Loan Scheme – ಎಲ್ಲಾ ಮಹಿಳೆಯರಿಗೆ ಬಿಸಿನೆಸ್ ಪ್ರಾರಂಬಿಸಲು 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ, ಕೇಂದ್ರದ ಯೋಜನೆ -2023

LOANN

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಪ್ರಧಾನ ಮಂತ್ರಿ ಮುದ್ರಾ ಯೋಜನೆ (Pradhan Mantri Mudra Yojana) (PMMY) ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಮಹಿಳೆಯರಿಗೆ ತಮ್ಮ ಸ್ವಂತ ಉದ್ಯಮವನ್ನು (Own bussiness) ಪ್ರಾರಂಭಿಸಲು, ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಕೇಂದ್ರ ಸರ್ಕಾರವು (Central government) ಹಲವಾರು ಉಪಕ್ರಮಗಳನ್ನು ಪ್ರಾರಂಭಿಸುತ್ತಿದೆ. ಅಂತಹ ಒಂದು ಉಪಕ್ರಮವೆಂದರೆ ಮಹಿಳೆಯರಿಗಾಗಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ(PMMY) ಕೂಡಾ ಒಂದಾಗಿದೆ. ಈ ಯೋಜನೆಯು ಮಹಿಳೆಯರಿಗೂ ಕೂಡಾ ವಿಸ್ತರಣೆಯಾಗಿದ್ದು, ವಿಶೇಷವಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ (Low intrest rate) ಹೆಚ್ಚಿನ ಲಾಭ (With high profit) ಸಿಗುವಂತೆ ಮಹಿಳೆಯರಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದೇ ಹೇಳಬಹುದಾಗಿದೆ.

10 ಲಕ್ಷದ ವರೆಗೂ ಸಾಲ(Loan) ಪಡೆಯಬಹುದು :

mudra logo

ಮುದ್ರಾ ಸಾಲಗಳು ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ನೀಡಲಾಗುತ್ತದೆ. ಮತ್ತು ಭಾರತದೊಳಗೆ ಉದ್ಯಮಶೀಲತೆಯ ಸಂಸ್ಕೃತಿಯನ್ನು ಬೆಳೆಸುವ ಏಕೈಕ ಗುರಿಯೊಂದಿಗೆ ಬರುತ್ತದೆ ಎಂದೇ ಹೇಳಬಹುದಾಗಿದೆ. ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಭಾರತದಲ್ಲಿ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ದೃಷ್ಟಿ ಹೊಂದಿರುವ ಮಹಿಳೆಯರಿಗೆ ಮುದ್ರಾ ಸಾಲಗಳನ್ನು ನೀಡಬಹುದಾಗಿದೆ. ತಮ್ಮದೇ ಆದ ಸ್ವಂತ ಉದ್ಯಮವನ್ನು ಅನ್ನು ಪ್ರಾರಂಭಿಸಲು, ವಿಸ್ತರಿಸಲು, ಬೆಂಬಲಿಸಲು ಅಥವಾ ಆಧುನೀಕರಿಸಲು ಬಯಸುವ ಯಾರಾದರೂ PMMY ಸಾಲಗಳನ್ನು ಪಡೆದುಕೊಳ್ಳುಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮುದ್ರಾ ಲೋನ್ ಅನ್ನು ಮಹಿಳೆಯರು ಎಲ್ಲಾ ಬ್ಯಾಂಕುಗಳು ಮತ್ತು ಬ್ಯಾಂಕಿಂಗ್ ಅಲ್ಲದ(Non bankings ) ಹಣಕಾಸು ಕಂಪನಿಗಳು (NBFC) ಮತ್ತು ಮೈಕ್ರೋ-ಫೈನಾನ್ಸ್(Micro Finance) ಸಂಸ್ಥೆಗಳ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಸಾಲದ ಬಡ್ಡಿ ದರ (Loan intrest rate) 7.30% ನಿಂದ ಆರಂಭವಾಗುತ್ತದೆ ಮತ್ತು ಮಹಿಳೆಯರು ಸಾಲವನ್ನು ತಗೆದು ಕೊಂಡರೆ 7 ವರ್ಷಗಳ (7years for free payment) ಅವಧಿಯನ್ನು ಮರುಪಾವತಿಗಾಗಿ ಪಡೆದುಕೊಳ್ಳಬಹುದು .

ಇದನ್ನೂ ಓದಿ – SC/ST ಸಬ್ಸಿಡಿ ಸಾಲ & ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ | SC ST Subsidy Loan Scheme Karnataka 2023

ಈ ಯೋಜನೆಯಲ್ಲಿ ಮೂರು ವಿಭಿನ್ನ ವರ್ಗಗಳಿವೆ :

ಈಗಾಗಲೇ ಈ ಯೋಜನೆಯು ಪ್ರಾರಂಭವಾಗಿ ನಾಲ್ಕು ವರ್ಷಗಳಾಯಿತು. ಪ್ರಾರಂಭಗೊಂಡು ನಾಲ್ಕು ವರ್ಷಗಳಲ್ಲಿ, 70% ಸಾಲ ಖಾತೆಗಳನ್ನು (Loan Accounts) ಮಹಿಳಾ ಉದ್ಯಮಿಗಳಿಗೆ ಮಂಜೂರು ಮಾಡಲಾಗಿದೆ .
ಈ ಮುದ್ರಾ ಯೋಜನೆಯನ್ನು ಮೂರು ವಿಭಿನ್ನ ವರ್ಗಗಳಲ್ಲಿ ನೀಡಲಾಗುತ್ತದೆ.
ಅವು ಯಾವವೂ ಎಂದು ತಿಳಿಯುವುದಾದರೆ,
ಶಿಶು ಸಾಲ (Shishu Loan)
ಕಿಶೋರ್ ಸಾಲ (Kishore Loan)
ತರುಣ್ ಸಾಲ (Taruna Loan)

ಶಿಶು ಸಾಲ (Shishu Loan ):
ಶಿಶು ಸಾಲ ಯೋಜನೆಯು ಉದ್ಯಮಿಗಳಿಗೆ ರೂ.50,000 ವರೆಗೆ ಸಾಲವನ್ನು ಪಡೆಯಲು ಅನುವು ಮಾಡಿಕೊಡು

ಕಿಶೋರ್ ಸಾಲ (Kishore Loan):

ಕಿಶೋರ ಮುದ್ರಾ ಸಾಲ ಯೋಜನೆಯಡಿ, ವ್ಯಾಪಾರ ಮಾಲೀಕರು ರೂ.50,000 ರಿಂದ 5 ಲಕ್ಷ ರೂ ವರೆಗಿನ ವ್ಯಾಪಾರ ಸಾಲಗಳನ್ನು ಪಡೆಯಬಹುದು.

ತರುಣ್ ಸಾಲ (Taruna Loan):

ಈ ಯೋಜನೆಯಲ್ಲಿ, ಮಹಿಳಾ ಉದ್ಯಮಿಗಳು ರೂ.5 ಲಕ್ಷದಿಂದ 10 ಲಕ್ಷ ರೂ ವರೆಗೂ ವ್ಯಾಪಾರ ಸಾಲಗಳನ್ನು ಪಡೆಯಬಹುದು.

ಇದನ್ನೂ ಓದಿ – Electric scooter – ಬರೋಬ್ಬರಿ 300 ಕಿ. ಮೀ ವರೆಗೆ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ! ಬೆಲೆ ಎಷ್ಟು ಗೊತ್ತಾ?

ಮುದ್ರಾ ಯೋಜನೆಯ ಸಾಲದ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ, ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ:

ಹಂತ 1: ಮೊದಲನೆಗೆ ಮುದ್ರಾ ಸಾಲ ಯೋಜನೆಯ ಭಾಗವಾಗಿರುವ ಹತ್ತಿರದ ಬ್ಯಾಂಕ್‌ಗೆ ಹೋಗಿ.

ಹಂತ 2: ನಿಮ್ಮ ವ್ಯಾಪಾರ ಯೋಜನೆ ಅಥವಾ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿ.

ಹಂತ 3: ಪೂರ್ಣಗೊಂಡ ಮುದ್ರಾ ಸಾಲದ ಅರ್ಜಿ ನಮೂನೆಯನ್ನು ಸಲ್ಲಿಸಿ.

ಹಂತ 4: ಗುರುತಿನ ಮತ್ತು ವಿಳಾಸ ಪುರಾವೆ, ಕಂಪನಿಯ ವಿಳಾಸ ಪುರಾವೆ, ಬ್ಯಾಲೆನ್ಸ್ ಶೀಟ್‌ಗಳು, ಜಾತಿ ಪ್ರಮಾಣಪತ್ರ, ಐಟಿ ರಿಟರ್ನ್ಸ್, ಮಾರಾಟ ತೆರಿಗೆ ಇತ್ಯಾದಿಗಳಂತಹ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಿ.

ಹಂತ 5: ಎಲ್ಲಾ ಇತರ ಬ್ಯಾಂಕ್ ಫಾರ್ಮಾಲಿಟಿಗಳನ್ನು ಪೂರ್ಣಗೊಳಿಸಿ.

ಹಂತ 6: ಸಲ್ಲಿಸಿದ ದಾಖಲೆಗಳು, ಹಾಗೆಯೇ ಮುದ್ರಾ ಸಾಲದ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ.

ಹಂತ 7: ಸಾಲಗಾರಾರು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದರೆ, ಸಾಲವನ್ನು ಅನುಮೋದಿಸಲಾಗುತ್ತದೆ.

ಅಷ್ಟೇ ಅಲ್ಲದೆ ಮಹಿಳೆಯರಿಗಾಗಿ ಪ್ರಧಾನ ಮಂತ್ರಿಗಳ ಸಾಲ ಯೋಜನೆಯಲ್ಲಿ ಆಸಕ್ತಿ ಹೊಂದಿರುವ ಸಾಲಗಾರರು ಸರ್ಕಾರ ನೀಡಿರುವ ಅಧಿಕೃತ ವೆಬ್‌ಸೈಟ್‌ಗಳಿಗೆ (Official website) ಭೇಟಿ ನೀಡವುದರ ಮೂಲಕ ಅರ್ಜಿ ನಮೂನೆಗಳು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

ಇದನ್ನೂ ಓದಿ – ಬ್ಯಾಂಕ್ ನಲ್ಲಿ ಲೋನ್ ಮಾಡುವ ತುಂಬಾ ಜನರಿಗೆ ಸೀಕ್ರೆಟ್ ಮಾಹಿತಿ ಗೊತ್ತಿಲ್ಲ..! ತಪ್ಪದೇ ತಿಳಿದುಕೊಳ್ಳಿ

ಇನ್ನು ಕೊನೆಯದಾಗಿ ಈ ಪ್ರಧಾನ್ ಮಂತ್ರಿ ಮುದ್ರಾ ಯೋಜನೆ ಬಗ್ಗೆ ಹೇಳುವುದಾದರೆ, ಮುದ್ರಾ ಸಾಲಗಳು ಭಾರತದಲ್ಲಿನ ಮಹಿಳಾ ಉದ್ಯಮಿಗಳಿಗೆ ಭರವಸೆಯ ದಾರಿದೀಪವಾಗಿ ಹೊರಹೊಮ್ಮಿವೆ, ಇದು ಉದ್ಯಮಶೀಲತೆಯಲ್ಲಿ ಲಿಂಗ ಸಮಾನತೆಯನ್ನು ಬೆಳೆಸುವುದು ಮಾತ್ರವಲ್ಲದೆ ಆರ್ಥಿಕ ಬೆಳವಣಿಗೆಯನ್ನು ಕೂಡಾ ಉತ್ತಮಗೊಳಿಸುತ್ತದೆ ಎಂದು ಹೇಳಬಹುದು. ಇನ್ನು ನೀವೂ ಕೂಡಾ ಹೊಸ ಬಸ್ಸಿನೆಸ್ (New bussiness) ಸ್ಟಾರ್ಟ್ ಮಾಡ ಬೇಕಯೇನಿಸಿದರೆ ಈ ಪ್ರದಾನ ಮಂತ್ರಿ ಮುದ್ರಾ ಯೋಜನೆ (PMMY)ಯ ಸಾಲದ ಸೌಲಭ್ಯವನ್ನು ಪಡೆದುಕೊಂಡು ಅದರ ಉಪಯೋಗವನ್ನು ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ – Gruhalakshmi – ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಜಮಾ ಆಗಲು ಅಧಿಕೃತ ದಿನಾಂಕ ನಿಗದಿ, ಇಲ್ಲಿದೆ ಸಂಪೂರ್ಣ ಮಾಹಿತಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!