ನೀವು ಆಧಾರ್ ಅಪ್ಡೇಟ್ ಮಾಡಿಸಿಲ್ವಾ? ಹಾಗಿದ್ದರೆ ಇದೇ ಕೊನೆಯ ದಿನಾಂಕ, ತಪ್ಪಿದರೆ ನಿಮ್ಮ ಆಧಾರ್ ರದ್ದು!.
ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card).ಎಲ್ಲಾ ಕೆಲಸಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಇನ್ನು, 12 ಅಂಕಿಯ ಆಧಾರ್ ಕಾರ್ಡ್ ಗೆ ಬಹಳ ಮಹತ್ವವಿದೆ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ. ಹಾಗಾಗಿ ನಾವು ಎಲ್ಲಾ ಕೆಲಸ ಕಾರ್ಯಗಳಿಗೂ ಆಧಾರ್ ಕಾರ್ಡ್ ಬಳಸುತ್ತೇವೆ. ಆದ್ದರಿಂದ ಸ್ವಲ್ಪ ಸಮಯದ ನಂತರ ನಾವು ಆಧಾರ್ ಅಪ್ ಡೇಟ್(aadhaar card update) ಮಾಡಿಸಿಕೊಳ್ಳುವುದು ಅಗತ್ಯ. ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಕುಟುಂಬದ ಹೆಸರು, ವಿಳಾಸ, ಲಿಂಗ ಈ ರೀತಿಯಾದ ದೋಷಗಳನ್ನು ಪರಿಹರಿಸಿಕೊಳ್ಳಬಹುದು. ಈ ಹಿಂದೆ ಉಚಿತ ಆಧಾರ್ ಕಾರ್ಡ್ ನವೀಕರಣಕ್ಕೆ ಜೂನ್ 14 ಕೊನೆಯ ದಿನವಾಗಿತ್ತು. ಆದರೆ ಇದೀಗ ಯುಐಡಿಎಐ ಆ ಗಡುವನ್ನು ವಿಸ್ತರಿಸಿ ಮತ್ತೊಂದು ಅವಕಾಶ ನೀಡಿದೆ. ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ ಡೇಟ್ ಮಾಡಿಸಲು ಎಂದು ಕೊನೆಯ ದಿನ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆಧಾರ್ ಕಾರ್ಡ್ ಅಪ್ ಡೇಟ್ (aadhaar card update) :
ಎಲ್ಲರೂ ಕೂಡ ಹತ್ತು ವರ್ಷಗಳಿಗೆ ಒಂದು ಬಾರಿ ಆಧಾರ್ ಕಾರ್ಡ್, ಗುರುತಿನ ಚೀಟಿ ಮತ್ತು ವಿಳಾಸ ಪುರಾವೆಗಳನ್ನು ಸಲ್ಲಿಸಬೇಕು ಮತ್ತು ಕೇಂದ್ರೀಯ ಗುರುತಿನ ಡೇಟಾ ರೆಪೊಸಿಟರಿಯಲ್ಲಿ (ಸಿಐಡಿಆರ್) ವಿವರಗಳನ್ನು ನವೀಕರಿಸಬೇಕು ಎಂಬ ಮಹತ್ವದ ನಿಯಮವಿದೆ. ಹೀಗಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ( UIDAI ) ಆಧಾರ್ ಕಾರ್ಡ್ ಹೊಂದಿರುವ ಎಲ್ಲಾ ಭಾರತೀಯರಿಗೆ 10 ವರ್ಷ ಹಿಂದಿನ ಆಧಾರ್ ಕಾರ್ಡನ್ನು ತಕ್ಷಣ ಅಪ್ ಡೇಟ್ ಮಾಡಬೇಕು ಎಂದು ತಿಳಿಸಿದೆ. ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದರಿಂದ ಹೆಸರು ವಿಳಾಸ ಅಥವಾ ಇನ್ನಾವುದೇ ಬದಲಾವಣೆ ಇದ್ದರೆ ಸರಿಯಾಗುತ್ತದೆ. ಆದ್ದರಿಂದ ಆಧಾರ್ ಹೊಂದಿರುವವರ ನವೀಕರಣದ ಗಡುವನ್ನು ಮತ್ತೆ ವಿಸ್ತರಿಸಿದೆ. ಹೀಗಾಗಿ ಸರ್ಕಾರ ಡಿಸೆಂಬರ್ 14 (december 14) ರವರೆಗೆ ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ (free update) ಮಾಡಲು ಅವಕಾಶ ನೀಡಿದೆ.
ಆಧಾರ್ ಅಪ್ ಡೇಟ್ ಏಕೆ ಮಾಡಿಸಬೇಕು?:
ಇಂದು ಆಧಾರ್ ಕಾರ್ಡ್ ಬಹಳ ಮುಖ್ಯವಾಗಿರುವ ಡಾಕ್ಯುಮೆಂಟ್. ಯಾವ ಕೆಲಸಕ್ಕೆ ಹೋದರು ಆಧಾರ್ ಕಾರ್ಡ್ ಬೇಕೆ ಬೇಕು. ಬಹಳ ಮುಖ್ಯವಾಗಿ ಸರ್ಕಾರದಿಂದ ಏನನ್ನಾದರೂ ಪಡೆಯಬೇಕು ಎಂದರೆ ಈ 12 ಅಂಕಿಯ ವಿಶಿಷ್ಟ ಗುರಿತಿನ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಅವರು ನಮಗೆ ಸಹಾಯ ಮಾಡುತ್ತಾರೆ. ಕೇವಲ ಸರ್ಕಾರಿ ಯೋಜನೆಗಳಲ್ಲದೆ (government schemes) ಪ್ರಯಾಣ ಟಿಕೆಟ್‌ಗಳನ್ನು ಕಾಯ್ದಿರಿಸಲು, ಬ್ಯಾಂಕ್ ಖಾತೆಗಳನ್ನು ತೆರೆಯಲು ಹೀಗೆ ಹಲವಾರು ಕೆಲಸಗಳಿಗೆ ಪ್ರತಿನಿತ್ಯವೂ ಕೂಡ ಆಧಾರ್ ಕಾರ್ಡನ್ನು ಬಳಸುತ್ತಿದ್ದೇವೆ. ಆದ್ದರಿಂದ ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ಇರುವಂತಹ ವಿವರಗಳು ಹಳೆಯದಾಗಿದ್ದರೆ ಅಥವಾ ತಪ್ಪಾಗಿದ್ದರೆ ಈ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಥವಾ ಕಷ್ಟಗಳನ್ನು ಎದುರಿಸಬೇಕಾಗಬಹುದು ಆದ್ದರಿಂದ ಆಧಾರ್ ಅಪ್ ಡೇಟ್ ಮಾಡಿಸುವುದು ಬಹಳ ಮುಖ್ಯ.
ಎಲ್ಲಿಯವರೆಗೆ ಆಧಾರ್ ಅಪ್ಡೇಟ್ ಅನ್ನು ಉಚಿತವಾಗಿ ಮಾಡಬಹುದು :
ಇದೀಗ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಯುಐಡಿಎಐ ತನ್ನ ಗಡುವನ್ನು ವಿಸ್ತರಿಸಿದೆ. ಒಂದು ವೇಳೆ ಆ ದಿನಾಂಕದೊಳಗೆ ಜನರು ತಮ್ಮ ಆಧಾರ್ ತಿದ್ದುಪಡಿ ಅಥವಾ ನವೀಕರಿಸದಿದ್ದಲ್ಲಿ ನಿಮ್ಮ ಆಧಾರ್ ಕಾರ್ಡ್ ರದ್ದಾಗುತ್ತದೆ. ಆದ್ದರಿಂದ ಶೀಘ್ರವೇ ನಿಮ್ಮ ಆಧಾರ್ ಕಾರ್ಡನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಈಗಾಗಲೇ ಮೂರು ಬಾರಿ ಗಡುವನ್ನು ವಿಸ್ತರಿಸಲಾಗಿದ್ದು, ಇದೀಗ ಇನೊಮ್ಮೆ ತನ್ನ ಗಡುವನ್ನು ವಿಸ್ತರಿಸಿದ್ದು, ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ್ ನವೀಕರಿಸದವರಿಗೆ ಈ ಗಡುವು ಅನ್ವಯಿಸುತ್ತದೆ. ಡಿಸೆಂಬರ್ 14ರವರೆಗೆ ಆಧಾರ್ ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್‌ಡೇಟ್ ಮಾಡಿಸಬಹುದು. ಈ ದಿನಾಂಕದ ನಂತರ ಆಧಾರ್ ಕಾರ್ಡ್ ನವೀಕರಿಸಲು, ಪ್ರತಿಯೊಬ್ಬರು ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಅಥವಾ ನವೀಕರಿಸದವರ ಆಧಾರ್ ಕಾರ್ಡ್ ಗಳನ್ನು ಸರ್ಕಾರ ರದ್ದುಗೊಳಿಸಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಡಿಸೆಂಬರ್ 14(December 14) ರೊಳಗಾಗಿ ಜನರು ತಮ್ಮ ಆಧಾರ್ ಕಾರ್ಡ್ ಗಳನ್ನು ನವೀಕರಿಸುವುದು ಬಹಳ ಮುಖ್ಯ.
ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಬೇಕಾಗುವ ಅಗತ್ಯ ದಾಖಲೆಗಳು:
ನಿಮ್ಮ ರೇಷನ್ ಕಾರ್ಡ್ ( Ration Card )
ಬ್ಯಾಂಕ್ ಪಾಸ್ ಬುಕ್ (bank pass book)
ಅಥವಾ ವಿದ್ಯುತ್ ಬಿಲ್ (electric bill)
ಗುರುತಿನ ಚೀಟಿಗೆ ನಿಮ್ಮ ವೋಟರ್ ಐಡಿ ( Voter ID ) ಡ್ರೈವಿಂಗ್ ಲೈಸೆನ್ಸ್ ( D L ) ಅಥವಾ ಪಾಸ್ ಪೋರ್ಟ್ ಅನ್ನು ಬಳಸಬಹುದು.
ಮೈ ಆಧಾರ್’ ಪೋರ್ಟಲ್ ಮುಖಾಂತರ ನಿಮ್ಮ ಆಧಾರ್ ಅಪ್ಡೇಟ್ ಮಾಡಬಹುದು :
ಆನ್ಲೈನ್ ಮುಖಾಂತರ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವವರು ‘ಮೈ ಆಧಾರ್’ ಪೋರ್ಟಲ್ ಮೂಲಕ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು.
ಉಚಿತ ಆಧಾರ್ ನವೀಕರಣಕ್ಕಾಗಿ ಮೊದಲು https://myaadhaar.uidai.gov.in ಗೆ ಭೇಟಿ ನೀಡಿ.
ನಂತರ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಹಾಕಿ, ಆಧಾರ್ ಕಾರ್ಡ್ ನಂಬರಿಗೆ ಲಿಂಕ್ ಇರೋ ಮೊಬೈಲ್ ನಂಬರ್ ಗೆ ಓಟಿಪಿ (OTP) ಬರುತ್ತದೆ ಒಟಿಪಿಯನ್ನ ನಮೂದಿಸುವ ಮೂಲಕ ಮುಂದುವರೆಯಬೇಕು.
ಅದರ ನಂತರ ಆನ್‌ಲೈನ್ ನವೀಕರಣ ಸೇವೆಗಳ ಮೇಲೆ ಕ್ಲಿಕ್ ಮಾಡಿ. ನಂತರ ಅಪ್‌ಡೇಟ್ ಆಧಾರ್ ಆನ್‌ಲೈನ್ ಮೇಲೆ ಕ್ಲಿಕ್ ಮಾಡಿ ಮತ್ತು ಆಧಾರ್ ಅಪ್‌ಡೇಟ್ ಮಾಡಲು ಮುಂದುವರಿಯಿರಿ ಕ್ಲಿಕ್ ಮಾಡಿ.
ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹಾಗೆ ನಿಮ್ಮ ವಿಳಾಸ (address) ಜೊತೆಗೆ ವೈಯಕ್ತಿಕ ಮಾಹಿತಿ (personal information) ಕಾಣಿಸುತ್ತದೆ. ಅಲ್ಲಿ ಬಂದಿರುವ ಮಾಹಿತಿಯನ್ನು ಪರಿಶೀಲಿಸಿ. ಯಾವುದೇ ವಿವರಗಳು ಹಳೆಯದಾಗಿದ್ದರೆ ಅಥವಾ ತಪ್ಪಾಗಿದ್ದರೆ ನವೀಕರಣ ಮಾಡಿ.
ಒಂದು ವೇಳೆ ಮಾಹಿತಿ ತಪ್ಪಾಗಿದ್ದರೆ ಮೇಲಿನ ವಿವರಗಳು ಸರಿಯಾಗಿವೆಯೇ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
ನೀವು ಸಲ್ಲಿಸಲು ಬಯಸುವ ಯಾವುದೇ ಗುರುತಿನ ದಾಖಲೆಯನ್ನು ಆಯ್ಕೆ ಮಾಡಿ.
ನಿಮ್ಮ ಮೂಲ ದಾಖಲೆಯನ್ನ ಸ್ಕ್ಯಾನ್ (scan) ಮಾಡಿ ಅಪ್ಲೋಡ್ ಮಾಡಿ.
ಅದೇ ರೀತಿ ವಿಳಾಸ ಬದಲಾವಣೆಗೆ ವಿಳಾಸದ ಡಾಕ್ಯುಮೆಂಟ್ಸ್ (documents) ಅನ್ನು ಆಯ್ಕೆ ಮಾಡಿ.
ಆಯ್ಕೆ ಮಾಡಿದ ಡಾಕ್ಯುಮೆಂಟನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ಆಧಾರ್ ವಿವರಗಳನ್ನು ಎಷ್ಟು ಬಾರಿ ನವೀಕರಿಸಬಹುದು :
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ನವೀಕರಣದಲ್ಲಿ ಕೆಲವೊಂದಷ್ಟು ನಿರ್ಬಂಧಗಳು ಮತ್ತು ಷರತ್ತುಗಳನ್ನು ಕೂಡ ಹಾಕಿದೆ. ಹೆಸರು ಮತ್ತು ಜನ್ಮ ದಿನಾಂಕವನ್ನು ನಿಮಗೆ ಇಷ್ಟ ಬಂದ ರೀತಿ ಯಾವಾಗಲೂ ಬದಲಾಯಿಸಲಾಗುವುದಿಲ್ಲ. ಕೇವಲ ತಮ್ಮ ಜೀವಿತಾವಧಿಯಲ್ಲಿ ಎರಡು ಬಾರಿ(two times) ಮಾತ್ರ ತಮ್ಮ ಹೆಸರನ್ನು ಬದಲಾಯಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಆದ್ದರಿಂದ ನೋಡಿಕೊಂಡು ಆಧಾರ್ ನವೀಕರಿಸಿ.
ಗಮನಿಸಿ :
ಯುಐಡಿಎಐ ಡಿಸೆಂಬರ್ 14ರವರೆಗೆ ಗಡುವು ವಿಸ್ತರಿಸಿದ್ದು, ಹತ್ತು ವರ್ಷಗಳಷ್ಟು ಹಳೆಯದಾದ ಆಧಾರ್ ಅನ್ನು ನವೀಕರಿಸಬೇಕು. ಒಂದು ವೇಳೆ ಗಡುವು ಮುಗಿದ ನಂತರ ನವೀಕರಿಸಿದರೆ ಇದಕ್ಕೆ ನಿಗದಿತ ಶುಲ್ಕ ಕಟ್ಟಬೇಕಾಗುತ್ತದೆ. ಅಥವಾ ಆಧಾರ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.