ಕರ್ನಾಟಕ ಸರ್ಕಾರ (karnataka governament )ನೀಡುವ ಮಾಹಿತಿ ಪ್ರಕಾರ ಎರಡು ತಿಂಗಳ ಅನ್ನಭಾಗ್ಯ ಯೋಜನೆಯ(Annabaghya scheme ) ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗುವ ಪ್ರಕ್ರಿಯೆ DBT ಮೂಲಕ ನಡೆಯುತ್ತಿದೆ. ಆದರೂ ಕೆಲವರ ಖಾತೆಗೆ ಹಣ ವರ್ಗಾವಣೆ ಆಗುತ್ತಿಲ್ಲ. ಇದಕ್ಕೆ ಕಾರಣ ಏನಿರಬಹುದು?, ಅಂತ ತಿಳಿದುಕೊಳ್ಳಬೇಕೇ ಹಾಗಿದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.
ಬಿಪಿಎಲ್ ಕಾರ್ಡ್(BPL Card) ಇದ್ದರೂ ಅನ್ನಭಾಗ್ಯ ಯೋಜನೆಯ ಹಣ ಬರುತ್ತಿಲ್ಲ :
ಕರ್ನಾಟಕ ರಾಜ್ಯದ ಅತಿ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಲ್ಲಿ ಅನೇಕ ಜನರು10 ಕೆಜಿ ಅಕ್ಕಿ ಪಡೆಯಲಿದ್ದು ಅಕ್ಕಿಯ ಕೊರತೆಯಿಂದಾಗಿ ಐದು ಕೆಜಿ ಅಕ್ಕಿಗೆ ಬದಲಾಗಿ ಹಣ ನೀಡುವ ಭರವಸೆ ನೀಡಿದ್ದರು.
ಅನ್ನಭಾಗ್ಯದ ಹಣ ಬರದಿರಲು ಕಾರಣವೇನು?:
ಫಲಾನುಭವಿಗಳ ಖಾತೆಗೆ ಅನೇಕ ಕಾರಣಗಳಿಂದ ಅನ್ನಭಾಗ್ಯ ಯೋಜನೆಯ ಅಕ್ಕಿಯ ಐದು ಕೆಜಿ ಹಣ ಸಂಪೂರ್ಣವಾಗಿ ಅವರ ಖಾತೆಗೆ ಹೋಗಿಲ್ಲ. BPL card ಹೊಂದಿರುವವರಿಗೆ ಸರ್ಕಾರ ನೀಡುತ್ತಿರುವ 10 ಕೆಜಿ ಅಕ್ಕಿಯಲ್ಲಿ 5 ಕೆಜಿಗೆ ಬದಲಾಗಿ ಹಣ ಅನೇಕರ ಖಾತೆಗೆ ಹೋಗಿದೆ ಆದರೆ ಮತ್ತೆ ಕೆಲವರ ಖಾತೆಗೆ ಇನ್ನೂ ಸಹ ಜಮಾ ಆಗಿಲ್ಲ. ಆಗಿರುವ ತಪ್ಪೇನೆಂದು ಜನರು ತಿಳಿಯುವಲ್ಲಿ ರಾಜ್ಯ ಸರ್ಕಾರ ಪ್ರತಿ ಕೆಜಿಗೆ 34 ರೂಪಾಯಿಗಳಂತೆ ಎರಡನೇ ಕಂತಿನ ಎರಡನೇ ತಿಂಗಳ ಹಣವನ್ನು ಸಹ ವರ್ಗಾವಣೆ ಮಾಡಿಬಿಟ್ಟಿದ್ದಾರೆ.
ಇದೀಗ ಅಕ್ಕಿಯ ಬದಲಾಗಿ ಹಣವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು ಹಲವರ ಖಾತೆಗೆ ಹಣ ಬಂದಿಲ್ಲ ಇದಕ್ಕೆ ಮುಖ್ಯವಾದ ಕಾರಣ ಏನು ?
(E-KYC) ಇ-ಕೆವೈಸಿ ಆಗಿಲ್ಲ:
ಎಲ್ಲಾ ಸರಿಯಾಗಿದ್ದು ಸಹ ನಿಮ್ಮ ಖಾತೆಗೆ ಹಣ ಬರುತ್ತಿಲ್ಲ ಎಂದು ಸಾಕಷ್ಟು ಜನರು ಬೇಸರದಿಂದ ಇದ್ದು. ಆದ್ರೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಬೇಕು ಅಂದ್ರೆ ನೀವು ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಸೀಡಿಂಗ್ ಮಾಡಿಸಿರಬೇಕು.
ಆದರೆ ಅದೆಷ್ಟು ಮಂದಿ ಈಗಲೂ ಸಹ ಆಧಾರ್ ಗೆ ಬ್ಯಾಂಕ್ ಖಾತೆ ಲಿಂಕ್ ಮಾಡೇ ಇಲ್ಲ ಈ ಕಾರಣದಿಂದ ಹಣ ಅವರಿಗೆ ಬಂದಿರುವುದಿಲ್ಲ ಈಗಲೇ ನೀವು ನಿಮ್ಮ ಬ್ಯಾಂಕ್ ಖಾತೆಗೆ ಭೇಟಿ ನೀಡುವ ಮೂಲಕ ಶಾಖೆಯಲ್ಲಿ ಆಧಾರ್ ಸೀಲಿಂಗ್ ಮಾಡಿಸಿ ಎಂದು ಹೇಳಿದರೆ ಬ್ಯಾಂಕಿನ ಸಿಬ್ಬಂದಿ ನಿಮಗೆ ಸಹಾಯ ಮಾಡುತ್ತಾರೆ ಮತ್ತು ಅವರು ಆಧಾರ್ ಸೀಡಿಂಗ್(Aadhar seeding) ಮಾಡಿ ಕೊಡುತ್ತಾರೆ.
ಬ್ಯಾಂಕ್ ಅಕೌಂಟ್ ಎಲ್ಲಾ ಸರಿ ಇದ್ರೂ ಹಣ ಬರ್ತಿಲ್ಲ..!
ಅದೆಷ್ಟೋ ಜನರು ಇನ್ನೂ ಸಹ ಬ್ಯಾಂಕ್ ಖಾತೆಯನ್ನು ಹೊಂದಿಲ್ಲ ಅದರಲ್ಲಿ ಮುಖ್ಯವಾಗಿ ಹಳ್ಳಿಯಲ್ಲಿರುವ ಜನರು ಬ್ಯಾಂಕ್ ಖಾತೆ ಇಲ್ಲದಿರುವ ಕಾರಣ ಅವರ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಯಾವ ಬ್ಯಾಂಕ್ ಗೆ ಹೋಗಬೇಕು ಎಂದು ಅಲ್ಲಿ ನಮೂದು ಆಗದೆ ಇರುವ ಕಾರಣ ಅವರ ಬ್ಯಾಂಕ್ ಖಾತೆಗೆ ಹಣ ಹೋಗಿಲ್ಲ ಅಂತಹವರಿಗೆ ಆಹಾರ ಇಲಾಖೆ ಸ್ವತಃ ಪೋಸ್ಟ್ ಆಫೀಸ್ನಲ್ಲಿ ಖಾತೆಯನ್ನು ತೆರೆಯಲು ಮಾಹಿತಿಯನ್ನು ನೀಡಿದ್ದು ಈ ಮೂಲಕ ಅಂತ ಅವರು ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆದು ಪೋಸ್ಟ್ ಆಫೀಸ್ ಖಾತೆಗಳು ಹಣ ಹಾಕುವುದಕ್ಕೆ ಪ್ರಯತ್ನ ಮಾಡುತ್ತಿದೆ ಈಗಾಗಲೇ ಅನೇಕರಿಗೆ ಹೊಸ ಖಾತೆ ಮಾಡಿಸಿಕೊಟ್ಟಿದ್ದು ಅಂತಹವರು ಯೋಜನೆ ಲಾಭ ಪಡೆದಿದ್ದಾರೆ
ಶೆಡ್ಯೂಲ್ಡ್ ಬ್ಯಾಂಕ್ ಆಗಿರುವ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB)ನೊಂದಿಗೆ ಸಂಬ೦ಧ ಹೊಂದಿರುವ ದೇಶಾದ್ಯಂತದ ಸುಮಾರು ಶೇ.77 ಗ್ರಾಮೀಣ ಖಾತೆದಾರರಿಗೆ ಮನೆಯಲ್ಲಿ ಕುಳಿತೇ ಬ್ಯಾಂಕಿನಿ೦ದ ಹಣವನ್ನು ಹಿಂಪಡೆಯುವ ಅಥವಾ ಜಮೆ ಮಾಡುವ ಅನುಕೂಲವಿದೆ. ಅಂಚೆ ಉಳಿತಾಯ ಖಾತೆಯನ್ನು ಕೇವಲ 3 ನಿಮಿಷದಲ್ಲಿ ತೆರೆಯಬಹುದಾಗಿದೆ. ಕರ್ನಾಟಕದಲ್ಲಿ ಐಪಿಪಿಬಿ 33 ಶಾಖೆಗಳಿವೆ. ಐಪಿಪಿಬಿ ಖಾತೆ ತೆರೆದರೆ ಶೀಘ್ರವೇ ಅನ್ನ ಭಾಗ್ಯ & ಗೃಹಲಕ್ಷ್ಮಿ ಯೋಜನೆಯ ನೇರ ನಗದು ವರ್ಗಾವಣೆ ಆಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಇದನ್ನೂ ಓದಿ – Jio Recharge Plan – ಹಬ್ಬಕ್ಕೂ ಮುನ್ನ 150GB ಡಾಟಾ & ಸ್ವಿಗ್ಗಿ ರಿಚಾರ್ಜ್ ಆಫರ್ ಬಿಡುಗಡೆ ಮಾಡಿದ ಜಿಯೋ.
ಇದನ್ನೂ ಓದಿ – LPG Price – ದೀಪಾವಳಿಗೆ ಕೇಂದ್ರದಿಂದ ಸಿಹಿ ಸುದ್ದಿ, ಉಜ್ವಲಾ ಸಿಲಿಂಡರ್ ಸಬ್ಸಿಡಿ ಹೆಚ್ಚಳ ಸಂಭವ..! ಇಲ್ಲಿದೆ ಮಾಹಿತಿ
ಇದನ್ನೂ ಓದಿ – Electric Scooter – ಒಲಾ ಸ್ಕೂಟರ್ ಗಳ ಮೇಲೆ ದೀಪಾವಳಿ ಧಮಾಕಾ ಆಫರ್ ಗಳು, ಇಲ್ಲಿದೆ ಮಾಹಿತಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ