ಆಧಾರ್ ಕಾರ್ಡ್ 5 ಹೊಸ ನಿಯಮ ಜಾರಿ, ಆಧಾರ್ ಇದ್ದವರು ತಪ್ಪದೇ ತಿಳಿದುಕೊಳ್ಳಿ

1000349656

ಆಧಾರ್ ಕಾರ್ಡ್ ಬಳಸುವಾಗ ಎಚ್ಚರ!. ಈ ಹೊಸ ರೂಲ್ಸ್ ಗಳ ಬಗ್ಗೆ ತಿಳಿದುಕೊಳ್ಳದಿದ್ದರೆ ಮುಂದೆ ಸಮಸ್ಯೆ ಕಟ್ಟಿಟ್ಟಬುತ್ತಿ.

ಆಧಾರ್ ಕಾರ್ಡ್‌ (Adhar card) ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಮುಖ್ಯವಾದ ಗುರುತಿನ ದಾಖಲೆ. ಇದು ಬ್ಯಾಂಕ್ ಖಾತೆ (Bank account) ತೆರೆಯುವುದು, ಪಾನ್ ಕಾರ್ಡ್(PAN card) ಪಡೆಯುವುದು, ಪಿಂಚಣಿ(pension) ಪಡೆಯುವುದು, ಮತ್ತು ಇತರ ಹಲವಾರು ಸೇವೆಗಳಿಗೆ ಅಗತ್ಯವಿದೆ. ಆಧಾರ್ ಕಾರ್ಡ್‌ನ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು (Government) ಕಾಲಕಾಲಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇತ್ತೀಚೆಗೆ, ಸರ್ಕಾರವು ಆಧಾರ್ ಕಾರ್ಡ್ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ನು ತಿಳಿದುಕೊಳ್ಳದಿದ್ದರೆ, ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆಧಾರ್ ಕಾರ್ಡ್‌ ನಿಷ್ಕ್ರಿಯಗೊಳಿಸುವ (Disabling) ಹೊಸ ವ್ಯವಸ್ಥೆ:

ವ್ಯಕ್ತಿಯ ಮರಣದ ನಂತರ ಆಧಾರ್ ಕಾರ್ಡ್‌ ಅನ್ನು ನಿಷ್ಕ್ರಿಯಗೊಳಿಸುವುದು ಅತ್ಯಂತ ಮುಖ್ಯವಾಗಿದೆ. ಇದನ್ನು ನಿರ್ಲಕ್ಷಿಸಿದರೆ, ಆಧಾರ್ ಕಾರ್ಡ್‌ ದುರುಪಯೋಗವಾಗುವ ಸಾಧ್ಯತೆ ಇದೆ. ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಸಹಯೋಗದಲ್ಲಿ ಆಧಾರ್ ಕಾರ್ಡ್‌ ನಿಷ್ಕ್ರಿಯಗೊಳಿಸುವ ಹೊಸ ವ್ಯವಸ್ಥೆಯನ್ನು (New system) ಜಾರಿಗೆ ತರುವ ಯೋಜನೆಯಲ್ಲಿ ಇದೆ. ಮೃತರ ಕುಟುಂಬದ ಒಪ್ಪಿಗೆಯ ನಂತರ ಆಧಾರ್ ನಿಷ್ಕ್ರಿಯಗೊಳಿಸಲಾಗುವುದು.

ಆಧಾರ್‌ ನೋಂದಣಿಗೆ ಹೊಸ ಫಾರ್ಮ್‌ಗಳು:

ಆಧಾರ್‌ ನೋಂದಣಿ ಮತ್ತು ವಿವರಗಳ ನವೀಕರಣಕ್ಕಾಗಿ ಸರ್ಕಾರವು ಹೊಸ ಫಾರ್ಮ್‌ಗಳನ್ನು ಪರಿಚಯಿಸಿದೆ. 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ಫಾರ್ಮ್‌ 1 ಮೂಲಕ ಆಧಾರ್‌ಗೆ ಅರ್ಜಿ (Application) ಸಲ್ಲಿಸಬಹುದು. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಫಾರ್ಮ್‌ 5 ಅನ್ನು ಬಳಸಬಹುದು. ವಿದೇಶದ ವಿಳಾಸ ಪುರಾವೆ ಹೊಂದಿರುವ ಎನ್‌ಆರ್‌ಐಗಳಿಗಾಗಿ ಫಾರ್ಮ್‌ 2 ಅನ್ನು ಬಳಸಲಾಗುತ್ತದೆ. ಈ ಹೊಸ ಫಾರ್ಮ್‌ಗಳ ಬಳಕೆ ಮೂಲಕ, ಆಧಾರ್‌ ನೋಂದಣಿ ಮತ್ತು ನವೀಕರಣ ಪ್ರಕ್ರಿಯೆ ಸುಲಭವಾಗಲಿದೆ.

ಆಧಾರ್‌ ಕಾರ್ಡ್‌ ತಿದ್ದುಪಡಿ ಮತ್ತು ರದ್ದುಪಡಿಸಲು ಅರ್ಜಿ ಸಲ್ಲಿಕೆ:

ಹೊಸ ನಿಯಮಗಳ ಪ್ರಕಾರ, ಆಧಾರ್‌ ಕಾರ್ಡ್‌ ಹೊಂದಿರುವ 18 ವರ್ಷಕ್ಕಿಂತ ಮೇಲ್ಪಟ್ಟವರು ಆಧಾರ್‌ ತಿದ್ದುಪಡಿ (Amendment of Aadhaar) ಹಾಗೂ ಆಧಾರ್‌ ನಂಬರ್‌ ರದ್ದುಪಡಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಅದಕ್ಕಾಗಿ ಫಾರ್ಮ್‌ 9 ಅನ್ನು ಬಳಸಬಹುದು. ಈ ಫಾರ್ಮ್‌ 18 ವರ್ಷ ತುಂಬಿದವರು ಆಧಾರ್‌ ಕಾರ್ಡ್‌ ತಿದ್ದುಪಡಿ ಅಥವಾ ರದ್ದುಪಡಿಸಲು ಸಲ್ಲಿಸುವ ಅರ್ಜಿಯಾಗಿದೆ.

ಆಧಾರ್‌ ಅಪ್‌ಡೇಟ್‌ ಉಚಿತ ಸೇವೆ (Adhar Update free service) :

ಸರ್ಕಾರವು ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡುವ ಪ್ರಕ್ರಿಯೆಯನ್ನು ಉಚಿತವಾಗಿ ಮಾಡಲು ಅವಕಾಶ ನೀಡಿದೆ. ನೀವು ಮೈ ಆಧಾರ್‌ ಪೋರ್ಟಲ್‌ನಲ್ಲಿ (My adhar portal) ಆಧಾರ್‌ ಅಪ್‌ಡೇಟ್‌ ಡಾಕ್ಯುಮೆಂಟ್‌ಗಳನ್ನು ಉಚಿತವಾಗಿ ಅಪ್‌ಲೋಡ್‌ ಮಾಡಬಹುದು. ನಂತರ ನೀವು ಶುಲ್ಕವನ್ನು ಪಾವತಿಸುವ ಮೂಲಕ ಆಧಾರ್‌ ಕಾರ್ಡ್‌ಗಾಗಿ ನಿಮ್ಮ ಗುರುತಿನ ದಾಖಲೆಗಳನ್ನು ನವೀಕರಿಸಬೇಕಾಗುತ್ತದೆ.

ಮಕ್ಕಳ ಆಧಾರ್‌ ಕಾರ್ಡ್‌ (Children’s adhar card) ಸಂಬಂಧಿಸಿದ ನಿಯಮಗಳು:

1 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಆಧಾರ್‌ ಕಾರ್ಡ್‌ ಮಾಡಿಸುವ ವಿಧಾನವನ್ನು ಸರಳಗೊಳಿಸಲಾಗಿದೆ. ಮಗುವಿನ ಜನನ ಪ್ರಮಾಣಪತ್ರ ಮತ್ತು ಪೋಷಕರ ಗುರುತಿನ ಚೀಟಿ (Parent’s Identity Card) ಯನ್ನು ಬಳಸಿಕೊಂಡು ಹತ್ತಿರದ ಆಧಾರ್‌ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಸಬಹುದು. ಈ ಪ್ರಕ್ರಿಯೆ ಪೋಷಕರಿಗೆ ಸುಲಭವಾಗಿದ್ದು, ಮಕ್ಕಳಿಗೆ ಆಧಾರ್‌ ಕಾರ್ಡ್‌ ಪಡೆಯಲು ಸಹಾಯಕವಾಗಿದೆ.

ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ (Adhar card link is compulsory) :

ಭಾರತ ಸರ್ಕಾರವು ಆಧಾರ್ ಕಾರ್ಡ್ ಅನ್ನು ವಿವಿಧ ದಾಖಲೆಗಳಿಗೆ ಲಿಂಕ್ ಮಾಡುವುದು ಕಡ್ಡಾಯಗೊಳಿಸಿದೆ. ಪಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ಅವಧಿ ಈಗಾಗಲೇ ಮುಗಿದಿದೆ. ಇತ್ತೀಚೆಗೆ, ಕರ್ನಾಟಕ ಸರ್ಕಾರವು (Karnataka Government) ಜಮೀನಿನ ಪಹಣಿ (RTC) ದಾಖಲೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಿದೆ ಎಂದು ಘೋಷಿಸಿದೆ.  ಈ ಕ್ರಮವು ಭೂ ಸಂಬಂಧಿತ ವಂಚನೆಗಳನ್ನು ತಡೆಯಲು ಮತ್ತು ರೈತರಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸಲು ಸಹಾಯಕವಾಗಲಿದೆ.  ಅದೇ ರೀತಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಲ್ಲಾ ಪರೀಕ್ಷೆಗಳಿಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸಲು ಪ್ರಸ್ತಾವನೆ ಸಲ್ಲಿಸಿದೆ, ಇದು ಸೀಟ್ ಬ್ಲಾಕಿಂಗ್ ದಂಧೆಯನ್ನು ತಡೆಯಲು ಸಹಾಯಕವಾಗಲಿದೆ. ಆಧಾರ್ ಲಿಂಕ್ ಮಾಡದಿದ್ದಲ್ಲಿ, ಸರ್ಕಾರದ ಸೌಲಭ್ಯಗಳು ಮತ್ತು ಯೋಜನೆಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ, ನಿಮ್ಮ ಆಧಾರ್ ಕಾರ್ಡ್ ಅನ್ನು ಸಂಬಂಧಿತ ದಾಖಲೆಗಳಿಗೆ ಶೀಘ್ರವೇ ಲಿಂಕ್ (Link) ಮಾಡುವುದು ಅಗತ್ಯ.

ಬಯೋಮೆಟ್ರಿಕ್ ಅಪ್‌ಡೇಟ್ (Biometric Update) :

2025ರಲ್ಲಿ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಕೊಳ್ಳುವುದು ಎಲ್ಲ ಭಾರತೀಯರಿಗೂ ಕಡ್ಡಾಯವಾಗಿದೆ ಎಂದು ಸರ್ಕಾರ ಪ್ರಕಟಿಸಿದೆ. ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್, ಮತ್ತು ಇತರ ವೈಯಕ್ತಿಕ ಮಾಹಿತಿಗಳನ್ನು ನವೀಕರಿಸುವಂತೆ ಸೂಚಿಸಲಾಗಿದೆ. ಈ ಅಪ್‌ಡೇಟ್ ಪ್ರಕ್ರಿಯೆ ಆಧಾರ್ ಡೇಟಾಬೇಸ್‌ ಅನ್ನು ನಿಖರಗೊಳಿಸುವುದರ ಜೊತೆಗೆ, ಸರ್ಕಾರಿ ಯೋಜನೆಗಳ (Government schemes) ಪ್ರಯೋಜನಗಳನ್ನು ಸುಲಭವಾಗಿ ಪಡೆಯಲು ಸಹಕಾರಿಯಾಗಲಿದೆ. ಹೀಗಾಗಿ, ತಕ್ಷಣವೇ ಸಮೀಪದ ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಿ, ಅಗತ್ಯ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸಿ. ಪ್ರಕ್ರಿಯೆ ಸುಲಭವಾಗಿಸಲು ಸರ್ಕಾರ ಆನ್‌ಲೈನ್‌ ಮೂಲಕ ಅಪಾಯಿಂಟ್‌ಮೆಂಟ್‌ ವ್ಯವಸ್ಥೆ (Online Appointment system) ಒದಗಿಸಿದೆ. ನಿರ್ದಿಷ್ಟ ಸಮಯದಲ್ಲೇ ಈ ಕಾರ್ಯಾಚರಣೆ ಪೂರ್ಣಗೊಳಿಸುವುದು ಮಹತ್ವವಾಗಿದೆ. ಅತೀ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ, ನೀವು ಬಯೋಮೆಟ್ರಿಕ್ ಅಪ್‌ಡೇಟ್ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು.

ಆಧಾರ್‌ ಕಾರ್ಡ್‌ ಸಂಬಂಧಿಸಿದ ಈ ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಮುಖ್ಯ. ಈ ನಿಯಮಗಳನ್ನು ಪಾಲಿಸುವ ಮೂಲಕ, ಭವಿಷ್ಯದಲ್ಲಿ ಯಾವುದೇ ಸಮಸ್ಯೆಗಳನ್ನು ತಪ್ಪಿಸಬಹುದು ಮತ್ತು ಸರ್ಕಾರದ ವಿವಿಧ ಸೇವೆಗಳನ್ನು (Government many services) ಸುಲಭವಾಗಿ ಪಡೆಯಬಹುದು. ಆಧಾರ್‌ ಕಾರ್ಡ್‌ ನವೀಕರಣ, ತಿದ್ದುಪಡಿ, ಅಥವಾ ರದ್ದುಪಡಿಸುವ ಪ್ರಕ್ರಿಯೆಗಳಲ್ಲಿ ಈ ನಿಯಮಗಳನ್ನು ಅನುಸರಿಸುವುದು ಅಗತ್ಯ. ಹೆಚ್ಚಿನ ಮಾಹಿತಿಗಾಗಿ, ಯುಐಡಿಎಐ(UIDAI) ಅಧಿಕೃತ ವೆಬ್‌ಸೈಟ್‌ ಅಥವಾ ಹತ್ತಿರದ ಆಧಾರ್‌ ಕೇಂದ್ರವನ್ನು ಸಂಪರ್ಕಿಸಬಹುದು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!