ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಪಡಿತರ ಚೀಟಿಯ(Ration card) ತಿದ್ದುಪಡಿ ಮತ್ತೆ ಆರಂಭವಾಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ನೀವೇನಾದರೂ ಇನ್ನೂ ಕೂಡ ನಿಮ್ಮ ರೇಷನ್ ಕಾರ್ಡ್ ಗಳಲ್ಲಿ ತಪ್ಪುಗಳಿದ್ದು ಅವುಗಳನ್ನು ತಿದ್ದುಪಡಿ ಮಾಡಿಸಿಲ್ಲವೆಂದರೆ ಮತ್ತೆ ನಿಮಗೆ ಸರ್ಕಾರದ ವತಿಯಿಂದ ಒಂದು ಗುಡ್ ನ್ಯೂಸ್ ಅಂತಾನೇ ಹೇಳಬಹುದು. ಏಕೆಂದರೆ, ಸರ್ಕಾರವು ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ(Ration card correction)ಗೆ ಅವಕಾಶವನ್ನು ನೀಡಿದೆ. ಎಷ್ಟು ದಿನಗಳ ಕಾಲ ಈ ಅವಕಾಶ ಇರುತ್ತದೆ?, ಯಾವ ದಿನ ಶುರುವಾಗುತ್ತದೆ?, ಎಲ್ಲಿ ಈ ಕರೆಕ್ಷನ್ಗಳನ್ನು ಮಾಡಿಸುವುದು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಇಂದಿನಿಂದ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ ಆರಂಭ :
ಆಹಾರ ಇಲಾಖೆಯ ಆದೇಶದ ಮೇರೆಗೆ ಇಂದು ಅಂದರೆ ಆಗಸ್ಟ್ 5 ರಿಂದ ರೇಷನ್ ಕಾರ್ಡ್ಗಳ ತಿದ್ದುಪಡಿಯನ್ನು ಮಾಡಿಸಬಹುದಾಗಿದೆ. ರಾಜ್ಯದ ಎಲ್ಲಾ ಭಾಗದಲ್ಲಿ ಒಮ್ಮೆಗೆ ಅವಕಾಶ ನೀಡಿದೆ ವಿಭಾಗವಾರು ತಲಾ ಮೂರು ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕ ಘ್ಯಾನೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಕುಟುಂಬದ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಿಸಬೇಕಾಗಿದ್ದಲ್ಲಿ, ಮರಣ ಹೊಂದಿದವರನ್ನು ತೆಗೆಸಬೇಕಾಗಿದ್ದಲ್ಲಿ, ಹೆಸರಿನ ತಿದ್ದುಪಡಿ, e-kyc ಹೀಗೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನೇ ತಿದ್ದುಪಡಿ ಗಳಿದ್ದರೂ ಅವುಗಳನ್ನು ನಾಳೆಯಿಂದ ಮಾಡಿಸಬಹುದಾಗಿದೆ.
ಎಲ್ಲೆಲ್ಲಿ ಹಾಗೂ ಎಷ್ಟು ದಿನಗಳ ಕಾಲ ರೇಷನ್ ಕಾರ್ಡ್ ಕರೆಕ್ಷನ್ ಲಭ್ಯ :
ಈ ಬಾರಿ ರೇಷನ್ ಕಾರ್ಡ್ ತಿದ್ದುಪಡಿಗಾಗಿ ಬರೋಬ್ಬರಿ ಒಂಬತ್ತು ದಿನಗಳ ಕಾಲಾವಕಾಶವನ್ನು ನೀಡುತ್ತಿದ್ದಾರೆ. ಅಕ್ಟೋಬರ್ 5 ರಿಂದ ಹಿಡಿದು 13ನೇ ತಾರೀಖಿನವರೆಗೂ ರೇಷನ್ ಕಾರ್ಡಿನ ತಿದ್ದುಪಡಿಕೆಯ ಅವಕಾಶವಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಬಯೋಮೆಟ್ರಿಕ್ ಸೌಲಭ್ಯ ಇರುವ ಕಂಪ್ಯೂಟರ್ ಕೇಂದ್ರಗಳಿಗೆ ಮಾತ್ರ ತೆರಳಬೇಕಾಗುತ್ತದೆ. ಅವುಗಳೆಂದರೆ, ಬೆಂಗಳೂರು ಒನ್(Bengaluru one), ಗ್ರಾಮ ಒನ್(Gram one), ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ತಿದ್ದುಪಡಿ ಮಾಡಿಸಬಹುದಾಗಿದೆ. ಬೆಳಗ್ಗೆ 10 ಗಂಟೆಗಳಿಂದ ಹಿಡಿದು ಸಂಜೆ 7 ಗಂಟೆಗಳವರೆಗೂ ನಿಮ್ಮ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್(BPL and APL card) ಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಈ ಹಿಂದೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು ಆದರೆ ಸರ್ವರ್ ಡೌನ್ ಹಾಗೂ ಅನೇಕ ಕಾರಣಗಳಿಂದಾಗಿ ಅನೇಕ ಜನರಿಗೆ ರೇಷನ್ ಕಾರ್ಡ್ ಕರೆಕ್ಷನ್ ಗಳನ್ನು ಮಾಡಿಸಿಕೊಳ್ಳಲು ಅವಕಾಶ ದೊರೆತ್ತಿಲ್ಲ. ಹಾಗಾಗಿ ಸರ್ಕಾರವು ಮತ್ತೆ ತಿದ್ದುಪಡಿಗೆ ಅವಕಾಶವನ್ನು ನೀಡಿದೆ.
ನೀವೇನಾದರೂ ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಿದ್ದಲ್ಲಿ ಅದನ್ನು ಕೂಡ ಮನೆಯಲ್ಲಿಯೇ ಕುಳಿತುಕೊಂಡು ಸ್ಟೇಟಸ್ ಅನ್ನು ಚೆಕ್ ಮಾಡಬಹುದಾಗಿದೆ. ಅದರ ಸ್ಟೇಟಸ್ ಚೆಕ್ ಮಾಡುವ ವಿಧಾನ ಕೆಳಗಿನಂತಿದೆ.
ರೇಷನ್ ಕಾರ್ಡ್ ತಿದ್ದುಪಡಿಯ ಸ್ಟೇಟಸ್ ಚೆಕ್ ಮಾಡುವ ವಿಧಾನ :
ಹಂತ 1: ಮೊದಲಿಗೆ ಸರ್ಕಾರದ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ತೆರಳಬೇಕು ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ : https://ahara.kar.nic.in/Home/
ಹಂತ 2: ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ, ಇ- ಸ್ಟೇಟಸ್ ಎಂಬ ಆಯ್ಕೆಯನ್ನು ಮಾಡಿಕೊಳ್ಳಿ, ಮುಂದುವರೆದು ಕೆಳಗೆ ಕಾಣುವ amendment requests ಮೇಲೆ ಕ್ಲಿಕ್ ಮಾಡಿ
ಹಂತ 3: ನಂತರ ನೀವು ಜಿಲ್ಲೆಗಳ ಹೆಸರುಗಳನ್ನು ಕಾಣಬಹುದು ಅದರಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ.
ಹಂತ 5: ಮುಂದುವರೆದು ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ ಎಂಬ ಆಯ್ಕೆಯನ್ನು ಮಾಡಿಕೊಳ್ಳಿ
ಹಂತ 6: ಅಲ್ಲಿ ನಿಮ್ಮ ಪಡಿತರ ಚೀಟಿಯ ನಂಬರ್ ಅಥವಾ ಅಕ್ನೋಲೆಜ್ಮೆಂಟ್ ನಂಬರ್ ಹಾಕಿ, ನಂತರ ಕೆಳಗಡೆ ಕಾಣುವ go ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಹಂತ 7: ಮೇಲಿನ ಹಂತಗಳ ನಂತರ ಆಹಾರ ನಿರೀಕ್ಷಕರಿಂದ ಪ್ರತಿಕ್ರಿಯೆಗೆ ಕಾಯುತ್ತಿದೆ ಎಂದು ಬಂದರೆ, ತಿದ್ದುಪಡಿ ಇನ್ನೂ ಬಾಕಿ ಇದೆ ಎಂದರ್ಥ. ಒಂದು ವೇಳೆ ಕ್ಯಾನ್ಸಲ್ಡ್ ಬೈ ಸಿಸ್ಟಮ್ ಎಂದು ತೋರಿಸಿದರೆ ಅರ್ಜಿ ತಿರಸ್ಕಾರವಾಗಿದೆ ಎಂದರ್ಥ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಒಂದು ವೇಳೆ ನಿಮ್ಮ ಅರ್ಜಿ ತಿರಸ್ಕಾರಗೊಂಡಿದ್ದರೆ ಅದಕ್ಕೆ ಹೆದರಬೇಕಾಗಿಲ್ಲ, ಇಂದಿನಿಂದ ನಿಮಗೆ ಇನ್ನೊಂದು ಅವಕಾಶವಿದೆ ಅಲ್ಲಿ ನೀವು ತಿದ್ದುಪಡಿಗೆ ಮತ್ತೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯ ಸ್ಟೇಟಸ್ಅನ್ನು ಚೆಕ್ ಮಾಡುವಾಗ ವೆಬ್ಸೈಟ್ ಓಪನ್ ಆಗದಿದ್ದ ಕಾರಣದಲ್ಲಿ ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ. ಹಾಗೆಯೇ ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ