‘ನನ್ನ ಆಸ್ತಿ’ ಯೋಜನೆಯಡಿ ‘ನನ್ನ ಆಸ್ತಿ ನನ್ನ ಗುರುತು’ ಎಂಬ ಉದ್ದೇಶದಿಂದ ಸರ್ಕಾರವು ಉತಾರ/ಪಹಣೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಸುಲಭವಾಗುತ್ತದೆ. ಕಂದಾಯ ಇಲಾಖೆಯನ್ನು ಆಧುನೀಕರಣ ಮಾಡಬೇಕು, ಬೆರಳ ತುದಿಯಲ್ಲಿ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು ಮಾಡಲಾಗುತ್ತಿದೆ. ಅದರ ಒಂದು ಭಾಗವಾಗಿ ಸಹ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ”ನಿಮ್ಮ ಮೊಬೈಲ್ ನಲ್ಲಿ ಆರ್ ಟಿ ಸಿ ಮೂಲಕ ಉತಾರ/ಪಹಣೆಗೆ ಆಧಾರ್ ಲಿಂಕ್(RTC -Aadhar link)ಮಾಡುವುದು ಹೇಗೆ ಎಂಬುದನ್ನು ನಾವು ವಿವರಿಸುತ್ತೇವೆ. ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯದಲ್ಲಿ ಸ್ಥಿರಾಸ್ತಿ ಪಹಣಿಗಳಿಗೆ ಆಧಾರ್ ಜೋಡಣೆ ಆರಂಭ:
ಆಸ್ತಿ ಪಹಣಿಗಳಿಗೆ ಆಧಾರ್ ಲಿಂಕ್ ಪ್ರಕ್ರಿಯೆಯನ್ನು ರಾಜ್ಯಾದ್ಯಂತ ತಿಂಗಳು 12 ನೇ ತಾರೀಖಿನಿಂದ ಜಾರಿಗೊಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಈಗಾಗಲೇ ರಾಜ್ಯದ ಹಲವು ಕಡೆ ಪೈಲೆಟ್ ಆಗಿ ಮಾಡಲಾಗಿದೆ ನನ್ನ ಆಸ್ತಿ ಯೋಜನೆ ಅಡಿಯಲ್ಲಿ ನನ್ನ ಆಸ್ತಿ ನನ್ನ ಗುರುತು ಎಂಬ ಉದ್ದೇಶದಿಂದ ಈ ಮಹತ್ವದ ಕಾರ್ಯ ಕೈಗೊತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕೃಷಿ ಭೂಮಿ ಖಾತೆಗಳಿಗೆ ಆಧಾರ್ ಜೋಡಣೆ ಕಾರ್ಯ ಚುರುಕಾಗಿ ನಡೆಯುತ್ತಿದ್ದು, ಈಗಾಗಲೇ 88,000 ಖಾತೆಗಳನ್ನು ಜೋಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಈ ಯೋಜನೆಯಡಿ, ಗ್ರಾಮ ಲೆಕ್ಕಗಾರರು(village accountant) ಖಾತೆದಾರರ ಮನೆಗಳಿಗೆ ಭೇಟಿ ನೀಡಿ, ಅವರ ಆಧಾರ್ ಕಾರ್ಡ್‌ಗಳನ್ನು ಖಾತೆಗಳೊಂದಿಗೆ ಜೋಡಿಸುತ್ತಿದ್ದಾರೆ. ಈ ಕ್ರಮವು ಭೂಮಿ ಖಾತೆಗಳ ದಾಖಲೆಗಳನ್ನು ಪಾರದರ್ಶಕವಾಗಿ ಮತ್ತು ಭ್ರಷ್ಟಾಚಾರ ರಹಿತವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಇನ್ನೂ ಬಾಕಿ ಉಳಿದಿರುವ ಖಾತೆಗಳಿಗೆ ಜೋಡಣೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಾರ್ಬನ್ ಡಿಜಿಟಲೀಕರಣದ ಯೋಜನೆಯಲ್ಲಿ, ಎಲ್ಲಾ ಅಧಿಕಾರಿಗಳಿಗೆ ಮುಂದಿನ ಎರಡು ತಿಂಗಳಲ್ಲಿ 65 ಲಕ್ಷ ಆರ್‌ಟಿಸಿಗಳನ್ನು ಡಿಜಿಟಲೀಕರಿಸಲು ಸೂಚಿಸಲಾಗಿದೆ. ಈ ಕೆಲಸ ಒಂದು ಅಭಿಯಾನದಂತೆ ನಡೆಯುತ್ತಿದ್ದು, ಈವರೆಗೆ 15 ಲಕ್ಷ ಆರ್‌ಟಿಸಿ ಮಾಲೀಕರನ್ನು ಸಂಪರ್ಕಿಸಲಾಗಿದೆ. ಮುಂದಿನ ಎರಡು-ಮೂರು ತಿಂಗಳಲ್ಲಿ ಎಲ್ಲಾ ಆರ್‌ಟಿಸಿ(RTC) ಮಾಲೀಕರನ್ನು ತಲುಪಲು ಒಂದು ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ಪಹಣಿಗೆ ಆಧಾರ್ ಸೀಡಿಂಗ್ ಕಡ್ಡಾಯ:
ಸರ್ಕಾರದ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಲು, ರೈತರು ತಮ್ಮ ಪಹಣಿಗಳನ್ನು ಆಧಾರ್ ಜೊತೆಗೆ ಜೋಡಿಸಬೇಕು ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.
ಪಹಣಿಗೆ ಆಧಾರ್ ಲಿಂಕ್ ಹೇಗೆ ಮಾಡಬಹುದು?
ಸ್ವಯಂ ಪ್ರೇರಣೆಯ ಮೂಲಕ:
ಜುಲೈ ತಿಂಗಳಲ್ಲಿ, ರೈತರು ತಮ್ಮ ಜಮೀನಿನ ಪಹಣಿ ಮತ್ತು ಆಧಾರ್ ದಾಖಲಾತಿಗಳೊಂದಿಗೆ landrecords.karnataka.gov.in/service ವೆಬ್‌ಸೈಟ್‌ಗೆ ಲಾಗಿನ್ ಮಾಡಬಹುದು.
ನಂತರ, ಪಹಣಿಯನ್ನು ಆಧಾರ್ ಜೊತೆಗೆ ಲಿಂಕ್ ಮಾಡಬಹುದು.
ಗ್ರಾಮ ಅಧಿಕಾರಿಗಳ ಮೂಲಕ:
ರೈತರು ತಮ್ಮ ಪಹಣಿ ಮತ್ತು ಆಧಾರ್ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಗ್ರಾಮ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಅಧಿಕಾರಿಗಳು ಪಹಣಿಯನ್ನು ಆಧಾರ್ ಜೊತೆಗೆ ಜೋಡಿಸಲು ಸಹಾಯ ಮಾಡುತ್ತಾರೆ.
ಆರ್.ಟಿ.ಸಿ – ಆಧಾರ್ ಲಿಂಕ್ ಮಾಡುವ ಸುಲಭ ವಿಧಾನ
ನಿಮ್ಮ ಜಮೀನಿನ ಪಹಣಿ (RTC) ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗ ತುಂಬಾ ಸುಲಭ! ಕೆಲವೇ ಕ್ಲಿಕ್ ಗಳಲ್ಲಿ ನೀವು ಈ ಕೆಲಸವನ್ನು ಮನೆಯಿಂದಲೇ ಮಾಡಬಹುದು.
ಹಂತ 1: https://landrecords.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 2: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು Captcha Code ನ್ನು ಭರ್ತಿ ಮಾಡಿ.
ಹಂತ 3: “Send OTP” ಮೇಲೆ ಕ್ಲಿಕ್ ಮಾಡಿ.
ಹಂತ 4: OTP ಯನ್ನು ನಮೂದಿಸಿ.
ಹಂತ 5: ನಿಮ್ಮ ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರನ್ನು ಭರ್ತಿ ಮಾಡಿ.
ಹಂತ 6: “ನಾನು ಇಲ್ಲಿ ಸ್ವಯಂ ಪ್ರೇರಣೆಯಿಂದ ಆಧಾರ ಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇನೆ” ಎಂಬ ಚೌಕದ ಮೇಲೆ ಕ್ಲಿಕ್ ಮಾಡಿ. “Verify” ಮೇಲೆ ಕ್ಲಿಕ್ ಮಾಡಿ.
ಹಂತ 7: “ಆಧಾರವನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ” ಎಂಬ ಸಂದೇಶ ಕಾಣಿಸುತ್ತದೆ.
“FETCH Details” ಮೇಲೆ ಕ್ಲಿಕ್ ಮಾಡಿ.
ಇಷ್ಟು ಮಾಡಿದರೆ ನಿಮ್ಮ ಆರ್.ಟಿ.ಸಿ ಗೆ ಆಧಾರ್ ಲಿಂಕ್ ಆಗಿದೆ ಎಂದು ಖಚಿತ. ಈ ಪ್ರಕ್ರಿಯೆ ಉಚಿತ, ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ಪಹಣಿ ಯಲ್ಲಿರುವ ಹೆಸರು ಒಂದೇ ಆಗಿರಬೇಕು.
ಬರ ಪರಿಹಾರಕ್ಕಾಗಿ ಆಧಾರ್ ಲಿಂಕ್(Aadhar link for drought relief):
ರಾಜ್ಯದ ಬರಗಾಲ ಪೀಡಿತ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಚುರುಕುಗೊಂಡಿದ್ದು, 2012 ರ ಬರದಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ತಾತ್ಕಾಲಿಕ ಪರಿಹಾರ ಧನ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಪರಿಹಾರ ಧನ ರೈತರ ಖಾತೆಗೆ ನೇರವಾಗಿ ಜಮಾ ಮಾಡಲು, ರೈತರ ಆಧಾರ್ ಸಂಖ್ಯೆಯನ್ನು ಭೂಮಿ ದಾಖಲೆಗಳೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆಧಾರ್ ಲಿಂಕ್ ಆಗದೇ ಇರುವ ರೈತರು ತಕ್ಷಣ ಆಧಾರ್ ಲಿಂಕ್ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಟ್ವಿಟ್ ಮಾಡಿದ್ದಾರೆ.
ನಿಮ್ಮ ಖಾತೆಗೆ ಹಣ ಜಮಾ ಆಗಲು, ಮೊದಲು ನಿಮ್ಮ ಆಧಾರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಬೇಕು. ಲಿಂಕ್ ಆಗಿಲ್ಲದಿದ್ದರೆ, ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಹಂತ 1. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://fruitspmk.karnataka.gov.in/MISReport/AadharNotSeededReport.aspx
ಹಂತ 2. ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ.
ಹಂತ 3. ನಿಮ್ಮ ತಾಲೂಕಿನ ಹೆಸರಿನ ಮೇಲೆ ಕ್ಲಿಕ್ ಮಾಡಿ.
ಹಂತ 4. ನಿಮ್ಮ ಹೊಬಳಿ ಹೆಸರಿನ ಮೇಲೆ ಕ್ಲಿಕ್ ಮಾಡಿ.
ಹಂತ 5. ನಿಮ್ಮ ಗ್ರಾಮದ ಹೆಸರಿನ ಮೇಲೆ ಕ್ಲಿಕ್ ಮಾಡಿ.
ಈ ರೀತಿ ಎಲ್ಲಾ ಜಿಲ್ಲೆಗಳ ಕೃಷಿ ಇಲಾಖೆಯಲ್ಲಿ ರೈತರ ಪಟ್ಟಿ ಲಭ್ಯವಿದೆ. ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ಕೂಡಲೇ ಸಂಬಂಧಪಟ್ಟ ಬ್ಯಾಂಕ್ಗಳಿಗೆ ಭೇಟಿ ನೀಡಿ. ಆಧಾರ್ ಲಿಂಕ್ ಮಾಡಿಸಿ.
ನಿಮ್ಮ ಆಧಾರ್ ಲಿಂಕ್ ಆದ ನಂತರ, ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.
NPCI (National Payments Corporation of India) ಸ್ಥಿತಿ “ಆಕ್ಟಿವ್(Active)” ಎಂದು ತೋರಿಸಿದರೆ, ನಿಮ್ಮ ಆಧಾರ್ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದೆ ಎಂಬರ್ಥ. ನೀವು ಬೆಳೆ ಹಾನಿ, ಬೆಳೆ ವಿಮೆ ಮತ್ತು PM ಕಿಸಾನ್ ಯೋಜನೆಯಂತಹ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿದ್ದೀರಿ.
ನಿಮ್ಮ NPCI ಸ್ಥಿತಿಯನ್ನು ಹೀಗೆ ಪರಿಶೀಲಿಸಬಹುದು:
ಹಂತ 1. https://fruits.karnataka.gov.in/ ಗೆ ಭೇಟಿ ನೀಡಿ.
ಹಂತ 2. “ಸಿಟಿಜನ್ ರಿಜಿಸ್ಟ್ರೇಷನ್(Citizen Registration ” ಮೇಲೆ ಕ್ಲಿಕ್ ಮಾಡಿ.
ಹಂತ 3. ನಿಮ್ಮ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ.
ಹಂತ 4. “ಮುಂದುವರಿಯಿರಿ” ಕ್ಲಿಕ್ ಮಾಡಿ.
ಹಂತ 5. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನಮೂದಿಸಿ.
ಹಂತ 6. OTP ಯನ್ನು ನಮೂದಿಸಿ ಮತ್ತು “ಸಲ್ಲಿಸಿ” ಕ್ಲಿಕ್ ಮಾಡಿ.
ಹಂತ 7. ಪಾಸ್‌ವರ್ಡ್ ರಚಿಸಿ (Create password) ಮತ್ತು ಲಾಗಿನ್ ಮಾಡಿ.
ಹಂತ 8. ಮುಖಪುಟದಲ್ಲಿ, “ಹುಡುಕಾಟ(Search)” ಕ್ಲಿಕ್ ಮಾಡಿ ಮತ್ತು “NPCI ಚೆಕ್” ಆಯ್ಕೆಮಾಡಿ.
ಹಂತ 9. ನಿಮ್ಮ NPCI ಸ್ಥಿತಿಯನ್ನು ನೀವು ನೋಡಬಹುದು.
NPCI ಸ್ಥಿತಿ “ನಿಷ್ಕ್ರಿಯ(Inactive)” ಎಂದು ತೋರಿಸಿದರೆ, ನಿಮ್ಮ ಆಧಾರ್ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿಲ್ಲ ಎಂದರ್ಥ. ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು, ನಿಮ್ಮ ಬ್ಯಾಂಕ್(Bank)ಗೆ ಭೇಟಿ ನೀಡಿ ಮತ್ತು NPCI ಮ್ಯಾಪಿಂಗ್(Mapping) ಮಾಡಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.