ಇದೀಗ ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ( Electric Bike ) ಗಳದ್ದೇ ಹವಾ . ಹೌದು ಈ ಒಂದು ಎಲೆಕ್ಟ್ರಿಕ್ ಬೈಕ್ ಗಳು ಉಳಿದ ಬೈಕ್ ಗಳಿಗೆ ಚಮಕ್ ನೀಡುತ್ತಿವೆ. ಹಾಗೆಯೇ ಇತ್ತೀಚೆಗೆ ಬಹಳಷ್ಟು ಜನರು ಇದನ್ನು ಪರ್ಚೆಸ್ ( Purchase ) ಮಾಡಲು ಮುಂದಾಗುತ್ತಿದ್ದಾರೆ. ಹಾಗೆಯೇ ಇದೀಗ ಹೊಸ ವಿಶಿಷ್ಟತೆ ಮತ್ತು ವಿನ್ಯಾಸವನ್ನು ಹೊಂದಿದ ಎಲೆಕ್ಟ್ರಿಕ್ ಬೈಕ್ ಒಂದನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಅದರ ಬಗ್ಗೆ ಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಲೆಕ್ಟ್ರಿಕ್ಸ್ ಇಸಿಟಿ ( Lectrix Ecity Zip ):
ಈ ಒಂದು ಹೊಸ ಬೈಕ್ ನ ಹೆಸರು ಎಲೆಕ್ಟ್ರಿಕ್ಸ್ ಇಸಿಟಿ ( Lectrix Ecity ZIP ) ಜಿಪ್ ಆಗಿದ್ದು, ಇದು ಭಾರತದಲ್ಲಿ ಮಾಲಿನ್ಯ-ಮುಕ್ತ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪೈಕಿ ಒಂದಾಗಿದೆ. ಈ ಒಂದು ಬೈಕ್ ಬಹಳ ಹೆಸರುವಾಸಿಯಾಗಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನೆಯಲ್ಲಿ ಎಲೆಕ್ಟ್ರಿಕ್ಸ್ ಬೈಕ್ ಎಲ್ಲರ ಗಮನ ಸೆಳೆಯುತ್ತಿದೆ.
ಈ ಎಲೆಕ್ಟ್ರಿಕ್ ಬೈಕ್ ನ ಹೊರತರುವ ಮುಖ್ಯ ಉದ್ದೇಶ :
ಹೊಸ ಅವಿಸ್ಕಾರ ಹೊಂದಿದ ಇಸಿಟಿ ಜಿಪ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಈ ಒಂದು ಬೈಕ್ ನಲ್ಲಿ ಪ್ರಮುಖವಾಗಿ ಇಸಿಟಿ ಜಿಪ್ ಅನ್ನು ಅಳವಡಿಸಿದ್ದಾರೆ. ದಿನನಿತ್ಯ ಓಡಾಡುವ ಪ್ರಯಾಣಿಕರ ಜೀವನದ ವೈಯಕ್ತಿಕ ಕೆಲಸ ಕಾರ್ಯ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಈ ಒಂದು ಎಲೆಕ್ಟ್ರಿಕ್ ಬೈಕ್ ಅನ್ನು ವಿನ್ಯಾಸಗೊಳಿಸಿದ್ದಾರೆ.
ಇಸಿಟಿ ಜಿಪ್ ( Ecity Zip ) ಅನ್ನು ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ತಮ್ಮ ಜೀವನದ ಪ್ರತಿ ಬಳಕೆಗೂ ಹೊಂದಿಕೊಳ್ಳುತ್ತದೆ. ಹಾಗೆಯೇ ಇದು ಒಂದು ಮಿಡ್ ಸ್ಪೀಡ್ ಸ್ಕೂಟರ್ ಆಗಿದ್ದು 45 ಕಿಮೀ / ಗಂ ಗರಿಷ್ಠ ವೇಗ ಮತ್ತು 75 ಕಿಮೀ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಒಂದು ಬೈಕ್ ನ ವಿನ್ಯಾಸ ಮತ್ತು ಬಣ್ಣಗಳ ವಿವರ ಈ ಕೆಳಗಿನಂತಿದೆ :
ಈ ಬೈಕ್ ವಿನ್ಯಾಸ ದಲ್ಲಿ ಕ್ಲಾಸಿಕ್ ಲುಕ್ ಮತ್ತು ಸುಂದರವಾದ ಡಿಸೈನ್ ಅನ್ನು ಹೊಂದಿದೆ. ಈ ಒಂದು ಬೈಕ್ ಕಠಿಣ ಕೆಲಸ ಮಾಡುವ ಸಾಮರ್ಥ್ಯ ವನ್ನು ಕೂಡ ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 165mm ಗ್ರೌಂಡ್ ಕ್ಲಿಯರೆನ್ಸ್ ಮತ್ತು 155-170kg ಪೇಲೋಡ್ ಅನ್ನು ನಿಭಾಯಿಸುವ ಸಾಮರ್ಥ್ಯ ಇದರಲ್ಲಿದೆ. ನಮ್ಮ ದಿನನಿತ್ಯದ ಬಳಕೆಯ ಸವಾಲುಗಳನ್ನು ತಡೆದುಕೊಳ್ಳಬಲ್ಲ ಆಧುನಿಕ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ.
ಈ ಒಂದು ಬೈಕ್ ನಲ್ಲಿ ಎಲೆಕ್ಟ್ರಿಕ್ಸ್ ಇಸಿಟಿ ಜಿಪ್ ಪೂರ್ಣವಾದ ಎಲ್ಇಡಿ ಲೈಟಿಂಗ್ ಸೆಟಪ್ ಅನ್ನು ನೀಡಲಾಗಿದೆ. ಇನ್ನು ವಿವಿಧ ಫೀಚರ್ಸ್ಗಳನ್ನು ( Features ) ನೋಡುವುದಾದರೆ ಮಲ್ಟಿ-ಫಂಕ್ಷನ್ ಡಿಜಿಟಲ್ ಡಿಸ್ಪ್ಲೇ ಸಿಸ್ಟಮ್, ವಿವಿಧ ರೈಡಿಂಗ್ ಮೋಡ್‌ಗಳು, ಆರಾಮದಾಯಕ ರೈಡಿಂಗ್ ಪೊಸಿಷನ್, ಕಾಂಬಿ ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ಮತ್ತು ಇಕೋ ಮತ್ತು ಪವರ್ ಎಂಬ ಎರಡು ರೈಡಿಂಗ್ ಮೋಡ್ ಗಳನ್ನು ಈ ಒಂದು ಬೈಕ್ ನಲ್ಲಿ ಕಾಣಬಹದು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಈ ಬೈಕ್ ನ ಬಣ್ಣಗಳು :
ಈ ಒಂದು ಬೈಕ್ ನ ಸೆಲೆಕ್ಷನ್ ಅಲ್ಲಿ ಹಲವಾರು ಬಣ್ಣಗಳಿವೆ. ಅವುಗಳೆಂದರೆ :
ವಿದ್ಯುತ್ ಕೆಂಪು
ಮೂಡಿ ಕಿತ್ತಳೆ
ನಿಯಾನ್ ಹಸಿರು
ಜಿಂಗ್ ಕಪ್ಪು
ಝೆನ್ ವೈಟ್
ಈ ಬೈಕ್ ನ ಬೆಲೆ ( Price ) ಈ ರೀತಿ ಇದೆ :
ಎಲೆಕ್ಟ್ರಿಕ್ಸ್ ಇ ಸಿಟಿ ಜಿಪ್ ಬೈಕ್ ಅಂದಾಜು ರೂ.1,15,000/ ಬೆಲೆಯನ್ನು ಹೊಂದಿದೆ. ಹಾಗೆಯೇ ಈ ಒಂದು ಬೈಕ್ ನಲ್ಲಿ ಸಾಲದ ಆಯ್ಕೆಗಳನ್ನು ಕೂಡ ನೀಡಿದ್ದಾರೆ. ಇದು ಗ್ರಾಹಕರಿಗೆ ಬಹಳ ಸಂತಸ ತರಲಿದೆ.
ಈ ಬೈಕ್ ನಲ್ಲಿ ವಿಶಿಷ್ಟ ಫೀಚರ್ಸ್ ಗಳು
ಈ ಬೈಕಿನ ವಿಶಿಷ್ಟವಾದ ಫೀಚರ್ ಗಳು ಬೈಕ್ ಗೆ ಒಂದು ಹೊಸ ರೂಪಾಂತರವನ್ನು ನೀಡುತ್ತದೆ. ಅವುಗಳೆಂದರೆ :
ಮಲ್ಟಿಫಂಕ್ಷನ್ ಡಿಜಿಟಲ್ ಡಿಸ್ಪ್ಲೇ ಸಿಸ್ಟಮ್,
ಸಮಗ್ರ ಎಲ್ಇಡಿ ಲೈಟಿಂಗ್ ಸೆಟಪ್,
ಡಿಸ್ಕ್ ಅಥವಾ ಡ್ರಮ್ ಬ್ರೇಕ್ ಕಾನ್ಫಿಗರೇಶನ್ ಆಯ್ಕೆ, 4. ಕಾಂಬಿ ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್],
ಮೊಬೈಲ್ ಅಪ್ಲಿಕೇಶನ್ ಕನೆಕ್ಟಿವಿಟಿ,
ಹೆವಿ ಡ್ಯೂಟಿ BLDC ಹಬ್ ಮೋಟಾರ್‌ಗಳು,
ಅತ್ಯುತ್ತಮ ಬ್ಯಾಟರಿ ಪ್ಯಾಕ್ ಸೆಟಪ್
ಮುಂತಾದ ಹೊಸ ಫೀಚರ್ಸ್ಗಳನ್ನು ಹೊಂದಿದೆ.
ಈ ಬೈಕ್ ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ