ಐದು ವರ್ಷದೊಳಗಿನ ಮಕ್ಕಳಿಗೂ ಸಿಗುತ್ತದೆ ಬಾಲ್ ಆಧಾರ್ ಕಾರ್ಡ್(Baal Aadhaar details)!. ಆಧಾರ್ ಕಾರ್ಡ್ ಮಾಡಿಸಲು ಪಾಲಿಸಬೇಕಾದ ಕ್ರಮ ಯಾವುವು?
ಭಾರತದಲ್ಲಿ ನಾವು ಜೀವಿಸಬೇಕೆಂದರೆ ಯಾವುದಾದರೂ ಒಂದು ಗುರುತಿನ ಚೀಟಿ(identity card)ಯನ್ನು ಪಡೆದುಕೊಂಡಿರಬೇಕು. ಅಂದರೆ ವೋಟರ್ ಐಡಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್(Ration card) ಈ ರೀತಿಯ ಗುರುತಿನ ಚೀಟಿಗಳ ಆಧಾರದ ಮೇಲೆ ನಾವು ಭಾರತೀಯ ಪ್ರಜೆಯೊ ಅಥವಾ ಅನ್ಯದೇಶಿಯದವರೂ ಎಂದು ತಿಳಿದುಕೊಳ್ಳಬಹುದು. ಆದರೆ ಕೆಲವು ಗುರುತಿನ ಚೀಟಿಗಳನ್ನು ಪಡೆದುಕೊಳ್ಳಲು ನಿರ್ದಿಷ್ಟವಾದ ವಯಸ್ಸು ಇರಬೇಕಾಗುತ್ತದೆ. ಆದರೆ ಆಧಾರ್ ಕಾರ್ಡ್ (Adhar card) ಅನ್ನು ಎಲ್ಲಾ ವಯಸ್ಸಿನವರು ಕೂಡ ಮಾಡಿಸಿಕೊಳ್ಳಬಹುದು. ಆದರೆ ಐದು ವರ್ಷದೊಳಗಿನ ಮಕ್ಕಳು ಆಧಾರ್ ಕಾರ್ಡನ್ನು ಮಾಡಿಸಿಕೊಳ್ಳಲು ಕೆಲವೊಂದು ಕ್ರಮಗಳನ್ನು ಪಾಲಿಸಬೇಕು. ಯಾವ ಕ್ರಮಗಳನ್ನು ಪಾಲಿಸಬೇಕು? ಹಾಗೂ ಈ ಆಧಾರ್ ಕಾರ್ಡನ್ನು ಪಡೆಯುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು ಐದು ವರ್ಷದೊಳಗಿನ ಮಕ್ಕಳಿಗಾಗಿ ಸರ್ಕಾರ ಬಾಲ್ ಆಧಾರ್ ಕಾರ್ಡ್ ಅಥವಾ ನೀಲಿ ಆಧಾರ್ ಕಾರ್ಡ್ (blue adhar card) ನೀಡುತ್ತದೆ. 2018 ರಿಂದ ಬಾಲ್ ಆಧಾರ್ ಕಾರ್ಡನ್ನು ಪರಿಚಯಿಸಲಾಯಿತು. ಈ ಒಂದು ಆಧಾರ್ ಕಾರ್ಡ್ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒಳಗೊಂಡಿದೆ. ವಯಸ್ಕರಿಗೆ ಆಯತಾಕಾರದ ಬಿಳಿ ಆಧಾರ್ ಕಾರ್ಡ್ (White adhar card) ನೀಡಲಾಗುತ್ತದೆ. ಅದೇ ರೀತಿಯಾಗಿ ಬಾಲ್ ಆಧಾರ್ ಕಾರ್ಡ್ ನೀಲಿ ಬಣ್ಣದಿಂದ ಇದೆ. ಆದ್ದರಿಂದ ಇದನ್ನು ನೀಲಿ ಆಧಾರ್ ಕಾರ್ಡ್ ಎಂದು ಕೂಡ ಕರೆಯಲಾಗುತ್ತದೆ.
ಸಾಮಾನ್ಯವಾಗಿ ಆಧಾರ್ ಕಾರ್ಡ್ ಬಹಳ ಮುಖ್ಯವಾದಂತಹ ಗುರುತಿನ ಚೀಟಿ. ಅದರಲ್ಲೂ ಸರ್ಕಾರದಿಂದ ಬರುವಂತಹ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ ಪ್ರಮುಖವಾದದ್ದು. ಬಾಲ್ ಆಧಾರ್ ಕಾರ್ಡ್ ಕೂಡ ವಯಸ್ಕರಿಗೆ ನೀಡುವ ಆಧಾರ್ ಕಾರ್ಡ್ ಗಳಂತೆಯೇ ಇರುತ್ತದೆ. ಬಾಲ್ ಆಧಾರ್ ಕಾರ್ಡ್ ನಲ್ಲಿ (Baal adhar card) ಪೋಷಕರ ಹೆಸರು ಮತ್ತು ಶಾಶ್ವತ ವಿಳಾಸವನ್ನು ಒಳಗೊಂಡಿರುತ್ತದೆ.
ನೀಲಿ ಆಧಾರ್ ಕಾರ್ಡ್(Blue Aadhar card) ಅಥವಾ ಬಾಲ್ ಆಧಾರ್ ಕಾರ್ಡನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ ಯುಐಡಿಎಐ(UIDAI) ನೀಡಲಾಗುತ್ತದೆ. ಈ ಒಂದು ಆಧಾರ್ ಕಾರ್ಡ್ ಮಕ್ಕಳು ಶಾಲೆಗೆ ಪ್ರವೇಶಿಸುವಾಗ ಅಥವಾ ಸರ್ಕಾರಿ ಯೋಜನೆಗಳನ್ನು (government schemes) ಪಡೆದುಕೊಳ್ಳುವಲ್ಲಿ ಈ ಒಂದು ಆಧಾರ್ ಕಾರ್ಡ್ ಪ್ರಮುಖ ಪಾತ್ರವನ್ನು ವಹಿಸುತ್ತದೆ.
Bal Aadhaar Card ಅನ್ನು ಮಗುವಿನ ಪೋಟೋ ಸೆರೆಹಿಡಿದು ದಾಖಲಿಸುಲಾಗುತ್ತದೆ. ಆದರೆ ಮಗುವಿನ ಫಿಂಗರ್ ಪ್ರಿಂಟ್, ಕಣ್ಣಿನ ಸ್ಕ್ಯಾನ್ (ಐರಿಸ್), ಫೋಟೋ ಇತ್ಯಾದಿ ಪಡೆಯಲಾಗುವುದಿಲ್ಲ. ಏಕೆಂದರೆ ಮಕ್ಕಳ ಬೆರಳು ಮತ್ತು ಕಣ್ಣಿನ ಅಚ್ಚುಗಳು ಬೆಳವಣಿಗೆಯೊಂದಿಗೇ ಬದಲಾಗುತ್ತಾ ಹೋಗುತ್ತವೆ ಆದ್ದರಿಂದ ಈ ಎಲ್ಲಾ ವಿವರಗಳನ್ನು ಐದು ವರ್ಷದ ನಂತರ ಮತ್ತೆ ನವೀಕರಿಸಲಾಗುತ್ತದೆ. ಈ ಆಧಾರ್ ಕಾರ್ಡನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು. ಅರ್ಜಿಯನ್ನು ನೀಡಿದ ಮೂರು ತಿಂಗಳ ಒಳಗಾಗಿ ನಮೂದಿಸಲ್ಪಟ್ಟ ವಿಳಾಸಕ್ಕೆ ಆಧಾರ್ ಕಾರ್ಡ್ ಬಂದು ತಲುಪುತ್ತದೆ.
ಬಾಲ್ ಆಧಾರ್ ಕಾರ್ಡ್ 5 ವರ್ಷಗಳ ವರೆಗೆ ಮಾತ್ರ ಮಾನ್ಯ ವಾಗಿರುತ್ತದೆ. ತದನಂತರ ಮಗುವಿನ ಪೋಷಕರು ಆಧಾರ್ ಕೇಂದ್ರಕ್ಕೆ ಹೋಗಿ ಮಗುವಿನ ಫಿಂಗರ್ ಪ್ರಿಂಟ್, ಕಣ್ಣಿನ ಸ್ಕ್ಯಾನ್ (ಐರಿಸ್), ಫೋಟೋ ಇತ್ಯಾದಿ ಗಳನ್ನು ನೀಡುವ ಮುಖಾಂತರ ಆಧಾರ್ ಅಪ್ಡೇಟ್ (Adhar Update) ಮಾಡಿಸಬೇಕಾಗುತ್ತದೆ. ತದನಂತರ ಮಗುವಿಗೆ 15 ವರ್ಷವಾದ ಬಳಿಕ ಮತ್ತೊಮ್ಮೆ ಈ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು. ಐದರಿಂದ ಏಳು ವರ್ಷ ವಯಸ್ಸಿನಲ್ಲಿ ಉಚಿತವಾಗಿ ಬಯೋಮೆಟ್ರಿಕ್ ಅಪ್ಡೇಟ್ (biometric update) ಮಾಡಬಹುದು. ಹಾಗೆಯೇ, 15ರಿಂದ 17 ವರ್ಷ ವಯಸ್ಸಿನಲ್ಲೂ ಉಚಿತವಾಗಿ ಅಪ್ಡೇಟ್ ಮಾಡಿಸಬಹುದು.
ಮಕ್ಕಳ ಬಾಲ್ ಆಧಾರ್ ಕಾರ್ಡ್ ಪಡೆಯುವ ಕ್ರಮಗಳು:
ಬಾಲ್ ಆಧಾರ್ ಕಾರ್ಡ್ ನಲ್ಲಿ ಡೆಮಾಗ್ರಫಿಕ್ ವಿವರ ಅಂದರೆ ಆಧಾರ್ ನಂಬರ್, ಹೆಸರು, ವಿಳಾಸ, ಪೋಷಕರ ಹೆಸರು ಇತ್ಯಾದಿವಿವರಗಳ ಜೊತೆಯಲ್ಲಿ ಕ್ಯೂಆರ್ ಕೋಡ್ (QR code) ಕೂಡ ಇರುತ್ತದೆ.
ನಿಮ್ಮ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಬೇಕಾದರೆ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ.
ಅಧಿಕಾರಿಗಳು ನೀಡಿದ ಅರ್ಜಿಯಲ್ಲಿ ಎಲ್ಲಾ ವಿವರಗಳನ್ನು ಸ್ಪಷ್ಟವಾಗಿ ತುಂಬಬೇಕು.
ದಾಖಲೆಗಾಗಿ ಮಗುವಿನ ಜನನ ಪ್ರಮಾಣ ಪತ್ರವನ್ನು ನೀಡಬೇಕು.
ಮಗುವಿನ ಫೋಟೋ ಪಡೆಯಲಾಗುತ್ತದೆ.
ಪೋಷಕರು ತಮ್ಮ ಆಧಾರ್ ಸಂಖ್ಯೆಯನ್ನೂ ನಮೂದಿಸಬೇಕು. ಪೋಷಕರ ಆಧಾರ್ ಕಾರ್ಡ್ ಅನ್ನು ಬಾಲ್ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲಾಗುತ್ತದೆ.
ಅರ್ಜಿಯನ್ನು ನೀಡಿದ ಮೂರು ತಿಂಗಳ ಒಳಗಾಗಿ ನಮೂದಿಸಲ್ಪಟ್ಟ ವಿಳಾಸಕ್ಕೆ ಆಧಾರ್ ಕಾರ್ಡ್ ಬಂದು ತಲುಪುತ್ತದೆ. ಹಾಗೂ ಬಾಲ್ ಆಧಾರ್ ಕಾರ್ಡ್ ಗೆ ಲಿಂಕ್ ಆದ ಪೋಷಕರ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ನಂಬರ್ ಹಾಗೂ ಇಮೇಲ್ ಗೆ ನೋಟಿಫಿಕೇಶನ್ ಬರುತ್ತದೆ.
ಬಾಲ್ ಆಧಾರ್ ಕಾರ್ಡ್ ಮಗುವಿನ ಒಂದು ಪ್ರಮುಖ ದಾಖಲೆಯಾಗಿದ್ದು, ಯಾರೆಲ್ಲ ಇದುವರೆಗೂ ತಮ್ಮ ಮಗುವಿಗೆ ಆಧಾರ್ ಮಾಡಿಸಿರುವುದಿಲ್ಲ ಅಂತವರು ಆಧಾರ್ ಕಾರ್ಡ್ ಮಾಡಿಸಿಕೊಂಡು, ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ