾಗಿದೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ