ಆದಷ್ಟು ಬೇಗ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಆಕ್ಟೀವಾ, ಜುಪಿಟರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಇಲ್ಲಿದೆ ಸಂಪೂರ್ಣ ಮಾಹಿತಿ.
ಇಂದು ಎಲ್ಲರ ಬಳಿಯೂ ಒಂದಲ್ಲ ಒಂದು ವಾಹನ ಇದ್ದೆ ಇದೆ. ಹೌದು, ಬದಲಾದ ಕಾಲಘಟ್ಟದಲ್ಲಿ ಹೊಸ ಹೊಸ ಅವಿಸ್ಕಾರಗಳು ಸೃಷ್ಟಿಯಾಗುತ್ತಲೇ ಇವೆ. ಹಿಂದೆ ಬಳಸುತ್ತಿದ್ದ ಯಾವುದೇ ವಸ್ತುಗಳು ಈಗ ಕಾಣಲು ಸಿಗುವುದಿಲ್ಲ. ಯಾಕೆಂದರೆ ಆಧುನಿಕ ಯುಗದಲ್ಲಿ ಎಲ್ಲವೂ ಹೊಸ ವಸ್ತುಗಳು ಸೃಷ್ಟಿಯಾಗಿವೆ. ಹಾಗೆಯೇ ವಾಹನಗಳಲ್ಲಿಯೂ ಕೂಡ ಬದಲಾವಣೆ ಯಾಗಿವೆ. ಇಂದು ಹೆಚ್ಚು ಇವಿ ಅಂದರೆ ಎಲೆಟ್ರಿಕ್ ವಾಹನಗಳನ್ನು ಕಾಣುತ್ತೆವೆ. ಇಂಧನ ಚಾಲಿತ ವಾಹನಗಳು ಕಡಿಮೆಯಾಗತೊಡಗಿವೆ. ಇಂದು ದ್ವಿಚಕ್ರ ಇವಿ ಸ್ಕೂಟರ್‌ಗಳು ಉಳಿದ ಇಂಧನ ಚಾಲಿತ ವಾಹನಗಳಿಗೆ ಟಕ್ಕರ್ ನೀಡುತ್ತಿವೆ.
ಇಂಧನ ಚಾಲಿತ ವಾಹನ ತಯಾರಿಕಾ ಕಂಪನಿಗಳಿಂದ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡುಗಡೆ ಸಜ್ಜು :
ಇಂದು ಜನರು ಅತೀ ಹೆಚ್ಚು ಎಲೆಟ್ರಿಕ್ ವಾಹನಗಳನ್ನು ಕೊಂಡುಕೊಳ್ಳುತ್ತಿದ್ದು, ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ(electric scooters) ಬೇಡಿಕೆ ಹೆಚ್ಚಾಗಿದೆ. ಈ ಇವಿ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಉಳಿದ ಸ್ಕೂಟರ್‌ಗಳಿಗೆ ಪೈಪೋಟಿ ನೀಡುತ್ತಿವೆ. ಎಲೆಟ್ರಿಕ್ ವಾಹನ ತಯಾರಿಕೆಯ ಪ್ರಮುಖ ಕಂಪನಿಗಳಾದ ಎಥರ್, ಓಲಾ(Ather, Ola) ಕಂಪನಿಗಳು ಹೆಚ್ಚು ಬೇಡಿಕೆಯನ್ನು ಪಡೆದಿವೆ. ಆದರೆ ಇದೀಗ ಇಂಧನ ಚಾಲಿತ ವಾಹನ ತಯಾರಿಕಾ ಕಂಪನಿಗಳಾದ ಹೋಂಡಾ, ಟಿವಿಎಸ್, ಸುಜುಕಿ ಕಂಪನಿಗಳು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿವೆ. ಅವು ಯಾವುವು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2025 ಕ್ಕೆ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡುಗಡೆ :
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾರುಕಟ್ಟೆಗೆ ಹೊಸ ಹೊಸ ವಾಹನಗಳ ಎಂಟ್ರಿ ಆಗುತ್ತಿದೆ. ಹೌದು, ಇದೀಗ ಸಮೀಪಿಸುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2025 ಕ್ಕೆ ಹಲವಾರು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು (Electric Scooter) ಭಾರತೀಯ ಮಾರುಕ್ಕಟ್ಟೆಯಲ್ಲಿ ಬಿಡುಗಡೆಯಾಗಲು ಸಾಜ್ಜಾಗಿವೆ. ಅವುಗಳಲ್ಲಿ ಮುಖ್ಯವಾಗಿ 3 ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇವು ದೇಶದ ಜನಪ್ರಿಯ ಐಸಿಇ ಮಾಡೆಲ್‌ಗಳ ಇವಿ(EV) ಆವೃತ್ತಿಗಳಾಗಿರುವುದು ವಿಶೇಷ. ಅವುಗಳ ಬಗ್ಗೆ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಟಿವಿಎಸ್ ಜುಪಿಟರ್ ಇವಿ (TVS Jupiter EV) :
ಟಿವಿಎಸ್ ಎಂಬುದು ಜನಪ್ರಿಯ ವಾಹನ ತಯಾರಿಕ ಕಂಪನಿಯಾಗಿದೆ. ಅಷ್ಟೇ ಅಲ್ಲದೆ ಹೆಚ್ಚು ಗ್ರಾಹಕರನ್ನು ಕೂಡ ಈ ಕಂಪನಿ ಒಳಗೊಂಡಿದೆ. ಅಷ್ಟೇ ಅಲ್ಲದೆ ಟಿವಿಎಸ್ ಈಗಾಗಲೇ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದ್ದು, ಇದರ ಜೊತೆಗೆ ಹೊಸ ಜುಪಿಟರ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸಲು ಮುಂದಾಗಿದೆ.
ಟಿವಿಎಸ್ ಬಿಡುಗಡೆ ಮಾಡುತ್ತಿರುವ ಟಿವಿಎಸ್ ಜುಪಿಟರ್ ಇವಿ ಎಂಟ್ರಿ ಲೆವೆಲ್ (Entry Level) ಸ್ಕೂಟರ್ ಆಗಿದೆ :
ಭಾರತದಲ್ಲಿ ಮುಂದಿನ 6 ತಿಂಗಳುಗಳಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿಯು ನಿರ್ಧರಿಸಿದೆ. ಟಿವಿಎಸ್ ಬಿಡುಗಡೆ ಮಾಡುತ್ತಿರುವ ಜುಪಿಟರ್ ಇವಿ ಭಾರತದಲ್ಲಿ ಕಂಪನಿಯ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಜುಪಿಟರ್ ಇವಿ, ಓಲಾ ಎಸ್ 1 ಎಕ್ಸ್‌ಗೆ ಪೈಪೋಟಿ ನೀಡಲಿದೆ.
ಟಿವಿಎಸ್ ಜುಪಿಟರ್ ಇವಿ ಸ್ಕೂಟರ್ ನ ಬ್ಯಾಟರಿ ಬ್ಯಾಕ್ ಅಪ್ (Battery Backup) ಮತ್ತು ಬೆಲೆ (Price) :
ಈ ಸ್ಕೂಟರ್ ನ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 70 ರಿಂದ 80 ಕಿ.ಮೀ ಓಡುವ ಸಾಮರ್ಥ್ಯವನ್ನು ಹೊಂದಿದ್ದು, ಈ ಸ್ಕೂಟರ್ ಬೆಲೆಯು ಎಕ್ಸ್ ಶೋರೂಂ ಬೆಲೆಗಿಂತ ರೂ. 1 ಲಕ್ಷಕ್ಕಿಂತ ಕಡಿಮೆ ಇರಲಿದೆ.
ಸುಜುಕಿ ಬರ್ಗ್‌ಮ್ಯಾನ್ ಇವಿ (Sujuki Burgman EV) :
ಇನ್ನು ನೋಡಿದರೆ, ಅತೀ ಹೆಚ್ಚು ಹೆಸರುವಾಸಿಯಾದ ಕಂಪನಿಗಳಲ್ಲಿ ಸುಜುಕಿಯು ಒಂದು. ಹಾಗೆಯೇ ಇದೀಗ ಸುಜುಕಿ ಕಂಪನಿಯು ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಹೌದು, ಇದೀಗ ದೇಶದಲ್ಲಿ ಸುಜುಕಿಯ ಎಲೆಕ್ಟ್ರಿಕ್ ಸ್ಕೂಟರ್, ಬರ್ಗ್‌ಮ್ಯಾನ್ ಇವಿ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಸುಜುಕಿಯು ಬಿಡುಗಡೆ ಮಾಡುತ್ತಿರುವ ಹೊಸ ಎಲೆಟ್ರಿಕ್ ಸ್ಕೂಟರ್ ಬರ್ಗ್‌ಮ್ಯಾನ್ ಇವಿ ರಸ್ತೆಗಳಲ್ಲಿ ಟೆಸ್ಟಿಂಗ್ ಮಾಡುವಾಗ ಹಲವು ಬಾರಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದು, ಇದನ್ನು ಜನವರಿಯಲ್ಲಿ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 (Bharath Mobility Global Expo 2025) ರಲ್ಲಿ ಅನಾವರಣಗೊಳಿಸುವ ಸಾಧ್ಯತೆ ಇದೆ. ಸುಜುಕಿ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಾರ್ಷಿಕವಾಗಿ 25,000 ವಾಹನಗಳನ್ನು ಮಾತ್ರ ಮಾರಾಟ ಮಾಡಲಿದೆ ಎಂದು ತಿಳಿದು ಬಂದಿದೆ.
ಹೋಂಡಾ ಆಕ್ಟಿವಾ ಇವಿ (Honda Activa EV) :
ಇನ್ನೊಂದು ಅತೀ ಹೆಚ್ಚು ಜನಪ್ರಿತೆಯನ್ನು ಪಡೆದುಕೊಂಡ ವಾಹನ ತಯಾರಿಕ ಕಂಪನಿ ಎಂದರೆ ಅದು ಹೋಂಡಾ. ಹೌದು ಇಂದು ಹೋಂಡಾ ಕಂಪನಿಯು ಕೂಡ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇದೀಗ ಹೋಂಡಾ ಕಂಪನಿಯು ಹೋಂಡಾ ಆಕ್ಟಿವಾ ಇವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಈ ಒಂದು ಸ್ಕೂಟರ್ ನ ವಿಶೇಷತೆ ಏನೆಂದರೆ, ಈ ಆಕ್ಟಿವಾದ ಎಲೆಕ್ಟ್ರಿಕ್ ಆವೃತ್ತಿ ಎಂಬುದು ಬಹುತೇಕ ಖಚಿತವಾಗಿದ್ದು ಇದನ್ನು ಬೇರ್ಪಡಿಸಬಹುದಾದ ಮತ್ತು ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದೆ. ಜನವರಿಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2025 ರಲ್ಲಿ ಬಿಡುಗಡೆಗೆ ಸಜ್ಜಾಗಿದೆ.
ಹೋಂಡಾ ಆಕ್ಟೀವಾ ಇವಿ ಯ ಬೆಲೆ (Price) ಮತ್ತು ವೈಶಿಷ್ಟ್ಯಗಳು (Features) :
ಹೋಂಡಾ ಆಕ್ಟೀವಾ ಇವಿ ಬೆಲೆಯು ಎಕ್ಸ್ ಶೋರೂಂ ಬೆಲೆಗಿಂತ (Ex Showroom Price) ರೂ. 1 ಲಕ್ಷಕ್ಕಿಂತ ಹೆಚ್ಚಿರಬಹುದು. ಇದರ ಬ್ಯಾಟರಿ ಪ್ಯಾಕ್ ಅಪ್ ಬಗ್ಗೆ ನೋಡುವುದಾದರೆ, ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ ಓಡುತ್ತದೆ. ಅಷ್ಟೇ ಅಲ್ಲದೆ ಈ ಸ್ಕೂಟರ್, ಸಂಪೂರ್ಣ ಡಿಜಿಟಲ್ ಟಚ್ ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಕೀಲೆಸ್ ಸ್ಟಾರ್ಟ್ / ಸ್ಟಾಪ್ ಮತ್ತು ಸಂಪರ್ಕಿತ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದು ಎಥೆರ್ 450, ಓಲಾ ಎಸ್1, ಟಿವಿಎಸ್ ಐಕ್ಯೂಬ್ ವಾಹನಗಳಿಗೆ ಪೈಪೋಟಿ ನೀಡಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.