ಹಾವೇರಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಹತ್ಯೆ.! ಲವ್ ಜಿಹಾದ್ ಶಂಕೆ.! ಓರ್ವನ ಬಂದನ! 

Picsart 25 03 14 23 51 59 276

WhatsApp Group Telegram Group

ಹಾವೇರಿ ಜಿಲ್ಲೆಯಲ್ಲಿ(Haveri district) ಮತ್ತೊಂದು ಭೀಕರ ಕೊಲೆ: 22 ವರ್ಷದ ಸ್ವಾತಿ ರಮೇಶ್(Swati Ramesh) ಹತ್ಯೆ ಪ್ರಕರಣದಲ್ಲಿ ನಯಾಜ್ ಬಂಧನ

ಕರ್ನಾಟಕದಲ್ಲಿ(Karnataka) ಮತ್ತೊಂದು ಸ್ಫೋಟಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ 22 ವರ್ಷದ ಯುವತಿ ಸ್ವಾತಿ ರಮೇಶ್ ಬ್ಯಾಡಗಿ ಅವರ ಭೀಕರ ಹತ್ಯೆಯ ಘಟನೆ ರಾಜ್ಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ಕಳೆದ ವರ್ಷ ಹುಬ್ಬಳ್ಳಿಯ ನೇಹಾ ಹಿರೇಮಠ(Neha Hiremath) ಹತ್ಯೆ ಪ್ರಕರಣ ವಿಚಾರ ಜನರ ಮರತೇಯಿಲ್ಲ, ಆದರೆ ಇದೀಗ ಅಂತಹದ್ದೇ ಮತ್ತೊಂದು ಹತ್ಯೆ ಬೆಳಕಿಗೆ ಬಂದಿದೆ. ಸ್ವಾತಿ ಅವರ ಸಾವಿನ ಪ್ರಕರಣದಲ್ಲಿ ನಯಾಜ್(Nayaz) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಚ್ 3ರಂದು(march 3 ) ಸ್ವಾತಿ ಕಾಣೆಯಾಗಿದ್ದರು. ಈ ಕುರಿತು ಅವರ ಕುಟುಂಬಸ್ಥರು ಹಿರೇಕೇರೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು(Missing complaint) ದಾಖಲಿಸಿದ್ದರು. ಸುಮಾರು ಮೂರು ದಿನಗಳ ಕಾರ್ಯಾಚರಣೆಯ  ಬಳಿಕ, ಮಾರ್ಚ್ 6ರಂದು ರಾಣಿಬೆನ್ನೂರು ತಾಲೂಕಿನ ಪತ್ತೇಪೂರ ಗ್ರಾಮದ ತುಂಗಭದ್ರಾ ನದಿ(Tungabhadra river) ತೀರದಲ್ಲಿ ಸ್ವಾತಿ ಅವರ ಶವ ಪತ್ತೆಯಾಗಿತ್ತು,

ಆದರೆ ಈ ಶವವನ್ನು ಅಪರಿಚಿತ ಶವ(Unknown body) ಎಂದು ಪರಿಗಣಿಸಿದ ಪೊಲೀಸರು ಮರಣೋತ್ತರ (Postmortem ) ಪರೀಕ್ಷೆ ನಡೆಸಿ, ಶವವನ್ನು ಅಂತ್ಯಸಂಸ್ಕಾರ ಮಾಡಿದ್ರು. ಆದರೆ, ಪೋಸ್ಟ್ ಮಾರ್ಟಂ ವರದಿಯಲ್ಲಿ(post mortem report) ಇದು ಸಹಜ ಸಾವಲ್ಲ, ಕೊಲೆ ಎಂಬುದು ದೃಢಪಟ್ಟಿತು. ಆದರೆ ಯಾವುದೇ ಮಾಹಿತಿ ನೀಡದೇ ಅಂತ್ಯಸಂಸ್ಕಾರ ಮಾಡಿದ ಪೊಲೀಸರಿಗೆ(police) ಇದೀಗ ಸಂಕಷ್ಟ ಎದುರಾಗಿದೆ.

ಇನ್ನು, ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಯಾಜ್(Nayaz) ಎಂಬಾತನ ಮೇಲೆ ಶಂಕೆ ವ್ಯಕ್ತವಾಗಿದ್ದು, ಪೋಷಕರು ನೀಡಿದ ದೂರಿನ ಮೇರೆಗೆ, ಹಲಗೇರಿ ಠಾಣೆ ಪೊಲೀಸರು ನಯಾಜ್‌ನನ್ನು ಬಂಧಿಸಿದ್ದಾರೆ. ತನಿಖೆಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ವಾತಿ ಮತ್ತು ನಯಾಜ್ ಪ್ರೀತಿ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. 

ಇನ್ನು, ಮೃತಪಟ್ಟ ಸ್ವಾತಿ ರಾಣೆಬೆನ್ನೂರೀನ ಆಸ್ಪತ್ರೆಯೊಂದರಲ್ಲಿ(Hospital) ಸ್ವಾತಿ ನರ್ಸ್(nurse) ಆಗಿ ಕೆಲಸ ಮಾಡುತ್ತಿದ್ದರು. ಈಕೆಯ ತಂದೆ ತೀರಿಕೊಂಡಿದ್ದು, ತಾಯಿಯೊಟ್ಟಿಗೆ ವಾಸವಿದ್ದಳು ಎನ್ನಲಾಗಿದೆ. ಇದೀಗ ಸ್ವಾತಿ ಸಾವನ್ನಪ್ಪಿರುವುದು ತಿಳಿದು ಸ್ವಾತಿ ತಾಯಿ ಮತ್ತು ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ಸ್ವಾತಿಯವರ ಕುಟುಂಬ ಈ ಹತ್ಯೆಯನ್ನು “ಲವ್ ಜಿಹಾದ್”(“Love Jihad”) ಎಂದು ಆರೋಪಿಸುತ್ತಿದ್ದಾರೆ. ಇನ್ನು ಈ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ “Justice for Swati” ಎಂಬ ಹ್ಯಾಶ್‌ಟ್ಯಾಗ್(Hashtag) ಮೂಲಕ ಪ್ರತಿಭಟನೆಗಳು(Protest) ನಡೆಯುತ್ತಿವೆ.

ಪೋಲೀಸರು ಪ್ರಸ್ತುತ ಈ ಪ್ರಕರಣದ ಸಮಗ್ರ ತನಿಖೆ ನಡೆಸುತ್ತಿದ್ದು, ಹತ್ಯೆಯ ಹಿಂದೆ ಇನ್ನೊಬ್ಬರ ಕೈವಾಡವಿದೆಯಾ? ಇದು ನಿಜವಾಗಿಯೂ ಪ್ರೇಮಕಥೆಯೇ?  ಈ ಹತ್ಯೆಗೆ ಕಾರಣವೇನು? ಎಂಬುದು ಸಮಗ್ರ ತನಿಖೆಯ ನಂತರ ತಿಳಿದು ಬರಲಿದೆ.
ಇನ್ನು, ಹಾವೇರಿಯಲ್ಲಿನ ಈ ಹತ್ಯೆ ಪ್ರಕರಣದ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆ(protest) ನಡೆಸಿದ್ದು, ಸೂಕ್ತ ನ್ಯಾಯಕ್ಕಾಗಿ ಧ್ವನಿ ಎತ್ತಿವೆ. ಸ್ವಾತಿ ಹತ್ಯೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ರಟ್ಟಿಹಳ್ಳಿ ತಾಲೂಕು ಮಾಸೂರು ಗ್ರಾಮದ ಸ್ವಾತಿ ನಿವಾಸ ಮುಂದೆ ಸ್ಥಳೀಯರು ಪ್ರತಿಭಟನೆ ಮಾಡಿದ್ದಾರೆ. ಅದೇ ರೀತಿ ಈ ಕೃತ್ಯಕ್ಕೆ ಸಂಬಂಧಿಸಿದಂತೆ ನ್ಯಾಯಯುತವಾದ ತನಿಖೆ ನಡೆಸಿ, ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!