Pan card – ದೇಶಾದ್ಯಂತ 11 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯ,ಇಲ್ಲಿದೆ ಕಂಪ್ಲೀಟ್ ಮಾಹಿತಿ

pann

ಎಲ್ಲರಿಗೂ ನಮಸ್ಕಾರ. ನಿಗದಿತ ಸಮಯದೊಳಗೆ ಆಧಾರ್ ಲಿಂಕ್ ಮಾಡದ ಕಾರಣ 11.5 ಕೋಟಿ ಪ್ಯಾನ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸ( Pancard De-activate)ಲಾಗಿದೆ. ಹೀಗಿರುವಾಗ, ನೀವು ನಿಮ್ಮ ಪ್ಯಾನ್- ಆಧಾರ್ ಸ್ಥಿತಿ (Pan – Adhar Status) ಅಥವಾ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್(Aadhar link) ಆಗಿದೆಯೋ ಇಲ್ವೋ ಎಂದು ತಿಳಿಯಬೇಕೇ, ಹಾಗಿದ್ದಲ್ಲಿ ಸಂಪೂರ್ಣ ವರದಿಯನ್ನು ಓದಿ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.

ದೇಶಾದ್ಯಂತ ಹಲವು ಜನರ ಪಾನ್ ಕಾರ್ಡ್ ರದ್ದು:

ಶಾಶ್ವತ ಖಾತೆ ಸಂಖ್ಯೆ( PAN ) ಕಾರ್ಡ್ ಮತ್ತು ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ನಿರ್ಣಾಯಕ ಗುರುತಿನ ದಾಖಲೆಗಳಾಗಿವೆ. ಆದಾಯ ತೆರಿಗೆ (Income Tax)ನಿಯಮದ ಪ್ರಕಾರ, ನಿಮ್ಮ ಆಧಾರ್‌ನೊಂದಿಗೆ ನಿಮ್ಮ ಪ್ಯಾನ್ ಅನ್ನು ಲಿಂಕ್ ಮಾಡುವ ಪ್ರಕ್ರಿಯೆಯು ಕಡ್ಡಾಯವಾಗಿದೆ. ಈ ಪ್ರಕ್ರಿಯೆಗೆ ಕೊನೆಯ ದಿನಾಂಕವು ಜೂನ್ 30 2023 ಆಗಿತ್ತು. ಆದರೆ ವರದಿಯ ಪ್ರಕಾರ 11.5 ಕೋಟಿ ಜನರು ನಿಗದಿತ ಸಮಯದೊಳಗೆ ಆಧಾರ್ ಲಿಂಕ್ ಮಾಡಲು ವಿಫಲರಾಗಿದ್ದಾರೆ. ಈ ಕಾರಣದಿಂದಾಗಿ 11.5 ಕೋಟಿ ಜನರ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳಿಸ( Pancard De-activate)ಲಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (Central Board of Direct Taxes, CBDT) ಯಿಂದ RTI ( Right to Information) ಪ್ರತಿಕ್ರಿಯೆಯು ವರದಿ ಮಾಡಿದೆ.

ಪಾನ್ ಕಾರ್ಡ್ ಆಕ್ಟಿವೇಟ್ ಮಾಡಲು ಒಂದು ಸಾವಿರ ದಂಡ :

ಮಧ್ಯಪ್ರದೇಶದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರಿಗೆ RTI (Right to Information) ಪ್ರತಿಕ್ರಿಯೆಯ ಅನುಸಾರ, ಭಾರತದಲ್ಲಿ 70.2 ಕೋಟಿ ಜನರು ಪ್ಯಾನ್ ಕಾರ್ಡ್‌ ಹೊಂದಿದ್ದಾರೆ. ಇವರಲ್ಲಿ ಸುಮಾರು 57.25 ಕೋಟಿ ಜನರು ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಿದ್ದಾರೆ. ಮತ್ತು ಇನ್ನುಳಿದ ಸುಮಾರು 12 ಕೋಟಿ ಜನರು ನಿಗದಿತ ಸಮಯದೊಳಗೆ ಆಧಾರ್ ಪ್ಯಾನ್ ಲಿಂಕ್ (Adhar pan link failed) ಮಾಡಿಸುವಲ್ಲಿ ವಿಫಲಾರಾಗಿದ್ದಾರೆ. ಈ ಪೈಕಿ 11.5 ಕೋಟಿ ಜನರ ಪ್ಯಾನ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಕಳೆದ ವಾರ ವರದಿಗಳು ತಿಳಿಸಿವೆ. ಅಷ್ಟೇಅಲ್ಲದೆ ₹ 1, 000ರೂ ದಂಡವನ್ನು ಪಾವತಿಸುವ ಮೂಲಕ ಪ್ಯಾನ್ ಕಾರ್ಡ್ ಗಳನ್ನು ಪುನಃ ಸಕ್ರಿಯಗೊಳಿಸ(Activate)ಬಹುದು ಎಂದು RTI ಉತ್ತರ ನೀಡುವ ಮೂಲಕ ಸ್ಪಷ್ಟಪಡಿಸಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139AA ಅಡಿಯಲ್ಲಿ, ಜುಲೈ 1, 2017 ರ ಮೊದಲು ಪ್ಯಾನ್ ಕಾರ್ಡ್ ಪಡೆದವರು ಕಡ್ಡಾಯವಾಗಿ ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಆದೇಶವನ್ನು ನೀಡಲಾಗಿದೆ.

ಪ್ಯಾನ್-ಆಧಾರ್ ಲಿಂಕ್ ಮಾಡುವ ಸ್ಥಿತಿ(Status)ಯನ್ನು ಪರಿಶೀಲಿಸುವುದು ಹೇಗೆ ಎಂಬುದು ಇಲ್ಲಿದೆ

ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಮತ್ತು ಸ್ಟೇಟಸ್ ಅನ್ನು ಚೆಕ್ ಮಾಡುವುದಕ್ಕೆ ನಾವು ಆದಾಯ ತೆರಿಗೆ ವಿಭಾಗದ ಅಧಿಕೃತ ವೆಬ್ಸೈಟ್ ಗೆ ನಾವು ಭೇಟಿ ನೀಡಬೇಕು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 1 : ನಿಮ್ಮ ಮೊಬೈಲ್ ನ ಕ್ರೋಮ್ ಬ್ರೌಸರ್ ನಲ್ಲಿ https://www.incometax.gov.in/iec/foportal/   ಟೈಪ್ ಮಾಡಿ ಅಥವಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

01

ಹಂತ 2 : ಮೇಲೆ ಕಾಣುತ್ತಿರುವ “link aadhaar status”ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ,

02

ಹಂತ 3 : ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ನಂಬರ್ ಅನ್ನು ಇಲ್ಲಿ ನೀವು ನಮೂದಿಸಿ. ನಂತರ ಕೆಳಗೆ ಕಾಣುತ್ತಿರುವ View link aadhaar status ಮೇಲೆ ಕ್ಲಿಕ್ ಮಾಡಿ

03

ಹಂತ 4: ಈಗ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿರುವ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ

 

ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಆಗಿದ್ದರೆ ಅದು ಪರದೆಯ ಮೇಲೆ ತೋರಿಸಲಾಗುತ್ತದೆ ಇಲ್ಲವೇ, ಲಿಂಕ್ ಮಾಡದಿದ್ದರೆ ಲಿಂಕ್ ಆಗಿಲ್ಲ ಎಂದು ತೋರಿಸುತ್ತದೆ. ಆಧಾರ್ ಲಿಂಕ್ ಮಾಡದಿದ್ದರೆ, ತಡ ಮಾಡದೆ ಲಿಂಕ್ ಮಾಡಲು ಮುಂದಿನ ಅಗತ್ಯ ಕ್ರಮಗಳನ್ನು ತಗೆದುಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಇದನ್ನೂ ಓದಿ – Jio Recharge Plan – ಹಬ್ಬಕ್ಕೂ ಮುನ್ನ 150GB ಡಾಟಾ & ಸ್ವಿಗ್ಗಿ  ರಿಚಾರ್ಜ್ ಆಫರ್ ಬಿಡುಗಡೆ ಮಾಡಿದ ಜಿಯೋ.

ಇದನ್ನೂ ಓದಿ – LPG Price – ದೀಪಾವಳಿಗೆ ಕೇಂದ್ರದಿಂದ ಸಿಹಿ ಸುದ್ದಿ, ಉಜ್ವಲಾ ಸಿಲಿಂಡರ್‌ ಸಬ್ಸಿಡಿ ಹೆಚ್ಚಳ ಸಂಭವ..! ಇಲ್ಲಿದೆ ಮಾಹಿತಿ

ಇದನ್ನೂ ಓದಿ – Electric Scooter – ಒಲಾ ಸ್ಕೂಟರ್ ಗಳ ಮೇಲೆ ದೀಪಾವಳಿ ಧಮಾಕಾ ಆಫರ್ ಗಳು, ಇಲ್ಲಿದೆ ಮಾಹಿತಿ

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!