ಆಧಾರ್ ಕಾರ್ಡ್ ( adhaar card ) ಇದೀಗ ಎಲ್ಲಾ ಸೇವೆಗಳಿಗೂ ಒಂದು ಉತ್ತಮ ಐಡಿ ಕಾರ್ಡ್ ಆಗಿ ಬಳಸುತ್ತಿದ್ದೇವೆ. ಹಾಗೆಯೇ ನಮ್ಮ ಎಲ್ಲಾ ಮಾಹಿತಿ ಆಧಾರ್ ಕಾರ್ಡ್ ನಲ್ಲಿ ಜೋಡಣೆ ಆಗಿದೆ. ನಮ್ಮ ಬ್ಯಾಂಕ್ ಖಾತೆಗೆ ( Bank Account ) ಆಧಾರ್ ಜೋಡಣೆ ಆಗಿರುತ್ತದೆ. ಈಗ ಜಗತ್ತು ಬಹಳ ಬದಲಾಗಿದೆ. ನಾವು ನಮ್ಮ ವೈಯಕ್ತಿಕ ಮಾಹಿತಿಯನ್ನ ಎಷ್ಟೇ ಗೌಪ್ಯವಾಗಿ ಇಟ್ಟರು ವಂಚಕರು ( Scammers ) ನಮ್ಮ ಎಲ್ಲಾ ಮಾಹಿತಿ ಪಡೆದುಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆಧಾರ್ ಕಾರ್ಡ್ ಇದ್ದವರಿಗೆ ಈ ವಿಷಯ ಗೊತ್ತಿರಲೇಬೇಕು
ಇದೀಗ ವಂಚಕರು ನಮ್ಮ ಆಧಾರ್ ಕಾರ್ಡ್ ಅನ್ನು ಹ್ಯಾಕ್ ಮಾಡಿ ಬಯೋಮೆಟ್ರಿಕ್ ಮಾಹಿತಿಯನ್ನು ( Biometric Information ) ಕದಿಯುತ್ತಿದ್ದಾರೆ. ಮತ್ತು ಖಾತೆಯಿಂದ ಹಣವನ್ನು ದೋಚುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ, ಇಂತಹ ಅನೇಕ ಘಟನೆಗಳು ವರದಿಯಾಗಿವೆ.
ಇದೀಗ ನಮ್ಮ ಮಾಹಿತಿಯನ್ನು ಕಾಪಾಡಿಕೊಳ್ಳಲು ಒಂದು ಹೊಸ ಮಾಹಿತಿಯನ್ನು ನೀಡಿದ್ದಾರೆ. ಈ ರೀತಿಯ ವಂಚನೆಯನ್ನು ತಪ್ಪಿಸಲು, ನೀವು ಮನೆಯಲ್ಲಿ ಕುಳಿತು ನಿಮ್ಮ ಬಯೋಮೆಟ್ರಿಕ್ ಫಿಂಗರ್ಪ್ರಿಂಟ್ ಅನ್ನು ಆಧಾರ್ ಕಾರ್ಡ್ನೊಂದಿಗೆ ಲಾಕ್ ( Lock ) ಮಾಡಬಹುದು. ನಿಮ್ಮ ಆಧಾರ್ ಮಾಹಿತಿಯನ್ನು ಸುರಕ್ಷಿತವಾಗಿಡುವುದು ಹೇಗೆ ಮತ್ತು ಅದರ ವಿಧಾನದ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.
ವಂಚಕರು ಅಥವಾ ಸ್ಕ್ಯಾಮರ್‌ಗಳು ನಿಮ್ಮ ಬ್ಯಾಂಕ್ ಖಾತೆಯನ್ನು ಸಂಪೂರ್ಣವಾಗಿ ಖಾಲಿ ಮಾಡಲು ಆಧಾರ್ ನಲ್ಲಿ ಲಿಂಕ್ ಆಗಿರುವ ಬಯೋಮೆಟ್ರಿಕ್ ಅನ್ನು ಬಳಸಿ ಎಲ್ಲ ಹಣವನ್ನು ದೋಚಿಕೊಳ್ಳುತ್ತಿದ್ದಾರೆ. ವಂಚನೆಗೆ ವಂಚನೆಯಲ್ಲಿ SMS ಅಥವಾ OTP ಯಾವುದೇ ಮೆಸೇಜ್ ನಿಮಗೆ ಬರುವುದಿಲ್ಲ. ವರದಿಗಳ ಪ್ರಕಾರ, ಭಾರತೀಯ ಮಾರುಕಟ್ಟೆಯು ಆಧಾರ್ ಕಾರ್ಡ್‌ಗಳನ್ನು ಬಳಸಿಕೊಳ್ಳುವ ಹೊಸ ರೀತಿಯ ಹಗರಣಗಳು ಹೆಚ್ಚಾಗಿವೆ ಎಂದು ತಿಳಿಸಿದ್ದಾರೆ.
ಈ ಎಲ್ಲ ಸಮಸ್ಯೆಗಳನ್ನು ತಡೆಯಲು ನೀವು ನಿಮ್ಮ ಆಧಾರ್ ಕಾರ್ಡ್ ಗೆ ಬಯೋಮೆಟ್ರಿಕ್ ಅನ್ನು ಲಾಕ್ ಮಾಡಬಹುದು. ಅದು 2 ರೀತಿಯಲ್ಲಿ ಮಾಡಬಹುದು ಹೇಗೆ ಎಂದು ತಿಳಿದು ಕೊಳ್ಳೋಣ ಬನ್ನಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಆನ್‌ಲೈನ್‌ನಲ್ಲಿ ಆಧಾರ್ ಅನ್ನು ಲಾಕ್ ಮಾಡುವುದು ಹೇಗೆ ?
ಹಂತ 1: Uidai ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನೇರ ಲಿಂಕ್‌ಗೆ ಭೇಟಿ ನೀಡಿ. https://resident.uidai.gov.in/bio-lock
ಹಂತ 2: ‘My Aadhaar’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ‘Aadhaar Services’ ಅಡಿಯಲ್ಲಿ, ‘Aadhaar lock/unlock’ ಕ್ಲಿಕ್ ಮಾಡಿ.
ಹಂತ 3: ಆಧಾರ್ ಸಂಖ್ಯೆ ಅಥವಾ VID ಅನ್ನು ನಮೂದಿಸಿ.
ಹಂತ 4: ಕ್ಯಾಪ್ಚಾ ನಮೂದಿಸಿ ಮತ್ತು Send OTP ಕ್ಲಿಕ್ ಮಾಡಿ.
ಹಂತ 5: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ
ಹಂತ 6: ಪರದೆಯ ಮೇಲೆ ಪ್ರದರ್ಶಿಸಲಾದ ನಾಲ್ಕು-ಅಂಕಿಯ ಭದ್ರತಾ ಕೋಡ್ ಅನ್ನು ನಮೂದಿಸಿದ ನಂತರ ‘ಸಕ್ರಿಯಗೊಳಿಸಿ’ ಬಟನ್ ಕ್ಲಿಕ್ ಮಾಡಿ .
ನಿಮ್ಮ ಬಯೋಮೆಟ್ರಿಕ್ಸ್ ಮಾಹಿತಿಯನ್ನು ಹೀಗೆ ಲಾಕ್ ಮಾಡಬಹುದು ಮತ್ತು ಅದನ್ನು ಮತ್ತೆ ಬಳಸಲು ನೀವು ಅದನ್ನು ಅನ್‌ಲಾಕ್ ಮಾಡಬೇಕಾಗುತ್ತದೆ.
mAadhaar ಅಪ್ಲಿಕೇಶನ್ ಮೂಲಕ ಆಧಾರ್ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವುದು ಹೇಗೆ ?
ಹಂತ 1: mAadhaar ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ
ಹಂತ 2: ನಿಮ್ಮ ಆಧಾರ್ ಸಂಖ್ಯೆಯನ್ನು ನೋಂದಾಯಿಸಿ
ಹಂತ 3: OTP ನಮೂದಿಸಿ ಮತ್ತು 4 ಅಂಕಿಗಳ PIN ಹೊಂದಿಸಿ
ಹಂತ 4: ನಿಮ್ಮ ಆಧಾರ್ ಪ್ರೊಫೈಲ್ ಅನ್ನು ನೀವು ನೋಡಬಹುದು
ಹಂತ 5: ಪರದೆಯ ಮೇಲಿನ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ಸ್ಕ್ರಾಲ್ ಮಾಡಿ
ಹಂತ 6: ಲಾಕ್ ಬಯೋಮೆಟ್ರಿಕ್ಸ್ ಮೇಲೆ ಕ್ಲಿಕ್ ಮಾಡಿ
ಹಂತ 7: 4 ಅಂಕಿಗಳ ಪಿನ್ ನಮೂದಿಸಿ
ಈ ರೀತಿಯಿಂದಲೂ ಕೂಡ ನಿಮ್ಮ ಆಧಾರ್ ಕಾರ್ಡ್ ನ ಬಯೋಮೆಟ್ರಿಕ್ ಅನ್ನು ಲಾಕ್ ಮಾಡಬಹುದು.
ಬಯೋಮೆಟ್ರಿಕ್ ಲಾಕ್ ಮಾಡಿದಾಗ ಏನಾಗುತ್ತದೆ?
ನಮ್ಮ ಆಧಾರ್ ಕಾರ್ಡ್ ದೃಢೀಕರಣಕ್ಕಾಗಿ ಹೊಂದಿರುವವರು ಬಯೋಮೆಟ್ರಿಕ್ಸ್ (ಫಿಂಗರ್‌ಪ್ರಿಂಟ್‌ಗಳು/ಐರಿಸ್/ಫೇಸ್)( Identity Proofs ) ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಇದನ್ನು ನಮ್ಮ ಸುರಕ್ಷತಾ ದೃಷ್ಟಿಯಿಂದ ಬಳಸಿಕೊಳ್ಳುವುದು ಕಡ್ಡಾಯವಾಗಿದೆ. ಆಧಾರ್ ಹೊಂದಿರುವವರಿಗೆ ಬಯೋಮೆಟ್ರಿಕ್ ಆಧಾರಿತ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿದಾಗ ಬೇರೆ ಅವರು ಯಾವುದೇ ವಿಧಾನದಿಂದ ಅದನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ