ಇತ್ತೀಚಿನ ದಿನಮಾನಗಳಲ್ಲಿ ಉದ್ಯೋಗಿಗಳು ಅದರಲ್ಲೂ ಯುವ ಉದ್ಯೋಗಿಗಳು ತಮ್ಮ ವಿದ್ಯೆ, ಸಾಮರ್ಥ್ಯ ಹಾಗೂ ಶ್ರಮಕ್ಕೆ ತಕ್ಕಂತಹ ಸಂಭಾವನೆ ಸಿಗುತ್ತಿಲ್ಲವೆಂದು ಹಲವಾರು ಅನಿಸಿಕೆಗಳನ್ನು ಹಲವಾರು ರೀತಿಗಳಲ್ಲಿ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಪ್ರತಿಯೊಬ್ಬರ ಯೋಚನೆಗಳು ವಿಭಿನ್ನವಾಗಿರುತ್ತದೆ. ಇದರ ಕುರಿತಾಗಿ ಆಡು ಆನೆಯ ನುಂಗಿ ಎ೦ಬ ಕಿರುಚಿತ್ರ ಮಾಡಿದ್ದರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅದರಲ್ಲೂ ಲಾಕ್ಡೌನ್ ಆದ ನಂತರ ಐಟಿ ಸಂಸ್ಥೆಗಳ ಉದ್ಯೋಗಗಳಲ್ಲಿ ಆಗುತ್ತಿರುವ ಬದಲಾವಣೆಗಳು, ಉದ್ಯೋಗ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಉದ್ಯೋಗಿಗಳ ನಡುವೆ ಚರ್ಚಾಸ್ಪದವಾಗಿರುತ್ತದೆ. ನಾವು ನಮಗೆ ಸಿಕ್ಕ ಕೆಲಸವನ್ನು ಕೊಟ್ಟಷ್ಟು ಸಂಭಾವನೆಗೆ ಮಾಡಬೇಕಾ ಅಥವಾ ಸಮಾಲೋಚಿಸಿ ನಮ್ಮ ಕೆಲಸಕ್ಕೆ ತಕ್ಕಂತೆ ಸಂಭಾವನೆ ಕೇಳಬೇಕಾ ಎಂಬ ದ್ವಂದ್ವ ಈಗಿನ ಯುವಜನತೆಯಲ್ಲಿ ಕಾಡುತ್ತಿದೆ. ಈ ವಿಚಾರವನ್ನಿಟ್ಟುಕೊಂಡು ಮಾಡಿರುವಂತಹ ಕಿರುಚಿತ್ರವೇ ಆಡು ಆನೆಯ ನುಂಗಿ. ಈ ಕಿರುಚಿತ್ರವನ್ನು ನೀವು ಬುದ್ದ & ಪ್ರೇ೦ಡ್ಸ್ ಯುಟೂಬ್ ಚಾನಲ್‌ನಲ್ಲಿ ವೀಕ್ಷಿಸಬಹುದು. ದಯವಿಟ್ಟು ನಮ್ಮ ಕನ್ನಡದ ಕಿರುಚಿತ್ರಕ್ಕೆ ಪ್ರೊತ್ಸಾಹಿಸಿ, ಹೊಸ ಪ್ರತಿಭೆಗಳಿಗೆ, ಹೊಸತನಕ್ಕೆ ಬೆ೦ಬಲ ನೀಡಿ.

ಮಂಜು ಮೂಲೇರ ಅವರು ಕಿರುಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ, ಶಂಕರ್ ಬಿಲ್ಲೇಮನೆ, ಉದಯ್ ಬಸ್ರೂರ್, ಸಂತೋಷ್ ಗದದ್, ಪ್ರಭು ಹೊಸದುರ್ಗ, ಸೃಜನ್ ಬೆಳ್ಳಿ, ಉಮೇಶ್ ಧಾರವಾಡ, ಯಶಿವ, ಮಾಸ್ಟರ್ ಅಶ್ವಿನ್ ಅವರು ಕಿರುಚಿತ್ರದಲ್ಲಿ ನಟಿಸಿದ್ದಾರೆ. ನಿರ್ಮಾಪಕರು – ಮಸಾರಿ ಟಾಕೀಸ್. ಸಹ ನಿರ್ಮಾಪಕರು – ಬುದ್ಧ ಅ೦ಡ್ ಪ್ರೇ೦ಡ್ಸ್ . ಈ ಕಿರುಚಿತ್ರಕ್ಕೆ ಅದ್ಭುತವಾದ ಕಥೆ ಬರೆದಿರುವವರು ಹಾಗೂ ನಿರ್ದೇಶನ ಮಾಡಿರುವವರು ಪುನೀತ್ ಸಾಕ್ಯಾ . ಚಿತ್ರಕತೆ – ಪುನೀತ್ ಸಾಕ್ಯಾ ಹಾಗೂ ಕಿರಣ್ ಕುಮಾರ್ ಕೆ ಆರ್. ಸಂಭಾಷಣೆ – ಬರೆದಿರುವವರು ಕಿರಣ್ ಕುಮಾರ್ ಕೆ ಆರ್. ಸಂಕಲನ – ರಾಹುಲ್ ಬಸಕ್. ಸಂಗೀತ – ಚೇತನ್ ಕುಮಾರ್. ಛಾಯಾಗ್ರಹಣ – ಹರೀಶ್ ಕುಮಾರ್ ರೈ. ಕಲೆ – ಸಾಕ್ಶಿ ಶಿವ. ಧ್ವನಿ ವಿನ್ಯಾಸಕ – ಕಾರ್ತಿಕೇಯ ದಿಕ್ಸಿತ್.

ಈ ಕಿರುಚಿತ್ರಕ್ಕೆ ಬಿರ್ಸಮುಂದ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2024, ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ರ ಪ್ರಶಸ್ತಿ 2024, ಸೃಜನಾತ್ಮಕ ಕೆಲಸಕ್ಕೆ ವಿಶೇಷ ಮನ್ನಣೆ ಪಡೆದಿದೆ. ಸಿನಿ ಮಿನಿ ಕನ್ನಡ ಕಿರುಚಿತ್ರ ಸ್ಪರ್ಧೆ 2024ರಲ್ಲಿ ಉತ್ತಮ ಚಲನಚಿತ್ರ ವಿಭಾಗದಲ್ಲಿ ಮೂರನೇ ಪ್ರಶಸ್ತಿ, ಉತ್ತಮ ನಟ ವಿಭಾಗದಲ್ಲಿ ಪ್ರಶಸ್ತಿ ಹಾಗೂ ಉತ್ತಮ ಕಥೆ ಮತ್ತು ಚಿತ್ರಕಥೆ ವಿಭಾಗದಲ್ಲಿ ಪ್ರಶಸ್ತಿ ಪಡೆದ ಖ್ಯಾತಿ ಹೊಂದಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.