ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಭಾರತದ ಸಂವಿಧಾನ(Constitution of India) ರಚೈತ ಹಾಗೂ ಸಂವಿಧಾನ ಶಿಲ್ಪಿ ಎಂದು ಪ್ರಖ್ಯಾತರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾರತದ ಹೊರಗೆ ಅತಿ ಎತ್ತರದ ಪ್ರತಿಮೆ(Statue)ಯನ್ನು USA (United states America) ರಾಜಧಾನಿಯ ಮೇರಿಲ್ಯಾಂಡ್(Maryland) ಉಪನಗರದಲ್ಲಿ ಭಾನುವಾರ ಉದ್ಘಾಟಿಸಲಾಯಿತು. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಅಮೆರಿಕದಲ್ಲಿ ಬಿ.ಆರ್.ಅಂಬೇಡ್ಕರ್ ಅತಿ ಎತ್ತರದ ಪ್ರತಿಮೆ ಅನಾವರಣ:
ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರವಾದ ಅಮೆರಿಕದಲ್ಲಿಯು ಜೈ ಭೀಮ್ ಘೋಷಣೆ ಪ್ರತಿಧ್ವನಿಸಿದೆ. ಏಕೆಂದರೆ ಭಾರತದ ಹೊರಗೆ ಭಾರತದ ಸಂವಿಧಾನದ ಸೃಷ್ಟಿಕರ್ತ ಮತ್ತು ಭಾರತದ ಸಂವಿಧಾನ ಸಭೆಯ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಭೀಮರಾವ್ ಅಂಬೇಡ್ಕರ್ ಅವರ ಅತಿದೊಡ್ಡ ಪ್ರತಿಮೆಯನ್ನು ಅಮೆರಿಕದ ಮೇರಿಲ್ಯಾಂಡ್ ನಗರದಲ್ಲಿ ಔಪಚಾರಿಕವಾಗಿ ಅನಾವರಣಗೊಳಿಸಲಾಯಿತು. ಭಾರತೀಯರಿಗೆ ಇದು ಒಂದು ಪ್ರೌಡ್ ಮೊಮೆಂಟ್ ಎಂದು ಹೇಳಲು ತಪ್ಪಾಗುವಾದಿಲ್ಲ.
ಒಂದು ದಿನ ಮುಂಚಿತವಾಗಿ ಶನಿವಾರ (ಅಕ್ಟೋಬರ್ 14) ಈ 19 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಇದನ್ನು “Statue of Equality” ಎಂದು ಹೆಸರಿಸಲಾಗಿದೆ, ಅಂದರೆ ಈ ಪ್ರತಿಮೆಯನ್ನು ಸಮಾನತೆಯ ಪ್ರತಿಮೆ ಎಂದು ಹೆಸರಿಸಲಾಗಿದೆ.
ಅಮೆರಿಕದಲ್ಲಿ ಜೈ ಭೀಮ್ ಘೋಷಣೆ:
“ಜೈ ಭೀಮ್” ಘೋಷಣೆಗಳ ನಡುವೆ, ಯುನೈಟೆಡ್ ಸ್ಟೇಟ್ಸ್‌ನ ವಿವಿಧ ಭಾಗಗಳಿಂದ 500 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರು ಮತ್ತು ಭಾರತ ಮತ್ತು ಇತರ ದೇಶಗಳಿಂದ ಕೆಲವರು 19 ಅಡಿ ಎತ್ತರದ “Statue of Equality” ಅನಾವರಣ ಸಮಾರಂಭದಲ್ಲಿ ಭಾಗವಹಿಸಿದ್ದರು.
AIC (Ambedkar International Center)ಪ್ರಕಾರ, ಈ ಸ್ಮಾರಕವು ಬಾಬಾಸಾಹೇಬರ ಸಂದೇಶಗಳು ಮತ್ತು ಬೋಧನೆಗಳನ್ನು ಹರಡಲು ಮತ್ತು ಸಮಾನತೆ( Equality ) ಮತ್ತು ಮಾನವ ಹಕ್ಕುಗಳ (Human rights)ಸಂಕೇತವನ್ನು ಪ್ರದರ್ಶಿಸುವ ಗುರಿಯನ್ನಿಟ್ಟುಕೊಂಡಿದೆ.
ಅಮೆರಿಕಾದಲ್ಲಿ, ‘ಸಮಾನತೆಯ ಪ್ರತಿಮೆ’ ರಾಷ್ಟ್ರಪತಿ ಭವನದ ‘ಶ್ವೇತಭವನ(White House)’ದಿಂದ ದಕ್ಷಿಣಕ್ಕೆ ಸುಮಾರು 22 ಮೈಲುಗಳಷ್ಟು ದೂರದಲ್ಲಿದೆ. ಪ್ರತಿಮೆಯನ್ನು 13 ಎಕರೆಯಲ್ಲಿ ನಿರ್ಮಿಸಲಾದ ಈ ಕೇಂದ್ರವು ಗ್ರಂಥಾಲಯ(Library), ಸಮಾವೇಶ ಕೇಂದ್ರ(convention center) ಮತ್ತು ಬುದ್ಧ ಉದ್ಯಾನ(Buddha Garden)ವನ್ನು ಸಹ ಹೊಂದಿದೆ.
19 ಅಡಿ ಎತ್ತರದ ಸಮಾನತೆಯ ಪ್ರತಿಮೆಯನ್ನು ಗುಜರಾತ್‌ನ ಅಹಮದಾಬಾದ್‌ನಲ್ಲಿ ಸ್ಥಾಪಿಸಲಾದ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಪ್ರಸಿದ್ಧ ಕಲಾವಿದ ಮತ್ತು ಶಿಲ್ಪಿ ರಾಮ್ ಸುತಾರ್ ಅವರು ನಿರ್ಮಿಸಿದ್ದಾರೆ.
“ನಾವು ಇದನ್ನು ಸಮಾನತೆಯ ಪ್ರತಿಮೆ ಎಂದು ಕರೆಯುತ್ತಿದ್ದೇವೆ … ಅಸಮಾನತೆ ಭಾರತದಲ್ಲಿನ ಸಮಸ್ಯೆ ಮಾತ್ರವಲ್ಲ, ಎಲ್ಲೆಡೆ ವಿಭಿನ್ನ ರೂಪಗಳಲ್ಲಿ ಇದು ಅಸ್ತಿತ್ವದಲ್ಲಿದ” ಎಂದು ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ (ಎಐಸಿ) ಅಧ್ಯಕ್ಷ ರಾಮ್ ಕುಮಾರ್ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಹೇಳಿದ್ದಾರೆ. ಇಂತಹ ಉತ್ತಮ ಮಾಹಿತಿಯನ್ನು ತಿಳಿಸಿಕೊಡುವ ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು- ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇದನ್ನೂ ಓದಿ: Navaratri Festival – ನವರಾತ್ರಿಯ ಉಪವಾಸ ಮಾಡುವವರಿಗೆ ಇದು ಗೊತ್ತಿರಲೇ ಬೇಕು..! ಇಲ್ಲಿದೆ ಮಾಹಿತಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ