Aadhaar Update- ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಸರಕಾರದ ಕೊನೆಯ ಎಚ್ಚರಿಕೆ – ತಪ್ಪದೇ ತಿಳಿದುಕೊಳ್ಳಿ

WhatsApp Image 2023 09 05 at 12.22.54 PM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಉಚಿತವಾಗಿ ಆಧಾರ್ ಕಾರ್ಡ್ ನವೀಕರಣಕ್ಕೆ(free Aadhar update) ಕೊನೆಯ ದಿನಾಂಕವನ್ನು ನಿಗದಿಪಡಿಸಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಉಚಿತ ಆಧಾರ್ ನವೀಕರಣದ ಅವಧಿಯು ಸೆಪ್ಟೆಂಬರ್ 14 ರಂದು ಕೊನೆಗೊಳ್ಳುತ್ತದೆ. ಆಧಾರ್ ಕೇಂದ್ರಗಳು ಈ ಸೇವೆಗೆ ರೂ. 50 ಶುಲ್ಕವನ್ನು ಮುಂದುವರೆಸುತ್ತಿದ್ದರೂ, ಉಚಿತ ಸೇವೆಯು ಮೈ ಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದೆ. ಸೆಪ್ಟೆಂಬರ್ 14 ರ ನಂತರ ನೀವು ಆಧಾರ್ ಪೋರ್ಟಲ್‌ನಲ್ಲಿ ಆಧಾರ್ ಅನ್ನು ನವೀಕರಿಸಿದರೆ, ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಇದೇ ಸೆಪ್ಟೆಂಬರ್ 14 ಕೊನೆಯ ದಿನಾಂಕ :

ದೇಶದ ಎಲ್ಲಾ ಜನರು ತಮ್ಮ ಆಧಾರ್‌ ಡೇಟಾದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ನೋಂದಣಿ ದಿನಾಂಕದಿಂದ ಕನಿಷ್ಠ ಹತ್ತು ವರ್ಷಗಳಿಗೊಮ್ಮೆ ಆಧಾರ್‌ನಲ್ಲಿ ತಮ್ಮ ಪೋಷಕ ದಾಖಲೆಗಳನ್ನು ನವೀಕರಿಸಬೇಕು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಸಲಹೆ ನೀಡುತ್ತದೆ. ಅಷ್ಟು ಮಾತ್ರವಲ್ಲದೆ ಆಗಾಗ್ಗೆ ಏನಾದರೂ ಬದಲಾವಣೆ ಮಾಡಬೇಕಿದ್ದರೂ ಸಹ ಅದಕ್ಕೂ ಅನುಕೂಲ ಮಾಡಿಕೊಟ್ಟಿದೆ. ನೀವೇನಾದರೂ, ಇನ್ನೂ ಕೂಡ ಆಧಾರ್ ಕಾರ್ಡಿನಲ್ಲಿ ಹಲವಾರು ವರ್ಷಗಳಿಂದ ಯಾವುದೇ ರೀತಿಯ ನವೀಕರಣವನ್ನು ಮಾಡಿಲ್ಲವೆಂದರೆ, 14 ಸೆಪ್ಟೆಂಬರ್ 2023ರ ಒಳಗೆ ಈ ಉಚಿತ ಸೇವೆ ಪಡೆದುಕೊಳ್ಳಬಹುದು.

whatss

ಈಗಲೇ ಉಚಿತವಾಗಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಿ :

ಈಗಾಗಲೇ ಆಧಾರ್ ಕಾರ್ಡಿನ ಉಚಿತ ಅಪ್ಡೇಟಿಗೆ ಜೂನ್ 14 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರವು ಇದನ್ನು ಮುಂದುವರೆಸಿ ಸೆಪ್ಟೆಂಬರ್ 14 ಕೊನೆಯ ದಿನಾಂಕ ಎಂದು ನಿಗದಿಪಡಿಸಿದೆ. ಈ ದಿನಾಂಕದ ಒಳಗೆ ನೀವು ಒಂದು ರೂಪಾಯಿಯನ್ನು ಕೂಡ ನೀಡದೆ ನಿಮ್ಮ ಆಧಾರ್ ಕಾರ್ಡಿನಲ್ಲಿ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಸೇರಿದಂತೆ ಅಗತ್ಯ ಮಾಹಿತಿಯನ್ನು ಬದಲಾವಣೆ ಮಾಡಿಕೊಳ್ಳಬಹುದು. ಮೈ-ಆಧಾರ್ ಪೋರ್ಟಲ್‌ನಲ್ಲಿ(My-Aadhaar Portal) ಮಾತ್ರ ಈ ಉಚಿತ ಸೇವೆಯು ಲಭ್ಯವಿರುತ್ತದೆ, ಒಂದು ವೇಳೆ ನಿಮಗೆ ಏನಾದರೂ ಆನ್ಲೈನ್ನಲ್ಲಿ ಆಧಾರ್ ಕಾರ್ಡ್ಗಳನ್ನು ಅಪ್ಡೇಟ್ ಮಾಡಿಕೊಳ್ಳಲು ಆಗದಿದ್ದರೆ ಹತ್ತಿರದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ನವೀಕರಿಸಿಕೊಳ್ಳಬಹುದಾಗಿದೆ. ಆದರೆ, ಅದಕ್ಕಾಗಿ 50 ರೂಗಳನ್ನು ನೀಡಬೇಕಾಗುತ್ತದೆ.

How to update aadhar card through online: ಆಧಾರ್ ಕಾರ್ಡನ್ನು ಆನ್ಲೈನಲ್ಲಿ ಅಪ್ಡೇಟ್ ಮಾಡುವ ವಿಧಾನ :

ಹಂತ 1:  ಮೊದಲನೆಯದಾಗಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://myaadhaar.uidai.gov.in/

ಹಂತ 2: ನಂತರ ಲಾಗಿನ್‌ ಮಾಡಿ. ಇಲ್ಲಿ ನಿಮ್ಮ ಆಧಾರ್ ನಂಬರ್ ಹಾಕಿ, Captcha ಎಂಟರ್ ಮಾಡಿ,

aaa1

ಹಂತ 3: Send OTP ಬಟನ್ ಮೇಲೆ ಕ್ಲಿಕ್ ಮಾಡಿ, ಓಟಿಪಿ ನಿಮ್ಮ ರಿಜಿಸ್ಟರ್ ಫೋನ್ ನಂಬರ್ಗೆ ಬರುತ್ತದೆ ಅದನ್ನು enter ಮಾಡಿ ಲಾಗಿನ್ ಆಗಿ.

aaa2

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಹಂತ 4: ನಿಮಗೆ ಯಾವ ಮಾಹಿತಿಯನ್ನು ನವೀಕರಿಸಬೇಕು ಅದನ್ನು ಆಯ್ಕೆ ಮಾಡಿ. ಉದಾಹರಣೆಗೆ ವಿಳಾಸ ಬದಲಾಯಿಸಬೇಕಿದ್ದರೆ ‘Address Update’ ಆಯ್ಕೆ ಮಾಡಿ.

aaa3

ಹಂತ 5: ಈಗ ನಿಮ್ಮ ವಿಳಾಸ ದೃಢೀಕರಣ ದಾಖಲೆಯ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿ.

aaa5

ಹಂತ 6: ಆ ಬಳಿಕ ‘Submit’ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 7: ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಅಪ್ಡೇಟ್ ರಿಕ್ವೆಸ್ಟ್ ಸಂಖ್ಯೆ (URN) ಬರುತ್ತದೆ.

ಹಂತ 8: 15 ದಿನಗಳೊಳಗೆ ನಿಮ್ಮ ವಿಳಾಸ ಅಥವಾ ಇತರ ಯಾವುದೇ ಮಾಹಿತಿ ಆಧಾರ್ ನಲ್ಲಿ ಅಪ್ಡೇಟ್ ಆಗುತ್ತದೆ.

ಹೀಗೆ ನೀವು ಬೇಕಾದ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳಬಹುದು. 14/9/2023 ರ ವರೆಗೂ ಆಧಾರ್ ಕಾರ್ಡಿನ ನವೀಕರಣಕ್ಕೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಇದು ಸಂಪೂರ್ಣ ಉಚಿತವಾಗಿದೆ. ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

Picsart 23 07 16 14 24 41 584 transformed 1

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

tel share transformed

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!