ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ‘ಅನ್ನಭಾಗ್ಯ ಯೋಜನೆ’ಯ ಸೆಪ್ಟೆಂಬರ್ ತಿಂಗಳ ಹಣ ಈಗಾಗಲೇ ಜನರ ಖಾತೆಗೆ ಜಮಾ ಆಗಿದೆ. ಇದೀಗ ಜನವರಿತಿಂಗಳ ಹಣ ಕೂಡ ಬಿಡುಗಡೆ ಮಾಡಲಾಗಿದೆ. ನಿಮ್ಮ ಖಾತೆಗೂ ಕೂಡ ಹಣ ಜಮಾ ಆಗಿದೆಯೇ ಎಂಬುದನ್ನು ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದರ ಮೂಲಕ ಅಥವಾ ನಿಮ್ಮ ಖಾತೆಯನ್ನು ಚೆಕ್ ಮಾಡುವುದರ ಮೂಲಕ ನೋಡಿಕೊಳ್ಳಬಹುದಾಗಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಹಂತ ಹಂತವಾಗಿ ಈ ಹಣ ವರ್ಗಾವಣೆ ಆಗುತ್ತದೆ. ನಿಮ್ಮ ಖಾತೆಗೆ ಎಷ್ಟು ಹಣ ಬಂದಿದೆ?, ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ತಿಳಿಯಲು ಸರ್ಕಾರವು ಒಂದು ಅಧಿಕೃತ ಜಾಲತಾಣ(ವೆಬ್ಸೈಟ್)ವನ್ನು ಬಿಡುಗಡೆ ಮಾಡಿದೆ. ಹಾಗಾಗಿ ನೀವು ಸ್ಟೇಟಸ್ ಅನ್ನು ನೋಡಿ ತಿಳಿದುಕೊಳ್ಳಬಹುದಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಜನವರಿ ತಿಂಗಳ ಅನ್ನ ಭಾಗ್ಯ (Annabhagya scheme) ಹಣ ಬಂದಿದೆ :
ರಾಜ್ಯ ಸರ್ಕಾರವು ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣ ನೀಡುತ್ತಿದೆ. ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಹೊಂದಿರುವ ಪಲಾನುಭ ಭವಿಗಳ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 5ಕೆಜಿ ಅಕ್ಕಿ ಬದಲಾಗಿ AnnaBhagya DBT ಮೂಲಕ ಹಣ ಜಮೆ ಮಾಡಲಾಗುತ್ತಿದೆ. ಅದರಂತೆ ಪ್ರತಿ ತಿಂಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರ್ಕಾರ ಹಣ ವರ್ಗಾವಣೆ ಮಾಡುತ್ತಿದೆ. ಈ ತಿಂಗಳ ಅನ್ನಭಾಗ್ಯ ಡಿಬಿಟಿ ಹಣ ಫಲಾನುಭವಿಯೊಬ್ಬರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುವುದನ್ನು ನೀವು ಕೆಳಗಡೆ ಗಮನಿಸಬಹುದು
ಎಲ್ಲಾ ಸರಿ ಇದ್ರೂ ಹಣ ಬಂದಿಲ್ಲ ಅನ್ನೋರು ಇದೊಂದು ಪ್ರಯತ್ನ ಮಾಡಿ
ಎಲ್ಲಾ ದಾಖಲಾತಿ ಸರಿಯಿದೆ ಆದರೂ ಹಣ ಬರುತ್ತಿಲ್ಲ ಎಂದು ಹಾವೇರಿ ಯಜಮಾನಿ ಒಬ್ಬರು ಹೇಳುತ್ತಿದ್ದರು, ನಂತರ ಬ್ಯಾಂಕ್ ಖಾತೆ ಸಮಸ್ಯೆ ಇದೆಯಾ ಎಂದು ಬ್ಯಾಂಕ್ ಆಫ್ ಬರೋಡ ದಲ್ಲಿ ಹೊಸ ಖಾತೆ ತೆರೆದ ಕೇವಲ ಮೂರು ದಿನದಲ್ಲಿ ಖಾತೆಗೆ ಹಣ ಬಂದು ಜಮಾ ಆಗಿದೆ
ಎಲ್ಲ ದಾಖಲಾತಿ ಸರಿ ಇದ್ದವರು ಮತ್ತೊಮ್ಮೆ ಪೋಸ್ಟ್ ಆಫೀಸ್ನಲ್ಲಿ ಒಂದು ಹೊಸ ಖಾತೆಯನ್ನು ತೆರೆಯುವುದು ಉತ್ತಮ, ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾತೆಯನ್ನು ತೆರೆಯಿರಿ ಉದಾ : ಬ್ಯಾಂಕ್ ಆಫ್ ಬರೋಡ, ಕೆನರಾ, SBI, ಎಲ್ಲಾ ಸರಿ ಇದ್ರೂ ಹಣ ಬರ್ತಿಲ್ಲ ಅಂದ್ರೆ ಅದು ಬ್ಯಾಂಕ್ ಆಧಾರ್ ಸೀಡಿಂಗ್ ಸಮಸ್ಯೆಯೂ ಆಗಿರಬಹುದು ಹಾಗಾಗಿ ಹೊಸ ಖಾತೆಯನ್ನು ನೀವು ಆಧಾರ್ ದೃಢೀಕರಣ ಮೂಲಕ ತೆರೆದಾಗ DBT ವರ್ಗಾವಣೆ ಸುಲಭವಾಗಿ ಆಗುತ್ತದೆ. ಇದೊಂದು ಪ್ರಯತ್ನ ಮಾಡಿ ನೋಡಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಅನ್ನಭಾಗ್ಯದ ಹಣ ಜಮಾ ಆಗಿದೆಯೇ ಎಂಬುದನ್ನು ನೋಡುವ ವಿಧಾನ :
ಹಂತ 1: ಮೊದಲನೆಯದಾಗಿ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ ಜಾಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ
ಹಂತ 2: ನಂತರ ನಿಮ್ಮ ಜಿಲ್ಲೆಯ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ.
ಹಂತ 3 : ನಂತರ ಕೆಳಗಿನ ಭಾಗದಲ್ಲಿರುವ ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಮುಂದುವರೆದುನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ. ನಂತರ ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವವರ ಸದಸ್ಯರ ಸಂಖ್ಯೆ, ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ, ಎಷ್ಟು ಹಣ ಜಮಾ ಆಗುತ್ತದೆ ಅಥವಾ ಆಗಿದೆ ಎಂಬುದರ ಮಾಹಿತಿಯನ್ನು ನೀವು ನೋಡಬಹುದು.
ಹೀಗೆ ನೀವು ಅನ್ನಭಾಗ್ಯ ಯೋಜನೆಯಡಿಯಲ್ಲಿನ ಹಣವು ನಿಮಗೆ ಜಮಾ ಆಗಿದೆಯೇ ಅಥವಾ ಅದರ ಸ್ಥಿತಿ ಹೇಗಿದೆ ಎಂಬುವುದನ್ನು ಚೆಕ್ ಮಾಡಬಹುದು.
ಈ ಮಾಹಿತಿಗಳನ್ನು ಓದಿ
- ಗೃಹಲಕ್ಷ್ಮಿ 5ನೇ ಕಂತಿನ ಹಣ ಈ ಜಿಲ್ಲೆಯ ಮಹಿಳೆಯರಿಗೆ ಈಗ ಜಮಾ ಆಯ್ತು
- ರಾಜ್ಯದ ಎಲ್ಲಾ ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
- ಮಹಿಳೆಯರಿಗೆ ಸಿಗಲಿದೆ 50 ಸಾವಿರ ರೂಪಾಯಿ ಸಹಾಯ ಧನ Apply Now
- ಸಾಲಕ್ಕೆ ಅರ್ಜಿ ಹಾಕುವಾಗ ಇದೊಂದು ದಾಖಲೆ ಸಾಕು, ತಕ್ಷಣ ಸಾಲ ಸಿಗುತ್ತೆ
- ಅತೀ ಕಡಿಮೆ ಬಡ್ಡಿಗೆ ವೈಯಕ್ತಿಕ ಸಾಲ ಕೊಡುವ ಬ್ಯಾಂಕ್ ಗಳ ಪಟ್ಟಿ ಇಲ್ಲಿದೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.