ನಮಗೆಲ್ಲಾ ತಿಳಿದಿರುವ ಹಾಗೆ ಈಗ ಎಲ್ಲಿ ನೋಡಿದರಲ್ಲಿ ಎಲೆಕ್ಟ್ರಿಕ್ ವಾಹನಗಳು ನಮ್ಮ ಕಣ್ಣಿಗೆ ಕಾಣಸಿಗುತ್ತವೆ. ಹಾಗೆಯೇ ಇತ್ತೀಚೆಗೆ ಎಲೆಕ್ಟ್ರಿಕ್ ( Electric ) ವಾಹನಗಳ ಟ್ರೆಂಡ್ ಕೂಡಾ ಜಾಸ್ತಿ ನಡೆಯುತ್ತಿದೆ. ಆದರಿಂದ ಈ ಎಲೆಕ್ಟ್ರಿಕ್ ವಾಹನಗಳಿಗೆ ಇದೀಗ ಹೆಚ್ಚಿನ ಡಿಮ್ಯಾಂಡ್ ಕೂಡ ಇದೆ. ಈ ಹಿಂದೆ ಎಲೆಕ್ಟ್ರಿಕ್ ವಾಹನಗಳ ಮೇಲೆ ಜನರಿಗೆ ಅಷ್ಟೊಂದು ಪರಿಚಯ ಇರಲಿಲ್ಲ. ಹಾಗೆಯೇ ಅವುಗಳ ಬಗ್ಗೆ ಗೊತ್ತಿರಲಿಲ್ಲ ಆದರೆ ಈಗ ತಂತ್ರಜ್ಞಾನದ ( Technology ) ಬೆಳವಣಿಗೆಯೊಂದಿಗೆ ಎಲೆಕ್ಟ್ರಿಕ್ ವಾಹನಗಳು ಬಹಳ ಬೇಡಿಕೆಯಲ್ಲಿವೆ ಮತ್ತು ಹೈ ರೇಂಜ್ ನಲ್ಲಿ ಕೂಡಾ ಇವೆ.
ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಓರ್ಕ್ಸಾ ಮಾಂಟಿಸ್ (Orxa Mantis) e- ಬೈಕ್ 2023:
ಈ ನಡುವೆ ಇದೀಗ ನಮ್ಮ ಕರ್ನಾಟಕ ರಾಜಧಾನಿ ಬೆಂಗಳೂರು ಮೂಲದ ಎಲೆಕ್ಟ್ರಿಕ್ ತಯಾರಿಕಾ ಸ್ಟಾರ್ಟಪ್ ಓರ್ಕ್ಸಾ ಎನರ್ಜಿಸ್ ಕಂಪನಿಯು ತನ್ನ
ಮೊದಲ ಎಲೆಕ್ಟ್ರಿಕ್ ಬೈಕ್, ಓರ್ಕ್ಸಾ ಮಾಂಟಿಸ್ (Orxa Mantis) e-ಬೈಕ್ ಅನ್ನು ಪರಿಚಿಸಿದೆ. ಇದು ಕಾರ್ಯನಿರ್ವಹಣೆ-ಆಧಾರಿತ ಎಲೆಕ್ಟ್ರಿಕ್ ಬೈಕ್ ಆಗಿದ್ದು, ಇದು ಅಲ್ಟ್ರಾವೈಲೆಟ್ F77( Ultraviolette F77 ) ನಂತರ ಭಾರತದಲ್ಲಿ ಎರಡನೇ ಅತಿ ಹೆಚ್ಚು ಶ್ರೇಣಿಯನ್ನು ಹೊಂದಿರುವ ಬೈಕ್ ಇದಾಗಿದೆ ಎಂದು ತಿಳಿದು ಬಂದಿದೆ. ಈ ಬೈಕು 221km ವ್ಯಾಪ್ತಿಯ IDC (ಇಂಡಿಯನ್ ಡ್ರೈವಿಂಗ್ ಕಂಡಿಶನ್ಸ್) ಶ್ರೇಣಿಯೊಂದಿಗೆ ಬರುತ್ತದೆ.
ನೀವು ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಖರೀದಿಸಲು ಬಯಸಿದರೆ, ಓರ್ಕ್ಸಾ ಎನರ್ಜಿಸ್‌ನ ಓರ್ಕ್ಸಾ ಮಾಂಟಿಸ್ (Orxa Mantis) ಆಯ್ಕೆಗಳಲ್ಲಿ ಒಂದಾಗಿದೆ. ಇದನ್ನು 1 ರೂಪಾಂತರದಲ್ಲಿ ಮಾರಾಟ ಮಾಡಲಾಗುತ್ತದೆ. ಮತ್ತು ಬನ್ನಿ ಈ ಓರ್ಕ್ಸಾ ಮಾಂಟಿಸ್(Orxa Mantis) ಬೈಕ್ ಕೆಲವು ವಿಶೇಷಣಗಳ ಬಗ್ಗೆ ಮಾಹಿತಿಯನ್ನು ತಿಳಿಯೋಣ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಓರ್ಕ್ಸಾ ಮಾಂಟಿಸ್(Orxa Mantis) ev ಬೈಕ್ 20.5kW ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಆಗಿದೆ. ಇದು 93 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. Orxa Mantis ನ ತೂಕ 182 ಕೆಜಿ ಇರುತ್ತದೆ. ಈ Mantis ಬೈಕ್ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಕೂಡಾ ಡಿಸ್ಕ್ ಬ್ರೇಕ್ನೊಂದಿಗೆ ಬರುತ್ತದೆ.
ಈ ev ಬೈಕ್ ಲಿಕ್ವಿಡ್-ಕೂಲ್ಡ್ ಮೋಟಾರ್ (liquid cold motor) ಹೊಂದಿದೆ. ಈ ev 135kmph ಉನ್ನತ ವೇಗವನ್ನು (speed)ಹೊಂದಿದೆ ಎಂದು ಹೇಳಬಹುದು. ಮತ್ತು ಕೇವಲ 8.9 ಸೆಕೆಂಡುಗಳಲ್ಲಿ 0-100kmph ನಿಂದ ವೇಗವನ್ನು ಪಡೆಯಬಹುದು. ಮತ್ತು ಓರ್ಕ್ಸಾ ಮ್ಯಾಂಟಿಸ್ ev ಬೈಕ್ ಬ್ಯಾಟರಿ ಸಾಮರ್ಥ್ಯವು 8.9kWh ಆಗಿದೆ ಮತ್ತು IDC (ಭಾರತೀಯ ಡ್ರೈವಿಂಗ್ ಕಂಡಿಷನ್ಸ್ ) ಅಲ್ಲಿ 221km ನಷ್ಟು ಅಂದಾಜು ವ್ಯಾಪ್ತಿಯನ್ನು ಹೊಂದಿರುವ ಬೈಕ್ ಇದಾಗಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಚಾರ್ಜಿಂಗ್ ಬಗ್ಗೆ ಮಾಹಿತಿ :
ಇನ್ನು ಈ ev ಬೈಕ್ ಚಾರ್ಜಿಂಗ್ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ, ಸ್ಟ್ಯಾಂಡರ್ಡ್ (standard)1.3kW ಚಾರ್ಜರ್ (charger)ಅನ್ನು ಬಳಸುವಾಗ 0-80% ಯಿಂದ ಬ್ಯಾಟರಿಯನ್ನು ಚಾರ್ಜ್ ಮಾಡಲು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ತ್ವರಿತವಾದ ‘ಬ್ಲಿಟ್ಜ್’ 3.3kW ಚಾರ್ಜರ್ ಅನ್ನು ಬಳಸುವಾಗ ಬೈಕು 0-80% ನಿಂದ ಪಡೆಯಲು 2 ಗಂಟೆ ಮತ್ತು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ
ಬೆಲೆ ಮತ್ತು ಲಭ್ಯತೆ :
ಓರ್ಕ್ಸಾ ಮಾಂಟಿಸ್ (Orxa Mantis)ಬೆಲೆ ಮತ್ತು ಲಭ್ಯತೆ ಬಗ್ಗೆ ಮಾಹಿತಿಯನ್ನು ನೋಡುವುದಾದರೆ,
Orxa Mantis ನ ಬೆಲೆ(price) ರೂ. 3,60,000 ಆಗಿದೆ. ಈ ಎಲೆಕ್ಟ್ರಿಕ್ ಬೈಕ್ orxa Mantis ಅನ್ನು 1 ರೂಪಾಂತರದಲ್ಲಿ ನೀಡಲಾಗುತ್ತದೆ ಅದುವೇ Orxa Mantis STD ಇದು 3,60,000 ರೂ(ಎಕ್ಸ್ ಶೋ ರೂಂ ಬೆಂಗಳೂರು ) ಬೆಲೆಯಲ್ಲಿ ನಾವು ಖರೀದಿ ಮಾಡಬಹುದು.ಮತ್ತು ಓರ್ಕ್ಸಾ ಮಾಂಟಿಸ್ (Orxa Mantis) ಅನ್ನು ಒಂದೇ ಕಪ್ಪು ಬಣ್ಣದಲ್ಲಿ ಖರೀದಿಸಬಹುದಾಗಿದೆ.
ಈ ಎಲೆಕ್ಟ್ರಿಕ್ ಬೈಕ್ orxa Mantis ಬುಕ್ಕಿಂಗ್‌ಗಳು ಪ್ರಾರಂಭವಾಗಿದ್ದು, ಮೊದಲ 1,000 ಗ್ರಾಹಕರು 10,000 ರೂ.ಗೆ ಮೋಟಾರ್‌ಸೈಕಲ್ ಅನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ, ನಂತರ ಬುಕಿಂಗ್ ಶುಲ್ಕ 25,000 ರೂ ಆಗಿರುತ್ತದೆ. ಮಾಂಟಿಸ್‌ನ (Mantis) ಮೊದಲ ಬ್ಯಾಚ್ 2024 ರ ಏಪ್ರಿಲ್‌ನಿಂದ ಬೆಂಗಳೂರಿನಲ್ಲಿ ವಿತರಣೆಯನ್ನು ಪ್ರಾರಂಭಿಸುತ್ತದೆ, ಮುಂದಿನ ಬ್ಯಾಚ್‌ಗಳು ಜುಲೈ ಮತ್ತು ಅಕ್ಟೋಬರ್ 2024 ರಲ್ಲಿ ಪ್ರಾರಂಭವಾಗುತ್ತದೆ ಎಂದು ಕಂಪನಿ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸಿದೆ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಬೈಕ್ ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
- ಅತಿ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಇ-ಕಾರ್
- ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಹೋಂಡಾ CB350, ಖರೀದಿಗೆ ಮುಗಿಬಿದ್ದ ಜನ
- ಬರೋಬ್ಬರಿ 300 ಕಿ. ಮೀ ವರೆಗೆ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!
- ಬರಿ 20 ರೂ.ನಲ್ಲಿ ಇಡೀ ವಾರ ಸುತ್ತಾಡಿ, ಬರೋಬ್ಬರಿ 200 ಕಿ.ಮೀ ಮೈಲೇಜ್ ಕೊಡುವ ಇ ಸ್ಕೂಟಿ ಬಿಡುಗಡೆ
- ಕಡಿಮೆ ಬೆಲೆಗೆ ಎಂಟ್ರಿ ಕೊಟ್ಟ ಹೊಸ ಇ – ಸ್ಕೂಟಿ, ಕಂಪ್ಲೀಟ್ ಮಾಹಿತಿ ಇಲ್ಲಿದೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ