ಇದೀಗ 2023 ಮುಗಿಯುತ್ತಾ ಬಂತು. ಇನ್ನು ಸ್ವಲ್ಪ ದಿನಗಳಷ್ಟೇ ಇವೆ. ಹಾಗೆಯೇ 2024 ಕ್ಕೆ ಕಾಲಿಡುತ್ತಿದ್ದೇವೆ. ಅದಕ್ಕಿಂತ ಮುಂಚೆ ನಾವು ಈ ಡಿಸೆಂಬರ್ ತಿಂಗಳಿನಲ್ಲಿ ಹಲವಾರು ಕೆಲಸ ಕಾರ್ಯ ಮಾಡಲು ಬಾಕಿ ಇದೆ. ಅವುಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಡಿಸೆಂಬರ್ ತಿಂಗಳು ಮುಗಿಯುವ ಒಳಗೆ ಈ ಕೆಲಸ ಮಾಡಲೇಬೇಕು :
ನಾವು ನಮ್ಮ ಆಧಾರ್ ಕಾರ್ಡ್ ಅನ್ನು ಗುರುತಿನ ಐಡಿ ಕಾರ್ಡ್ ಆಗಿ ಎಲ್ಲ ಕೆಲಸಕ್ಕೂ ಬಳಸಿಕೊಳ್ಳುತ್ತೇವೆ. ಹಾಗೆಯೇ ಇದರಲ್ಲೂ ಹಲವಾರು ಬದಲಾವಣೆ ಆಗಬೇಕಿದೆ. ಮತ್ತು ಇನ್ನು ನೋಡುವುದಾದರೆ ಬ್ಯಾಂಕ್ ನ ಕೆಲಸ ಕಾರ್ಯಗಳು ಬಾಕಿ ಇವೆ. ಅದರ ಬಗ್ಗೆ ಸ್ವಲ್ಪ ಗಮನ ಹರಿಸಿ ನಮ್ಮ ಆರ್ಥಿಕ ಪರಿಸ್ಥಿಯನ್ನು ಕೂಡ ಹಿಡಿತದಲ್ಲಿ ಇಟ್ಟುಕೊಂಡು ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಿದೆ.
ಇದೀಗ ಸರ್ಕಾರ ಈ ಡಿಸೆಂಬರ್ ತಿಂಗಳಲ್ಲಿ ಹಲವು ಮಹತ್ತರ ಕಾರ್ಯ ಗಳನ್ನು ಮಾಡಿ ಮುಗಿಸಲು ತಿಳಿಸಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಮೊದಲಾಗಿ ನಮ್ಮ ದೈನಂದಿನ ಜೇವನಕ್ಕೆ ಬೇಕಾಗುವ ಎಲ್ಲ ಕಾರ್ಯ ಗಳ ಬಗ್ಗೆ ಮತ್ತು ಅದರ ಮಾಹಿತಿ ಬಗ್ಗೆ ಮುಖ್ಯ ನಾಲ್ಕು ವಿಷಯಗಳ ಬಗ್ಗೆ ತಿಳಿದು ಕೊಳ್ಳೋಣ.
ಬ್ಯಾಂಕ್ ಲಾಕರ್(Bank locker ) ಒಪ್ಪಂದ :
ಮೊದಲನೆಯದಾಗಿ ಬ್ಯಾಂಕ್ ಲಾಕರ್ ಒಪ್ಪಂದ ದ ಬಗ್ಗೆ ನೋಡಣ. ಈ ಒಪ್ಪಂದವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸುರಕ್ಷಿತ ಠೇವಣಿ ಲಾಕರ್ಗಳಿಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳ ಬಗ್ಗೆ ತಿಳಿಸಲಾಗಿದೆ. ಮತ್ತು ಇದರಲ್ಲಿ ಮುಖ್ಯವಾಗಿ ಗ್ರಾಹಕರು ಪ್ರತಿವರ್ಷ ತಮ್ಮ ಬ್ಯಾಂಕುಗಳೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕುವುದು ಕಡ್ಡಾಯ ಗೊಳಿಸಿದೆ. ಹಾಗೆಯೇ ಇನ್ನೊಂದು ಮುಖ್ಯ ವಿಚಾರ ಎಂದರೆ ಬಳಕೆದಾರರು ಬಾಡಿಗೆ ಪಾವತಿಸುವುದನ್ನು ಮುಂದುವರಿಸಿದರೆ ಮಾತ್ರ ಲಾಕರ್ ಗಳನ್ನು ಬಳಸಲು ಅವಕಾಶ ನೀಡಿದೆ. ಹಾಗೆಯೇ ಈ ಒಪ್ಪಂದವನ್ನು ಅನುಸರಿಸಲು ಕೊನೆಯ ದಿನಾಂಕ ಡಿಸೆಂಬರ್ 31, 2023 ಎಂದು ತಿಳಿಸಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಆಧಾರ್ ಕಾರ್ಡ್ ನವೀಕರಣ(Aadhar card update) :
ಯುಐಡಿಎಐ(UIDAI) ಬಳಕೆದಾರರಿಗೆ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ ಇರುವ ದಾಖಲೆಗಳನ್ನು ಅಪ್ಲೋಡ್ ಮಾಡಲು ತಿಳಿಸಿದೆ. ಮೈ ಆಧಾರ್ ಪೋರ್ಟಲ್ ಮೂಲಕ ನಿಮ್ಮ ಆಧಾರ್ 10 ವರ್ಷಗಳ ಹಳೆಯದಾಗಿದ್ದರೆ ಹೊಸ ಆಧಾರ್ ಕಾರ್ಡ್ ಗೆ ಮತ್ತು ಯಾವುದೇ ಬದಲಾವಣೆ ಮಾಡಲು ಈ ವೆಬ್ಸೈಟ್ ಬಳಸಬಹುದು. ಆಧಾರ್ ಕಾರ್ಡ್ ನಲ್ಲಿ ಯಾವುದೇ ಹೊಸ ಬದಲಾವಣೆ ಮಾಡಬೇಕಿದ್ರೆ ಇದೆ ತಿಂಗಳು ಅಂದರೆ ಡಿಸೆಂಬರ್ 14 ಕೊನೆಯ ದಿನಾಂಕ ವಾಗಿದೆ. ಮತ್ತು ಭೌತಿಕ ಆಧಾರ್ ಕೇಂದ್ರಗಳಲ್ಲಿ ಯಾವುದೇ ಬದಲಾವಣೆ ಮಾಡಲು 50 ರೂ ಶುಲ್ಕವಿರುತ್ತದೆ.
ಮ್ಯೂಚುವಲ್ ಫಂಡ್ ನಲ್ಲಿ ನಾಮನಿರ್ದೇಶನ ಬದಲಾವಣೆ :
ಮ್ಯೂಚುವಲ್ ಫಂಡ್(Mutual Fund) ಗೆ ನಾಮನಿರ್ದೇಶನವು ಹೂಡಿಕೆದಾರರಿಗೆ ತಮ್ಮ ಸೆಕ್ಯುರಿಟಿಗಳು ಅಥವಾ ಮ್ಯೂಚುವಲ್ ಫಂಡ್ ರಿಡೆಂಪ್ಷನ್ ಆದಾಯವನ್ನು ಅವರು ನಿಧನರಾದ ಬಳಿಕ ಅವರ ಕುಟುಂಬದ ಯಾರೇ ಆಗಲಿ ಕ್ಲೈಮ್ ಮಾಡಬಹುದಾಗಿದೆ.
ಡಿಮ್ಯಾಟ್ ಖಾತೆ(Demat Account)ದಾರರು ಮತ್ತು ಮ್ಯೂಚುವಲ್ ಫಂಡ್ ಘಟಕ ಹೊಂದಿರುವವರು ನಾಮನಿರ್ದೇಶಿತರನ್ನು ಆಯ್ಕೆ ಮಾಡಲು ಕೊನೆಯ ದಿನಾಂಕ ಡಿಸೆಂಬರ್ 31, 2023 ಆಗಿದೆ.
ನಿಷ್ಕ್ರಿಯ ಯುಪಿಐ ಐಡಿಗಳನ್ನು ಪುನಃ ಸಕ್ರಿಯಗೊಳಿಸಬಹುದು :
ಈಗಾಗಲೇ ಜಾಲ್ತಿ ಅಲ್ಲಿ ಇಲ್ಲದ ಯುಪಿಐ ಐಡಿಗಳನ್ನು ಮತ್ತೆ ಚಾಲ್ತಿ ಮಾಡಲು ಅವಕಾಶ ಕಲ್ಪಿಸಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಸುತ್ತೋಲೆಯಲ್ಲಿ ಪಾವತಿ ಅಪ್ಲಿಕೇಶನ್ಗಳು ಮತ್ತು ಬ್ಯಾಂಕುಗಳಿಗೆ ಯುಪಿಐ ಐಡಿಗಳು ಮತ್ತು ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸುವಂತೆ ನಿರ್ದೇಶನ ನೀಡಿದೆ. ಥರ್ಡ್-ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ಸ್ (ಟಿಪಿಎಪಿ) ಮತ್ತು ಪಾವತಿ ಸೇವಾ ಪೂರೈಕೆದಾರರು (ಪಿಎಸ್ಪಿ) ಈ ಎಲ್ಲ ಕ್ರಮಗಳಿಗೆ ನಿಭಾಯಿಸಲು ಡಿಸೆಂಬರ್ 31, 2023 ಕೊನೆ ದಿನಾಂಕ ಆಗಿರುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ