10 ವರ್ಷದ ಹಿಂದಿನ ‘ಆಧಾರ್ ಕಾರ್ಡ್’ ರದ್ದಾಗುತ್ತಾ.? ಇಲ್ಲಿದೆ ವೈರಲ್ ಸುದ್ದಿಯ ಅಸಲಿ ಮಾಹಿತಿ!

Aadhar card update

10 ವರ್ಷಗಳ ಹಿಂದಿನ ಆಧಾರ್ ಕಾರ್ಡ್ (Adhar card) ಜೂನ್ 14ರ ನಂತರ ರದ್ದಾ(Ban)ಗುತ್ತದೆ ಎಂಬ ಮೆಸೇಜ್ (message) ಸೋಶಿಯಲ್ ಮೀಡಿಯದಲ್ಲಿ (social media) ವೈರಲ್!

ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card). ಎಲ್ಲಾ ಕೆಲಸ ಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ (adhar card update) ಬಗ್ಗೆ ಮಾಹಿತಿಯೊಂದು ಹರಿದಾಡುತ್ತಿದೆ. ಜೂನ್ 14ರ ಒಳಗೆ ಹತ್ತು ವರ್ಷದ ಹಿಂದಿನ ಆಧಾರ್ ಕಾರ್ಡ ನ್ನು ಅಪ್ಡೇಟ್ ಮಾಡಿದಿದ್ದರೆ ಅದು ಮಾನ್ಯವಾಗಿರುವುದಿಲ್ಲ ಎಂದು ತಿಳಿದುಬಂದಿದೆ. ಆಧಾರ್ ಕಾರ್ಡ್ ನ ಅಪ್ ಡೇಟ್ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆಧಾರ್ ಕಾರ್ಡ್ ಅಪ್ ಡೇಟ್ (adhar card update) :

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ( UIDAI ) ಆಧಾರ್ ಕಾರ್ಡ್ ಹೊಂದಿರುವ ಎಲ್ಲಾ ಭಾರತೀಯರಿಗೆ 10 ವರ್ಷ ಹಿಂದಿನ ಆಧಾರ್ ಕಾರ್ಡನ್ನು ತಕ್ಷಣ ಅಪ್ ಡೇಟ್ ಮಾಡಬೇಕು ಎಂದು ತಿಳಿಸಿದೆ. ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದರಿಂದ ಹೆಸರು ವಿಳಾಸ ಅಥವಾ ಇನ್ನಾವುದೇ ಬದಲಾವಣೆ ಇದ್ದರೆ ಸರಿಯಾಗುತ್ತದೆ.
ಹೀಗಾಗಿ ಸರ್ಕಾರ ಜೂನ್ 14 (June 14) ರವರೆಗೆ ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ (free update) ಮಾಡಲು ಅವಕಾಶ ನೀಡಿದೆ.

ಆಧಾರ್ ಕಾರ್ಡ್ ಅಪ್ ಡೇಟ್ ಮಾಡದಿದ್ದರೆ ಫೈನ್ ಕಡ್ಡಾಯ  :

ಆಧಾರ್ ಕಾರ್ಡ್ ಅಪ್ಡೇಟ್ ಗಾಗಿ ಜೂನ್ 14ರವರೆಗೆ ಸರ್ಕಾರವು ಗಡುವು ನೀಡಿದೆ. ಹಾಗೆ 14ರ ಒಳಗೆ ಉಚಿತವಾಗಿ ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಆಧಾರ್ ಕಾರ್ಡ್ 10 ವರ್ಷ ಹಳೆಯದಾಗಿದ್ದರೆ (10 year’s old) ಜೂನ್ 14ರ ವರೆಗೆ ಅಪ್ಡೇಟ್ ಮಾಡದಿದ್ದರೆ ನಂತರ ಶುಲ್ಕ ಪಾವತಿಸಿ ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನೀವೇನಾದರೂ ಅಪ್ಡೆಟ್ ಮಾಡಲಿಲ್ಲವೆಂದರೆ ಆಧಾರ್ ಕಾರ್ಡ್ ರದ್ದಾಗುವುದಿಲ್ಲ ಚಾಲ್ತಿಯಲ್ಲಿರುತ್ತದೆ.
ಹಾಗಾಗಿ ಯಾರು ಇನ್ನು ಕೂಡ ತಮ್ಮ 10 ವರ್ಷಗಳ ಹಿಂದಿನ ಆಧಾರ್ ಕಾರ್ಡ್ ಅನ್ನು ಅಪ್ ಡೇಟ್ ಮಾಡಿಲ್ಲವೋ ಅವರು ಜೂನ್ 14ರ ಒಳಗೆ ಉಚಿತವಾಗಿ ತಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.

ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಬೇಕಾಗುವ ಅಗತ್ಯ ದಾಖಲೆಗಳು:

ನಿಮ್ಮ ರೇಷನ್ ಕಾರ್ಡ್ ( Ration Card )
ಬ್ಯಾಂಕ್ ಪಾಸ್ ಬುಕ್ (bank pass book)
ಅಥವಾ ವಿದ್ಯುತ್ ಬಿಲ್ (electric bill)
ಗುರುತಿನ ಚೀಟಿಗೆ ನಿಮ್ಮ ವೋಟರ್ ಐಡಿ ( Voter ID ) ಡ್ರೈವಿಂಗ್ ಲೈಸೆನ್ಸ್ ( D L ) ಅಥವಾ ಪಾಸ್ ಪೋರ್ಟ್ ಅನ್ನು ಬಳಸಬಹುದು.

ಆಧಾರ್ ಕಾರ್ಡ್ ಅಪ್ ಡೇಟ್ ಮಾಡುವ ವಿಧಾನ  :

ಹಂತ 1: ಆಧಾರ್ ಕಾರ್ಡ್ ಅನ್ನು ಅಪ್ ಡೇಟ್ ಮಾಡಲು ( Aadhar Update ) https://uidai.gov.in/en/ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು.

ಹಂತ 2: ನಂತರ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಹಾಕಿ, ಆಧಾರ್ ಕಾರ್ಡ್ ನಂಬರಿಗೆ ಲಿಂಕ್ ಇರೋ ಮೊಬೈಲ್ ನಂಬರ್ ಗೆ ಓಟಿಪಿ (OTP) ಬರುತ್ತದೆ ಒಟಿಪಿಯನ್ನ ನಮೂದಿಸುವ ಮೂಲಕ ಮುಂದುವರೆಯಿರಿ.

ಹಂತ 3: ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹಾಗೆ ನಿಮ್ಮ ವಿಳಾಸ (address) ಜೊತೆಗೆ ವೈಯಕ್ತಿಕ ಮಾಹಿತಿ (personal information) ಕಾಣಿಸುತ್ತದೆ. ಅಲ್ಲಿ ಬಂದಿರುವ ಮಾಹಿತಿಯನ್ನು ಪರಿಶೀಲಿಸಿ.

ಹಂತ 4: ಒಂದು ವೇಳೆ ಮಾಹಿತಿ ತಪ್ಪಾಗಿದ್ದರೆ ಮೇಲಿನ ವಿವರಗಳು ಸರಿಯಾಗಿವೆಯೇ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 5 : ನೀವು ಸಲ್ಲಿಸಲು ಬಯಸುವ ಯಾವುದೇ ಗುರುತಿನ ದಾಖಲೆಯನ್ನು ಆಯ್ಕೆ ಮಾಡಿ.

ಹಂತ 6: ನಿಮ್ಮ ಮೂಲ ದಾಖಲೆಯನ್ನ ಸ್ಕ್ಯಾನ್ (scan) ಮಾಡಿ ಅಪ್ಲೋಡ್ ಮಾಡಿ.

ಹಂತ 7: ಅದೇ ರೀತಿ ವಿಳಾಸ ಬದಲಾವಣೆಗೆ ವಿಳಾಸದ ಡಾಕ್ಯುಮೆಂಟ್ಸ್ (documents) ಅನ್ನು ಆಯ್ಕೆ ಮಾಡಿ.

ಹಂತ 8: ಆಯ್ಕೆ ಮಾಡಿದ ಡಾಕ್ಯುಮೆಂಟನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

ಹಂತ 9: ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!