e-Scooter: ಕಡಿಮೆ ಖರ್ಚಿನಲ್ಲಿ ವಾರ ಪೂರ್ತಿ ಸುತ್ತಾಡುವ ಮತ್ತೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್

new NXG e scooty

ಕಡಿಮೆ ಖರ್ಚಿನಲ್ಲಿ ಸ್ಕೂಟರ್ (scooter) ಖರೀದಿ ಮಾಡಬೇಕೇ? ಆಂಪಿಯರ್ (Ampere) ನಿಂದ ಹೊಸ ಎಲೆಕ್ಟ್ರಿಕ್ ಸ್ಕೂಟರ್ (electrical scooter) ಬಿಡುಗಡೆ ಮಾಡಲಾಗಿದೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 

ಜನ ಯಾವಾಗಲೂ ಹೊಸತವನ್ನು ಹುಡಕಾಡುತ್ತಿರುತ್ತಾರೆ. ಇನ್ನು ವಾಹನ (vehicles) ಖರೀದಿ ಅಂತ ಬಂದರೆ ನಾವು ಎಲ್ಲಾ ರೀತಿಯಲ್ಲೂ ನಮಗೆ ಉಪಯುಕ್ತವಾದ ಹಾಗೂ ಬಹಳ ವ್ಯವಸ್ಥಿತವಾದ ವಾಹನಗಳ ಹುಡುಕಾಟ ಬಹಳ ಜೋರಾಗಿಯೇ ಇರುತ್ತದೆ. ಸಾಮಾನ್ಯವಾಗಿ ಇಂದು ಹೆಚ್ಚು ಪ್ರಚಲಿತ ಹಾಗೂ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್ ಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (electrical scooter) ಹೆಚ್ಚು ಮಾನ್ಯತೆ ಮತ್ತು ಜನಪ್ರಿಯತೆಯನ್ನು ಕಂಡಿದೆ.

ಆಂಪಿಯರ್ ಎನ್‌ಎಕ್ಸ್‌ಜಿ (Ampere NXG) ಎಲೆಕ್ಟ್ರಿಕ್ ಸ್ಕೂಟರ್ :
maxresdefault 1

ಆಂಪಿಯರ್, ಗ್ರೀವ್ಸ್ ಎಲೆಕ್ಟ್ರಿಕ್‌ ಇ-ಮೊಬಿಲಿಟಿನ (greeves electric e mobility) ಅಂಗಸಂಸ್ಥೆ, ಭಾರತೀಯ ಮಾರುಕಟ್ಟೆಯಲ್ಲಿ ಏಪ್ರಿಲ್ 30 ರಂದು  ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಕೂಟರ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ (premium electric scooter) ಜಾಗಕ್ಕೆ ಆಂಪಿಯರ್ ಪ್ರವೇಶವನ್ನು ಗುರುತಿಸಿಕೊಂಡಿದೆ. ಆಂಪಿಯರ್ ಎನ್‌ಎಕ್ಸ್‌ಜಿ (Ampere NXG) ಎಂಬ ಕೋಡ್ ನೇಮ್ ಪಡೆದುಕೊಂಡು ನಿಮ್ಮ ಮುಂದೆ ಹೊಸದಾಗಿ ಹೊಸತನದಲ್ಲಿ ಬರುತ್ತಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್. ಇದರ ಬುಕಿಂಗ್ ಪ್ರಕ್ರಿಯೆ ಹೇಗ್ ಇದೆ? ಇದರಲ್ಲಿ ಯಾವ ಯಾವ ವಿಭಿನ್ನ ಶೈಲಿ (different style) ಯನ್ನು ತರಲಾಗಿದೆ.ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಆಂಪಿಯರ್ ಎನ್‌ಎಕ್ಸ್‌ಜಿ (Ampere NXG) ಎಂಬ ಕೋಡ್ ನೇಮ್ ನೊಂದಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಂಪನಿಯಿಂದ ಪ್ರೀಮಿಯಂ ಕೊಡುಗೆಯಾಗಿ ನೀಡಲಾಗಿದೆ. ಕಳೆದ ವರ್ಷ 2023ರಲ್ಲಿ ಈ ಆಂಪಿಯರ್ NXG ಕಾನ್ಸೆಪ್ಟ್  (Ampere NXG concept) ಅನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು. ಇನ್ನು ಕೆಲವು ತಿಂಗಳುಗಳಿಂದ ಟೆಸ್ಟ್ ನೆಡೆಸುತ್ತಿದ್ದ ಆಂಪಿಯರ್ NXG ಎಲೆಕ್ಟ್ರಿಕ್ ಸ್ಕೂಟರ್ ಏಪ್ರಿಲ್ 30 ರಂದು ಭರ್ಜರಿ  ಬಿಡುಗಡೆ ಸಿದ್ದವಾಗಿದೆ.  ಇದನ್ನು ನೆಕ್ಸಸ್ ಎಂದು ಕರೆಯುವ ಸಾಧ್ಯತೆಯಿದೆ ಮತ್ತು ಇದು ಹೊಚ್ಚ ಹೊಸ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಕೆಲವು ತಿಂಗಳ ಹಿಂದೆ ಟ್ರೇಡ್‌ಮಾರ್ಕ್ ಫೈಲಿಂಗ್‌ ಸೂಚಿಸಿದಂತೆ ಈ ಹೆಸರನ್ನು ಕರೆಯವು ಸಾಧ್ಯತೆ ಹೆಚ್ಚಿದೆ.

ಇದರ ಬುಕಿಂಗ್ ಪ್ರಕ್ರಿಯೆ ಹೇಗಿದೆ (booking process) ?

ಏಪ್ರಿಲ್ 30 ರಂದು ಭರ್ಜರಿ ಓಪನಿಂಗ್  ಕಾಣುತ್ತಿರುವ ಈ ಸ್ಕೂಟರ್ ಅನ್ನು ಖರೀದಿಸಲು ಬಯಸುವವರು ಟೋಜನ್ ಮೊತ್ತ ರೂ.499 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಇದರ ಬುಕಿಂಗ್ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು. ಹಲವಾರು ಜನರು ಬುಕಿಂಗ್ ಅಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಹೊಸ ಆಂಪಿಯರ್ NXG ಎಲೆಕ್ಟ್ರಿಕ್ ಸ್ಕೂಟರ್ ದೇಶದಲ್ಲಿ ಹಲವಾರು ಬಾರಿ ರೋಡ್ ಟೆಸ್ಟ್ (Road test) ಅನ್ನು ನಡೆಸಿದೆ.

ಕಾಶ್ಮೀರದಿಂದ ಕನ್ಯಾಕುಮಾರಿ ರೈಡ್ (Kashmir to kanyakumari ride) ಪೂರ್ಣಗೊಳಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ (Indian book of record) ನೋಂದಾಯಿಸಿಕೊಂಡಿದೆ. ಹೊಸ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ಟೀಸರ್ ಕೂಡ ಬಿಡುಗಡೆ ಮಾಡಿದೆ. ಏಪ್ರಿಲ್ 30 ಭರ್ಜರಿ ಓಪನಿಂಗ್ ಕಾಣುತ್ತಿರುವ  ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ (Ampere electric scooter) ಬಹಳಸ್ಟು ಮಂದಿಗೆ ತಮ್ಮ ದಿನನಿತ್ಯದ ಬಳಕೆಗಾಗಿ ಹಾಗೂ ಟೂ ವೀಲರ್ ಒಂದೊಳ್ಳೆ ವಾಹನ ಇದಾಗಿದೆ.

ಈ ಸ್ಕೂಟರ್ ವಿನ್ಯಾಸ :

ಅನೇಕ ಸಂದರ್ಭಗಳಲ್ಲಿ ಪರೀಕ್ಷೆಗೆ ಒಳಗೊಂಡ ಬಳಿಕ ಇದು ಇದು ಒಂದೊಳ್ಳೆ  ವಿನ್ಯಾಸವನ್ನು (style) ಪಡೆದುಕೊಂಡಿದೆ. ಕೌಟುಂಬಿಕ ವ್ಯವಸ್ಥೆಗಳಿಗೆ ನೆರವಾಗುವಂತೆ ಈ ಸ್ಕೂಟರ್‌ ಕಾಣುತ್ತಿದೆ. ಇದರ ವಿನ್ಯಾಸವು ತುಂಬಾ ಸರಳವಾಗಿ ಸೊಗಸಾಗಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇದರಿಂದ ಹಲವಾರು ಗ್ರಾಹಕರನ್ನು ಸೆಳೆಯುವಲ್ಲಿ ಆಶ್ಚರ್ಯವಿಲ್ಲ. ಇದು ದೊಡ್ಡ ಆಯಾಮಗಳು, ಇಬ್ಬರು ವಯಸ್ಕರಿಗೆ ಅವಕಾಶ ಕಲ್ಪಿಸಲು ಉದ್ದವಾದ ಆಸನ ಮತ್ತು ಶಾಪಿಂಗ್ ಬ್ಯಾಗ್ (shoping bag) ಇರಿಸಲು ನೆಲದ ಹಲಗೆಯಲ್ಲಿ ಸಾಕಷ್ಟು ಸ್ಥಳವನ್ನು ವಿವರಿಸುತ್ತದೆ. ಬ್ಲೂಟೂತ್ ಸಂಪರ್ಕ (Bluetooth facility) ಮತ್ತು ನ್ಯಾವಿಗೇಷನ್ (Navigation) ಅನ್ನು ಒಳಗೊಂಡಿರುವ TFT ಡಿಸ್ಪ್ಲೇ ಬಹಳ ಮುಖ್ಯವಾಗಿ ತಮ್ಮ ಕಾರ್ಯಗಳನ್ನು ನಡೆಸುವಲ್ಲಿ ಯಾವುದೇ ಆಶ್ಚರ್ಯವಿಲ್ಲ.  ಇತರೆ ಎಲೆಕ್ಟ್ರಿಕ್  ಸ್ಕೂಟರ್ ಗಳಿಗಿಂತ  ತುಂಬಾ ವಿಭಿನ್ನವಾಗಿ ಆಂಪಿಯರ್  ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮೂಡಿಬಂದಿದೆ.

ಆಂಪಿಯರ್ NXG ಬೆಲೆ:

ಆಂಪಿಯರ್ ಎನ್‌ಎಕ್ಸ್‌ಜಿ ಸ್ಕೂಟರ್ ಬೆಲೆ 1.3 ಲಕ್ಷದಿಂದ 1.5 ಲಕ್ಷದವರೆಗೆ ಇರಲಿದೆ. ಈ ಬೆಲೆಯೊಂದಿಗೆ, ಇದು Ather 450S , BGauss C12i , ಮತ್ತು ಸಿಂಪಲ್ ಎನರ್ಜಿ ಒನ್ ಜೊತೆ ಸ್ಪರ್ಧಿಸುತ್ತದೆ . ನಿಖರವಾದ ಬೆಲೆ ವಿವರಗಳು ನಮಗೆ ಲಭ್ಯವಾದ ನಂತರ ನಾವು ಅವುಗಳನ್ನು ನವೀಕರಿಸುತ್ತೇವೆ.

ಈ ಮಾಹಿತಿಗಳನ್ನು ಓದಿ

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!