ಕೃಷಿ ಪಂಪ್ ಸೆಟ್ ಇರುವ ಎಲ್ಲಾ ರೈತರಿಗೂ ಹೊಸ ರೂಲ್ಸ್, ಇಲ್ಲಿದೆ ಮಹತ್ವದ ಮಾಹಿತಿ

IMG 20240902 WA0005

ಸರ್ಕಾದಿಂದ ರೈತರಿಗೆ ಮಹತ್ವದ ಮಾಹಿತಿ, ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಜೋಡಣೆ ಕಡ್ಡಾಯ :

ಇಂದು ಮಳೆ ಬೆಳೆ ಇಲ್ಲದೆ ರೈತರು ಬಹಳ ಕಷ್ಟ ಪಟ್ಟು ಬೇಸಾಯವನ್ನು ಮಾಡುತ್ತಿದ್ದಾರೆ. ಹಾಗೆಯೇ ಇಂದು ರೈತರು ನೀರಿಗಾಗಿ ಬಹಳ ಕಷ್ಟ ಪಡುತ್ತಿದ್ದಾರೆ. ತಮ್ಮ ಹೊಲ ಗದ್ದೆಗಳ ಪಕ್ಕದಲ್ಲಿ ಇದ್ದ ಹಳ್ಳ ಕೆರೆಗಳಿಗೆ ಅಥವಾ ಬೋರ್ವೆಲ್ ಗಳನ್ನು ಕೊರೆಸಿ ತಮ್ಮ ಜಮೀನಿಗೆ ಕೃಷಿ ಪಂಪ್ ಸೆಟ್ ಗಳನ್ನು (Agricultural pump set) ಅಳವಡಿಸಿಕೊಂಡಿದ್ದಾರೆ. ಹಾಗೆಯೇ ಇದೀಗ ಸರ್ಕಾರವು ರೈತರಿಗೆ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಜೋಡಣೆ ಕಡ್ಡಾಯ ಮಾಡಲಾಗಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು  ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್(Aadhaar link to pump set) ಮಾಡಿಲು ಮುಖ್ಯ ಕಾರಣ :

ಮುಖ್ಯವಾಗಿ ಆಧಾರ್ ಕಾರ್ಡ ಅನ್ನು ಪಂಪ್‌ ಸೆಟ್ ಗೆ ಲಿಂಕ್ ಮಾಡಲು ಮುಖ್ಯ ಉದ್ದೇಶ ನೈಜ ಫಲಾನುಭವಿಗಳಿಗೆಯೇ ಅಂದರೆ ಅರ್ಹ ವಕ್ತಿಗಳಿಗೆಯೇ ಕೃಷಿ ಪಂಪ್ ಸೆಟ್ ಗಳಿಗೆ (Agricultural pump set) ನೀಡುತ್ತಿರುವ ವಿದ್ಯುತ್ ಬಿಲ್ ಸಹಾಯಧನ ಪಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಲು.
ಅಕ್ರಮವಾಗಿ ಪಂಪ್ ಸೆಟ್ ಗಳಿಗೆ ವಿದ್ಯುತ್‌ ಪಡೆಯುತ್ತಿರುವುದನ್ನು ತಡೆಗಟ್ಟಲು.
ನಕಲಿ ದಾಖಲೆಗಳನ್ನು ಸಲ್ಲಿಸಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪಡೆಯುವುದನ್ನು ತಡೆಗಟ್ಟಲು.

ರಾಜ್ಯದ್ಯಂತ ಪಂಪ್ ಸೆಟ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕಾರ್ಯ ನಡೆಯುತ್ತಿದೆ :

ಕರ್ನಾಟಕ ವಿದ್ಯುತ್‌ ನಿಯಂತ್ರಣ (KEB) ಆಯೋಗದಿಂದ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿ (Escom) ಯಡಿ ಬರುವ ಎಲ್ಲಾ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಬಳಕೆ ಮಾಡುವ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಲಿಂಕ್ ಮಾಡಲು ಸೂಚನೆ ನೀಡಲಾಗಿತ್ತು, ಇದರಂತೆ ಕಳೆದ ಕೆಲವು ದಿನಗಳಿಂದ ರಾಜ್ಯದ್ಯಂತ ಪಂಪ್ ಸೆಟ್ ಗೆ ಆಧಾರ್ ಕಾರ್ಡ್ ಲಿಂಕ್ (Agriculture pumpset adhar link) ಮಾಡುವ ಕಾರ್ಯ ನಡೆಯುತ್ತಿದೆ.

ವಿದ್ಯುತ್ ಸರಬರಾಜು ಕಂಪನಿಗಳಿಂದ ರೈತರ ಕೃಷಿ ಪಂಪ್‌ ಸೆಟ್ ಗಳಿಗೆ ಆಧಾ‌ರ್ ಕಾರ್ಡ್ (Adhar card) ಲಿಂಕ್ ಜೋಡಣೆ :

ಮುಖ್ಯವಾಗಿ ಫಲಾನುಭವಿಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಾದ್ಯಂತ ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಇತರೆ ವಿದ್ಯುತ್ ಸರಬರಾಜು ಕಂಪನಿಗಳಿಂದ ರೈತರ ಕೃಷಿ ಪಂಪ್‌ ಸೆಟ್ ಗಳಿಗೆ ಆಧಾ‌ರ್ ಕಾರ್ಡ ಅನ್ನು ಲಿಂಕ್ ಮಾಡಲಾಗುತ್ತಿದೆ.

ಸರ್ಕಾರದಿಂದ ಜಾರಿಯಾದ ಈ ಒಂದು ಮಾಹಿತಿಯನ್ನು ರೈತರಿಗೆ ಬಹಳ ಉಪಯುಕ್ತವಾಗಿದ್ದು, ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಲಿಂಕ್ ಕುರಿತು ಉಪಯುಕ್ತ ಮಾಹಿತಿ ವಿವರವನ್ನು ಈ ಕೆಳಗೆ ನೀಡಲಾಗಿದೆ.

ಪಹಣಿ/RTC/ಉತಾರ್ ನಲ್ಲಿರುವ ಹೆಸರಿನ ವ್ಯಕ್ತಿಯು ಮರಣ ಹೊಂದಿದ್ದರೆ ಆ‌ರ್ ಆ‌ರ್ ಸಂಖ್ಯೆ/ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್ ಹೇಗೆ ಮಾಡುವುದು?

ಒಂದೊಮ್ಮೆ ಜಮೀನಿನ ಪಹಣಿ/RTC ಅಲ್ಲಿ ಹೆಸರಿರುವ ವ್ಯಕ್ತಿಯು ಮರಣ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಮರಣ ಹೊಂದಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ(Death certificate)ವನ್ನು ಸಲ್ಲಿಸಿ ಪ್ರಸ್ತುತ ವಾರಸುದಾರರ ಆಧಾರ್ ಕಾರ್ಡಗೆ ಪಂಪ್ ಸೆಟ್ ಲಿಂಕ್ ಮಾಡಿಕೊಳ್ಳಬೇಕು.

ಸಾಗುವಳಿ ಮಾಡುತ್ತಿರುವ ಜಮೀನು ಜಂಟಿ ಖಾತೆ ಹೊಂದಿದ್ದರೆ ಲಿಂಕ್ ಮಾಡುವುದು ಹೇಗೆ?

ರೈತರು ತಾವು ಸಾಗುವಳಿ ಮಾಡುತ್ತಿರುವ ಜಮೀನಿ ಜಂಟಿ ಖಾತೆ (Joint RTC) ಹೊಂದಿದ್ದ ಪಕ್ಷದಲ್ಲಿ ಛಾಪಾಕಾಗದವನ್ನು ತೆಗೆದುಕೊಂಡು ನಿಮ್ಮ ಜಂಟಿ ಖಾತೆ ಪಹಣಿ/RTC ಅಲ್ಲಿ ಬರುವ ಹೆಸರಿನವರ ಒಪ್ಪಿಗೆ ಪಡೆದು ಆಧಾ‌ರ್ ಕಾರ್ಡ ಲಿಂಕ್ ಮಾಡಿಸಿಕೊಳ್ಳಬೇಕು.

ಜಮೀನನ್ನು ಖರೀದಿ ಮಾಡಿದ್ದ ಸಮಯದಲ್ಲಿ ಲಿಂಕ್ ಮಾಡಿಕೊಳ್ಳುವುದು ಹೇಗೆ?

ಕೆಲವು ದಿನಗಳ ಹಿಂದೆಯಷ್ಟೆಯೇ ನಿವೇನಾದರು ಕೃಷಿ ಜಮೀನನ್ನು ಖರೀದಿ ಮಾಡಿದ್ದರೆ ಇದಕ್ಕೆ ಸಂಬಂಧಪಟ್ಟ ಕ್ರಯ ಪತ್ರಗಳನ್ನು ವಿದ್ಯುತ್ ಕಂಪನಿ (Electrical company) ಕಚೇರಿಗೆ ಸಲ್ಲಿಸಿ ಆಧಾರ್ ಕಾರ್ಡ ಲಿಂಕ್ ಮಾಡಿಸಿಕೊಳ್ಳಬೇಕು.

ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್ ಎಲ್ಲಿ ಮತ್ತು ಮಾಡಿಸಬೇಕು?

ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದ್ದು, ರೈತರು ತಮ್ಮ ಜಮೀನಿನಲ್ಲಿರುವ ಪಂಪ್ ಸೆಟ್ (RR number and adhar card link) ನಿಮ್ಮ ಹಳ್ಳಿಯ ಲೈನ್ ಮ್ಯಾನ್ ಅನ್ನು ಸಂಪರ್ಕಿಸಬೇಕು ಅಥವಾ ನಿಮ್ಮ ಹತ್ತಿರದ ವಿದ್ಯುತ್‌ ಸರಬರಾಜು ಕಂಪನಿ (Escom) ಭೇಟಿ ಮಾಡಿ ಲಿಂಕ್ ಮಾಡಿಕೊಳ್ಳಬೇಕು.

ಕೃಷಿ ಪಂಪ್ ಸೆಟ್ ಗೆ ಆಧಾರ್ ಲಿಂಕ್ ಮಾಡಲು ಒದಗಿಸಬೇಕಾದ ದಾಖಲೆಗಳು (Documents) :

ಜಮೀನಿನ ಪಹಣಿ/ಉತಾರ್/RTC
ಅರ್ಜಿದಾರರ ಆಧಾರ್ ಕಾರ್ಡ ಪ್ರತಿ/Aadhar card
ಪಂಪ್ ಸೆಟ್ ಆರ್.ಆರ್ ಸಂಖ್ಯೆ/Pumpset RR number

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!