ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ನಾಗರಿಕರಿಗೆ ಉಚಿತ ಅಕ್ಕಿ ಮತ್ತು ಇನ್ನಿತರೇ ಸೌಲಭ್ಯಗಳನ್ನು ಪಡೆಯಲು ಕೇಂದ್ರ ಸರ್ಕಾರದಿಂದ ಬಿಪಿಎಲ್ ಕಾರ್ಡ್ & ತೀರಾ ಬಡತನದಲ್ಲಿರುವವರಿಗೆ ಅಂಥೋದಯ ಕಾರ್ಡ್ ವಿತರಣೆ ಮಾಡಲಾಯಿತು, ಮತ್ತು ಮಧ್ಯಮ ವರ್ಗದವರಿಗೂ ಸಹಿತ ಸರ್ಕಾರಿ ಸೌಲಭ್ಯಗಳು ಸಿಗಲಿ ಎನ್ನುವ ಉದ್ದೇಶದಿಂದ ಎಪಿಎಲ್ ಕಾರ್ಡ್ಗಳನ್ನು ಪೂರೈಕೆ ಮಾಡಲಾಗಿದೆ. ಮತ್ತು ಕೇಂದ್ರ ಸರ್ಕಾರವು 2025 ರ ವರೆಗೂ ಬಿಪಿಎಲ್ ಕಾರ್ಡ್ ಮತ್ತು ಅಂಥೋದಯ ಕಾರ್ಡ್ ಇರುವವರಿಗೆ ಉಚಿತ ಅಕ್ಕಿ ಸಿಗಲಿದೆ ಎಂದು ಘೋಷಣೆ ಮಾಡಿದೆ. ಇದರ ಜೊತೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿ ಜೊತೆಗೆ ಇನ್ನೂ ಐದು ಕೆಜಿಯ 170/- ರೂಪಾಯಿ ಅನ್ನಭಾಗ್ಯದ ಹಣ ಸಹಿತ ಸಾಮಾನ್ಯ ಜನರಿಗೆ ದೊರೆಯುತ್ತಿದೆ.
ಬಿಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬದ ಪ್ರತಿ ಸದಸ್ಯರಿಗೆ ‘ಅನ್ನಭಾಗ್ಯ’ ಯೋಜನೆ ಅಡಿ ತಲಾ 10 ಕೆ.ಜಿ. ಅಕ್ಕಿ ವಿತರಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಯೋಜನೆಗೆ ಅಕ್ಕಿ ಹೊಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಬಿಪಿಎಲ್ ಕುಟುಂಬದ ಒಬ್ಬೊಬ್ಬರಿಗೂ ತಲಾ 5 ಕೆ.ಜಿ ಅಕ್ಕಿ ಹಾಗೂ ಬಾಕಿ 5 ಕೆ.ಜಿ ಅಕ್ಕಿ ಬದಲು ರೂ.170 ಅನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುತ್ತಿದೆ. ಇದೀಗ ಮಾರ್ಚ್ ತಿಂಗಳ ಹಣ ಕೂಡ ಬಿಡುಗಡೆ ಮಾಡಲಾಗಿದೆ. ನಿಮ್ಮ ಖಾತೆಗೂ ಕೂಡ ಹಣ ಜಮಾ ಆಗಿದೆಯೇ ಎಂಬುದನ್ನು ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದರ ಮೂಲಕ ಅಥವಾ ನಿಮ್ಮ ಖಾತೆಯನ್ನು ಚೆಕ್ ಮಾಡುವುದರ ಮೂಲಕ ನೋಡಿಕೊಳ್ಳಬಹುದಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ರೇಷನ್ ಕಾರ್ಡ್ ಗೆ ಅರ್ಜಿ ಹಾಕಿ
ಕಳೆದ ವಿಧಾನಸಭಾ ಚುನಾವಣೆಯ ಹೊಸ ಪಡಿತರ ಚೀಟಿ ವಿತರಣೆ ನಿಲ್ಲಿಸಲಾಗಿತ್ತು. ಸುಮಾರು ಎರಡು ವರ್ಷಗಳಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹಲವಾರು ಗ್ರಾಹಕರು ಕಾಯುತ್ತಿದ್ದಾರೆ. ಇತ್ತೀಚಿಗೆ ರಾಜ್ಯ ಸರ್ಕಾರ ಪಡಿತರ ಚೀಟಿ (APL ration card) ಪಡೆಯಲು ಅರ್ಜಿ ಆಹ್ವಾನಗಳ ಬಗ್ಗೆ ಹೇಳುತ್ತಲೇ ಇತ್ತು. ಆದರೆ ಇಂದು ಆಹಾರ ಇಲಾಖೆ ಮಾಡಿರುವ ನಿರ್ಧಾರದ ಅಡಿಯಲ್ಲಿ ಜೂನ್ (june) ತಿಂಗಳ ಮೊದಲ ವಾರದಲ್ಲಿ ಎಪಿಎಲ್ ಕಾರ್ಡ್ ಗಳಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಅಂದರೆ ಲೋಕಸಭಾ ಚುನಾವಣೆ(lokh sabha election)ಯ ನಂತರ ಮತ್ತೆ ಎಪಿಎಲ್ ಪಡಿತರ ಚೀಟಿ ವಿತರಣೆಗೆ ಮತ್ತೆ ಚಾಲನೆ ದೊರೆಯುತ್ತಿರುವುದುತ್ತಿರುವುದು ಅರ್ಹ ಕುಟುಂಬಗಳಿಗೆ ಖುಷಿ ವಿಚಾರ ಇದಾಗಿದೆ.
ಮೇ ತಿಂಗಳ ಅನ್ನ ಭಾಗ್ಯ ಹಣ (Annabhagya scheme)
ಈಗಾಗಲೇ ಮೇ ತಿಂಗಳ ಅಕ್ಕಿ ಹಣ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು. ಹಂತ ಹಂತ ವಾಗಿ ಎಲ್ಲಾ ಜಿಲ್ಲೆಯ ಫಲಾನುಭವಿಗಳಿಗೆ ತಲುಪುತ್ತಿದೆ. ನಿಮ್ಮ ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡಲು ನೀವು ಡಿಬಿಟಿ ಮೊಬೈಲ್ ಆಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಿ. ಈಗಾಗಲೇ ಮೇ ತಿಂಗಳ ಹಣ ಬಂದಿರುವ ಸ್ಟೇಟಸ್ ನೋಡಬಹುದು

ಅನ್ನಭಾಗ್ಯದ ಹಣ ಚೆಕ್ ಮಾಡಿ:
ಹಂತ 1: ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದ್ಯಾ ಅಂತ ಚೆಕ್ ಮಾಡುವುದಕ್ಕೆ ಮೊದಲನೆಯದಾಗಿ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ ಜಾಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ
ಹಂತ 2: ನಂತರ ನಿಮ್ಮ ಜಿಲ್ಲೆಯ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ.

ಹಂತ 3 : ನಂತರ ಕೆಳಗಿನ ಭಾಗದಲ್ಲಿರುವ ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.


ಹಂತ 4: ಮುಂದುವರೆದುನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ. ನಂತರ ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವವರ ಸದಸ್ಯರ ಸಂಖ್ಯೆ, ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ, ಎಷ್ಟು ಹಣ ಜಮಾ ಆಗುತ್ತದೆ ಅಥವಾ ಆಗಿದೆ ಎಂಬುದರ ಮಾಹಿತಿಯನ್ನು ನೀವು ನೋಡಬಹುದು.

ಹೀಗೆ ನೀವು ಅನ್ನಭಾಗ್ಯ ಯೋಜನೆಯಡಿಯಲ್ಲಿನ ಹಣವು ನಿಮಗೆ ಜಮಾ ಆಗಿದೆಯೇ ಅಥವಾ ಅದರ ಸ್ಥಿತಿ ಹೇಗಿದೆ ಎಂಬುವುದನ್ನು ಚೆಕ್ ಮಾಡಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.