Yuvanidhi- ಯುವನಿಧಿ ಯೋಜನೆ ಚಾಲನೆಗೆ ಮಹೂರ್ತ ಫಿಕ್ಸ್, ಸರ್ಕಾರದಿಂದ ದೀಪಾವಳಿಗೆ ಮತ್ತೊಂದು ಗುಡ್ ನ್ಯೂಸ್.?

IMG 20231106 WA0002

ಎಲ್ಲರಿಗೂ ನಮಸ್ಕಾರ, ಈ ವರದಿಯಲ್ಲಿ ಸರ್ಕಾರದ ಕೊನೆಯ ಗ್ಯಾರಂಟಿಯಾದ ಯುವನಿಧಿ ಯೋಜನೆ ಬಗ್ಗೆ ತಿಳಿದುಕೊಳ್ಳೋಣ, ರಾಜ್ಯದಲ್ಲಿ ಕಾಂಗ್ರೆಸ್  ಗೆದ್ದು ಗದ್ದುಗೆಯನ್ನು ಪಡೆದ ಬಳಿಕ ಈ ಐದು ಯೋಜನೆಗಳನ್ನು ಜಾರಿ ಮಾಡುತ್ತಿದೆ (Guarantee Schemes). ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಯುವ ನಿಧಿ ಎಂಬ ಐದು ಯೋಜನೆಗಳ ಪೈಕಿ ಈಗಾಗಲೇ ನಾಲ್ಕು ಯೋಜನೆಗಳು ಜಾರಿಗೆ ಬಂದಿದೆ. ಕೊನೆಯ ಗ್ಯಾರಂಟಿಯಾದ ಯುವ ನಿಧಿಗೆ (Karnataka Yuva Nidhi). ಮುಹೂರ್ತ ಫಿಕ್ಸ್ ಮಾಡಿದೆ. ಇದೇ ಬರುವ ಡಿಸೆಂಬರ್ ನಲ್ಲಿ ಯೋಜನೆ ಆರಂಭ ವಾಗಲಿದೆ. ಯುವನಿಧಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಕೆಳಗೆ ಕೊಡಲಾಗಿದೆ.

ಕರ್ನಾಟಕ ಯುವ ನಿಧಿ ಯೋಜನೆ:

IMG 20231106 WA0003

ಕರ್ನಾಟಕ ಸರ್ಕಾರವು ನಿರುದ್ಯೋಗಿ ಯುವಕರಿಗೆ ಅನುಕೂಲವಾಗುವಂತೆ ಕರ್ನಾಟಕದಲ್ಲಿ ಯುವ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ರಾಜ್ಯದ ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಗೆ ಸರ್ಕಾರ ಆರ್ಥಿಕ ನೆರವು ನೀಡಲಿದೆ. ಅರ್ಹ ಫಲಾನುಭವಿಗಳು ನೇರ ಬ್ಯಾಂಕ್ ವರ್ಗಾವಣೆ (DBT) ಮೂಲಕ ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಮಾಸಿಕ ಸಹಾಯವನ್ನು ಪಡೆಯುತ್ತಾರೆ. ಅವರು ಉದ್ಯೋಗವನ್ನು ಕಂಡುಕೊಳ್ಳುವವರೆಗೆ ಅಥವಾ ಎರಡು ವರ್ಷಗಳವರೆಗೆ ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ.

ಯುವ ನಿಧಿ ಯೋಜನೆ ಬಿಗ್ ಅಪ್ಡೇಟ್

ಯುವ ನಿಧಿ ಯೋಜನೆಯನ್ನು ಡಿಸೆಂಬರ್ ನಲ್ಲಿ ಜಾರಿಗೆ ತರುದಾಗಿ ಸಚಿವ ಶರಣಪ್ರಕಾಶ್ ಆರ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಶರಣಪ್ರಕಾಶ್ ಆರ್ ಪಾಟೀಲ್  (sharana Prakash R Patil) ಯುವ ನಿಧಿ ಯೋಜನೆಯನ್ನು ಡಿಸೆಂಬರ್ ನಲ್ಲಿ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು,  ಯೋಜನೆಗೆ ಸುಮಾರು 250 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಯುವ ನಿಧಿ ಯೋಜನೆ ಅರ್ಹತೆಗಳು :

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು, ಪದವೀಧರರಾಗಿರಬೇಕು ಅಥವಾ ಡಿಪ್ಲೊಮಾ ಹೊಂದಿರುವವರಾಗಿರಬೇಕು, ಅರ್ಜಿದಾರರು 2022-2023 ರಲ್ಲಿ ಅವನ / ಅವಳ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು, ಪದವಿ ಅಥವಾ ಡಿಪ್ಲೊಮಾ ತೇರ್ಗಡೆಯಾದ ದಿನಾಂಕದ ನಂತರ ಕನಿಷ್ಠ 6 ತಿಂಗಳುಗಳ ಕಾಲ ನಿರುದ್ಯೋಗಿಯಾಗಿರಬೇಕು.

ಇದನ್ನೂ ಓದಿ – ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಿದೊರಿಗೆ ಗುಡ್ ನ್ಯೂಸ್, ಶೀಘ್ರದಲ್ಲೆ ಕಾರ್ಡ್ ವಿತರಣೆ, ಇಲ್ಲಿದೆ ಡೀಟೇಲ್ಸ್

ಯಾರಿಗೆ ಎಷ್ಟು ಹಣ?

– ನಿರುದ್ಯೋಗಿ  ಪದವೀಧರರಿಗೆ ಮಾಸಿಕ 3,000 ರೂ

– ಡಿಪ್ಲೊಮಾ  ಪಾಸ್  ಆದವರಿಗೆ ತಿಂಗಳಿಗೆ ರೂ.1,500

ಅರ್ಜಿದಾರರು ಉತ್ತೀರ್ಣರಾದ ಮತ್ತು ನಿರುದ್ಯೋಗಿಗಳಾದ ಆರು ತಿಂಗಳ ನಂತರ ಸರ್ಕಾರ ಈ ಮೊತ್ತವನ್ನು ನೀಡುತ್ತದೆ  . ಆದರೆ,  ಎರಡು ವರ್ಷಗಳ ನಂತರ ಅಥವಾ ಎರಡು ವರ್ಷಗಳಲ್ಲಿ ಯುವಕರಿಗೆ ಉದ್ಯೋಗ ದೊರೆತ ತಕ್ಷಣ  ಮೊತ್ತವನ್ನು  ನೀಡುವುದಿಲ್ಲ .

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಯೋಜನೆಗೆ ಬೇಕಾದ ದಾಖಲೆಗಳು :

ಕರ್ನಾಟಕದ ನಿವಾಸಿ ಎಂಬ ಪುರಾವೆ, ಆಧಾರ್ ಕಾರ್ಡ್ , ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ, ಡಿಪ್ಲೊಮಾ ಪ್ರಮಾಣಪತ್ರ. (ಡಿಪ್ಲೊಮಾ ಹೊಂದಿರುವವರಿಗೆ), ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ, ಮೊಬೈಲ್ ನಂಬರ್, ಬ್ಯಾಂಕ್ ಖಾತೆ ವಿವರಗಳು, ಸೆಲ್ಫ್ ಡಿಕ್ಲೆರೇಷನ್ ಪ್ರತಿ

ಯುವನಿಧಿ ಯೋಜನೆಗೆ ಸೇವಾ ಸಿಂಧುವಿನಲ್ಲಿ ಅರ್ಜಿಯನ್ನು ಸಲ್ಲಿಸುವ ವಿಧಾನ :

ಯುವನಿಧಿಗೆ ಅರ್ಹತೆ ಹೊಂದಿರುವ ಯುವಕ ಯುವತಿಯರು ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿಅರ್ಜಿ ಸಲ್ಲಿಸಬೇಕು. ಹಲವು ಸರ್ಕಾರಿ ಯೋಜನೆಗಳ ಸವಲತ್ತು ಪಡೆಯುವ ತಾಣ ಇದು. ಇದರಲ್ಲಿ ಈಗ ಯುವ ನಿಧಿ ಕೂಡಾ ಸೇರ್ಪಡೆಯಾಗಿದೆ. ಅರ್ಜಿ ಸಲ್ಲಿಕೆ ಪ್ರಾರಂಭವಾಗಿರದ ಕಾರಣ ಯುವ ನಿಧಿ ಯೋಜನೆಯ ಪೇಜ್ ಓಪನ್ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸಲು  ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://sevasindhugs.karnataka.gov.in/#

ಇನ್ನೇನು ಕೆಲವೇ ದಿನಗಳಲ್ಲಿ ಈ ಯೋಜನೆ ಸೇವಾ ಸಿಂಧುವಿನಲ್ಲಿ ಸೇರಿಸಲಾಗುತ್ತದೆ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ –  ಬ್ಯಾಂಕಿಂಗ್, UPSC, KAS ಪರೀಕ್ಷೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!