ಆಧಾರ್ ಕಾರ್ಡ್ ಅಪ್ಡೇಟ್ (Aadhaar card update) ಬಗ್ಗೆ ನೀವು ತಿಳಿಯಲೇಬೇಕಾದ ಹಲವು ವಿಷಯಗಳು, ಇಲ್ಲಿದೆ ಸಂಪೂರ್ಣ ಮಾಹಿತಿ..!
ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card). ಎಲ್ಲಾ ಕೆಲಸಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಜೂನ್ ತಿಂಗಳಲ್ಲಿ ಆದ ವಿಸ್ತರಣೆಯ ಬಳಿಕ ಇದು ಎರಡನೇ ವಿಸ್ತರಣೆಯಾಗಿದೆ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ. ಹಾಗಾಗಿ ನಾವು ಎಲ್ಲಾ ಕೆಲಸ ಕಾರ್ಯಗಳಿಗೂ ಆಧಾರ್ ಕಾರ್ಡ್ ಬಳಸುತ್ತೇವೆ. ಆದ್ದರಿಂದ ಸ್ವಲ್ಪ ಸಮಯದ ನಂತರ ನಾವು ಆಧಾರ್ ಅಪ್ ಡೇಟ್(Aadhaar card update) ಮಾಡಿಸಿಕೊಳ್ಳುವುದು ಅಗತ್ಯ. ಆಧಾರ್ ಕಾರ್ಡ್ ನ ಅಪ್ ಡೇಟ್ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆಧಾರ್ ಕಾರ್ಡ್ ಅಪ್ ಡೇಟ್ (Aadhaar card update) :
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ( UIDAI ) ಆಧಾರ್ ಕಾರ್ಡ್ ಹೊಂದಿರುವ ಎಲ್ಲಾ ಭಾರತೀಯರಿಗೆ 10 ವರ್ಷ ಹಿಂದಿನ ಆಧಾರ್ ಕಾರ್ಡನ್ನು ತಕ್ಷಣ ಅಪ್ ಡೇಟ್ ಮಾಡಬೇಕು ಎಂದು ತಿಳಿಸಿದೆ. ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದರಿಂದ ಹೆಸರು ವಿಳಾಸ ಅಥವಾ ಇನ್ನಾವುದೇ ಬದಲಾವಣೆ ಇದ್ದರೆ ಸರಿಯಾಗುತ್ತದೆ. ಆದ್ದರಿಂದ ಆಧಾರ್ ಹೊಂದಿರುವವರ ನವೀಕರಣದ ಗಡುವನ್ನು ಮತ್ತೆ ವಿಸ್ತರಿಸಿದೆ. ಹೀಗಾಗಿ ಸರ್ಕಾರ ಡಿಸೆಂಬರ್ 14 (december 14) ರವರೆಗೆ ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ (free update) ಮಾಡಲು ಅವಕಾಶ ನೀಡಿದೆ.
ಬಯೋಮೆಟ್ರಿಕ್ ವಿವರಗಳನ್ನು ಉಚಿತವಾಗಿ ಅಪ್ಡೇಟ್ (free update) ಮಾಡಲು ಅವಕಾಶವಿಲ್ಲ:
ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಕೆಲವು ವಿವರಗಳನ್ನು ಉಚಿತವಾಗಿ ನವೀಕರಿಸುವ ಪ್ರಕ್ರಿಯೆಯು UIDAIನ ಆನ್ಲೈನ್ ಪೋರ್ಟಲ್ ಮೂಲಕ ಮಾತ್ರ ಲಭ್ಯವಿದೆ. ಆದರೆ ಬಯೋಮೆಟ್ರಿಕ್ ವಿವರಗಳನ್ನು ಉಚಿತವಾಗಿ ಅಪ್ಡೇಟ್ (free update) ಮಾಡಲು ಅವಕಾಶವಿಲ್ಲ. ಒಂದುವೇಳೆ ನೀವು ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಲು ಬಯಸಿದರೆ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ಶುಲ್ಕ ಪಾವತಿ ಮಾಡಿ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಬಹುದು.
ಆಧಾರ್ ಅಪ್ ಡೇಟ್ ಏಕೆ ಮಾಡಿಸಬೇಕು?:
ನಾವು ಇಂದು ಆಧಾರ್ ಕಾರ್ಡನ್ನು ಎಲ್ಲಾ ಕಡೆಯೂ ಬಳಸುತ್ತಿದ್ದೇವೆ. ಬಹಳ ಮುಖ್ಯವಾಗಿ ಸರ್ಕಾರದಿಂದ ಏನನ್ನಾದರೂ ಪಡೆಯಬೇಕು ಎಂದರೆ ಈ 12 ಅಂಕಿಯ ವಿಶಿಷ್ಟ ಗುರಿತಿನ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಅವರು ನಮಗೆ ಸಹಾಯ ಮಾಡುತ್ತಾರೆ. ಕೇವಲ ಸರ್ಕಾರಿ ಯೋಜನೆಗಳಲ್ಲದೆ (government schemes) ಪ್ರಯಾಣ ಟಿಕೆಟ್ಗಳನ್ನು ಕಾಯ್ದಿರಿಸಲು, ಬ್ಯಾಂಕ್ ಖಾತೆಗಳನ್ನು ತೆರೆಯಲು ಹೀಗೆ ಹಲವಾರು ಕೆಲಸಗಳಿಗೆ ಪ್ರತಿನಿತ್ಯವೂ ಕೂಡ ಆಧಾರ್ ಕಾರ್ಡನ್ನು ಬಳಸುತ್ತಿದ್ದೇವೆ. ಆದ್ದರಿಂದ ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ಇರುವಂತಹ ವಿವರಗಳು ಹಳೆಯದಾಗಿದ್ದರೆ ಅಥವಾ ತಪ್ಪಾಗಿದ್ದರೆ ಈ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಥವಾ ಕಷ್ಟಗಳನ್ನು ಎದುರಿಸಬೇಕಾಗಬಹುದು. ಇದರ ಜೊತೆಯಲ್ಲಿ ಇತ್ತೀಚಿಗೆ ಆಧಾರ್ ಕಾರ್ಡ್ ನಿಂದ ಆಗುತ್ತಿರುವಂತಹ ಆದ ಸಂಬಂಧಿತ ವಂಚನೆಯನ್ನು ತಡೆಯಲು ಆಧಾರ್ ಅಪ್ ಡೇಟ್ ಮಾಡಿಸುವುದು ಬಹಳ ಮುಖ್ಯ.
ಆಧಾರ್ ಅಪ್ ಡೇಟ್ ಅನ್ನು ಯಾರೆಲ್ಲ ಮಾಡಿಸಬೇಕು :
ಆಧಾರ್ ಅಪ್ ಡೇಟ್ ಮಾಡಿಸುವುದು ಬಹಳ ಮುಖ್ಯ. ಏಕೆಂದರೆ ಆಧಾರ್ ಇಲ್ಲದೆ ಇಂದು ನಮ್ಮ ಜೀವನದಲ್ಲಿ ಯಾವ ಕೆಲಸವೂ ಆಗದಂತೆ ಆಗಿದೆ ಆದ್ದರಿಂದ. ನಿರ್ದಿಷ್ಟ ಸಮಯದಲ್ಲಿ ಅಥವಾ ನಮಗೆ ಪ್ರಯೋಜನ ವಾಗುವಂತೆ ಆಧಾರ್ ಅಪ್ ಡೇಟ್ ಮಾಡಿಸುವುದು ಅಗತ್ಯ.
ಹತ್ತು ವರ್ಷ ಹಿಂದಿನ ಆಧಾರ್ ಕಾರ್ಡ್ :
ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಹತ್ತು ವರ್ಷ ಹಿಂದಿನದ್ದಾಗಿದ್ದರೆ ಅಂತಹ ಆಧಾರ್ ಕಾರ್ಡನ್ನು ಕೂಡಲೇ ಅಪ್ ಡೇಟ್ ಮಾಡಿಸಬೇಕಾಗುತ್ತದೆ. ಏಕೆಂದರೆ 10 ವರ್ಷ ಹಿಂದಿನ ಆಧಾರ್ ಕಾರ್ಡಲ್ಲಿ ಕೊಟ್ಟಿರುವಂತಹ ನಿಮ್ಮ ಬಯೋಮೆಟ್ರಿಕ್ (Biometric) ವಿವರಗಳು ಹಾಗೂ ಫೋಟೋ ಇತ್ಯಾದಿ ಕೊಂಚ ಬದಲಾವಣೆ ಗೊಂಡಿರುತ್ತವೆ ಆದ್ದರಿಂದ 10 ವರ್ಷಗಳ ಹಿಂದೆನ ಆಧಾರ್ ವಿವರಗಳನ್ನು ನವೀಕರಿಸಲು ಹೆಚ್ಚು ಶಿಫಾರಸು ಮಾಡಲಾಗಿದೆ.
15 ವರ್ಷ ತುಂಬಿದ ಮಕ್ಕಳು:
ಮಕ್ಕಳಿಗೆ 15 ವರ್ಷ ತುಂಬಿದ ನಂತರ ಅವರ ಬಯೋಮೆಟ್ರಿಕ್ ವಿವರಗಳು ಬದಲಾಗುತ್ತದೆ ಆದ್ದರಿಂದ 15 ವರ್ಷ ತುಂಬಿದ ಮಕ್ಕಳ ಆಧಾರ್ ನಲ್ಲಿ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಬೇಕಾಗುತ್ತದೆ.
ಬಯೋಮೆಟ್ರಿಕ್ (Biometric) ಬದಲಾವಣೆಗಳು:
ಆಧಾರ್ ಅಪ್ ಡೇಟ್ ಮಾಡಿಸುವಾಗ ಕೆಲವರು ಬಯೋಮೆಟ್ರಿಕ್ ಮಾಡಿಸುವ ಅನಿವಾರ್ಯತೆ ಇದೆ. ಏಕೆಂದರೆ ಅಪಘಾತ, ಶಸ್ತ್ರಚಿಕಿತ್ಸೆ ಅಥವಾ ವೈದ್ಯಕೀಯ ಪರಿಸ್ಥಿತಿಯಲ್ಲಿ ನಿಮ್ಮ ಫಿಂಗರ್ಪ್ರಿಂಟ್ಗಳು ಅಥವಾ ಐರಿಸ್ ಸ್ಕ್ಯಾನ್ಗಳಂತಹ ನಿಮ್ಮ ಬಯೋಮೆಟ್ರಿಕ್ ಡೇಟಾದ ಮೇಲೆ ಪರಿಣಾಮ ಬೀರಿದ್ದರೆ ಆಧಾರ್ ಕಾರ್ಡ್ ನಲ್ಲಿ ಬಯೋಮೆಟ್ರಿಕ್ ಬದಲಾವಣೆಗಳು ಮಾಡಿಸಬೇಕು.
ದೃಢೀಕರಣ ವೈಫಲ್ಯಗಳು:
ಹಣಕಾಸು ವಹಿವಾಟಿನ ಸಮಯದಲ್ಲಿ ಅಥವಾ ಸರ್ಕಾರಿ ಯೋಜನೆಗಳನ್ನು ಪಡೆಯುವಾಗ ಪುನರಾವರ್ತಿತ ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ವಿವರಗಳನ್ನು ಪರಿಶೀಲಿಸುವುದು ಮತ್ತು ನವೀಕರಿಸುವುದು ಬಹಳ ಮುಖ್ಯ.
ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಬೇಕಾಗುವ ಅಗತ್ಯ ದಾಖಲೆಗಳು:
ನಿಮ್ಮ ರೇಷನ್ ಕಾರ್ಡ್ ( Ration Card )
ಬ್ಯಾಂಕ್ ಪಾಸ್ ಬುಕ್ (bank pass book)
ಅಥವಾ ವಿದ್ಯುತ್ ಬಿಲ್ (electric bill)
ಗುರುತಿನ ಚೀಟಿಗೆ ನಿಮ್ಮ ವೋಟರ್ ಐಡಿ ( Voter ID ) ಡ್ರೈವಿಂಗ್ ಲೈಸೆನ್ಸ್ ( D L ) ಅಥವಾ ಪಾಸ್ ಪೋರ್ಟ್ ಅನ್ನು ಬಳಸಬಹುದು.
ಆಧಾರ್ ಕಾರ್ಡ್ ಅಪ್ ಡೇಟ್ ಮಾಡುವ ವಿಧಾನ :
ಹಂತ 1: ಆಧಾರ್ ಕಾರ್ಡ್ ಅನ್ನು ಅಪ್ ಡೇಟ್ ಮಾಡಲು ( Aadhar Update ) https://uidai.gov.in/en/ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು.
ಹಂತ 2: ನಂತರ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಹಾಕಿ, ಆಧಾರ್ ಕಾರ್ಡ್ ನಂಬರಿಗೆ ಲಿಂಕ್ ಇರೋ ಮೊಬೈಲ್ ನಂಬರ್ ಗೆ ಓಟಿಪಿ (OTP) ಬರುತ್ತದೆ ಒಟಿಪಿಯನ್ನ ನಮೂದಿಸುವ ಮೂಲಕ ಮುಂದುವರೆಯಿರಿ.
ಹಂತ 3: ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹಾಗೆ ನಿಮ್ಮ ವಿಳಾಸ (address) ಜೊತೆಗೆ ವೈಯಕ್ತಿಕ ಮಾಹಿತಿ (personal information) ಕಾಣಿಸುತ್ತದೆ. ಅಲ್ಲಿ ಬಂದಿರುವ ಮಾಹಿತಿಯನ್ನು ಪರಿಶೀಲಿಸಿ. ಯಾವುದೇ ವಿವರಗಳು ಹಳೆಯದಾಗಿದ್ದರೆ ಅಥವಾ ತಪ್ಪಾಗಿದ್ದರೆ ನವೀಕರಣ ಮಾಡಿ.
ಹಂತ 4: ಒಂದು ವೇಳೆ ಮಾಹಿತಿ ತಪ್ಪಾಗಿದ್ದರೆ ಮೇಲಿನ ವಿವರಗಳು ಸರಿಯಾಗಿವೆಯೇ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 5 : ನೀವು ಸಲ್ಲಿಸಲು ಬಯಸುವ ಯಾವುದೇ ಗುರುತಿನ ದಾಖಲೆಯನ್ನು ಆಯ್ಕೆ ಮಾಡಿ.
ಹಂತ 6: ನಿಮ್ಮ ಮೂಲ ದಾಖಲೆಯನ್ನ ಸ್ಕ್ಯಾನ್ (scan) ಮಾಡಿ ಅಪ್ಲೋಡ್ ಮಾಡಿ.
ಹಂತ 7: ಅದೇ ರೀತಿ ವಿಳಾಸ ಬದಲಾವಣೆಗೆ ವಿಳಾಸದ ಡಾಕ್ಯುಮೆಂಟ್ಸ್ (documents) ಅನ್ನು ಆಯ್ಕೆ ಮಾಡಿ.
ಹಂತ 8: ಆಯ್ಕೆ ಮಾಡಿದ ಡಾಕ್ಯುಮೆಂಟನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ಹಂತ 9: ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.